ರಾಂಚಿ : ಪ್ರೇಯಸಿ – ಹೆಂಡತಿ ವಿಚಾರವಾಗಿ ಉದ್ಭವವಾಗಿದ್ದ ಸಮಸ್ಯೆವೊಂದಕ್ಕೆ ಜಾರ್ಖಂಡ್ ಪೊಲೀಸರು ವಿಚಿತ್ರವಾದ ಪರಿಹಾರ ನೀಡಿದ್ದು, ಮೂರು ದಿನ ಹೆಂಡತಿ ಹಾಗೂ ಇನ್ಮೂರು ದಿನ ಲವರ್ನೊಂದಿಗೆ ಕಾಲ ಕಳೆಯುವಂತೆ ಪರಿಹಾರ ನೀಡಿದ್ದಾರೆ. ರಾಂಚಿಯ ಕೊಕಾರ್ನ ತಿರ್ಲಿ ರೋಡ್ನಲ್ಲಿ ರಾಜೇಶ್ ಮೆಹ್ತಾ ವಾಸವಾಗಿದ್ದು, ಮದುವೆಯಾದ ನಂತರವೂ ಈತ ಬೇರೆ ಯುವತಿ ಜತೆ ಸಂಪರ್ಕವಿಟ್ಟುಕೊಂಡಿದ್ದ. ಅಷ್ಟೇ ಏಕೆ ಆಕೆ ಜತೆ ಓಡಿ ಹೋಗಿದ್ದ. ಹೀಗಾಗಿ ಹೆಂಡತಿ ಹಾಗೂ ಮಗು ಅನಾಥವಾಗಿದ್ದವು. ಗಂಡ …
Read More »ಪಂಜಾಬ್, ಹರ್ಯಾಣದಲ್ಲಿ ರೈತರಿಂದ ರೈಲು ತಡೆದು ಪ್ರತಿಭಟನೆ, ಬಿಗಿ ಬಂದೋಬಸ್ತ್
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಗುರುವಾರ ಕರೆ ನೀಡಿದ್ದ ರೈಲು ತಡೆ ಚಳವಳಿಗೆ ಪಂಜಾಬ್, ಹರ್ಯಾಣ, ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಬೆಂಬಲ ವ್ಯಕ್ತವಾಗಿದ್ದು, ಕೆಲಗಂಟೆಗಳ ಕಾಲ ರೈಲು ತಡೆದು ಪ್ರತಿಭಟಿಸಿದರು. 12ಗಂಟೆಯಿಂದ ರೈಲು ತಡೆ ಚಳವಳಿ ಆರಂಭಗೊಂಡಿದ್ದು, 4ಗಂಟೆವರೆಗೆ ಶಾಂತಿಯುತವಾಗಿ ಮುಂದುವರಿಯಲಿದೆ ಎಂದು ರೈತ ಸಂಘಟನೆಗಳು ತಿಳಿಸಿವೆ. ಮುಂಜಾಗ್ರತಾ ಕ್ರಮವಾಗಿ ಹಲವೆಡೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು …
Read More »ಕೃಷಿ ಕಾಯ್ದೆ ವಿರೋಧಿಸಿ “ರೈಲ್ ರೋಖೋ” ಚಳುವಳಿ, ಪ್ರತಿಭಟನಾಕಾರರು ವಶಕ್ಕೆ
: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟಿಸುತ್ತಿರೋ ರೈತರು ಇಂದು ದೇಶಾದ್ಯಂತ ರೈಲ್ ರೋಕೋ ಚಳವಳಿಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆ ವಿಜಯಪುರ ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಹಲವಾರು ರೈತರು ರೈಲು ತಡೆಯಲು ಮುಂದಾಗಿದ್ದು, ಅವರನ್ನ ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ವಿಜಯಪುರ ರೈತರು ಬೆಂಬಲ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರೈತರು, ಕಾರ್ಮಿಕ ಸಂಘಟನೆಗಳು ಸೇರಿ ವಿಜಯಪುರದಲ್ಲಿ …
Read More »ಇಂದು ಯಾರಿಗೆ ಒಲಿಯುತ್ತಾರೆ ಅದೃಷ್ಟ ಲಕ್ಷ್ಮಿ?; ಹರಾಜಿನ ಪ್ರಮುಖ ಆಕರ್ಷಣೆಯೇ ಅರ್ಜುನ್ ತೆಂಡುಲ್ಕರ್
ಐಪಿಎಲ್ ಸೀಸನ್ -14ರ ಮಿನಿ ಹರಾಜಿಗೆ, ಚೆನ್ನೈನಲ್ಲಿ ವೇದಿಕೆ ಸಜ್ಜಾಗಿದೆ. ಈಗಾಗಲೇ ಹರಾಜಿಗೆ ತಯಾರಿ ನಡೆಸಿರುವ ಫ್ರಾಂಚೈಸಿಗಳು, ಕೆಲ ಸ್ಟಾರ್ ಆಟಗಾರರ ಜೊತೆ ಫ್ಯೂಚರ್ ಸ್ಟಾರ್ಗಳಿಗೆ ಮಣೆಹಾಕುವ ಲೆಕ್ಕಚಾರದಲ್ಲಿವೆ. ಇನ್ನು ಕೆಲ ಫ್ರಾಂಚೈಸಿಗಳಂತೂ, ದೇಶಿ ಟೂರ್ನಿಗಳಲ್ಲಿ ಕಮಾಲ್ ಮಾಡಿರುವ ಪ್ರತಿಭೆಗಳನ್ನ, ಖರೀದಿಸಲು ಪ್ಲಾನ್ ಮಾಡಿಕೊಂಡಿವೆ. ಅರ್ಜುನ್ ತೆಂಡುಲ್ಕರ್- ಆಲ್ರೌಂಡರ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಪ್ರಮುಖ ಆಕರ್ಷಣೆ, ದಿಗ್ಗಜ ಸಚಿನ್ ತೆಂಡುಲ್ಕರ್ ಸುಪುತ್ರ ಅರ್ಜುನ್ ತೆಂಡುಲ್ಕರ್. ಎಡಗೈ ಪೇಸರ್ ಮತ್ತು …
Read More »ಮನೆ ಕಿಟಕಿಯನ್ನೇ ಮುರಿದು ಒಳನುಗ್ಗಿದ ಕಳ್ಳರು ದಂಪತಿಗೆ ಚಾಕು ತೋರಿಸಿ ಚಿನ್ನಾಭರಣ ದೋಚಿ ಪರಾರಿ
ಬೆಳಗಾವಿ: ಮನೆ ಕಿಟಕಿಯನ್ನೇ ಮುರಿದು ಒಳನುಗ್ಗಿದ ಕಳ್ಳರು ದಂಪತಿಗೆ ಚಾಕು ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಳಗಾವಿಯ ಟಿಳಕವಾಡಿಯಲ್ಲಿ ನಡೆದಿದೆ. ಇಲ್ಲಿನ ರಾಣಾಪ್ರತಾಪರಾವ್ ರಸ್ತೆಯಲ್ಲಿರುವ ಅಭಿಜಿತ್ ಸಾಮಂತ ಅವರಿಗೆ ಸೇರಿದ ಮನೆಯಲ್ಲಿ ರಾತ್ರಿ ಮೂರು ಗಂಟೆಗೆ ದರೋಡೆ ನಡೆದಿದೆ. ಮನೆ ಕಿಟಕಿ ಮುರಿದು ಒಳಬಂದ 7 ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಕೆಯೊಡ್ಡಿದ್ದಾರೆ. ನಾವು ನಿಮಗೆ ಏನೂ ಮಾಡಲ್ಲ ನಮಗೆ ಹಣ, ಒಡವೆ ಕೊಟ್ಟುಬಿಡಿ ಎಂದಿದ್ದಾರೆ. ಅಭಿಜಿತ್ ಪತ್ನಿ ಮಾಂಗಲ್ಯ, …
Read More »ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಧಾರವಾಡ ಮೂಲದ ಶೆಟ್ಟರ್ ಕಾಲೋನಿಯ ಸ್ನೇಹಾ ದೇಸಾಯಿ ಎಂಬ ಉದ್ಯಮಿಗೆ ಧಮ್ಕಿ
ಬೆಳಗಾವಿ: ಕೊಲೆ ಕೇಸ್ ನಲ್ಲಿ ಹಿಂಡಲಗಾ ಜೈಲು ಸೇರಿರುವ ರೌಡಿ ಶೀಟರ್ ಒಬ್ಬ ಮಹಿಳೆಯೋರ್ವರಿಗೆ ಫೋನ್ ಮಾಡಿ ಹಣ ನಿಡುವಂತೆ ಧಮ್ಕಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಆರೋಪಿ ತೌಸಿಫ್ ಜೈಲಿನಲ್ಲಿದ್ದುಕೊಂಡೇ ಧಾರವಾಡ ಮೂಲದ ಶೆಟ್ಟರ್ ಕಾಲೋನಿಯ ಸ್ನೇಹಾ ದೇಸಾಯಿ ಎಂಬ ಉದ್ಯಮಿಗೆ ಧಮ್ಕಿ ಹಾಕಿ ತನ್ನ ಬೇಲ್ ಗಾಗಿ 3 ಲಕ್ಷ ರೂ ಹಣ ವಸೂಲಿ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸ್ನೇಹಾ ಹಾಗೂ ತೌಸಿಫ್ …
Read More »ಡಿಕೆಶಿ ಮಗಳ ಮದುವೆ ಆರತಕ್ಷತೆಯಲ್ಲಿ ರಾಹುಲ್, ಪ್ರಿಯಾಂಕಾ; ಗಮನಸೆಳೆದ ಗೋಕಾಕ್ ಸಾಹುಕಾರ್
ರಾಜಕೀಯದಲ್ಲಿ ಯಾರು ಶತ್ರುಗಳಲ್ಲ. ಯಾರು ಮಿತ್ರರಲ್ಲ ಎಂಬುದು ಕೆಲವು ಸಂದರ್ಭದಲ್ಲಿ ಸಾಬೀತಾಗುತ್ತಿರುತ್ತದೆ. ಅದೇ ರೀತಿಯ ಸನ್ನಿವೇಶವೊಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಗಳ ಮದುವೆ ಸಂದರ್ಭದಲ್ಲಿ ನಡೆದಿದೆ. ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಮದುವೆ ಆರತಕ್ಷತೆ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನಡೆದಿದೆ. ಈ ಆರತಕ್ಷತೆಯಲ್ಲಿ ಡಿಕೆ ಶಿವಕುಮಾರ್ ಅವರ ರಾಜಕೀಯ ಸ್ನೇಹಿತರ ಸಮಾಗಮವಾಗಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಕೂಡ ಆಗಮಿಸಿ ಶುಭಕೋರಿದ್ದಾರೆ. ಇದರಲ್ಲಿ ಗಮನಸೆಳೆದವರು ಎಂದರೇ …
Read More »ರಾಜ್ಯದ SC, ST ಉದ್ದಿಮೆದಾರರಿಗೆ ಭರ್ಜರಿ ಗುಡ್ ನ್ಯೂಸ್ : ಸಹಾಯಧನ ಶೇ.50 ರಿಂದ ಶೇ.75ಕ್ಕೆ ಹೆಚ್ಚಳ
ಬೆಂಗಳೂರು : ರಾಜ್ಯದ SC, ST ಉದ್ದಿಮೆದಾರರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಸಹಾಯಧನ ಶೇ.50 ರಿಂದ ಶೇ.75ಕ್ಕೆ ಹೆಚ್ಚಳಗೊಳಿಸಿ ಆದೇಶ ಹೊರಡಿಸಿದೆ. ಯೆಸ್, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನ/ಶೆಡ್ ಗಳನ್ನು ನೀಡುವಲ್ಲಿ ಖಾಲಿ ಇರುವ ಸಹಾಯಧನವನ್ನು ಶೇ.50 ರಿಂದ ಶೇ 75 ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಹೊರಡಿಸಿದ. ಸದರಿ ಆದೇಶದಲ್ಲಿ ವಿಧಿಸಲಾಗಿರುವ ಷರತ್ತು ಮತ್ತು ಕೆಲವು ನಿಬಂಧನೆಗಳನ್ನು ಮಾರ್ಪಡಿಸಿ ಬಗ್ಗೆ ಪಿ …
Read More »ಪ್ರತಿಭಟನೆ; ಬಾಂಬೆ ಹೈಕೋರ್ಟ್ ನ್ಯಾಯಾಧೀಶೆಗೆ ಕಾಂಡೋಮ್ ರವಾನೆ!
ಅಹಮದಾಬಾದ್, ಫೆಬ್ರವರಿ 17; ಬಾಂಬೆ ಹೈಕೋರ್ಟ್ ನ್ಯಾಯಾಧೀಶೆ ಪುಷ್ಪಾ ಗಣದೇವಾಲಾ ಅವರಿಗೆ 150 ಕಾಂಡೋಮ್‌ಗಳನ್ನು ಕಳಿಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಲಾಗಿದೆ. ಪೋಕ್ಸೋ ಕಾಯ್ದೆಯ ಅಡಿ ನ್ಯಾಯಾಧೀಶೆ ನೀಡಿರುವ ಆದೇಶಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಅಹಮದಾಬಾದ್ ಮೂಲದ ದೇವಶ್ರೀ ತ್ರಿವೇದಿ ಎಂಬುವವರು ನ್ಯಾಯಾಧೀಶರ 12 ವಿಳಾಸಗಳಿಗೆ ಕಾಂಡೋಮ್‌ಗಳನ್ನು ಕಳಿಸಿರುವುದಾಗಿ ಹೇಳಿದ್ದಾರೆ. ರಾಜಕೀಯ ವಿಶ್ಲೇಷಕರಾದ ಮಹಿಳೆ ನ್ಯಾಯಾಧೀಶರು ಇತ್ತೀಚೆಗೆ ನೀಡಿರುವ ತೀರ್ಪುಗಳಿಗೆ ಪ್ರತಿಭಟನೆಯಾಗಿ ಕಾಂಡೋಮ್ ಕಳಿಸಿದ್ದಾಗಿ ಹೇಳಿದ್ದಾರೆ. ಇತ್ತೀಚಿನ ತೀರ್ಪುಗಳಿಂದ ಅಪ್ರಾಪ್ತ …
Read More »ಸ್ವತಂತ್ರ ನಂತರ ಮೊದಲ ಬಾರಿಗೆ ಮಹಿಳೆಯೊಬ್ಬಳಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ನವದೆಹಲಿ: ಭಾರತ ಸ್ವತಂತ್ರ ಕಂಡ ದಿನದಿಂದ ಇದುವರೆಗೂ ಕೆಲವೇ ಕೆಲವು ಮಂದಿಯನ್ನು ಗಲ್ಲಿಗೇರಿಸಿದ್ದು, ಇದೇ ಮೊದಲ ಬಾರಿಗೆ ಮಹಿಳೆಯೊಬ್ಬಳಿಗೆ ಕಲ್ಲು ಶಿಕ್ಷೆ ವಿಧಿಸಿ ಹೊಸ ಚರಿತ್ರೆಯನ್ನು ಬರೆಯುತ್ತದೆ. ಏಪ್ರಿಲ್ 2008ರಲ್ಲಿ ಶಬ್ನಮ್ ತನ್ನ ಪ್ರೇಮಿ ಜೊತೆ ಸೇರಿ ಕುಟುಂಬಸ್ಥರ ಹತ್ಯೆ ಮಾಡಿದ್ದಳು. ಕುಟುಂಬಸ್ಥರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಳು. ಶಬ್ನಮ್ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ರಾಷ್ಟ್ರಪತಿ ಕೂಡ ಕ್ಷಮಾಪಣಾ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಭಾರತ ಸ್ವಾತಂತ್ರಗೊಂಡ ಮೇಲೆ ಇದೇ …
Read More »