ಹುಬ್ಬಳ್ಳಿ: ಲಾಕ್ಡೌನ್ ಸಂದರ್ಭದಲ್ಲಿ ನಿಗದಿತ ಸಮಯ ಮೀರಿಯೂ ತೆರೆದಿದ್ದ ಅಂಗಡಿಯನ್ನು ಮುಚ್ಚಿ ಎಂದಿದ್ದಕ್ಕೆ ಅಂಗಡಿ ಮಾಲೀಕ ಹಾಗೂ ಆತನ ಇಬ್ಬರು ಮಕ್ಕಳು ಸೇರಿ ಪೊಲೀಸ್ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಇಂಥದ್ದೊಂದು ಪ್ರಕರಣ ಹುಬ್ಬಳ್ಳಿಯಲ್ಲಿ ಇಂದು ನಡೆದಿದೆ. ಹುಬ್ಬಳ್ಳಿಯ ತಾರಿಹಾಳ ಗ್ರಾಮದಲ್ಲಿ ಈರಪ್ಪ ಹನುಮಸಾಗರ ಎಂಬವರು ಬೆಳಗ್ಗೆ 10 ಗಂಟೆ ಕಳೆದರೂ ಅಂಗಡಿಯನ್ನು ಮುಚ್ಚದೆ ತೆರೆದೇ ಇರಿಸಿದ್ದರು. ಸಮಯ ಮೀರಿದೆ, ಅಂಗಡಿಯನ್ನು ಮುಚ್ಚಿ ಎಂದು ಆ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೆಬಲ್ …
Read More »ಅತ್ತೆಯ ಒಡವೆ ಅಳಿಯ ದಾನ ಮಾಡಿದಂತೆ ಪ್ರಧಾನಿ ನಡೆ: ದಿನೇಶ್ ಗುಂಡೂರಾವ್
ಬೆಂಗಳೂರು, : ಅತ್ತೆ ಒಡವೆಯನ್ನು ಅಳಿಯ ದಾನ ಕೊಟ್ಟ ಮಾದರಿಯಲ್ಲಿಯೇ ಪ್ರಚಾರಕ್ಕಾಗಿ ಕೋವಿಡ್ ಲಸಿಕೆಯನ್ನು ವಿದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಟೀಕಿಸಿದರು. ಸೋಮವಾರ ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಆಸೆಗೆ ನಮ್ಮ ಲಸಿಕೆಯನ್ನು ವಿದೇಶಕ್ಕೆ ದಾನ ಮಾಡಿದ್ದಾರೆ. ಇದು ಅತ್ತೆ ಒಡವೆಯನ್ನು ಅಳಿಯ ದಾನ ಕೊಟ್ಟಂತೆ ಆಗಿದೆ ಎಂದರು. ವಿದೇಶಗಳಲ್ಲೂ ಕೋವಿಡ್ ಲಸಿಕೆ …
Read More »ಪ್ರತಿಯೊಬ್ಬರಿಗೂ 10 ಸಾವಿರ ಸಹಾಯಧನ ಕೊಡಿ, ಏನು ನಿಮ್ಮಪ್ಪನ ಮನೆಯ ಗಂಟು ಕೊಡುತ್ತಿರಾ?: ಸಿದ್ದರಾಮಯ್ಯ ;
ಕೋಲಾರ; ಜಿಲ್ಲೆಯ ಕೆಜಿಎಫ್ನಲ್ಲಿ ಕೊರೋನಾ ವಾರಿಯರ್ಸ್ಗೆ ಉಚಿತ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಚಾಲನೆ ನೀಡಿದರು. ಕೆಜಿಎಫ್ ನಗರದ ನಗರಸಭೆ ಕ್ರೀಡಾಂಗಣದಲ್ಲಿ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ನೇತೃತ್ವದಲ್ಲಿ ಆಯೋಜಿಸಿದ್ದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ರಾಮಲಿಂಗಾರೆಡ್ಡಿ, ಕೆಎಚ್ ಮುನಿಯಪ್ಪ, ವಿಆರ್ ಸುದರ್ಶನ್, ವಲ್ಲಾಲ್ ಮುನಿಸ್ವಾಮಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ …
Read More »ಗೋಕಾಕದಲ್ಲಿ ಭೀಕರ ಸರಣಿ ಅಪಘಾತ: ಮೂವರಿಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು
ಗೋಕಾಕ: ನಗರದ ಬ್ಯಾಳಿಕಾಟಾ ಬಳಿ ಸೋಮವಾರ ಸಂಜೆ ಭೀಕರ ಸರಣಿ ಅಪಘಾತ ಸಂಭವಿಸಿ, ಮೂವರು ಗಂಭಿರವಾಗಿ ಗಾಯಗೊಂಡಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ನಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನಗರದ ಕಡೆ ಆಗಮಿಸುತ್ತಿದ್ದ ಇಂಡಿಕಾ ಕಾರ್, ಇಲ್ಲಿನ ನಾಕಾ 1 ರಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಆಟೊ ರಿಕ್ಷಾಗೆ ಡಿಕ್ಕಿ …
Read More »ಮೂಡಲಗಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಕಲ ವ್ಯವಸ್ಥೆ: ತಹಶೀಲ್ದಾರ್ ಮೋಹನಕುಮಾರ್
ಮೂಡಲಗಿ: ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ತಾಲೂಕಿನ ಯಾದವಾಡ ಗ್ರಾಮದಲ್ಲಿ ಸೋಮವಾರ ಕೋವಿಡ್-19 ಜಾಗೃತಿ ಸಭೆ ಜರುಗಿತು. ಮೂಡಲಗಿ ತಹಶೀಲ್ದಾರ ಡಾ. ಮೋಹನಕುಮಾರ ಭಸ್ಮೆ ಮಾತನಾಡಿ, “ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿದೆ, ಈಗಾಗಲೇ ಇದರ ನಿಯಂತ್ರಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೊರೊನಾ ಬಗ್ಗೆ ಸಾರ್ವಜನಿಕರು ಜಾಗೃತಿಯಿಂದ ಇರಬೇಕು. ಆದರೆ ಇದರಿಂದ ಯಾರೂ ಗಾಬರಿಯಾಗಬಾರದು” ಎಂದು ಹೇಳಿದರು. ಸಕಲ ವ್ಯವಸ್ಥೆ: “ಸೋಂಕಿತರಿಗೆ ಈಗಾಗಲೇ ಅಗತ್ಯ ಇರುವ ಚಿಕಿತ್ಸೆ …
Read More »ಕುವೈತ್ ನಿಂದ ಧಾರವಾಡಕ್ಕೆ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ: ಸಚಿವ ಪ್ರಹ್ಲಾದ್ ಜೋಶಿ
ಧಾರವಾಡ: ಭಾರತ ಸರ್ಕಾರದ ವಿದೇಶಾಂಗ ಮಂತ್ರಾಲಯ ಮತ್ತು ವಾಣಿಜ್ಯ ಮಂತ್ರಾಲಯದಿಂದ ಬೇರೆ ಬೇರೆ ರಾಷ್ಟ್ರಗಳ ಜೊತೆ ಭಾರತದ ಉತ್ತಮ ಸಂಬಂಧ ಹೊಂದಿರುವದರಿಂದ ಮತ್ತು ಜಾಗತಿಕ ಟೆಂಡರ್ ಮೂಲಕ ಆಕ್ಸಿಜನ್ ಆಮದು ಮಾಡಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಸೋಮವಾರ ಬೆಳಿಗ್ಗೆ, ಜಿಲ್ಲೆಯ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಪ್ರಾಕ್ಸಿಯರ್ ಆಕ್ಸಿಜನ್ ಮರುಪೂರ್ಣ (ರೀಫಿಲ್ಲಿಂಗ್) ಘಟಕಕ್ಕೆ ಭೇಟಿ ನೀಡಿ, ಘಟಕದಿಂದ ಟ್ಯಾಂಕರ್ ಗೆ ಆಕ್ಸಿಜನ್ ತುಂಬುವ ಕಾರ್ಯ ಪರೀಶಿಲಿಸಿದ ನಂತರ …
Read More »ಕೋವಿಡ್: ಗಡಿ ಜಿಲ್ಲೆ ಶಿಕ್ಷಕರು ಗಢಗಢ…. ದೊಡ್ಡ ಬೆಲೆ ತೆರುತ್ತಿದೆ ಶಿಕ್ಷಕ ಸಮುದಾಯ…
ಕೋವಿಡ್ ಸೋಂಕಿಗೆ ಗಡಿ ಜಿಲ್ಲೆಯಲ್ಲಿ ಶಿಕ್ಷಕ ಸಮುದಾಯ ದೊಡ್ಡ ಬೆಲೆ ತೆತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 90 ಶಿಕ್ಷಕರು ಕೋವಿಡ್ ಸೋಂಕಿಗೆ ಶಿಕಾರಿಯಾಗಿದ್ದಾರೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಮೊದಲ ಅಲೆಯಲ್ಲಿ 23, ಎರಡನೇ ಅಲೆಯಲ್ಲಿ 20 ಶಿಕ್ಷಕರು ಬಲಿಯಾಗಿದ್ದಾರೆ. ಹತ್ತು ಶಿಕ್ಷಕರು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದವರಾಗಿದ್ದವರು ಎಂದು ಸರಕಾರಕ್ಕೆ ಮಾಹಿತಿ ಸಲ್ಲಿಸಲಾಗಿದೆ ಎಂದು ಬೆಳಗಾವಿ ಡಿಡಿಪಿಐ ಆನಂದ ಪುಂಡಲೀಕ ಅವರು “ಜನ ಜೀವಾಳ”ಕ್ಕೆ ಮಾಹಿತಿ ನೀಡಿದ್ದಾರೆ. …
Read More »ತಾಯಿನಾಡ ಜನರ ಸಂಕಷ್ಟಕ್ಕೆ ಮಿಡಿದ ಸಾಗರದಾಚೆ ಕನ್ನಡಿಗರು; ದುಬೈನಿಂದ ಕರ್ನಾಟಕಕ್ಕೆ ಹರಿದು ಬಂತು ಸಹಾಯ ಹಸ್ತ
ಬೆಂಗಳೂರು: ಕೊರೊನಾ ಎರಡನೇ ಅಲೆ ಭಾರತದಲ್ಲಿ ಬಹಳ ವೇಗದಲ್ಲಿ ಮತ್ತು ಬಹಳ ಅಪಾಯಕಾರಿಯಾಗಿ ಹರಡುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಕೊವಿಡ್ ಕಾರಣ ಸಾವು-ನೋವುಗಳು ಹೆಚ್ಚಾಗಿ ಸಂಭವಿಸುತ್ತಿದ್ದು, ಕಳೆದ ಹಲವು ದಿನಗಳಿಂದ ಕರ್ನಾಟಕವನ್ನು ಲಾಕ್ಡೌನ್ ಮಾಡಲಾಗಿದೆ. ಇದರಿಂದಾಗಿ ದಿನಗೂಲಿ ಜನರು ಮತ್ತು ನಿರ್ಗದಿಕರು ಸೇರಿ ಹಲವು ಬಡವರು ಜೀವನ ಸಾಗಿಸುವುದೇ ಕಷ್ಟವಾಗಿದೆ. ಕೆಲವರಿಗೆ ಒಂದೊತ್ತಿನ ಊಟಕ್ಕೆ ಸಹ ಇಲ್ಲದ ಪರಿಸ್ಥಿತಿ ಇದ್ದು, ಇಂತಹರವರ ನೆರವಿಗೆ ಈಗ ದುಬೈನ ಕನ್ನಡಿಗರು ನಿಂತಿದ್ದಾರೆ. ದುಬೈನಲ್ಲಿ ಕಾರ್ಯಾಚರಿಸುತ್ತಿರುವ …
Read More »ಮಾಸ್ಕ್ ಹಾಕದೆ ರೋಗಿಗಳಿಗೆ ಚಿಕಿತ್ಸೆ! ಧೈರ್ಯ ತುಂಬುವ ಯತ್ನ ಎಂದ ಡಾ. ರಾಜು
ಬೆಂಗಳೂರು: ನಗರದ ಮೂಡಲಪಾಳ್ಯ ವೃತ್ತದಲ್ಲಿರುವ ಸಾಗರ್ ಕ್ಲಿನಿಕ್‌ನಲ್ಲಿ ವೈದ್ಯರು, ಶುಶ್ರೂಷಕರು ಸೇರಿದಂತೆ ಯಾವುದೇ ವೈದ್ಯಕೀಯ ಸಿಬ್ಬಂದಿ ಮಾಸ್ಕ್ ಹಾಕದೆ, ಸ್ಯಾನಿಟೈಸರ್ ಬಳಸದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ನಾಗರಿಕರು, ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ‘ರೋಗಿಗಳಿಗೆ ಧೈರ್ಯ ತುಂಬಬೇಕು ಎಂದು ಸಾಗರ್ ಕ್ಲಿನಿಕ್‌ನ ಡಾ. ರಾಜು ಕೃಷ್ಣಮೂರ್ತಿ ಮತ್ತು ಅವರ ಸಿಬ್ಬಂದಿ ಮಾಸ್ಕ್ ಹಾಕದೆ, ಪಿಪಿಇ ಕಿಟ್ ಧರಿಸದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. …
Read More »ರೈತರಿಂದ ನೇರವಾಗಿ ಟೊಮೇಟೋ ಖರೀದಿಸಿ ಉಚಿತವಾಗಿ ವಿತರಿಸಿದ ನಟ ಉಪೇಂದ್ರ
ಚಿತ್ರನಟ ಉಪೇಂದ್ರ ಅವರು ಕೋವಿಡ್ ಸೋಂಕಿನಿಂದ ಸಂಕಷ್ಟದಲ್ಲಿ ಸಿಲುಕಿರುವ ರಾಜ್ಯದ ರೈತರ ನೆರವಿಗೆ ಧಾವಿಸಿದ್ದಾರೆ. ರೈತರಿಂದ ನೇರವಾಗಿ ಟೊಮೇಟೋ ಖರೀದಿಸಿ ಉಚಿತವಾಗಿ ವಿತರಿಸಿದ್ದಾರೆ. ಈ ಬಗ್ಗೆ ಟ್ವಿಟರಿನಲ್ಲಿ ಬರೆದುಕೊಂಡಿರುವ ‘ ನಿಮ್ಮೆಲ್ಲರರೈತರ ಗಮನಕ್ಕೆ, ನಿಮ್ಮೆಲ್ಲರ ಅದ್ಭುತ ಪ್ರತಿಕ್ರಿಯೆಗೆ ಧನ್ಯವಾದಗಳು. ಬೆಳೆದ ಬೆಳೆ ವ್ಯಾಪಾರವಾಗದೇ ನಾಶವಾಗುವ ಬೆಳೆಯನ್ನು ನಾವು ಕೊಂಡು ಅದನ್ನು ಸಂಕಷ್ಟದಲ್ಲಿರುವ ಜನರಿಗೆ ಉಚಿತವಾಗಿ ಹಂಚುತ್ತಿದ್ದೇವೆ. ಇದು ವ್ಯಾಪಾರ ಎಂದು ದಯವಿಟ್ಟು ತಿಳಿಯಬೇಡಿ. ಅಂತಹ ಸಂಕಷ್ಟದಲ್ಲಿರುವ ರೈತರು ಮಾತ್ರ ಈ …
Read More »