Breaking News

Uncategorized

ಗೋವಾ ಏರ್‌ಪೋರ್ಟ್‌ನಲ್ಲಿ ರಾತ್ರಿ ವೇಳೆ ವಿಮಾನ ಹಾರಾಟ ಸ್ಥಗಿತ

ಪಣಜಿ, : ಗೋವಾ ಏರ್‌ಪೋರ್ಟ್‌ನಲ್ಲಿ ರಾತ್ರಿ ವೇಳೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.ಗೋವಾದಲ್ಲಿರುವ ಏಕಮಾತ್ರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಾಬೊಲಿಮ್‌ನಲ್ಲಿ ಸೆಪ್ಟೆಂಬರ್ ವರೆಗೆ ರಾತ್ರಿ ಹೊತ್ತು ವಿಮಾನ ಸಂಚಾರ ನಿಷೇಧಿಸಲಾಗಿದೆ. ಟಾಟಾ ಪವರ್ ಎಸ್‌ಡಿ ನವೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ, ಸಂಜೆಯ ಸಮಯದಲ್ಲಿ ಕಾಮಗಾರಿಯನ್ನು ನಡೆಸುತ್ತಿದೆ. ರಾತ್ರಿ ಹೊತ್ತು ವಿಮಾನ ಹಾರಾಟ ನಿಷೇಧಿಸುವುದರಿಂದ ನಾಗರಿಕ ವಿಮಾನ ಕಾರ್ಯಾಚರಣೆಗೆ ಅಷ್ಟೊಂದು ತೊಂದರೆಯಾಗುವುದಿಲ್ಲ ಎಂದು ಗೋವಾ ಏರ್‌ಪೋರ್ಟ್ ನಿರ್ದೇಶಕ ಗಗನ್ ಮಲಿಕ್ ಹೇಳಿದ್ದಾರೆ. ನವೀಕರಣ ನಡೆಯುತ್ತಿರುವ …

Read More »

ಕೊರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಂಸತ್ ನಿರ್ಮಾಣ ಕಾರ್ಯ ಬೇಕಿತ್ತಾ?: ಎಂ.ಬಿ. ಪಾಟೀಲ್ ಪ್ರಶ್ನೆ

ವಿಜಯಪುರ: ದೇಶದಲ್ಲಿ ಜನರು ಸಾಯುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ರಾಜಪಥ ಅಭಿವೃದ್ಧಿ, ಪ್ರಧಾನಮಂತ್ರಿಗಳ ನಿವಾಸ, ಉಪರಾಷ್ಟ್ರಪತಿಗಳ ನಿವಾಸದ ಪ್ರಗತಿಗೆ ಸಾವಿರಾರು ಕೋಟಿ ವ್ಯಯಿಸುತ್ತಿದೆ. ಕೊರೋನಾ ಸಾಂಕ್ರಾಮಿಕ ರೋಗ ಸಮಯದಲ್ಲಿ ಸಂಸತ್ ನಿರ್ಮಾಣ ಕಾರ್ಯ ಬೇಕಿತ್ತಾ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಅವರು ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ದ ಹರಿಹಾಯ್ದಿದ್ದಾರೆ. ಪ್ರಧಾನಿ ಮೋದಿಯವರು ಈ ಹಿಂದೆ ಯಾವ ಮಹಾರಾಜರು ಮಾಡದ ರೀತಿಯಲ್ಲಿ ವರ್ತಿಸುತ್ತಿದ್ದಾರೆ‌. …

Read More »

ಇಂದಿರಾ ಕ್ಯಾಂಟೀನ್’ನಲ್ಲಿ ‘ಉಚಿತ ಊಟ’ ಕೊಡ್ತಾರೆ ಅಂತ ಹೋದವರಿಗೆ ಕಾದಿತ್ತು ಶಾಕ್ : ‘ಕಟ್ಟಿಕೊಟ್ಟ ಪೊಟ್ಟಣ’ದಲ್ಲಿ ಇದ್ದ ಊಟ ಎಷ್ಟು ಗೊತ್ತಾ.?

ಬೆಂಗಳೂರು : ಇಂದಿನಿಂದ ಲಾಕ್ ಡೌನ್ ಸಂದರ್ಭದಲ್ಲಿ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ನಲ್ಲಿ ಮೂರು ಹೊತ್ತು ಉಚಿತ ಊಟದ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ. ಬೆಳಿಗ್ಗೆ ತಿಂಡಿಗಾಗಿ ಇಂದಿರಾ ಕ್ಯಾಂಟೀನ್ ಮುಂದೆ ನೂರಾರು ಜನರು ಕ್ಯೂ ಕೂಡ ನಿಂತು ಇಂದಿರಾ ಕ್ಯಾಂಟೀನ್ ನೀಡುವಂತ ಆಹಾರದ ಪೊಟ್ಟಣವನ್ನು ಪಡೆದು, ಖುಷಿಯಿಂದ ತೆರಳಿ, ಓಪನ್ ಮಾಡಿದ ಅನೇಕರಿಗೆ, ಶಾಕ್ ಕಾದಿತ್ತು. ಅದೇನ್ ಅಂತ ಮುಂದೆ ಓದಿ.. ನಗರದಾಧ್ಯಂತ …

Read More »

ಕರಾವಳಿ ಕರ್ನಾಟಕದಲ್ಲಿ ಮೇ 13ರಂದು ಗುರುವಾರವೇ ರಂಜಾನ್ ಆಚರಣೆ

ಮಂಗಳೂರು: ಇಂದು ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ಮೇ 13ರಂದು ಗುರುವಾರವೇ ರಂಜಾನ್ ಹಬ್ಬ ಆಚರಿಸುವಂತೆ ಉಳ್ಳಾಲ ಖಾಜಿ ಸೈಯದ್​ ಕೂರತ್ ತಂಗಲ್ ಘೋಷಿಸಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ದುಬೈನಲ್ಲಿ ಗುರುವಾರದಂದು ರಂಜಾನ್ ಹಬ್ಬ ಆಚರಿಸಲಾಗುತ್ತದೆ. ಈ ಬಾರಿ ಕೊವಿಡ್ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಕಾರಣ ಈದುಲ್ ಫಿತ್ರ್ ಹಬ್ಬವನ್ನು ಸರಳವಾಗಿ ಮನೆಯಲ್ಲಿಯೇ ಆಚರಿಸಬೇಕು. ಅತ್ಯಂತ ಸರಳವಾಗಿ ಆಚರಿಸಬೇಕು. ಬಡವರಿಗೆ ಹೆಚ್ಚಿನ ದಾನ ನೀಡಬೇಕು …

Read More »

ಕೊವಿಶೀಲ್ಡ್‌ನ ಒಂದು ಡೋಸ್‌ನಿಂದ 80% ರಕ್ಷಣೆ : ಪಬ್ಲಿಕ್‌ ಹೆಲ್ತ್‌ ಇಂಗ್ಲೆಂಡ್‌ ವರದಿ

ಲಂಡನ್‌/ವಾಷಿಂಗ್ಟನ್‌: ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಯ ಒಂದು ಡೋಸ್‌ ಪಡೆದರೂ ಸೋಂಕಿನಿಂದ ಮರಣಹೊಂದುವ ಅಪಾಯ ಶೇ.80ರಷ್ಟು ತಗ್ಗುತ್ತದೆ ಎಂದು ಪಬ್ಲಿಕ್‌ ಹೆಲ್ತ್‌ ಇಂಗ್ಲೆಂಡ್‌ ಬಹಿರಂಗಪಡಿಸಿದ ಹೊಸ ದತ್ತಾಂಶ ತಿಳಿಸಿದೆ. ಅಂದರೆ, ಒಬ್ಬ ವ್ಯಕ್ತಿಯು ಕೊವಿಶೀಲ್ಡ್‌ ಲಸಿಕೆಯ ಮೊದಲ ಡೋಸ್‌ ಪಡೆದರೂ, ಸೋಂಕಿನಿಂದ ಆತ ಸಾಯುವ ಸಾಧ್ಯತೆ ಶೇ.80ರಷ್ಟು ಕಡಿಮೆ. ಅದೇ ರೀತಿ, ಫೈಜರ್‌-ಬಯಾನ್‌ ಟೆಕ್‌ ಲಸಿಕೆಯ ಒಂದು ಡೋಸ್‌ ನಲ್ಲಿ ಮರಣದ ಅಪಾಯ ಶೇ.80ರಷ್ಟು ಹಾಗೂ ಎರಡನೇ ಡೋಸ್‌ ಬಳಿಕ ಇದು ಶೇ.97ರಷ್ಟು …

Read More »

ವಾಹನ ಬಳಕೆ ನಿರ್ಬಂಧ: ಪೊಲೀಸರ ದಬ್ಬಾಳಿಕೆ: ದಲಿತ ಸಂಘರ್ಷ ಸಮಿತಿ ಆರೋಪ

ಬೆಂಗಳೂರು: ಕೋವಿಡ್ ಲಾಕ್‌ಡೌನ್ ನೆಪದಲ್ಲಿ ನಾಗರಿಕರ ವಾಹನ ಬಳಕೆಗೆ ಪೊಲೀಸರು ನಿರ್ಬಂಧಿಸುತ್ತಿದ್ದು, ನಾಗರಿಕರ ಮೇಲೆ ಪೊಲೀಸರು ನಡೆಸುತ್ತಿರುವ ದಬ್ಬಾಳಿಕೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಆರೋಪಿಸಿದ್ದಾರೆ. ವಾಹನ ಬಳಸದೆ ನಡೆದುಕೊಂಡೇ ಅಗತ್ಯ ವಸ್ತುಗಳ ಖರೀದಿಗೆ ಹೋಗುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ. ಕೃಷಿ ಚಟುವಟಿಕೆ ಅವಕಾಶ ಇದ್ದರೂ, ಜಮೀನಿಗೆ ತೆರಳಲು ರೈತರು ಪರದಾಡಬೇಕಾಗಿದೆ. ಕೃಷಿ ಇಲಾಖೆಯಿಂದ ಪಾಸ್ ಪಡೆದುಕೊಂಡಿದ್ದರೂ ವಾಹನದಲ್ಲಿ ಹೋಗಲು ಅವಕಾಶ …

Read More »

ನಾಲಾಯಕ್ ಇಡು ಫೋನ್ ದೊಡ್ಡ ಕಿಸಾಮತಿ ಮಾಡ್ತಿ : ಸಿದ್ದು ಸವದಿ

ಬಾಗಲಕೋಟೆ: ಕೊರೊನಾದಿಂದ ಸಹೋದರನನ್ನು ಕಳೆದುಕೊಂಡ ವ್ಯಕ್ತಿ ಶಾಸಕರಿಗೆ ಕರೆ ಮಾಡಿ ಆಕ್ಸಿಜನ್ ವ್ಯವಸ್ಥೆ ಮಾಡಬೇಕು, ಸರ್ಕಾರಿ ಆಸ್ಪತ್ರೆಯ ಮುಂದೆ ಕೂರಬೇಕು ಹೇಳಿದ್ದಕ್ಕೆ ನಾಲಾಯಕ್ ಇಡು ಫೋನ್ ಎಂದು ತೆರದಾಳ ಶಾಸಕ ಸಿದ್ದು ಸವದಿ ಉದ್ದಟತನದ ಮಾತುಗಳನ್ನಾಡಿದ್ದಾರೆ. ಸಂಜಯ್ ದೊಂಡಿಬಾಗ ಗಾಯಕವಾಡ(41) ಕೊರೊನಾ ದಿಂದ ಶನಿವಾರ ಸಾವನ್ನಪ್ಪಿದ್ದಾರೆ. ಇವರು ರಬಕವಿಬನಹಟ್ಟಿ ತಾಲ್ಲೂಕಿನ ಆಸಂಗಿ ಗ್ರಾಮದ ನಿವಾಸಿಯಾಗಿದ್ದಾರೆ. ಆಕ್ಸಿಜನ್ ಸಿಗದೇ ಸಂಜಯ್ ಸಾವನ್ನಪಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಂಜಯ್ ಅವರನ್ನು ಉಳಿಸಿಕೊಳ್ಳಲು ಕುಟುಂಬದವರು ಬಾಗಲಕೋಟೆ …

Read More »

ಸರಿಗಮಪ ಖ್ಯಾತಿಯ ಪೊಲೀಸ್ ಸಿಂಗರ್ ಸುಬ್ರಮಣಿ ಪತ್ನಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್

ಬೆಂಗಳೂರು: ಸರಿಗಮಪ ಖ್ಯಾತಿಯ ಪೊಲೀಸ್ ಸಿಂಗರ್ ಸುಬ್ರಮಣಿ ಪತ್ನಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೊರೊನಾದಿಂದ ಸಾವನ್ನಪ್ಪಿಲ್ಲ ಕೌಟುಂಬಿಕ ಕಲಹ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಸುಬ್ರಮಣಿ ಪತ್ನಿ ಜ್ಯೋತಿ (33) ಮೇ 7 ರಂದು ಕೋಲಾರದ ಧರ್ಮರಾಯನಗರದ ನಿವಾಸದಲ್ಲಿ ಆತ್ಮಹತ್ಯೆ ಯತ್ನಿಸಿದ್ದರು. ಕೂಡಲೇ ಕೋಲಾರದ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸುಬ್ರಮಣಿ ಪತ್ನಿಗೆ …

Read More »

ಬೆಂಗಳೂರಿನ ಜನರಿಗೆಂದೇ ಸಿದ್ಧವಾಯ್ತು ಆಕ್ಸಿಜನ್ ಬಸ್.​..! ಪ್ರಾಣವಾಯುವಿಗಾಗಿ ಇನ್ಮುಂದೆ ಹಪಹಪಿಸಬೇಕಿಲ್ಲ

ರಾಜ್ಯದಲ್ಲಿ ಕೊರೊನಾ 2ನೆ ಅಲೆ ಮಿತಿಮೀರಿರುವ ನಡುವಲ್ಲೇ ಪ್ರಾಣವಾಯುವಿನ ಕೊರತೆಯಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದ ರಾಜಧಾನಿ ಮಂದಿಗೆ ರಾಜ್ಯ ಸರ್ಕಾರ ಗುಡ್​ ನ್ಯೂಸ್​ ನೀಡಿದೆ. ಇನ್ಮುಂದೆ ರಾಜಧಾನಿಯ ಮೂಲೆ ಮೂಲೆಗಳಲ್ಲಿ ಆಕ್ಸಿ ಬಸ್​ ಸಂಚರಿಸಲಿದ್ದು ಈ ಕಾರ್ಯಕ್ರಮಕ್ಕೆ ಆರೋಗ್ಯ ಸೌಧದಲ್ಲಿ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಇದೊಂದು ಮೊಬೈಲ್​ ಆಕ್ಸಿ ಬಸ್​ ಆಗಿದ್ದು ಬಿಬಿಎಂಪಿ ವತಿಯಿಂದ ಒಟ್ಟು 20 ಬಸ್​ಗಳನ್ನ ತಯಾರು ಮಾಡಲಾಗಿದೆ. ಟ್ರಾಸ್​​ ಎನರ್ಜಿ ಮಾಚನಿ ಗ್ರೂಪ್​ ಕೇವಲ 2 …

Read More »

ರೋಡಿಗೆ ಇಳಿದಿರುವ ಬೈಕ್ ಸವಾರರ ಮೇಲೆ ಲಾಠಿ ಚಾರ್ಜ್ ಪೊಲೀಸರ ವರ್ತನೆಗೆ ಸಾರ್ವಜನಿಕರ ವ್ಯಾಪಕ ಆಕ್ರೋಶ

ಗೋಕಾಕ:ರಸ್ತೆಗಿಳಿದವರ ಮೇಲೆ ಲಾಠಿ ಏಟು, ಪೊಲೀಸರ ವರ್ತನೆಗೆ ಸಾರ್ವಜನಿಕರ ವ್ಯಾಪಕ ಆಕ್ರೋಶ ಲಾಕ್‌ಡೌನ್ ಸಂದರ್ಭದಲ್ಲಿ ರಸ್ತೆಗಿಳಿದವರ ಮೇಲೆ ಪೊಲೀಸರು ಲಾಠಿಯಲ್ಲಿ ಹಿಗ್ಗಾಮುಗ್ಗ ಥಳಿಸುತ್ತಿರುವುದರ ವಿರುದ್ಧ ವ್ಯಾಪಕ ಆಕ್ರೋಶಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಸಾಮಾಜಿಕ ಹೋರಾಟಗಾರರು, ಬರಹಗಾರರು ಮಾತ್ರವಲ್ಲದೆ ಸಾರ್ವಜನಿಕರು ಪೊಲೀಸರ ನಡೆಯನ್ನು ಖಂಡಿಸುತ್ತಿದ್ದಾರೆ.     ಕೋವಿಡ್ ಕಠಿಣ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನಸಾಮಾನ್ಯರನ್ನು ಅಪರಾಧಿಗಳಂತೆ ನಡೆಸಿಕೊಂಡು ಶಿಕ್ಷೆ ಕೊಡಲು ಪೊಲೀಸರಿಗೆ ಅಧಿಕಾರ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ‘ಪೊಲೀಸರಿಗೆ ಶಿಕ್ಷಿಸುವ …

Read More »