ಬೆಳಗಾವಿ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಗುರುವಾರ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಪ್ರತಿನಿಧಿಗಳ ಸಭೆ ನಡೆಸಿದರು. ಚುನಾವಣೆ ನೀತಿ ಸಂಹಿತೆ, ಬದಲಾದ ನಿಯಮಗಳು, ಶಾಂತಿ ಸುವ್ಯವಸ್ಥಿತ ಚುನಾವಣೆಗೆ ಸಹಕಾರ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿ, ಅಭಿಪ್ರಾಯ ಪಡೆದುಕೊಂಡರು. ಬೆಳಗಾವಿ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅಧ್ಯಕ್ಷತೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಪ್ರತಿನಿಧಿಗಳ ಸಭೆ ನಡೆಯಿತು. ಈ …
Read More »ಕೊರೋನಾ ತಡೆಗೆ ಜಿಲ್ಲಾದ್ಯಂತ ಕಟ್ಟೆಚ್ಚರ, ಲಸಿಕೆ ಕಾರ್ಯ ಚುರುಕು: ಡಾ.ಶಶಿಕಾಂತ ಮುನ್ಯಾಳ
ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಗಡಿ ಭಾಗದಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಲಸಿಕೆ ಕಾರ್ಯಕ್ರಮ ಮುಂದುವರಿದಿದ್ದು, ಫ್ರಂಟ್ ಲೈನ್ ವಾರಿಯರ್ಸ್ ಸೇರಿ 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿಕಾಂತ ಮುನ್ಯಾಳ ತಿಳಿಸಿದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿಕಾಂತ ಮುನ್ಯಾಳ ಮಾತನಾಡಿ, ಬೇರೆ ಬೇರೆ ದೇಶಗಳಲ್ಲಿ ಕೊರೋನಾ ಎರಡನೇ ಅಲೆ ಆರಂಭವಾಗಿದೆ. ಈ ಅಲೆ ಮಾರ್ಚ್ ಮಧ್ಯಭಾಗದಿಂದ …
Read More »ಮುಂಬೈ ಕೇಂದ್ರಾಡಳಿತ ಪ್ರದೇಶ ಮಾಡಬೇಕು: ಕರವೆ ಪ್ರವೀಣ ಶೆಟ್ಟಿ.
ಕನ್ನಡಿಗರಿಗೆ ಎಂ.ಇ.ಎಸ್ ಮುಖಂಡ ಶುಭಂ ಸಾಳುಂಕೆ ದಮ್ಕಿ ಹಾಕಿರುವ ಹಿನ್ನೆಲೆಯಲ್ಲಿ ಗುರುವಾರ ಬೆಳಗಾವಿಯ ಚನಮ್ಮ ವೃತ್ತದಲ್ಲಿ ಕರವೆ ಪ್ರವಿಣ ಶೆಟ್ಟಿ ಬಣದಿಂದ ಪ್ರತಿಭಟನೆ ಮಾಡಲಾಯಿತು. ಕೆಲ ದಿನಗಳಹಿಂದ ಎಂ.ಇ.ಎಸ್ ಮುಖಂಡ ಶುಭಂ ಸಾಳುಂಕೆ ಕೆಂಪು,ಹಳದಿ ಬಣ್ಣದ ಶಾಲು ಧ್ವಜ ನಮ್ಮ ಮುಂದೆ ಬಂದರೆ ಅಟ್ಟಾಡಿಸಿ ಹೊಡೆಯುದಾಗಿ ಹೇಳಿಕೆ ನೀಡುವ ಮೂಲಕ ಕನ್ನಡಿಗರನ್ನು ಕೆರಳಿಸಿದರು. ಈ ಕುರಿತು ಮಾತನಾಡಿರುವ ಪ್ರವೀಣ ಕುಮಾರ ಶೆಟ್ಟಿ ಎಂ.ಇ ಎಸ್, ಶಿವಸೇನೆ ಕನ್ನಡಿಗರನ್ನು ಕೆರಳಿಸಿದೆ. ನಮ್ಮ …
Read More »ಬೆಳಗಾವಿ ಚುನಾವಣೆ | ಹೈಕಮಾಂಡ್ ನಿರ್ಧಾರಕ್ಕೆ ಬದ್ಧ : ಸತೀಶ್ ಜಾರಕಿಹೊಳಿ
ಬೆಳಗಾವಿ : ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಬಿಜೆಪಿ ಕಾಂಗ್ರೆಸ್ ನಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಯಾರಿಗೆ ಟಿಕೆಟ್ ನೀಡಬೇಕು ಅನ್ನೋ ಲೆಕ್ಕಾಚಾರ ಎರಡೂ ಪಕ್ಷಗಳಲ್ಲಿ ನಡೆಯುತ್ತಿದೆ. ಅದರಲ್ಲೂ ಕಾಂಗ್ರೆಸ್ ನಿಂದ ಈ ಬಾರಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಣಕ್ಕಿಳಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇದೀಗ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಬೆಳಗಾವಿ ಲೋಕಸಭೆ ಉಪಚುನಾವಣೆ ಘೋಷಣೆಯಾಗಿದೆ. ನಾಲ್ಕು ದಿನದ ನಂತರ ಸಭೆ …
Read More »ಹರಿದ ಜೀನ್ಸ್ ಪ್ಯಾಂಟ್ ವಿಚಾರಕ್ಕೆ ಮುಖ್ಯಮಂತ್ರಿಯನ್ನೇ ಎದುರು ಹಾಕಿಕೊಂಡ ಅಮಿತಾಭ್ ಮೊಮ್ಮಗಳು ನವ್ಯಾ!
ಬಿಗ್-ಬಿ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಇನ್ನೂ ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ಕಳೆದ ವರ್ಷವಷ್ಟೇ ಪದವಿ ಶಿಕ್ಷಣ ಮುಗಿಸಿರುವ ಅವರು ತಮ್ಮದೇ ಹಾದಿನಲ್ಲಿ ಸಾಗುತ್ತಿದ್ದಾರೆ. ಮಹಿಳೆಯ ಸಮಾನತೆಗಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಅವರು ಉತ್ತರಾಖಂಡ್ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರನ್ನು ಎದುರು ಹಾಕಿಕೊಂಡಿದ್ದಾರೆ. ಅದು ಕೂಡ ಹರಿದ ಜೀನ್ಸ್ ಪ್ಯಾಂಟ್ ಕಾರಣಕ್ಕೆ! ಅರೆರೆ.. ಮುಖ್ಯಮಂತ್ರಿಗೂ, ಬಚ್ಚನ್ ಮೊಮ್ಮಗಳಿಗೂ, ಹರಿದ ಜೀನ್ಸ್ ಪ್ಯಾಂಟ್ಗೂ ಏನು …
Read More »ಸಚಿವರಿಗೆ ಸ್ವಪಕ್ಷೀಯರಿಂದಲೇ ಮುಜುಗರ
ಬೆಂಗಳೂರು: ನೇಕಾರರ ಸಮಸ್ಯೆ ಕುರಿತು ಆಡಳಿತ ಪಕ್ಷದ ಸದಸ್ಯರೇ ಪದೇ ಪದೇ ಪ್ರಶ್ನೆಗಳನ್ನು ಕೇಳುವ ಮೂಲಕ ಜವಳಿ ಸಚಿವ ಶ್ರೀಮಂತ ಪಾಟೀಲ ಅವರಿಗೆ ಮುಜುಗರ ತಂದ ವಿದ್ಯಮಾನ ವಿಧಾನಸಭೆಯಲ್ಲಿ ಬುಧವಾರ ನಡೆಯಿತು. ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಸಿದ್ದು ಸವದಿ, ನೇಕಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿದರು. ‘ನೇಕಾರ ಸಮ್ಮಾನ್ ಯೋಜನೆಯಡಿ ನೀಡಿದ ₹2 ಸಾವಿರ ಯಾವುದಕ್ಕೂ ಸಾಲದು. ಲಾಕ್‌ಡೌನ್ ಅವಧಿಯಲ್ಲಿ ನೇಕಾರರು ತಯಾರಿಸಿದ ಸೀರೆಗಳನ್ನು ಇಲಾಖೆ ಖರೀದಿ ಮಾಡಿಲ್ಲ. …
Read More »ಲೋಕಸಭಾ ಉಪ ಚುನಾವಣೆ ಮಾದರಿ ನೀತಿ ಸಂಹಿತೆ ಪಾಲನೆಗೆ ಕ್ರಮ ಕೈಗೊಳ್ಳಬೇಕು. : ಎಂ.ಜಿ.ಹಿರೇಮಠ
ಬೆಳಗಾವಿ: ಕೋವಿಡ್ ಹಿನ್ನೆಲೆಯಲ್ಲಿ ಲೋಕಸಭಾ ಉಪ ಚುನಾವಣೆ ಸಂದರ್ಭದಲ್ಲಿ ಪ್ರಚಾರ, ನಾಮಪತ್ರ ಸಲ್ಲಿಕೆ, ಅನುಮತಿ ನೀಡಿಕೆಗೆ ಸಂಬಂಧಿಸಿದಂತೆ ಬಹಳಷ್ಟು ಮಾರ್ಗಸೂಚಿಗಳು ಪರಿಷ್ಕರಣೆಗೊಂಡಿದ್ದು, ಹೊಸ ಮಾರ್ಗಸೂಚಿ ಅನ್ವಯವೇ ಅನುಮತಿಯನ್ನು ನೀಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಮಾ.17) ನಡೆದ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮಾದರಿ ನೀತಿ ಸಂಹಿತೆ ಪಾಲನೆಗೆ …
Read More »ಬೈಕ್ ಸ್ಟಂಟ್ ರಾಣಿಯರಿಗೆ ಬಿತ್ತು ಭಾರೀ ದಂಡ
ಲಕ್ನೋ: ಹುಡುಗಿಯರಿಬ್ಬರು ಬೈಕ್‍ನಲ್ಲಿ ಸ್ಟಂಟ್ ಮಾಡಿ ಅದನ್ನು ಚಿತ್ರೀಕರಣ ಮಾಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಇದನ್ನು ಗಮನಿಸಿರುವ ಪೊಲೀಸರು ಬೈಕ್ ರೈಡ್ ಮಾಡಿದ ಹುಡುಗಿಯ ಮೇಲೆ 28 ಸಾವಿರ ರೂಪಾಯಿ ದಂಡ ಪ್ರಯೋಗ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಉತ್ತರ ಪ್ರದೇಶದ ಗಾಜಿಯಾಬಾದ್‍ನ ಶಿವಾಂಗಿ ದಬಾಸ್ ತನ್ನ ಸ್ನೇಹಿತೆ ಕುಸ್ತಿಪಟು ಸ್ನೇಹಾ ರಘವಂಶಿಯ ಹೆಗಲ ಮೇಲೆ ಕೂತು ಬುಲೆಟ್ ಬೈಕ್‍ನಲ್ಲಿ ಗಾಜಿಯಾಬಾದ್‍ನಲ್ಲಿ ರೌಂಡ್ಸ್ ಹೊಡೆದಿದ್ದಾಳೆ. ರೌಂಡ್ಸ್ ಹೊಡೆಯುತ್ತಿರುವುದನ್ನು ಚಿತ್ರೀಕರಿಸಿ …
Read More »ಕನ್ನಡ ದ್ರೋಹಿ MES ನಿಷೇಧಿಸಿ: ಶುಭಂ ಸೆಳಕೆ ಗಡಿಪಾರು ಮಾಡಿ ಎಂದು ಕನ್ನಡ ಸಂಘಟನೆ ಆಗ್ರಹ..
ಘಟಪ್ರಭಾ: ಬೆಳಗಾವಿಯಲ್ಲಿ ಇರುವ ಕನ್ನಡ ನಾಡ ದ್ರೋಹಿ ಶುಭಂ ಸೆಳಕೆ ಇತನು ಕನ್ನಡದ ಶಾಲು ಹಾಕಿಕೊಂಡು ಅಲೆದಾಡುವವರ ವಿರುದ್ಧ ಅಟ್ಟಿಸಿಕೊಂಡು ಹೊಡೆಯುವ ಕನ್ನಡಿಗರಿಗೆ ಬೆದರಿಕೆ ಹಾಕಿದ್ದಾನೆ ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶಿಸಿ ಇಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಮೃತ್ಯುಂಜಯ ಸರ್ಕಲನಲ್ಲಿ ಪ್ರತಿಭಟನೆ ಮಾಡಲಾಯಿತು. ಶ್ರೀಶೈಲ ಬ್ಯಾಕೂಡ ನಿರೀಕ್ಷಕರು, ಘಟಪ್ರಭಾ ಪೋಲಿಸ್ ಠಾಣೆ ಇವರ ಮುಖಾಂತರ ಲಕ್ಷ್ಮಣ ಣ ನಿಂಬರಗಿ ಪೋಲಿಸ್ ಅಧಿಕ್ಷಕರು ಬೆಳಗಾವಿ ಅವರಿಗೆ ಮನವಿ …
Read More »ಹುಬ್ಬಳ್ಳಿಗೆ ಬರುತ್ತಿದ್ದ ಇಬ್ಬರು ಕ್ರೀಡಾಪಟುಗಳ ದುರ್ಮರಣ: ಮೂವರಿಗೆ ಗಂಭೀರ ಗಾಯ
ವಿಜಯಪುರ: ಲಾರಿ ಹಾಗೂ ಥವೇರಾ ವಾಹನದ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಕ್ರೀಡಾಪಟುಗಳು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಗಾರ ಕ್ರಾಸ್ ಬಳಿ ಸಂಭವಿಸಿದೆ. ಮಹಾರಾಷ್ಟ್ರದ ಸೊಲ್ಲಾಪುರದಿಂದ ಹುಬ್ಬಳ್ಳಿಯ ಕಬ್ಬಡ್ಡಿ ಟೂರ್ನಿಯಲ್ಲಿ ಭಾಗವಹಿಸಲು ಬರುತ್ತಿದ್ದ ಸಮಯದಲ್ಲಿ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಸೋಹೈಲ್ ಮತ್ತು ಮಹಾದೇವ ಎಂಬ 20 ವರ್ಷದ ಕ್ರೀಡಾಪಟುಗಳು ಸಾವಿಗೀಡಾಗಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಬಗ್ಗೆ ಮಾಹಿತಿ …
Read More »