ಚಾಮರಾಜನಗರ: ಅಪ್ರಾಪ್ತ ಶಾಲಾ ಬಾಲಕಿಯನ್ನು ಹಿಂಬಾಲಿಸಿ ಬಾಲಕಿಯ ಮನೆಯ ಮುಂದೆ ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಮಗ ಸೇರಿ ಮೂವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ. ಜಿಲ್ಲೆಯ ರಾಮಾಪುರ ಠಾಣಾ ವ್ಯಾಪ್ತಿಯ ಗ್ರಾಮದ ಆನಂದ ಮತ್ತು ನಾಗೇಂದ್ರ ಅವರಿಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ ಆನಂದನ ತಂದೆ ಮಾದಪ್ಪ ಅವರಿಗೆ 1 ವರ್ಷದ ಜೈಲು ಶಿಕ್ಷೆ …
Read More »ರಾಜ್ಯದ ಪ್ರೌಢಶಾಲೆಗಳಲ್ಲಿ 3473 ಖಾಲಿ ಇರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ನೇಮಕಾತಿಗೆ ಅಸ್ತು.!
ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ರಾಜ್ಯದ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು. 3473 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಶಾಲೆಗಳಿಗೆ ಅಗತ್ಯವಿರುವ ಶಿಕ್ಷಕರ ಹುದ್ದೆಗೆ ಶಾಲಾವಾರು ವೃಂದ ಮಂಜೂತಿ ಜಿಲ್ಲಾ ಹಂತದಲ್ಲಿ ನಿಯಮಾನುಸಾರ ಕೈಗೊಳ್ಳಲಾಗಿದೆ. ಎಲ್ಲೆಲ್ಲಿ ಖಾಲಿ ಹುದ್ದೆಗಳು ಇವೆಯೋ ಅಂತಹ ಸ್ಥಳದಲ್ಲಿ ದೈಹಿಕ ಮತ್ತು ವೃತ್ತಿ …
Read More »ಮಾ. 1ರಿಂದ ಎಲ್ಲರಿಗೂ ಶಾಲೆ? 6-8 ನೇರ ತರಗತಿ ಆರಂಭ ಇಂದು ನಿರ್ಧಾರ ಸಾಧ್ಯತೆ
ಬೆಂಗಳೂರು: ರಾಜ್ಯದಲ್ಲಿ ಎಲ್ಲ ತರಗತಿಗಳು ಮಾ. 1ರಿಂದ ಆರಂಭ ವಾಗುವ ಸಾಧ್ಯತೆ ನಿಚ್ಚಳವಾಗಿದೆ. ಈ ಸಂಬಂಧ ಫೆ. 12ರಂದು ಬೆಂಗಳೂರಿನಲ್ಲಿ ನಡೆಯುವ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಟಾಸ್ಕ್ಫೋರ್ಸ್ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ಇದರೊಂದಿಗೆ 6ರಿಂದ 8ರ ವಿದ್ಯಾರ್ಥಿಗಳಿಗೆ ಮಾ. 1ಕ್ಕಿಂತ ಮುನ್ನವೇ ತರಗತಿ ಆರಂಭಿಸಬೇಕೇ ಬೇಡವೇ ಎಂಬುದರ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಯಿದೆ. ಪದವಿ, ಪದವಿಪೂರ್ವ, ಎಸೆಸೆಲ್ಸಿ ಮತ್ತು 9ನೇ ವಿದ್ಯಾರ್ಥಿಗಳಿಗೆ ಈಗಾಗಲೇ ನೇರ ತರಗತಿ …
Read More »ತ್ವರಿತವಾಗಿ ಸಾಲ ವಿತರಣೆ ಮಾಡದಿದ್ದರೆ ಕ್ರಮ: ಮುಖ್ಯಮಂತ್ರಿ ಸೂಚನೆ
ಬೆಂಗಳೂರು: ಪ್ರಧಾನ ಮಂತ್ರಿ ಆವಾಸ್ ಮತ್ತು ಸ್ವನಿಧಿ ಯೋಜನೆಗಳಡಿ ತ್ವರಿತವಾಗಿ ಸಾಲ ವಿತರಣೆ ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ವಸತಿ ಮತ್ತು ಸ್ವೋದ್ಯೋಗ ಯೋಜನೆಗಳ ಫಲಾನುಭವಿಗಳಿಗೆ ಸಾಲ ನೀಡುವಲ್ಲಿ ಬ್ಯಾಂಕ್ಗಳು ವಿಳಂಬ ಧೋರಣೆ ತಾಳುತ್ತಿರುವುದು ಸರಿಯಲ್ಲ. ಇದರಿಂದ ಬಡವರಿಗೆ ಸೂರು ಕಲ್ಪಿಸುವ ಉದ್ದೇಶ ಸಕಾಲದಲ್ಲಿ ಅನುಷ್ಠಾನವಾಗದು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆ …
Read More »ಇನ್ನು ಮುಂದೆ ರೈಲಿನ ಮಹಿಳೆಯರ ಕಂಪಾರ್ಟ್ ಮೆಂಟ್ ನಲ್ಲಿ ಸಿಸಿ ಟಿವಿ
ನವ ದೆಹಲಿ : ಇನ್ನು ಮುಂದೆ ರೈಲಿನ ಮಹಿಳೆಯರ ಕಂಪಾರ್ಟ್ ಮೆಂಟ್ ನಲ್ಲಿ ಸಿಸಿ ಟಿವಿಗಳನ್ನು ಅಳವಡಿಸಲಾಗುವುದು ಎಂದು ರೈಲ್ವೇ ಸಚಿವ ಪಿಯೂಶ್ ಗೊಯಲ್ ಹೇಳಿದ್ದಾರೆ. ಮಹಿಳೆಯರ ಸುರಕ್ಷತಾ ಕ್ರಮವಾಗಿ ರೈಲುಗಳಿಗೆ ಹೈ ಟೆಕ್ ಟಚ್ ನೀಡಲಾಗುತ್ತಿದೆ. ಮಹಿಳೆಯರ ಕಂಪಾರ್ಟ್ ಮೆಂಟ್ ನಲ್ಲಿ ಸಿಸಿ ಟಿವಿ ಅಳವಡಿಸುವುದರ ಜೊತೆಗೆ ಟಾಕ್ ಬ್ಯಾಕ್ ಸಿಸ್ಟಮನ್ನು ಕೂಡ ಹಾಕಲಾಗುತ್ತದೆ. ಇಲ್ಲಿಯ ತನಕ 2391 ಹೊಸ ಬೋಗಿ ಮತ್ತು 668 ರೈಲ್ವೆ ನಿಲ್ದಾಣಗಳಲ್ಲಿ …
Read More »ಮಗುವನ್ನು ಅಪಹರಿಸಿದ್ದ ಖತರನಾಕ್ ಗ್ಯಾಂಗ್ ನ್ನು ನಾಲ್ಕೇ ದಿನದಲ್ಲಿ ಪೊಲೀಸರು ಪತ್ತೆ ಮಾಡಿ ಮಗುವನ್ನು ರಕ್ಷಿಸಿದ್ದಾರೆ.
ಬೆಳಗಾವಿ – ಅಥಣಿ ತಾಲೂಕಿನ ಸಂಕೋನಟ್ಟಿಯಲ್ಲಿ 2 ವರ್ಷದ ಮಗುವನ್ನು ಅಪಹರಿಸಿದ್ದ ಖತರನಾಕ್ ಗ್ಯಾಂಗ್ ನ್ನು ನಾಲ್ಕೇ ದಿನದಲ್ಲಿ ಪೊಲೀಸರು ಪತ್ತೆ ಮಾಡಿ ಮಗುವನ್ನು ರಕ್ಷಿಸಿದ್ದಾರೆ. ಮಗುವನ್ನು ಅಪಹರಿಸಿದ ಕಾರಣವೇ ವಿಚಿತ್ರವಾಗಿದೆ. ಸಂಕೋನಟ್ಟಿಯ ಸದಾಶಿವ ಪಾರ್ಕ್ ಹತ್ತಿರ ಜೋಪಡಿಪಟ್ಟಿಯಲ್ಲಿ ವಾಸಿಸುತ್ತಿರುವ ಹುಸೇನವ್ವ ಚಿನ್ನಪ್ಪ ಬಹುರೂಪಿ ಅಲಿಯಾಸ ಬಾದಗಿ ಎನ್ನುವವರ 2 ವರ್ಷದ ಮಗು ಕಾಣೆಯಾಗಿರುವ ಕುರಿತು ಫೆ.6ರಂದು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ …
Read More »ಫೆ.15 ರಿಂದ ಎಲ್ಲಾ ವಾಹನಗಳಿಗೆ `FASTAG’ ಕಡ್ಡಾಯ
ದೆಹಲಿ : ಫೆಬ್ರವರಿ 15 ರಿಂದಲೇ ದೇಶಾದ್ಯಂತ ಫಾಸ್ಟ್ಯಾಗ್ ಜಾರಿಗೆ ಬರಲಿದ್ದು. ಕೊರೊನಾ ಮತ್ತು ನಾನಾ ಕಾರಣಗಳಿಂದ ಹಲವು ಬಾರಿ ಮುಂದೂಡಲ್ಪಟ್ಟಿದ್ದ ಈ ವ್ಯವಸ್ಥೆ ಜಾರಿ ದಿನಾಂಕವನ್ನು ಯಾವುದೇ ಕಾರಣಕ್ಕೂ ಮುಂದೂಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಫೆಬ್ರವರಿ 15 ರಿಂದ ಟೋಲ್ ಗೇಟ್ ಗಳಲ್ಲಿ ಸಂಪೂರ್ಣವಾಗಿ ಫಾಸ್ಟ್ ಟ್ಯಾಗ್ ಪಾವತಿ ಕಡ್ಡಾಯ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿತ್ತು. ಈ ಹಿಂದಿನಿಂದಲೂ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯವಾಗಲಿದೆ ಎಂದು ಹೇಳುತ್ತಲೇ …
Read More »ಮನೆಯಲ್ಲೇ ಕುಳಿತು ಅಂಚೆ ಕಚೇರಿ ಖಾತೆ ನಿರ್ವಹಿಸಲು ಇಲ್ಲಿದೆ ಮಾಹಿತಿ
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಐಪಿಪಿಬಿ ಮೊಬೈಲ್ ಅಪ್ಲಿಕೇಶನ್ ಮೂಲಕ ಡಿಜಿಟಲ್ ಉಳಿತಾಯ ಖಾತೆ ತೆರೆಯುವ ಸೌಲಭ್ಯವನ್ನು ನೀಡ್ತಿದೆ. ಐಪಿಪಿಬಿ ಮೊಬೈಲ್ ಅಪ್ಲಿಕೇಶನ್ ಆಂಡ್ರಾಯ್ಡ್ ಫೋನ್ ನ ಪ್ಲೇ ಸ್ಟೋರ್ನಿಂದ ಅಥವಾ ಐಫೋನ್ ಆಪ್ ಸ್ಟೋರ್ನಿಂದ ಇದನ್ನು ಡೌನ್ಲೋಡ್ ಮಾಡಬಹುದು. 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿ, ಆಧಾರ್ ಮತ್ತು ಪ್ಯಾನ್ ಕಾರ್ಡ್ ಹೊಂದಿರುವವರು ಈ ಖಾತೆಯನ್ನು ತೆರೆಯಬಹುದು. ಮನೆಯಲ್ಲಿ ಕುಳಿತು ಆರಾಮವಾಗಿ ಈ ಖಾತೆ ತೆರೆಯಬಹುದು. …
Read More »ಈಗ ಜಾತಿ, ಅಹಿಂದ, ಹಿಂದ ಅಂತಾ ಏನೂ ಇಲ್ಲ. ಈಗ ಏನಿದ್ದರೂ ಹಿಂದುತ್ವ ಮಾತ್ರ: ಸಿದ್ದರಾಮಯ್ಯಗೆ ಟಾಂಗ್ ನೀಡಿದ ರಮೇಶ್ ಜಾರಕಿಹೊಳಿ
ಬೆಂಗಳೂರು: ಸಿದ್ದರಾಮಯ್ಯ ಅಹಿಂದ ಸಮಾವೇಶ ನಡೆಸುವ ವಿಚಾರ ರಾಜ್ಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಈಗ ಜಾತಿ, ಅಹಿಂದ, ಹಿಂದ ಅಂತಾ ಏನೂ ಇಲ್ಲ. ಈಗ ಏನಿದ್ದರೂ ಹಿಂದುತ್ವ ಮಾತ್ರ ಎಂದು ಟಾಂಗ್ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ, ಸಮಾವೇಶವನ್ನು ಅವರು ಪಕ್ಷಾತೀತವಾಗಿ ಮಾಡುತ್ತಿದ್ದಾರೆ. ಪಕ್ಷದಿಂದ ಮಾಡುತ್ತಿದ್ದೇವೆ ಎಂದು ಅವರು ಹೇಳಲಿ. ಆಗ ಗೊತ್ತಾಗುತ್ತೆ ಕಾಂಗ್ರೆಸ್ ಅಹಿಂದಕ್ಕೆ ಸೇರಿರೋದು ಅಂತ ಎಂದು …
Read More »ಎಪಿಎಂಸಿಗಳ ವರಮಾನಕ್ಕೆ ಹೊಡೆತ ಶುರು!
ಬೆಳಗಾವಿ: ಸರ್ಕಾರವು, ಕೃಷಿ ಉತ್ಪನ್ನಗಳ ವಹಿವಾಟಿಗೆ ಮುಕ್ತ ಅವಕಾಶ ಕಲ್ಪಿಸಿರುವುದರಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಶುರುವಾಗಿದೆ. ಆ ಸಮಿತಿಗಳ ‘ಸೆಸ್’ ಸಂಗ್ರಹ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿರುವ ವಿದ್ಯಮಾನ ಕಂಡುಬರುತ್ತಿದೆ. ಎಪಿಎಂಸಿಗಳ ಮೇಲಿನ ಅವಲಂಬನೆಯಿಂದ ರೈತರು ಕ್ರಮೇಣ ‘ದೂರ’ ಸರಿಯುತ್ತಿದ್ದಾರೆಯೇ ಎನ್ನುವ ಅನುಮಾನವೂ ಕಾಡತೊಡಗಿದೆ. ಈರುಳ್ಳಿ, ಆಲೂಗಡ್ಡೆ, ಸಿಹಿಗೆಣಸು ಹಾಗೂ ತಾಜಾ ತರಕಾರಿಗಳಿಗೆ ಇಲ್ಲಿನ ಮಾರುಕಟ್ಟೆ ಬಹಳ ಪ್ರಸಿದ್ಧಿಯಾಗಿದೆ. ಜಿಲ್ಲೆ, ನೆರೆಯ …
Read More »