Breaking News

Uncategorized

ಮಹಾರಾಷ್ಟ್ರದಲ್ಲಿ ಒಂದೇ ದಿನ 68,000ಕ್ಕೂ ಹೆಚ್ಚು ಕೊರೊನಾ ಕೇಸ್!

ಮುಂಬೈ, ಏಪ್ರಿಲ್ 18: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಗೆ ಮಹಾರಾಷ್ಟ್ರ ತತ್ತರಿಸಿ ಹೋಗಿದೆ. ಪ್ರತಿನಿತ್ಯ ಇಡೀ ದೇಶದಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳು ಇದೊಂದೇ ರಾಜ್ಯದಲ್ಲಿ ವರದಿಯಾಗುತ್ತಿವೆ. ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 68631 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದೇ ದಿನ 503 ಮಂದಿ ಪ್ರಾಣ ಬಿಟ್ಟಿದ್ದು, 45,654 ಸೋಂಕಿತರು ಗುಣಮುಖರಾಗಿದ್ದಾರೆ.   ಭಾನುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 31,06,828 ಕೊರೊನಾವೈರಸ್ ಸೋಂಕಿತರು …

Read More »

ಕೊರೋನದಿಂದ ಮಿತಿಮೀರಿದ ಸಾವು; ಸುಟ್ಟು ಭಸ್ಮವಾಯಿತು ವಿದ್ಯುತ್ ಚಿತಾಗಾರ ಮಷಿನ್

ಸೊಲ್ಲಾಪುರ: ಮಹಾಮಾರಿ ಕೊರೋನಾದಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಈ ಸಮಯದಲ್ಲಿ ಸತ್ತವರ ಶವ ಸುಡಲು ಇದ್ದ ವಿದ್ಯುತ್ ಚಿತಾಗಾರದ ಮಷಿನ್‌ ಸುಟ್ಟುಹೋದ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ನಗರದಲ್ಲಿ ಇಂದು ನಡೆದಿದೆ. ಹೀಗಾಗಿ ಶವಗಳನ್ನ ಸುಡೋದಕ್ಕೂ ಸೊಲ್ಲಾಪುರ ಮಹಾನಗರ ಪಾಲಿಕೆ ಅಧಿಕಾರಿಗಳು ಪರದಾಟ ನಡೆಸುತ್ತಿದ್ದಾರೆ. ಸೊಲ್ಲಾಪುರ ನಗರದಲ್ಲಿ ಡೆಡ್ಲಿ ಕೊರೋನಾದಿಂದ ಪ್ರತಿನಿತ್ಯ 30ಕ್ಕೂ ಅಧಿಕ ಜನರ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಗರದಲ್ಲಿದ್ದ ವಿದ್ಯುತ್ ಚಿತಾಗಾರದ ಮಷಿನ್‌ ಸುಟ್ಟುಹೋದ ಪರಿಣಾಮ ಗ್ಯಾಸ್ …

Read More »

ವೀಕೆಂಡ್​ ಮೋಜಿಗೆ ಬಂದಿದ್ದ ಯುವಕ-ಯುವತಿ ಜಲಪಾತದಿಂದ ಕೆಳಗೆ ಬಿದ್ದು ದಾರುಣ ಸಾವು

ಮಡಿಕೇರಿ ; ಇಲ್ಲಿಗೆ ಸಮೀಪದ ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಇಬ್ಬರು ದಾರುಣವಾಗಿ ಸಾವಿಗೀಡಾಗಿದ್ದಾರೆ. ಮೃತರನ್ನು ಶಶಿಕುಮಾರ್​ (32) ಮತ್ತು ದಿವ್ಯ (20) ಎಂದು ಗುರುತಿಸಲಾಗಿದೆ. ಮೃತ ಶಶಿ ಕುಮಾರ್‌ ಸುಂಟಿಕೊಪ್ಪದ ಗುತ್ತಿಗೆದಾರ ರಾಮ ಎಂಬುವವರ ಪುತ್ರನಾಗಿದ್ದು ಅನೇಕ ವರ್ಷಗಳಿಂದ ಬೆಂಗಳೂರಿನ ಕಂಪೆನಿಯಲ್ಲಿ ಕೆಲಸ ಮಾಡುತಿದ್ದ. ಯುವತಿ ದಿವ್ಯಾ ಕೂಡ ಸುಂಟಿಕೊಪ್ಪದವಳೇ ಆಗಿದ್ದಾಳೆ ಸೋಮವಾರಪೇಟೆ ತಾಲೂಕಿನ ಮಲ್ಲಳ್ಲಿ ಜಲಪಾತದಲ್ಲಿ ಇಂದು ಬೆಳಗ್ಗೆ 9.30 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ. …

Read More »

ಕೊರೊನಾ ಗೈಡ್ ಲೈನ್ ಉಲ್ಲಂಘಿಸಿ ಪರೀಕ್ಷೆ: ರ್ಯಾಂಕ್ ಬಂದವರಿಗೆ ಬಹುಮಾನದ ಆಮಿಷ – ಕರಿಯರ್ ಅಕಾಡೆಮಿ ಮೇಲೆ ಪೊಲೀಸರ ದಾಳಿ

ಧಾರವಾಡ: ಕೊರೊನಾ ಮಾರ್ಗಸೂಚಿಯನ್ನು ಗಾಳಿಗೆ ತೂರಿ ಪರೀಕ್ಷೆ ನಡೆಸುತ್ತಿದ್ದ ವಿದ್ಯಾಕಾಶಿ ಕರಿಯರ್ ಅಕಾಡೆಮಿ ಮೇಲೆ ಪೊಲೀಸರು ದಾಳಿ ನಡೆಸಿ ಪರೀಕ್ಷೆ ನಿಲ್ಲಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದೂ ಅಲ್ಲದೇ ರ್ಯಾಂಕ್ ಬಂದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿ, ಸಂಸ್ಥೆ ಪರೀಕ್ಷೆ ನಡೆಸುತ್ತಿತ್ತು. ಬಹುಮಾನದ ಆಸೆಗಾಗಿ ನೂರಾರು ವಿದ್ಯಾರ್ಥಿಗಳು ಕೊರೊನಾ ಭೀಕರತೆ ನಡುವೆಯೂ ಜೀವದ ಹಂಗುತೊರೆದು ಪರೀಕ್ಷೆ ಬರೆಯಲು ಬಂದಿದ್ದಾರೆ. ಸ್ಪರ್ಧಾತ್ಮಕ ಮಾದರಿ ಪರೀಕ್ಷೆ ಇದಾಗಿದ್ದು, ಪ್ರಥಮ ಬಹುಮಾನವಾಗಿ 75,000 …

Read More »

Cinema ಮತ್ತೆ ವಿಜಯ್ ದೇವರಕೊಂಡ ಜೊತೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

ಮುಂಬೈ: ಟಾಲಿವುಡ್ ರೌಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಿನ್ನೆ ಮುಂಬೈನಲ್ಲಿ ಮತ್ತೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಜಿಮ್‍ನಿಂದ ಹೊರಬರುವಾಗ ವಿಜಯ್ ದೇವರಕೊಂಡ ಟೋಪಿ ಹಾಗೂ ಮಾಸ್ಕ್‍ನಿಂದ ತಮ್ಮ ಮುಖ ಮುಚ್ಚಿಕೊಂಡಿದ್ದರೆ, ರಶ್ಮಿಕಾ ಆರಾಮಾಗಿ ಮಾಸ್ಕ್ ಧರಿಸದೇ ನಗುತ್ತಾ ಖುಷಿಯಿಂದ ಹೊರಬರುತ್ತಿರುವುದನ್ನು ಕಾಣಬಹುದಾಗಿದೆ. ಇಬ್ಬರು ತಮ್ಮ ಮುಂದಿನ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಬಹಳ ದಿನಗಳ ನಂತರ ಇದೀಗ ಮತ್ತೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕೆಲವು ದಿನಗಳ ಹಿಂದೆ …

Read More »

ಅಕ್ಷರಶಃ ಆಕ್ಸಿಜನ್ ‘ಯಮ’ರ್ಜೆನ್ಸಿ ಸೃಷ್ಟಿಯಾಗಿದೆ. ಪರದಾಡಿ, ಗೋಳಾಡಿ ಬೆಡ್ ಪಡೆದರೂ ಜನರ ಜೀವಕ್ಕೆ ಖಾತ್ರಿ ಇಲ್ಲ.

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ 17 ಸಾವಿರ ಸೋಂಕು, 80 ಸಾವಿನೊಂದಿಗೆ ಇವತ್ತೂ ಮತ್ತೊಂದು ದಾಖಲೆ ಬರೆದಿದೆ. ಇದರ ಮಧ್ಯೆ ಬೆಂಗಳೂರಿನಲ್ಲಿ ಸದ್ಯದ ಪರಿಸ್ಥಿತಿ ರಣಭಯಂಕರವಾಗ್ತಿದೆ. ಅಕ್ಷರಶಃ ಆಕ್ಸಿಜನ್ ‘ಯಮ’ರ್ಜೆನ್ಸಿ ಸೃಷ್ಟಿಯಾಗಿದೆ. ಪರದಾಡಿ, ಗೋಳಾಡಿ ಬೆಡ್ ಪಡೆದರೂ ಜನರ ಜೀವಕ್ಕೆ ಖಾತ್ರಿ ಇಲ್ಲ. ಬೆಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ಈಗಾಗಲೇ ಆಕ್ಸಿಜನ್ ಖಾಲಿಯಾಗಿದ್ರೆ, ಮತ್ತೆ ಕೆಲವು ಆಸ್ಪತ್ರೆಗಳಲ್ಲಿ ಇನ್ನೊಂದೆರಡು ದಿನಗಳಲ್ಲಿ `ಪ್ರಾಣವಾಯು’ ಕೊರತೆ ಎದುರಾಗಲಿದೆ. ಐಸಿಯುನಲ್ಲಿರೋ ರೋಗಿಗಳು `ದಯವಿಟ್ಟು ನಮಗೆ ಆಕ್ಸಿಜನ್ ಕೊಡಿಸಿ.. …

Read More »

ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಒಟ್ಟಾರೆ ಶೇ.55.61 ರಷ್ಟು ಮತದಾನ..

ಬೆಳಗಾವಿ: ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಒಟ್ಟಾರೆ ಶೇ.55.61 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ. ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ 02- ಬೆಳಗಾವಿ ಲೋಕಸಭಾ ಮತಕ್ಷೇತ್ರಕ್ಕೆ ಶನಿವಾರ (ಏ.17) ಮತದಾನ ನಡೆಯಿತು. ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಮತಕ್ಷೇತ್ರಗಳಲ್ಲಿ ಒಟ್ಟಾರೆ 2566 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನವು ಸಂಜೆ 7 …

Read More »

ಮಂಗಳಾ ಅಂಗಡಿ ಗೆಲವು ನಿಶ್ಚಿತ- ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರ ಗೆಲುವು ಖಚಿತವೆಂದು ಕೆಎಮ್‍ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಶನಿವಾರ ಸಂಜೆ ನಗರದ ಹೊಸಪೇಟ ಗಲ್ಲಿಯಲ್ಲಿರುವ ಕೆಬಿಎಸ್ ನಂ 3 ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಪರ ಜಿಲ್ಲೆಯ ಎಲ್ಲ ಸಚಿವರು, ಶಾಸಕರು ಮತ್ತು ಮುಖಂಡರು ಒಗ್ಗಟ್ಟಾಗಿ ಪ್ರಚಾರ ಕಾರ್ಯ ನಡೆಸಿದ್ದೇವೆ. ಮತದಾರರು ಸಹ ಬಿಜೆಪಿ ಜನೋಪಯೋಗಿ …

Read More »

ಮೂರು ಕ್ಷೇತ್ರಗಳ ಉಪಚುನಾವಣೆ, ಶಾಂತಿಯುತ ಮತದಾನ

ಏಪ್ರಿಲ್ 17ರಂದು ಕರ್ನಾಟಕದ ಒಂದು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಮತದಾನ ಆರಂಭವಾಗಿದೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದರೆ, ಕಾಂಗ್ರೆಸ್ ಶಾಸಕರಾಗಿದ್ದ ಬಿ. ನಾರಾಯಣರಾವ್ ಅವರ ನಿಧನದಿಂದ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಇನ್ನು ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲರು ತಮ್ಮ ವಿಧಾನಸಭಾ ಸದಸ್ಯತ್ವ ಸ್ಥಾನಕ್ಕೆ …

Read More »

ಮಹಾರಾಷ್ಟ್ರದಲ್ಲಿ ಕರ್ಫ್ಯೂ: ವಲಸಿಗರಿಗೆ, ನಿರುದ್ಯೋಗಿಗಳಿಗೆ ಆಹಾರ ವಿತರಿಸಿದ ಅರ್ಥ್ ಕೆಫೆ

ದೇಶಾದ್ಯಂತ ಕೋವಿಡ್-19 ಎರಡನೇ ಅಲೆ ಶುರುವಾಗಿದ್ದು ಅದರಲ್ಲೂ ಮಹಾರಾಷ್ಟ್ರ, ಮುಂಬೈನಲ್ಲಿ ಮಿತಿ ಮೀರುತ್ತಿದೆ. ಈ ಹಿನ್ನೆಲೆ ಅಲ್ಲಿನ ರಾಜ್ಯ ಸರ್ಕಾರ ಕಳೆದ ಬುಧವಾರದಿಂದ ಮೇ 1ರವರೆಗೆ ಜನತಾ ಕರ್ಫ್ಯೂ ಜಾರಿ ಮಾಡಿ ಎಲ್ಲೆಂದರಲ್ಲಿ ನಾಲ್ಕು ಮಂದಿಗಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಜನತಾ ಕರ್ಫ್ಯೂ ಕಾರಣ ಅಲ್ಲಿನ ವಲಸೆ ಕಾರ್ಮಿಕರ, ಬಡವರ, ನಿರುದ್ಯೋಗಿಗಳ ಬದುಕು ಶೋಚನೀಯವಾಗಲಿದೆ. ಇದನ್ನರಿಂದ ಕೆಲವು ಮುಂಬೈ ಮೂಲದ ರೆಸ್ಟೊರೆಂಟ್‍ಗಳು, ಕೆಫೆಗಳು ಉಚಿತವಾಗಿ ಆಹಾರ …

Read More »