Breaking News

Uncategorized

ಮಹಿಳಾ ಸಿಬ್ಬಂದಿ ಬಟ್ಟೆ ಬದಲಾವಣೆ ಮಾಡುವುದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ, ನಂತರ ಅದನ್ನು ಮನೆಗೆ ಹೋಗಿ ನೋಡುತ್ತಿದ್ದ ಕಾಮುಕ ಅಂದರ್

ಬೆಂಗಳೂರು : ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾವಣೆ ಮಾಡುವುದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ, ನಂತರ ಅದನ್ನು ಮನೆಗೆ ಹೋಗಿ ನೋಡುತ್ತಿದ್ದ ಕಾಮುಕನೋರ್ವ ಕೊನೆಗೂ ಅಂದರ್ ಆಗಿದ್ದಾನೆ. ಹೌದು, ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಕಳೆದ 6 ವರ್ಷಗಳಿಂದ ಲ್ಯಾಬ್ ಟೆಕ್ನಿಶಿಯನ್ ಆಗಿರುವ 29 ವರ್ಷದ ಮಾಲತೇಶ್ ಎಂಬುವವನೇ ಈ ಕೆಲಸ ಮಾಡಿದ್ದು.. ಮಾಲತೇಶ್ ಆಸ್ಪತ್ರೆಯ ಆಪರೇಷನ್ ರೂಂ ನಲ್ಲಿ ಮಹಿಳೆ ಬಟ್ಟೆ ಬದಲಾಯಿಸುವ ಸಮಯಕ್ಕಾಗಿ ಕಾಯುತ್ತಿರುತ್ತಿದ್ದನಂತೆ. ಆ …

Read More »

ಪ್ರತಿ ಕ್ಷೇತ್ರದಲ್ಲೂ ಜಾತಿ, ಧರ್ಮ, ಹಣ ಕಾಲಿಟ್ಟಿದೆ: ಸತೀಶ್ ಜಾರಕಿಹೊಳಿ

ಬೆಳಗಾವಿ, : ದೇಶದ ಎಲ್ಲ ಕ್ಷೇತ್ರಗಳಲ್ಲೂ ಜಾತಿ, ಧರ್ಮ, ಹಣ ಕಾಲಿಟ್ಟಿದ್ದು, ಪ್ರಸ್ತುತ ದಿನದಲ್ಲಿ ಪ್ರಾಮಾಣಿಕರನ್ನು ಪತ್ತೆ ಹಚ್ಚುವುದು ಕಷ್ಟ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ನಗರದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಅಧಿಕಾರ ನಡೆಸುತ್ತಿರುವ ಆಡಳಿತ ಪಕ್ಷದ ವೈಫಲ್ಯ ಎತ್ತಿ ತೋರಿಸುವ ಬದಲು ಕಾಂಗ್ರೆಸ್ ಪಕ್ಷದ ತಪ್ಪನ್ನೇ ಹುಡುಕುತ್ತಾರೆ. ಹೀಗಾಗಿ, ಕಾಂಗ್ರೆಸ್ ಸಣ್ಣ ತಪ್ಪು ಮಾಡಿದರೂ ಅದನ್ನೇ ದೊಡ್ಡದು ಮಾಡಲಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಜಾತಿ, …

Read More »

ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ 10 ಸಾವಿರ ಕೋಟಿ ರೂ. ಅನುದಾನ ಕೊಡ್ತೇನೆ :ಸಿದ್ದರಾಮಯ್ಯ

ಮಂಗಳೂರು: ಈ ದೇಶದ ಸಂಪತ್ತಿನಲ್ಲಿ ಮುಸ್ಲಿಂರಿಗೂ ಪಾಲು ಕೊಡಬೇಕು. ಅಲ್ಪಸಂಖ್ಯಾತರಿಗೆ ಮೂರುಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅನುದಾನ ನೀಡಿದ್ದೇನೆ. ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ಹತ್ತು ಸಾವಿರ ಕೋಟಿ ರೂಪಾಯಿ ನೀಡುತ್ತೇನೆ ಎಂದು ಮಾಜಿ ಸಿಎಂ‌ ಸಿದ್ಧರಾಮಯ್ಯ ಹೇಳಿದ್ದಾರೆ. ಮಂಗಳೂರಿನ ಪುರಭವನದಲ್ಲಿ ನಡೆದ ಭಾವೈಕ್ಯತಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಬಿಜೆಪಿಯವರು ಅಲ್ಪಸಂಖ್ಯಾತರಿಗೆ ಇದ್ದ ಅನುದಾನದಲ್ಲೂ ಕಡಿಮೆ ಮಾಡಿದ್ದಾರೆ. ಬಿಜೆಪಿಯವರು ಸಂವಿಧಾನ ವಿರೋಧಿಗಳು. ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಣೆ ಮಾಡುತ್ತಿಲ್ಲ. ಸಂವಿಧಾನದ …

Read More »

ಸೋನು ಸೂದ್ ಢಾಬಾದಲ್ಲಿ ತಯಾರಾಗ್ತಿದೆ ಬಿಸಿಬಿಸಿ ತಂದೂರಿ ರೋಟಿ: ವಿಡಿಯೊ ವೈರಲ್

ಮುಂಬೈ: ಲಾಕ್ ಡೌನ್ ವೇಳೆ ವಲಸೆ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸಿ ಅವರಿಗೆ ಸಹಾಯ ಮಾಡುವ ಮೂಲಕ ಬಾಲಿವುಡ್ ನಟ ಸೋನು ಸೂದ್ ಜನರ ಮನಸ್ಸು ಗೆದ್ದಿದ್ದರು. ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಸೋನು ಸೂದ್, ನಿಜ ಜೀವನದಲ್ಲಿ ಹೀರೊ ಆಗಿದ್ದರು. ಕೋವಿಡ್ ಸಂಕಷ್ಟ ಮತ್ತು ಲಾಕ್​ಡೌನ್ ಇವೆರಡರ ಮಧ್ಯೆ ಜನರು ಒದ್ದಾಡುತ್ತಿದ್ದಾಗ ಅವರ ನೆರವಿಗಾಗಿ ಧಾವಿಸಿದ್ದ ಸೋನು, ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲು ಬಸ್ ವ್ಯವಸ್ಥೆ ಮಾಡಿದ್ದರು. ಯಾರೊಬ್ಬರೂ …

Read More »

ಲಂಚ ಸ್ವೀಕರಿಸುತಿದ್ದ ತಹಸೀಲ್ದಾರ ಕಛೇರಿ ಮೇಲೆ ಎಸಿಬಿ ದಾಳಿ

ಯಾದಗಿರಿ: ಜಮೀನು ಪಾಲು ವಿಚಾರಕ್ಕೆ ತಹಶೀಲ್ದಾರ್ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ದೊಡ್ಡ ಬನ್ನಪ್ಪ ಎಂಬುವವರಿ0ದ 5 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಜಿಲ್ಲೆಯ ಗುರುಮಠಕಲ್ ತಹಸೀಲ್ದಾರ್ ಕಛೇರಿ ಮೇಲೆ ಎಸಿಬಿ ದಾಳಿ ನಡೆಸಿದ್ದರು. ಲಂಚ ಸ್ವೀಕರಿಸುತಿದ್ದ ತಹಸೀಲ್ದಾರ ಸಂಗಮೇಶ ಜಿಡಗಾರನನ್ನು ವಶಕ್ಕೆ ಪಡೆಯಲಾಗಿದೆ. ಎಸಿಬಿ ಎಸ್ ಪಿ ಮಹೇಶ್ ಮೇಘಣ್ಣವರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಡಿವೈಎಸ್ ಪಿ ಉಮಾಶಂಕರ್, ಪಿಎಸ್ …

Read More »

ಹೆಚ್ಚುವರಿ ನೀರು ಬಳಕೆಗೆ ತಮಿಳುನಾಡಿಗೆ ಅವಕಾಶ ನೀಡುವುದಿಲ್ಲ: BSY

ಬೆಂಗಳೂರು: ಕಾವೇರಿ ನದಿಯ ಹೆಚ್ಚುವರಿ ನೀರು ಬಳಸಲು ತಮಿಳುನಾಡಿಗೆ ಅವಕಾಶ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಕಾವೇರಿ-ಗುಂಡಾರ್ ನದಿ ಜೋಡಣೆಗೆ ಯೋಜನೆಗೆ ತಮಿಳುನಾಡು ಮುಂದಾಗಿದೆ. ಹೆಚ್ಚುವರಿ ನೀರು ಬಳಕೆಗೆ ಕರ್ನಾಟಕ ವಿರೋಧಿಸಿದ್ದು, ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ , ಹೇಳಿಕೆ ಕೊಡುವುದರಿಂದ ಯಾವುದೇ ಉಪಯೋಗವಿಲ್ಲ. ಈ ಸಂಬಂಧ ಬಿಗಿ ಕ್ರಮ ಕೈಗೊಳ್ಳುತ್ತೇವೆ. ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಇನ್ನೂ ಯೋಚನೆ …

Read More »

ಕೊರೋನಾ ಮಹಾಮಾರಿ ಬೆಳಗಾವಿ ಜಿಲ್ಲೆಗೆ ಕಾಲಿಟ್ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ.

ಬೆಳಗಾವಿ – ಕೊರೋನಾ ಮಹಾಮಾರಿ ಬೆಳಗಾವಿ ಜಿಲ್ಲೆಗೆ ಕಾಲಿಟ್ಟ ನಂತರದಲ್ಲಿ ಇಂದು ಮೊದಲ ಬಾರಿಗೆ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ. ಕಳೆದ 11 ತಿಂಗಳಲ್ಲಿ ಮೊದಲ ಬಾರಿಗೆ ಬೆಳಗಾವಿಯಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ಕೂಡ ಕಂಡುಬಂದಿಲ್ಲ. ಕಳೆದ ಏಪ್ರಿಲ್ ತಿಂಗಳಲ್ಲಿ ಬೆಳಗಾವಿಯಲ್ಲಿ ಮೊದಲ ಬಾರಿಗೆ 4 ಜನರಿಗೆ ಕೊರೋನಾ ಕಾಣಿಸಿಕೊಂಡ ನಂತರ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ರೋಗಿಗಳು ದಾಖಲಾಗುತ್ತಿದ್ದರು. ಈವರೆಗೆ 5,16,964 ಜನರ ಸ್ಯಾಂಪಲ್ ಪರೀಕ್ಷಿಸಲಾಗಿದ್ದು, 26,860 ಜನರಿಗೆ ಜಿಲ್ಲೆಯಲ್ಲಿ …

Read More »

ಮಾರಾಟವಾದ…ನಿವೇಶನಗಳ ಮೇಲೆ ಮತ್ತೆ ಹಕ್ಕು ಚಲಾವಣೆ ಯತ್ನ: ಪೀರನವಾಡಿ ನಿವಾಸಿಗಳಿಂದ ಪ್ರತಿಭಟನೆ,ಆಕ್ರೋಶ

ಬೆಳಗಾವಿ ತಾಲೂಕಿನ ಪೀರನವಾಡಿಯಲ್ಲಿ 25 ವರ್ಷಗಳ ಹಿಂದೆ ಮಾರಾಟ ಮಾಡಿದ ನಿವೇಶನಗಳನ್ನು ಮರಳಿ ವಶಕ್ಕೆ ಪಡೆಯುವ ಗೂಂಡಾ ವರ್ತನೆಯನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ತಮಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಪೀರನವಾಡಿಯ 265ಕ್ಕೂ ಹೆಚ್ಚು ನಿವೇಶನಗಳ ಅಸಲಿ ಮಾಲೀಕರು ಮತ್ತು ಕುಟುಂಬದವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಪೀರನವಾಡಿಯ 265ಕ್ಕೂ ಹೆಚ್ಚು …

Read More »

3000 ರೂ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ

ಬೆಳಗಾವಿ: ಚಿಕ್ಕೋಡಿಯ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ನೌಕರ ಚೇತನ್ ಹಂಜಿ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅಥಣಿಯ ಬಾಳಪ್ಪ ಸಿದ್ದಪ್ಪ ಬನ್ನಟ್ಟಿ ಎಂಬುವವರಿಗೆ ಅಥಣಿ ತಾಲೂಕಿನ ಶಿವನೂರ ಹಾಲು ಉತ್ಪಾದಕರ ಸಹಕಾರಿ ಸಂಘ ನಿ. ನೇದ್ದರ ಹೊಸ ಬೈಲಾ ಅನುಮೋದನೆ ಮಾಡಿ ಸ್ವೀಕೃತಿ ನೀಡಲು ಚೇತನ್ 3000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬಾಳಪ್ಪ ಎಂಬುವವರು ಎಸಿಬಿಗೆ …

Read More »

ನರೇಗಾ ಯೋಜನೆ ಲೇವಡಿ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು

ವಯನಾಡು: ಪ್ರಧಾನಿ ಮೋದಿ ಅವರು, 2014 ರಲ್ಲಿ ಅಧಿಕಾರ ವಹಿಸಿಕೊಂಡಾಗ ನರೇಗಾ ಯೋಜನೆಯನ್ನು ಅಪಹಾಸ್ಯ ಮಾಡಿದ್ದರು. ಯುಪಿಎ ಸರ್ಕಾರವು ಜಾರಿಗೆ ತಂದ ಮಹತ್ವಾಕಾಂಕ್ಷೆಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಕೋವಿಡ್ ಸಮಯದಲ್ಲಿ ದೇಶದ ಜನರ ‘ಸಂರಕ್ಷಕ’ ಪಾತ್ರವನ್ನು ವಹಿಸಿದೆ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. ತಮ್ಮ ಕ್ಷೇತ್ರದಲ್ಲಿನ ಪುಥಡಿ ಗ್ರಾಮ ಪಂಚಾಯಿತಿಯಲ್ಲಿ ಕುಟುಂಬಶ್ರೀ ಸಂಗಮಮ್‌ ಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ …

Read More »