ಗೋಕಾಕ: ಹಿಂದುಳಿದ ಹಾಗೂ ಅಲೆಮಾರಿ ಜನಾಂಗದ ಕುಟುಂಬಗಳಿಗೆ ಇಲ್ಲಿಯ ನಗರಸಭೆ ವಾರ್ಡ ನಂ 12ರ ಸದಸ್ಯೆ ಭಾರತಿ ಶಿವಾನಂದ ಹತ್ತಿ ಅವರು ಆಸರೆಯಾಗಿದ್ದಾರೆ. ನಗರದ ಹೊರವಲಯದಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗ ಹಾಗೂ ನಿರ್ಗತಿಕ ಕುಟುಂಬಗಳಿಗೆ ಆಹಾರ ದಿನಸಿ ಕಿಟ್ ವಿತರಿಸಿ ಮಾನವಿಯತೆ ಮೆರದಿದ್ದಾರೆ. ಕೊರೋನಾ 2ನೇ ಅಲೆಯ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ನಗರದ ಎಪಿಎಮ್‌ಸಿ ಆಗ್ನಿ ಶಾಮಕ ಠಾಣೆಯ ಹತ್ತಿರ ವಾಸವಾಗಿರುವ ಅಲೆಮಾರಿ ಕುಟುಂಬದವರಿಗೆ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ …
Read More »ಮುದ್ದೇಬಿಹಾಳ ಬಳಿ ಅಪರಿಚಿತ ಯುವತಿ ಶವ ಪತ್ತೆ, ಕೊಲೆ ಶಂಕೆ
ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಜಮ್ಮಲದಿನ್ನಿ ಕ್ರಾಸ್ ಬಳಿ ಇರುವ ಸೆತುವೆ ಪೈಪ್ ನಲ್ಲಿ ಅಪರಿಚಿತ ಯುವತಿಯ ಶವ ಪತ್ತೆ ಆಗಿದೆ. ಸುಮಾರು 18 ವಯಸ್ಸಿನ ಯುವತಿಯ ಕತ್ತಿಗೆ ವೇಲ್ ನಿಂದ ಬಿಗಿದು, ತಲೆ ಮೇಲೆ ಕಲ್ಲು ಎತ್ತಿಹಾಕಿದಂತೆ ತಲೆಗೆ ಭಾರಿ ಪೆಟ್ಟು ಬಿದ್ದು ರಕ್ತಸ್ರಾವ ಆಗಿದೆ. ಸ್ಥಳದಲ್ಲಿನ ಸ್ಥಿತಿಯನ್ನು ಆಧರಿಸಿ ಪೊಲೀಸರು ಪ್ರಾಥಮಿಕ ಹಂತದಲ್ಲಿ ಇದು ಕೊಲೆ ಎಂದು ಶಂಕಿಸಿದ್ದಾರೆ. ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿರುವ ಮುದ್ದೇಬಿಹಾಳ …
Read More »ಗೂಡ್ಸ್ ವಾಹನ ಚಾಲಕರಿಗೆ ಸರ್ಕಾರ ಸಹಾಯ ಮಾಡದಿದ್ದರೆ ಪ್ರತಿಭಟನೆಯ ಎಚ್ಚರಿಕೆ
ನೆಲಮಂಗಲ: ರಾಜ್ಯ ಸರ್ಕಾರ ಗೂಡ್ಸ್ ವಾಹನ ಚಾಲಕರಿಗೆ ವಾಹನಗಳ ವಿಮಾಕಂತು ಹಾಗೂ ತೆರಿಗೆಗಳನ್ನು ಒಂದು ವರ್ಷ ಮುಂದೂಡುವ ಜೊತೆ ಚಾಲಕರಿಗೆ ಸಹಾಯವನ್ನು ಸರ್ಕಾರ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘ ಸಂಸ್ಥಾಪಕ ಅಧ್ಯಕ್ಷ ಎಂಪಿ ರವೀಶ್ ಎಚ್ಚರಿಕೆ ನೀಡಿದ್ದಾರೆ. ನೆಲಮಂಗಲ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಮಾದವಾರದ ಬಳಿ ಕರ್ನಾಟಕ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘ ವತಿಯಿಂದ …
Read More »COVID ಪಾಸಿಟಿವಿಟಿ ರೇಟ್ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟಿದೆ?
ಬೆಂಗಳೂರು: ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್ಡೌನ್ ವಿಧಿಸಿದೆ. ಜೂನ್ 7 ರ ವರೆಗೆ ಇದ್ದ ಲಾಕ್ಡೌನ್ನನ್ನು ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಇನ್ನು ಒಂದು ವಾರ ವಿಸ್ತರಿಸಿದೆ. ಜೊತೆಗೆ ಯಾವ ಯಾವ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.5 ಕ್ಕೆ ಬರುತ್ತದೋ ಆ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಅನ್ಲಾಕ್ ಪ್ರಕ್ರಿಯೆಗೆ ಅವಕಾಶ ನೀಡಲಾಗುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಹೇಳಿದ್ದಾರೆ. ಸದ್ಯ ರಾಜ್ಯದ ಹಲವು ಜಿಲ್ಲೆಗಳಲ್ಲಿ …
Read More »ಗೋಕಾಕ: ನಗರದ ಎಪಿಎಮ್‍ಸಿಯ ಆಗ್ನಿ ಶಾಮಕ ಠಾಣೆಯ ಹತ್ತಿರ ವಾಸವಾಗಿರುವ ಅಲೆಮಾರಿ ಜನಾಂಗದವರಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು ಗಣ್ಯರು ವಿತರಿಸುತ್ತಿರುವುದು.
ಗೋಕಾಕ: ಕೊರೋನಾ 2ನೇ ಅಲೆಯ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ನಗರದ ಎಪಿಎಮ್‍ಸಿಯ ಆಗ್ನಿ ಶಾಮಕ ಠಾಣೆಯ ಹತ್ತಿರ ವಾಸವಾಗಿರುವ ಅಲೆಮಾರಿ ಜನಾಂಗದವರಿಗೆ ಮಾಜಿ ಸಚಿವರ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ನಗರ ಸಭೆ ಸದಸ್ಯೆ ನಿರ್ಮಲಾ ಜ್ಯೋತಿಭಾ ಸುಭಂಜಿ ಹಾಗೂ ಮಾಜಿ ಸದಸ್ಯ ಜ್ಯೋತಿಭಾ ಸುಭಂಜಿ ಅವರು ನೀಡಿರುವ ಆಹಾರ ಧಾನ್ಯಗಳ ಕಿಟ್‍ಗಳನ್ನು ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಪೌಂಡೇಶನ ಮತ್ತು ಭಗತಸಿಂಗ್ ಬ್ರಿಗೇಡ್‍ನ ಕಾರ್ಯಕರ್ತರು ವಿತರಿಸಿದರು. ಈ …
Read More »ಸಿನಿಮಾ ಆಗಲಿದೆ ಐಏಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜೀವನ ಕಥೆ
ಮಂಡ್ಯ: ಪ್ರಸ್ತುತ ಕರ್ನಾಟಕದಲ್ಲಿ ಚರ್ಚೆಯಲ್ಲಿರುವ ಐಎಎಸ್ ಅಧಿಕಾರಿ ಹಾಗೂ ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜೀವನ ಕಥೆ ಸಿನಿಮಾವಾಗಲಿದೆ. ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ಸಾಹಿತಿ ಕೃಷ್ಣ ಸ್ವರ್ಣಸಂದ್ರ ಅವರು ರೋಹಿಣಿ ಸಿಂಧೂರಿ ಅವರ ಬಯೋಪಿಕ್‍ನ್ನು ಸಿನಿಮಾ ಮಾಡಲು ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಫಿಲಂಸ್ ಬ್ಯಾನರ್ ಅಡಿ 2020 ಜೂನ್ 15 ರಂದು ಭಾರತ ಸಿಂಧೂರಿ ಎಂಬ ಟೈಟಲ್‍ನ್ನು ರಿಜಿಸ್ಟರ್ ಮಾಡಿಸಿದ್ದಾರೆ.ಈ ಸಿನಿಮಾದಲ್ಲಿ ರೋಹಿಣಿ ಸಿಂಧೂರಿ ಅವರು …
Read More », ಆಗಸ್ಟ್ 28, 29ರಂದು C.E.T. ಪರೀಕ್ಷೆ
ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಪರೀಕ್ಷೆ ನಿಗದಿಯಾಗಿದ್ದು, ಆಗಸ್ಟ್ 28, 29ರಂದು ಪರೀಕ್ಷೆ ನಡೆಸಲಾಗುತ್ತಿದ್ದು ಈ ಹಿಂದಿನಂತೆಯೇ ಪರೀಕ್ಷೆ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಿಸಿಎಂ ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಸಿಇಟಿ ಬಗ್ಗೆ ಇಂದು ನಡೆದ ಸಭೆ ಬಳಿಕ ಮಾತನಾಡಿದ ಸಚಿವರು, ಎಲ್ಲಾ ಕೋರ್ಸ್ ಗಳಿಗೂ ಸಿಇಟಿ ಅಂಕ ಪರಿಗಣಿಸಲು ನಿರ್ಧರಿಸಲಾಗಿದೆ. ಜೂನ್ 15ರಿಂದ ಸಿಇಟಿ ನೋಂದಣಿ ಆರಂಭವಾಗಲಿದ್ದು, ಆಗಸ್ಟ್ 28 ಹಾಗೂ ಆಗಸ್ಟ್ 29ರಂದು …
Read More »ಮಾನ, ಮರ್ಯಾದೆ ಇರುವ ಎಂಪಿ ಹೀಗೆ ಮಾಡಲ್ಲ, ಐಎಎಸ್ ಅಧಿಕಾರಿಗಳ ಕಿತ್ತಾಟದ ಬಗ್ಗೆ ತನಿಖೆ ಆಗಬೇಕು: ಸಿದ್ದರಾಮಯ್ಯ
ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವಿನ ಕಿತ್ತಾಟದ ಬಗ್ಗೆ ತನಿಖೆ ನಡೆಯಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಒಬ್ಬ ಎಂಪಿಯಾಗಿ ಅಧಿಕಾರಿಗಳ ಬೆಂಬಲಿಸೋದು ಅಥವಾ ವಿರೋಧಿಸೋದು ಸರಿಯಾ? ಅವರದೇ ಸರ್ಕಾರ ಇದೆ. ಅಲ್ಲದೆ ಅವರು ಎಂಪಿ, ಮಾನ ಮರ್ಯಾದೆ ಇರೋರು ಹೀಗೆಲ್ಲ ಮಾಡಲ್ಲ, ಮೈಸೂರು ಜಿಲ್ಲೆಯಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು …
Read More »ಬಿಕರಿಗೆ ಇದೆ ಡೆತ್ ಸರ್ಟಿಫಿಕೇಟ್ – ಆನ್‍ಲೈನ್‍ನಲ್ಲಿ ಆಪಾಯಿನ್‍ಮೆಂಟ್ ಫಿಕ್ಸ್, ಶವ ಸಂಸ್ಕಾರಕ್ಕೆ ಟೈಮೂ ಫಿಕ್ಸ್! ಕೋವಿಡ್ ಬೇಕಾ, ನಾನ್ ಕೋವಿಡ್ ಬೇಕಾ?
ಬೆಂಗಳೂರು: ಬೆಡ್ ಬ್ಲಾಕಿಂಗ್, ರೆಮ್‍ಡಿಸಿವಿರ್, ಅಂಬುಲೆನ್ಸ್ ದಂಧೆ ಬಳಿಕ ಇದೀಗ ಅಂತ್ಯಸಂಸ್ಕಾರ ಹಾಗೂ ಡೆತ್ ಸರ್ಟಿಫಿಕೇಟ್ ಡೀಲ್ ಬೆಳಕಿಗೆ ಬಂದ್ದಿದ್ದು, ಒಂದು ಡೆತ್ ಸರ್ಟಿಫಿಕೇಟ್ ನೀಡಲು ಬರೋಬ್ಬರಿ 20-30 ಸಾವಿರ ರೂ.ಗಳನ್ನು ಖದೀಮರು ಪೀಕುತ್ತಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್‍ನಲ್ಲಿ ಬಹಿರಂಗವಾಗಿದ್ದು, ನಗರದ ಶ್ರೀರಾಂಪುರದ ಹರಿಶ್ಚಂದ್ರ ಘಾಟ್‍ನಲ್ಲಿ ಹೆಣಗಳ ಮೇಲೆ ಡೀಲಿಂಗ್ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕೋವಿಡ್ ಆಗ್ಲಿ, ನಾನ್ ಕೋವಿಡ್ ಆಗ್ಲಿ ಕಾಸು ಕೊಟ್ರೆ ಶವಕ್ಕೆ …
Read More »ಮುಖ್ಯಮಂತ್ರಿ ಬದಲಾವಣೆ ಅಷ್ಟು ಸುಲಭದ ಕೆಲಸವಲ್ಲ: ಸಚಿವ ಬಿ.ಸಿ. ಪಾಟೀಲ್
ಬೆಳಗಾವಿ: ಯಾರೋ ದೆಹಲಿಗೆ ಹೋಗಿ ಬಂದ ತಕ್ಷಣ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಮುಖ್ಯಮಂತ್ರಿ ಬದಲಾವಣೆ ಅಷ್ಟು ಸುಲಭದ ಕೆಲಸವಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಖಾರವಾಗಿ ಹೇಳಿದರು. ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಿಎಂ ಬದಲಾವಣೆ ಇಲ್ಲ. ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಮುಂದಿನ ಚುನಾವಣೆಯನ್ನು ಯಡಿಯೂರಪ್ಪ ನೇತೃತ್ವದಲ್ಲಿ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಪಕ್ಷದ ವರಿಷ್ಠರು ಕೇಳಿದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ …
Read More »