ಮೈಸೂರು(ಮಾ.25): ಕೋಟ್ಯಾಂತರ ರೂಪಾಯಿ ಲೂಟ್ ಆಗಿರುವ ಇಡಿ ಬಗ್ಗೆ ಚರ್ಚೆ ಮಾಡೋಲ್ಲ ಬರಿ ಸಿಡಿ ಚರ್ಚೆ ಮಾಡುತ್ತೀರಲ್ಲಾ, ಬಜೆಟ್ ಚರ್ಚೆಗಿಂತ ಸಿಡಿಯೇ ಹೆಚ್ಚಾಯ್ತಾ ನಿಮಗೆ ಅಂತ, ಸದನದಲ್ಲಿ ಸರ್ಕಾರಕ್ಕೆ ಚಾಟಿ ಬೀಸಲಿಲ್ಲ ಎಂದು ವಿರೋಧ ಪಕ್ಷಗಳಿಗೆ ಪರಿಷತ್ ಸದಸ್ಯ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಚಾಟಿ ಬೀಸಿದ್ದಾರೆ. ನಿನ್ನೆ ಮುಗಿದ ಸದನ ಮುಗಿತು ಅಷ್ಟೆ, ಇದರಲ್ಲಿ ರಾಜ್ಯದ ಜನರಿಗೆ ಯಾವುದೇ ಪ್ರಯೋಜನ ಆಗಲಿಲ್ಲ. ಬಜೆಟ್ ಅಧಿವೇಶ ಅಂದ್ರೆ ಆದಾಯ, ತೆರಿಗೆ, ಹಣಕಾಸಿನ ಬಗ್ಗೆ …
Read More »C.D. ಯುವತಿ ಪರ ಮಹಿಳಾ ಕಾಂಗ್ರೆಸ್ ನಿಂತಿದೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ‘ಸಂತ್ರಸ್ತ’ ಯುವತಿ ಪರ ಮಹಿಳಾ ಕಾಂಗ್ರೆಸ್ ನಿಂತಿದೆ. ಒಬ್ಬ ರಾಜಕಾರಣಿಯಿಂದ ಆಕೆಗೆ ಅನ್ಯಾಯ ಆಗಿದ್ದರೂ ಸಂತ್ರಸ್ತೆಗೆ ಸರ್ಕಾರದಿಂದ ರಕ್ಷಣೆ ಕೊಡಲು ಸಾಧ್ಯವಾಗಿಲ್ಲ. ಸರ್ಕಾರದ ಮೇಲೆ ಆಕೆಗೆ ನಂಬಿಕೆ ಇಲ್ಲ, ಹಾಗಾಗಿ ಕಾಂಗ್ರೆಸ್ ನಾಯಕರ ಬಳಿ ರಕ್ಷಣೆ ಕೋರಿದ್ದಾಳೆ. ಆ ಹೆಣ್ಣುಮಗಳ ರಕ್ಷಣೆಗೆ ನಾವಿದ್ದೇವೆ ಎಂದು ಕಾಂಗ್ರೆಸ್ ಶಾಸಕಿಯರು ಹೇಳಿದ್ದಾರೆ. ಸಚಿವ ಡಾ.ಕೆ. ಸುಧಾಕರ್ ನೀಡಿದ್ದ ಏಕಪತ್ನಿವ್ರತಸ್ಥ ಹೇಳಿಕೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ …
Read More »ಸುಧಾಕರ್ ಅವರನ್ನು ಶಾಸಕ ಸ್ಥಾನದಿಂದಲೇ ಅನರ್ಹಗೊಳಿಸುವಂತೆ ಮಹಿಳಾ ಕಾಂಗ್ರೆಸ್ ಆಗ್ರಹ
ಬೆಂಗಳೂರು: 225 ಶಾಸಕರ ಬಗ್ಗೆಯೂ ಕೀಳಾಗಿ ಮಾತನಾಡುವ ಮೂಲಕ ವಿಧಾನಸಭೆಗೆ ಅವಮಾನ ಮಾಡಿರುವ ಡಾ.ಕೆ. ಸುಧಾಕರ್ ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಅವರು ಶಾಸಕರಾಗಿಯೂ ಉಳಿಯಬಾರದು ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಆಗ್ರಹಿಸಿದೆ. ಪಕ್ಷದ ಶಾಸಕಿಯರ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಪುಷ್ಪಾ ಅಮರನಾಥ್, ‘ ಸುಧಾಕರ್ ಆರೋಗ್ಯ ಸಚಿವರಲ್ಲ, ಅನಾರೋಗ್ಯ ಸಚಿವ. ಅವರು ಸಚಿವರಾಗಿರಲು ನಾಲಾಯಕ್. ಮುಖ್ಯಮಂತ್ರಿ …
Read More »ಬಿಜೆಪಿಯವರಿಗೆ ರಾಜ್ಯದಲ್ಲಿ ಅಧಿಕಾರ ನಡೆಸಲು ಬರಲ್ಲ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಕಲಬುರಗಿ : ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ವತಂತ್ರವಾಗಿ ಅಧಿಕಾರ ನಡೆಸಲು ಕೇಂದ್ರದವರು ಬಿಟ್ಟಿಲ್ಲ. ಬಿಜೆಪಿ ಸರ್ಕಾರಕ್ಕೆ ಅಧಿಕಾರ ನಡೆಸಲು ಬರಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕುತಂತ್ರದಿಂದ ಬಂದಿದೆ. ಹೀಗಾಗಿ ಬಿಜೆಪಿಯವರಿಗೆ ರಾಜ್ಯದಲ್ಲಿ ಅಧಿಕಾರ ನಡೆಸಲು ಬರಲ್ಲ. ಕೇಂದ್ರದಿಂದ ಪ್ರಜಾಪ್ರಭುತ್ವವನ್ನು ಹಂತ ಹಂತವಾಗಿ ನಾಶ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಮೈತ್ರಿ ಸರ್ಕಾರದ ಪತನದ …
Read More »ಪ್ರಜಾಪ್ರಭುತ್ವಕ್ಕೆ ಕೆಟ್ಟ ದಿನ: ದೆಹಲಿ ಮಸೂದೆ ಬಗ್ಗೆ ಸಿಎಂ ಕೇಜ್ರಿವಾಲ್ ಕಿಡಿ
ನವದೆಹಲಿ, ಮಾರ್ಚ್ 25: ದೆಹಲಿ ಮಸೂದೆ 2021ಕ್ಕೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಜಾಪ್ರಭುತ್ವಕ್ಕೆ ಕೆಟ್ಟ ದಿನ ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ ನಮ್ಮ ಅಧಿಕಾರ ಮರಳಿ ಪಡೆಯಲು ನಮ್ಮ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ ರಾಜ್ಯಸಭೆಯಲ್ಲಿ ಜಿಎಲ್ ಸಿಟಿಡಿ ತಿದ್ದುಪಡಿ ಮಸೂದೆಗೆ ಅನುಮೋದನೆ ದೊರೆತಿದೆ. ನಿಜಕ್ಕೂ ಇದು ಪ್ರಜಾಪ್ರಭುತ್ವದ ಕೆಟ್ಟ ದಿನವಾಗಿದೆ. ಅಂತೆಯೇ ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. …
Read More »ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ: ಕಾರಜೋಳ ಮನೆ ಎದುರು ಧರಣಿ
ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಗೆ ತಿದ್ದುಪಡಿಯನ್ನು ವಿರೋಧಿಸಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಮನೆ ಎದುರು ಕರ್ನಾಟಕ ಎಸ್‌ಸಿ/ಎಸ್‌ಟಿ ಗುತ್ತಿಗೆದಾರರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ‘ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್) ₹2 ಕೋಟಿ ವರೆಗಿನ ಕಾಮಗಾರಿಯನ್ನು ನೇರವಾಗಿ ವಹಿಸುವ ನಿಟ್ಟಿನಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದು ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರ ಮೀಸಲಾತಿ ಸವಲತ್ತು ದುರ್ಬಲಗೊಳಿಸುವ …
Read More »ಗೋಕಾಕ: ನಗರದಲ್ಲಿ ಭಾವಯಾನ ವೇದಿಕೆಯವರು ಹಮ್ಮಿಕೊಂಡ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸುತ್ತಿರುವುದು.
ಗೋಕಾಕ: ಎಲ್ಲ ಕ್ಷೇತ್ರಗಳಲ್ಲಿಯೂ ಇಂದು ಮಹಿಳೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಾ ಅಬಲಿ ಎಂಬ ಸ್ಥಿತಿ ಮೀರಿ ಸಾಧನೆಯತ್ತ ದಾಪುಗಾಲು ಹಾಕುತ್ತಿದ್ದಾಳೆ ಎಂದು ಡಾ: ದೀಪಾ ತುಬಾಕಿ ಹೇಳಿದರು. ಬುಧವಾರದಂದು ನಗರದಲ್ಲಿ ಭಾವಯಾನ ವೇದಿಕೆಯವರು ಹಮ್ಮಿಕೊಂಡ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಕುಟುಂಬ ಮತ್ತು ವೃತ್ತಿ ನಿಭಾಯಿಸುತ್ತಾ ಮಹಿಳೆ ಸಾಧನೆಯತ್ತ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ: ಜ್ಯೋತಿಲಕ್ಷ್ಮೀ ವಾಲಿ, ಡಾ: ವಿಜಯಲಕ್ಷ್ಮೀ ಪಲೋಟಿ, …
Read More »ಗೋಕಾಕ: ಕರ್ನಾಟಕ ರಾಜ್ಯ ಮುಕ್ತ ಕರಾಟೆ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮಯೂರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು.
ಗೋಕಾಕ: ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ವಿಘ್ನಹಾರ ಪಾಟೀಲ, ಸಚೀನಗೌಡ, ರಾಕೇಶ ಕೊಳದುರ್ಗಿ ಇವರು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮುಕ್ತ ಕರಾಟೆ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಪ್ರಾಯೋಗಿಕ ವಿಭಾಗದಲ್ಲಿ ಚಿನ್ನ, ಲಿಖಿತ ವಿಭಾಗದಲ್ಲಿ ಬೆಳ್ಳಿಯ ಪದಕಗಳನ್ನು ಪಡೆಯುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಚೇರಮನ್ ಲಖನ ಜಾರಕಿಹೊಳಿ, ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯಿನಿ ಸಿ.ಬಿ.ಪಾಗದ, ತರಬೇತಿದಾರ ಅಮೃತ ಕದ್ದು ಸೇರಿದಂತೆ …
Read More »ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿಕೆಶಿ ಏಕಪತ್ನಿ ವ್ರತ ಮಾಡ್ತಿದ್ದಾರಾ?: ಆರೋಗ್ಯ ಸಚಿವ ಡಾ.ಕೆ. ಸುಧಾಕರ್
ರಮೇಶ್ ಜಾರಕಿಹೊಳಿ CD ವಿಚಾರದಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ನಡೆಸುತ್ತಿರೋ ಧರಣಿ, ಆರೋಪಗಳ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ‘ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಹೆಚ್.ಡಿ. ಕುಮಾರಸ್ವಾಮಿ.. ಇವರೆಲ್ಲರೂ ಸತ್ಯ ಹರಿಶ್ಚಂದ್ರರು. ಎಲ್ಲರೂ ಏಕಪತ್ನಿ ವ್ರತಸ್ಥರು. ಇವರೆಲ್ಲರೂ ಸಮಾಜಕ್ಕೆ ಮಾದರಿಯಾಗಿದ್ದಾರೆ. ಹೀಗಾಗಿ ನಾನೊಂದು ಚಾಲೆಂಜ್ ಹಾಕ್ತೀನಿ. ನಾನೂ ಸೇರಿದಂತೆ 225 ಶಾಸಕರ ಮೇಲೆ ತನಿಖೆ ನಡೆಯಲಿ. ಯಾರಿಗೆ ಅನೈತಿಕ ಸಂಬಂಧ ಇದೆ, ಯಾರ ಚರಿತ್ರೆ ಏನು ಅಂತ ಗೊತ್ತಾಗುತ್ತೆ. ಮುಖ್ಯಮಂತ್ರಿ …
Read More »ಟಿಆರ್‌ಪಿ ಹಗರಣ: ಅರ್ನಾಬ್ ಬಂಧಿಸಲು 3 ದಿನಗಳ ಮುಂಗಡ ನೋಟೀಸ್ ಕೊಡಿ; ಪೋಲೀಸರಿಗೆ ಹೈಕೋರ್ಟ್ ಸೂಚನೆ
ಮುಂಬೈ: ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ) ಹಗರಣ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಯವರನ್ನು ಬಂಧಿಸಲು ಬಯಸಿದರೆ ಮೂರು ದಿನಗಳ ಮುಂಗಡ ನೋಟಿಸ್ ನೀಡುವಂತೆ ಬಾಂಬೆ ಹೈಕೋರ್ಟ್ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ. ರಿಪಬ್ಲಿಕ್ ಟಿವಿ, ಎಲ್ಲಾ ರಿಪಬ್ಲಿಕ್ ಟಿವಿ ಚಾನೆಲ್‌ಗಳನ್ನು ನಡೆಸುವ ಎಆರ್‌ಜಿ ಔಟಿಯರ್ ಮೀಡಿಯಾ ಇತರ ಉದ್ಯೋಗಿಗಳು ಮತ್ತು ಟೆಲಿವಿಷನ್ ಚಾನೆಲ್‌ಗಳ ವಿರುದ್ಧದ ತನಿಖೆ 12 ವಾರಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮಹಾರಾಷ್ಟ್ರ ಸರ್ಕಾರ ನೀಡಿದ ಹೇಳಿಕೆಯನ್ನು …
Read More »