ಚಿಕ್ಕಮಗಲೂರು: ಡೆಂಗ್ಯೂ ಪೀಡಿತ ಆರು ವರ್ಷದ ಬಾಲಕನ ಸಾವಿನ ಪ್ರಕರಣದಲ್ಲಿ ವೈದ್ಯರನ್ನು ಕೊಲೆ ಯತ್ನದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಡಾ.ದೀಪಕ್ (50) ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ತಾರಿಕೆರೆ ಪಟ್ಟಣದಲ್ಲಿ ಸೋಮವಾರ ಡೆಂಗ್ಯೂ ಪೀಡಿತ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಹದಗೆಟ್ಟಾಗ ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಸಾವಿನ …
Read More »ವೈದ್ಯರ ಮೇಲಿನ ಹಿಂಸಾಚಾರ ತಡೆಯಲು ಕಾನೂನು ತನ್ನಿ : ಐಎಂಎ
ನವದೆಹಲಿ : ವೈದ್ಯಕೀಯ ಸೇವಾಕರ್ತರ ಮೇಲೆ ನಡೆಯುವ ಹಿಂಸಾಚಾರದ ಬಗ್ಗೆ ದೇಶದಲ್ಲಿ ಒಂದು ಸಮಗ್ರವಾದ, ಏಕರೂಪ ಮತ್ತು ಪರಿಣಾಮಕಾರಿ ಕಾನೂನನ್ನು ಜಾರಿಗೊಳಿಸಬೇಕೆಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ) ಆಗ್ರಹಿಸಿದೆ. ಈ ಕುರಿತು ಐಎಂಎ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿದೆ. ದೇಶದಲ್ಲಿ ವೈದ್ಯರ ವಿರುದ್ಧ ವರದಿಯಾಗುತ್ತಿರುವ ಹಲ್ಲೆಗಳ ಹಿನ್ನೆಲೆಯಲ್ಲಿ ಐಎಂಎ ಈ ಮನವಿ ಮಾಡಿದೆ. ಇತ್ತೀಚಿನ ಪ್ರಕರಣದಲ್ಲಿ ಅಸ್ಸಾಂನಲ್ಲಿ ಕಿರಿಯ ವೈದ್ಯರೊಬ್ಬರನ್ನು ಮೃತರೋಗಿಯ ಸಂಬಂಧಿಕರ ದೊಡ್ಡ ಗುಂಪು …
Read More »ಒಳ ಉಡುಪು ಹರಿದಿದೆ, ಬಟ್ಟೆ ಅಂಗಡಿ ಬಾಗಿಲು ತೆಗೆಸಿ ಸ್ವಾಮಿ’ : ಸಿಎಂ ‘BSY’ ಬಳಿ ವಿಚಿತ್ರ ಬೇಡಿಕೆಯಿಟ್ಟ ವ್ಯಕ್ತಿ.!
ಮೈಸೂರು : ರಾಜ್ಯದಲ್ಲಿ ಕೊರೊನಾ ಸ್ಪೋಟವಾದ ಹಿನ್ನೆಲೆ ಜೂನ್ 7 ರವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಹಿನ್ನೆಲೆ ಬಟ್ಟೆ ಅಂಗಡಿ ಸೇರಿದಂತೆ ಎಲ್ಲವೂ ಬಂದ್ ಆಗಿದೆ. ಕೊರೊನಾ ಲಾಕ್‌ಡೌನ್ ಸಂದರ್ಭ ಅಗತ್ಯ ವಸ್ತು ಹೊರತುಪಡಿಸಿ ಬೇರೆ ಯಾವುದೇ ಅಂಗಡಿಗಳು ತೆರೆಯಲು ಅವಕಾಶವಿಲ್ಲ. ಈ ಹಿನ್ನೆಲೆ ಮೈಸೂರಿನಲ್ಲಿ ವ್ಯಕ್ತಿಯೋರ್ವ ನನ್ನ ಬಳಿ ಇರುವ ಎರಡು ಒಳಉಡುಪು ಹರಿದು ಹೋಗಿದೆ, ದಯವಿಟ್ಟು ಬಟ್ಟೆ ಅಂಗಡಿ ತೆರೆಸಿ ಎಂದು ಮುಖ್ಯಮಂತ್ರಿ ಬಿ …
Read More »ಸಿಎಂ ಬದಲಾವಣೆ ಚರ್ಚೆ ನಡುವೆ ವಿಜಯೇಂದ್ರ ದಿಢೀರ್ ದೆಹಲಿ ಪ್ರಯಾಣ
ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಹಾಗೂ ಸಚಿವ ಸಿ.ಪಿ.ಯೋಗೇಶ್ವರ್ ಅವರ ದೆಹಲಿ ಭೇಟಿ ಬೆನ್ನಲ್ಲೇ ಇದೀಗ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ದಿಢೀರ್ ಆಗಿ ದೆಹಲಿಗೆ ಪ್ರಯಾಣ ಬೆಳೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಿ.ಪಿ.ಯೋಗೇಶ್ವರ್ ದೆಹಲಿ ಭೇಟಿ ಬೆನ್ನಲ್ಲೇ ತಮ್ಮ ಇಲಾಖೆಯಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಸಿಎಂ ಬದಲಾವಣೆ ನಿಟ್ಟಿನಲ್ಲಿ ಯೋಗೇಶ್ವರ್ ಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಬೆಳವಣಿಗೆಗಳ ನಡುವೆಯೇ ಸಿ.ಪಿ.ಯೋಗೇಶ್ವರ್ …
Read More »ಶನಿವಾರ, ಭಾನುವಾರ ಮತ್ರವಲ್ಲ, ಶುಕ್ರವಾರದಿಂದಲೇ ಜಾರಿಯಾಗಲಿದೆ. ಲಾಕ್ ಡೌನ್
ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಜೂನ್ 4ರಿಂದ 7ರ ವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ವೀಕ್ ಎಂಡ್ ಲಾಕ್ ಡೌನ್ ಈ ಬಾರಿ ಶನಿವಾರ, ಭಾನುವಾರ ಮತ್ರವಲ್ಲ, ಶುಕ್ರವಾರದಿಂದಲೇ ಜಾರಿಯಾಗಲಿದೆ. ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರ ಬೆಳಗ್ಗೆ ಕೂಡ ಅಗತ್ಯ ವಸ್ತುಗಳು ಸಿಗುವುದಿಲ್ಲ.
Read More »ಸಲ್ಲು ಕೆರಿಯರ್ ನಾಶ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. ಕಮಾಲ್ ಖಾನ್:
ಸಲ್ಮಾನ್ ಖಾನ್ ಹಾಗೂ ಕಮಾಲ್ ಖಾನ್ ನಡುವೆ ಹೊತ್ತಿಕೊಂಡಿರುವ ದ್ವೇಷದ ಜ್ವಾಲೆ ಸದ್ಯಕ್ಕೆ ಆರುವ ರೀತಿ ಕಾಣುತ್ತಿಲ್ಲ. ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ನೀಡಿದ ಆರೋಪ ಹೊರಿಸಿ ಕಮಾಲ್ ಖಾನ್ ವಿರುದ್ಧ ಸಲ್ಲು ಮಾನನಷ್ಟ ಮೊಕದ್ದಮೆ ಹೂಡಿದ್ದರು ಎನ್ನಲಾಗಿತ್ತು. ಈಗ ಸಲ್ಲು ಕೆರಿಯರ್ ನಾಶ ಮಾಡುವ ಪ್ರತಿಜ್ಞೆಯನ್ನು ಕಮಾಲ್ ಮಾಡಿದ್ದಾರೆ. ಇತ್ತೀಚೆಗೆ ಟ್ವೀಟ್ ಒಂದನ್ನು ಮಾಡಿದ್ದ ಕಮಾಲ್, ‘ಅವರು ಅನೇಕರ ಕೆರಿಯರ್ ನಾಶ …
Read More »ಕರೊನಾ ಸೋಂಕಿತನ ಶವ ಊರಿಗೆ ತರದಂತೆ ವಿರೋಧ; ಸ್ವತಃ ಆಂಬುಲೆನ್ಸ್ ಚಲಾಯಿಸಿಕೊಂಡು ಸ್ಮಶಾನಕ್ಕೆ ಕೊಂಡೊಯ್ದ ಶಾಸಕ
ದಾವಣಗೆರೆ: ಕರೊನಾದಿಂದ ಮೃತಪಟ್ಟ ಯುವಕನ ದೇಹವನ್ನು ತರದಂತೆ ಗ್ರಾಮಸ್ಥರು ವಿರೋಧಿಸಿದ ಅಮಾನವೀಯ ನಡೆ ಒಂದೆಡೆಯಾದರೆ, ಮತ್ತೊಂದೆಡೆ ಅದೇ ಶವವನ್ನು ಸ್ವತಃ ಆಂಬುಲೆನ್ಸ್ ಚಲಾಯಿಸಿಕೊಂಡು ಬೇರೆಡೆಯ ಸ್ಮಶಾನಕ್ಕೆ ಕೊಂಡೊಯ್ದು ಸಂಸ್ಕಾರ ನಡೆಸಿ ಶಾಸಕರೊಬ್ಬರು ಮಾನವೀಯತೆ ಮೆರೆದಿದ್ದಾರೆ. ಆಂಧ್ರಪ್ರದೇಶ ಮೂಲದ ಕುಟುಂಬವೊಂದು ಹೊನ್ನಾಳಿಯಲ್ಲಿ ನೆಲೆಸಿದ್ದು, ಆ ಕುಟುಂಬಕ್ಕೆ ಸೇರಿದ 31 ವರ್ಷದ ವ್ಯಕ್ತಿ ಕರೊನಾ ಸೋಂಕಿತನಾಗಿ ಚಿಕಿತ್ಸೆ ಪಡೆಯುತ್ತಿದ್ದ. ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ಅವರು ಬೆಳಗ್ಗೆ ಈ ಸೋಂಕಿತನ ಯೋಗಕ್ಷೇಮ …
Read More »ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತ್ರ ಬಂದರು, ಹಲವು ಕಾರ್ಖಾನೆ, ಸಂಸ್ಥೆಗಳನ್ನ ಮಾರಾಟ ಮಾಡಿದ್ದಾರೆ.: ಸಿದ್ದರಾಮಯ್ಯ
ಬೆಂಗಳೂರು: ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತ್ರ ಬಂದರು, ಹಲವು ಕಾರ್ಖಾನೆ, ಸಂಸ್ಥೆಗಳನ್ನ ಮಾರಾಟ ಮಾಡಿದ್ದಾರೆ. ಮೋದಿ ಅಭಿವೃದ್ಧಿ ಕಾರ್ಯಗಳಿಂದ ದೇಶ ಹಿಂದಕ್ಕೆ ಹೋಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 7 ವರ್ಷಗಳಾದ ಹಿನ್ನೆಲೆಯಲ್ಲಿ ಪ್ರತಿಕ್ರಿಸಿದ ವಿಪಕ್ಷ ನಾಯಕ, ‘ಕಳೆದ ನಾಲ್ಕು ಐದು ದಿನಗಳಿಂದ ಮಾಧ್ಯಮಗಳ ವರದಿಯನ್ನ ನೋಡುತ್ತಿದ್ದೇನೆ. ಮೋದಿ ಸರ್ಕಾರ ಬಂದು 7 ವರ್ಷವಾದ ಹಿನ್ನೆಲೆಯಲ್ಲಿ ಸಂಭ್ರಮಿಸುತ್ತಿದ್ದಾರೆ. ಬಿಜೆಪಿಯವ್ರು ಖಾಲಿ …
Read More »ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಕೇಂದ್ರ ನಾಯಕರು ನಿರ್ಧರಿಸುತ್ತಾರೆ, ಮಠಾಧೀಶರಲ್ಲ: ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ
ಬೆಂಗಳೂರು: ಬಿಜೆಪಿ ಶಾಸಕ ಬವಸನಗೌಡ ಪಾಟೀಲ್ ಯತ್ನಾಳ್ ಫೇಸ್ಬುಕ್ನಲ್ಲಿ ಸಿಎಂ ಯಡಿಯೂರಪ್ಪ ಕುಟುಂಬದ ವೀರಶೈವ ಲಿಂಗಾಯತ ಮಠಾಧೀಶರ ಬೆಂಬಲ ಪಡೆಯಲು ಪ್ರಯತ್ನ ಆರೋಪ ಪೋಸ್ಟ್ಗೆ ಸಂಬಂಧಿಸಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಸಿಎಂ ಯಡಿಯೂರಪ್ಪರ ನಾಯಕತ್ವ ಬಗ್ಗೆ ಕೇಂದ್ರ ನಾಯಕರು ತೀರ್ಮಾನಿಸುತ್ತಾರೆ. ಈಗಾಗಲೇ ಕೇಂದ್ರ ನಾಯಕರು ರಾಜ್ಯದಲ್ಲಿ ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ್ದಾರೆ. ಯಾವುದು ಸರಿ, ತಪ್ಪು ಅನ್ನುವ ಅರಿವು ಕೇಂದ್ರ …
Read More »ಮಂಗಳಮುಖಿಯರಿಗೆ ಕಿಚ್ಚನ ನೆರವು
ಬೆಂಗಳೂರು: ಲಾಕ್‍ಡೌನ್‍ನಿಂದ ಕಷ್ಟ ಅನುಭವಿಸುತ್ತಿರುವ ಮಂಗಳಮುಖಿಯರಿಗೆ ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಫುಡ್ ಕಿಟ್ ನೀಡುವ ಮೂಲಕವಾಗಿ ನೆರವಾಗಿದ್ದಾರೆ. ಒಂದುಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಮಂಗಳಮುಖಿಯರು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಗೆ ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತಕ್ಷಣವೇ ನೆರವಿಗೆ ಬಂದ ಕಿಚ್ಚನ ಚಾರಿಟೇಬಲ್ ಸೊಸೈಟಿ, ಚಿತ್ರದುರ್ಗದ ಮಂಗಳಮುಖಿಯರ ಮನೆಗೆ ದಿನಸಿ ಕಿಟ್‍ಗಳನ್ನು ವಿತರಿಸಿದ್ದಾರೆ. ಇದನ್ನೂ ಕಿಚ್ಚ ಸರ್ ಕೊರೊನಾ ಸಂದರ್ಭದಲ್ಲಿ ಕಳೆದ ವರ್ಷದಿಂದ ಜನರ ಪರವಾಗಿ …
Read More »