ಬೆಳಗಾವಿ: ಸುರೇಶ್ ಅಂಗಡಿ ಕೊರೊನಾಗೆ ಇಲ್ಲೇ ಚಿಕಿತ್ಸೆ ಪಡೆದಿದ್ದರೆ ಉಳಿಯುತಿದ್ದರೆನೋ, ಏಮ್ಸ್ ನಲ್ಲಿ ಚಿಕಿತ್ಸೆ ಪಡೆದರೂ ಬದುಕಲಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಬೆಳಗಾವಿಯ ಸಾವಗಾಂವದ ಅಂಗಡಿ ಕಾಲೇಜಿನಲ್ಲಿಡಲಾಗಿದ್ದ ದಿವಂಗತ ಸಂಸದ ಸುರೇಶ್ ಅಂಗಡಿ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುರೇಶ್ ನಮ್ಮನ್ನ ಅಗಲಿ ಒಂದು ವರ್ಷ ಆಗಿದೆ. ಆದರೆ ಅವರ ನೆನಪು ಇಗಲೂ ನಮ್ಮ ಮನಸ್ಸಿನಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಾನೇ ಅವರನ್ನು ಬೆಳಗಾವಿ …
Read More »1.27 ಕೋಟಿ ರೂ. ವೆಚ್ಚದ ಹೊಸ ಸರ್ಕಾರಿ ಪ್ರೌಢ ಶಾಲೆ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಗ್ರಾಮಸ್ಥರ ಒಗ್ಗಟ್ಟಿನ ಹೋರಾಟದಿಂದ ಮಂಜೂರಾಗಿ ರದ್ದಾಗಿದ್ದ ಸರ್ಕಾರಿ ಪ್ರೌಢ ಶಾಲೆಯನ್ನು ಮರಳಿ ಮಂಜೂರಾತಿ ಪಡೆದು ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟ ತಿಗಡಿ ಗ್ರಾಮಸ್ಥರನ್ನು ಅರಭಾವಿ ಶಾಸಕರೂ ಆಗಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿದರು. ತಾಲೂಕಿನ ತಿಗಡಿ ಗ್ರಾಮದಲ್ಲಿ ಶನಿವಾರದಂದು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ 1.27 ಕೋಟಿ ರೂ. ವೆಚ್ಚದ ಸರ್ಕಾರಿ ಪ್ರೌಢ ಶಾಲೆಯ ನೂತನ ಕಟ್ಟಡಕ್ಕೆ ಗುದ್ದಲಿ …
Read More »ತುಂಬಿದ ಸಭೆಯಲ್ಲಿ ಬೊಮ್ಮಾಯಿಗೆ ‘ಬಾದಾಮಿ ಹಾಲು’ ಕೊಟ್ಟು ‘CM ಮಾಡಿದ್ದು ನಾನೇ’ ಎಂದ ಅಭಿಮಾನಿ..!
ಬೆಳಗಾವಿ: ಅಭಿಮಾನಿಯೋರ್ವ ಸಿಎಂ ಬಸವರಾಜ್ ಬೊಮ್ಮಾಯಿಗೆ ಬಾದಾಮಿ ಹಾಲು ನೀಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ವಿಶೇಷ ಗೆಟಪ್ನಲ್ಲಿ ಆಗಮಿಸಿ ಅಭಿಮಾನಿ ಬಾದಾಮಿ ಹಾಲು ನೀಡಿದ್ದಾನೆ. ಅಭಿಮಾನಿಯನ್ನ ತಡೆಯಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಅವನನ್ನು ಬಿಡಿ ಎಂದು ಸಿಎಂ ಹಾಲು ಸ್ವೀಕರಿಸಿದ್ದಾರೆ. ಎಲ್ಲಿ ಹೋದರೂ ಅವನು ಏನನ್ನಾದರು ಕೊಟ್ಟೇ ಕೊಡುತ್ತಾನೆ. ಇಂದು ಬಾದಾಮಿ ಹಾಲು ಕೊಟ್ಟಿದ್ದಾನೆ ಎಂದಿದ್ದಾರೆ ಸಿಎಂ ಬೊಮ್ಮಾಯಿ. ಬಾದಾಮಿ ಹಾಲು ನೀಡಿದ ಬಳಿಕ ಬೊಮ್ಮಾಯಿ ಅವರನ್ನ ಸಿಎಂ …
Read More »ಗೋಕಾಕ ಜನತೆಗೆ ಅನುಕೂಲಕ್ಕಾಗಿ ಅತಿ ಸುಂದರವಾದ ಸಮುದಾಯ ಭವನ: ಸತೀಶ್ ಜಾರಕಿಹೊಳಿ ಭೇಟಿನೀಡಿ ವೀಕ್ಷಣೆ.
ಗೋಕಾಕ: ಗೋಕಾಕ ನಗರದ ಜನತೆಗೆ ಲಕ್ಷ್ಮಿ ದೇವಿಯು ಆರಾಧ್ಯ ದೇವತೆ ಇನ್ನು ಪ್ರತಿಯೊಂದು ಕುಟುಂಬ ಈ ಆರಾಧ್ಯ ದೇವತೆಯ ಭಕ್ತರು ಇನ್ನು ಈ ಒಂದು ದೇವಸ್ಥಾನದ ಕಮಿಟಿ ಒಂದು ಅಧ್ಬೂತ ವಾದ ಕೆಲಸಕ್ಕೆ ಮುಂದಾಗಿದ್ದು ಇಂದು ಅದರ ಪ್ರತಿಫಲವಾಗಿ ಒಂದು ಸುಂದರವಾದ ಸಮುದಾಯ ಭವನ ಜನತೆಯೇ ಹಿತಾಸಕ್ತಿ ಗಾಗಿ ನಿರ್ಮಾಣ ವಾಗಿದೆ. ಈ ಒಂದು ಕೆಲಸಕ್ಕೆ ಗೋಕಾಕ ಜನತೆ ಜಾತ್ರಾ ಕಮಿಟಿ ಹಾಗೂ ಸಾಹುಕಾರರ …
Read More »ಇಂದಿನಿಂದ 3 ದಿನಗಳ ಕಾಲ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಸಿಎಂ ಬಸವರಾಜ ಬೊಮ್ಮಾಯಿಗೆ, ಬೆಳಗಾವಿಯಲ್ಲಿ ರೈತರ ಪ್ರತಿಭಟನೆಯ ಬಿಸಿ ತಟ್ಟುವ ಸಾಧ್ಯತೆ
ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟುವ ಸಾಧ್ಯತೆ ಇದೆ. ನೆರೆ ಸಂತ್ರಸ್ತ ರೈತರು, ಕಬ್ಬು ಬೆಳೆಗಾರರು ಇಂದಿನಿಂದ ಅಹೋರಾತ್ರಿ ಪ್ರತಿಭಟನೆಗೆ ತೀರ್ಮಾನಿಸಿದ್ದಾರೆ. ಕಬ್ಬು ಬೆಳೆಗಾರರ ಬಾಕಿ ಹಣ ಬಿಡುಗಡೆಗೆ ಕ್ರಮಕ್ಕೆ ಒತ್ತಾಯ, ಸಕ್ಕರೆ ಆಯುಕ್ತಾಲಯ ಕಚೇರಿ ಬೆಳಗಾವಿಗೆ ಸ್ಥಳಾಂತರಿಸಲು ಆಗ್ರಹ, ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಒತ್ತಾಯಿಸಿ ರೈತರು ಧರಣಿ ನಡೆಸಲಿದ್ದಾರೆ. ರೈತ ಸಂಘ, ಹಸಿರು ಸೇನೆ …
Read More »ಕೈ ಸನ್ನೆ ಮಾಡಿ ಕರೆದೊಯ್ದೊಳು- ಹಲ್ಲೆ ಮಾಡಿ ಹಣ ದೋಚಿದ್ರು
ಹುಬ್ಬಳ್ಳಿ: ನಗರದ ಹಳೇ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯೊಬ್ಬಳು ಕೈ ಸನ್ನೆ ಮಾಡಿ ಯುವಕನೊಬ್ಬನನ್ನು ಆಟೋದಲ್ಲಿ ಬಂಜಾರ ಕಾಲನಿ ಬಳಿ ಕರೆದುಕೊಂಡು ಹೋಗಿ ಸಹಚರರಿಂದ ಹಲ್ಲೆ ಮಾಡಿ ಮೊಬೈಲ್ ಹಾಗೂ ನಗದು ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ. ಹುಬ್ಬಳ್ಳಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ರಾಯಚೂರು ಮೂಲದ ಶಿರಡಿ ನಗರ ಹಾಸ್ಟೆಲ್‍ನಲ್ಲಿ ವಾಸವಿರುವ ಕುಮಾರ ಚವ್ಹಾಣ್ ಹಲ್ಲೆಗೀಡಾದ ಯುವಕ, ಬಟ್ಟೆ ಖರೀದಿಸಲು ಮಾರುಕಟ್ಟೆಗೆ ಬಂದಿದ್ದ ಕುಮಾರ ಚವ್ಹಾಣ್, ಬಟ್ಟೆ ಖರೀದಿಸಿ ಹಾಸ್ಟೆಲ್‍ಗೆ …
Read More »ಅ.7ಕ್ಕೆ ಚಾಮರಾಜನಗರಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮನ
ಚಾಮರಾಜನಗರ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೂರು ದಿನಗಳ ಕಾಲ ರಾಜ್ಯ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ. ಅಕ್ಟೋಬರ್ 7 ರಂದು ಚಾಮರಾಜನಗರಕ್ಕೆ ಆಗಮಿಸಲಿದ್ದಾರೆ. ಅ.6 ರಿಂದ 8 ರವರೆಗೆ ರಾಮನಾಥ್ ಕೋವಿಂದ್ ರಾಜ್ಯ ಪ್ರವಾಸದಲ್ಲಿರಲಿದ್ದಾರೆ. ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇಗುಲಗಳಿಗೆ ಭೇಟಿ ನೀಡಲಿದ್ದಾರೆ. ಅ.6ರ ಸಂಜೆ 5.30ಕ್ಕೆ ರಾಜಭವನದಲ್ಲಿ ಹೈಕೋರ್ಟ್ ನ್ಯಾಯಾಧೀಶರು ಮತ್ತು ಅವರ ಕುಟುಂಬಸ್ಥರೊಂದಿಗೆ ಚಹಾ ಕೂಟದಲ್ಲಿ ಭಾಗಿಯಾಗಲಿದ್ದಾರೆ. ಅ.07 ರ ಬೆಳಗ್ಗೆ 11.40ಕ್ಕೆ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟಕ್ಕೆ …
Read More »ಮರದ ಮೇಲೆ ಸೆಲ್ಫಿ ವಿಡಿಯೋ ಹುಚ್ಚಾಟ: ಬರ್ತ್ ಡೇ ಪಾರ್ಟಿ, ಜಕ್ಕಲಮಡಗು ಹಿನ್ನೀರಿನಲ್ಲಿ ಶವವಾದ ಬೆಂಗಳೂರಿನ ಅಕ್ಸೆಂಚರ್ ಟೆಕ್ಕಿ
ಚಿಕ್ಕಬಳ್ಳಾಪುರ: ಬೆಂಗಳೂರು ನಗರದ ಸುಂಕದಕಟ್ಟೆಯ ಯುವಕ ಬರ್ತ್ ಡೇ ಪಾರ್ಟಿ ಆಗಮಿಸಿ ಜಕ್ಕಲಮಡಗು ನೀರಿನಲ್ಲಿ ಜಲಸಮಾಧಿಯಾಗಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡಗು ಜಲಾಶಯದ ಹಿನ್ನೀರಿನಲ್ಲಿ ಈ ದುರ್ಘಟನೆ ನಡೆದಿದ್ದು, ಅಕ್ಸೆಂಚರ್ ಕಂಪನಿಯ ಸಾಫ್ಟ್ವೇರ್ ಎಂಜಿನಿಯರ್ ರೋಹಿತ್ (24) ಮೃತಪಟ್ಟ ಯುವಕ. ಕುಡಿದ ಅಮಲಿನಲ್ಲಿ ಮರದ ಮೇಲೆ ಸೆಲ್ಫಿ ವಿಡಿಯೋ ಹುಚ್ಚಾಟ: ಅಕ್ಸೆಂಚರ್ ಸಾಫ್ಟ್ವೇರ್ ಎಂಜಿನಿಯರ್ ರೋಹಿತ್ 5 ಮಂದಿ ಸ್ನೇಹಿತರೊಂದಿಗೆ ಬರ್ತ್ ಡೇ ಪಾರ್ಟಿ ಆಚರಣೆಗೆ ಬಂದಿದ್ದರು. ಆತನ ಸ್ನೇಹಿತರು ಹಿನ್ನೀರಿನಲ್ಲಿರುವ …
Read More »ಕರ್ನಾಟಕದಲ್ಲಿ ಹೊಸದಾಗಿ 789 ಜನರಿಗೆ ಕೊರೊನಾ ದೃಢ; 23 ಮಂದಿ ಸಾವು
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಸೆಪ್ಟೆಂಬರ್ 24) ಹೊಸದಾಗಿ 789 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,71,833 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,20,792 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 23 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 37,706 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 13,306 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ …
Read More »ರಿಯಾಲಿಟಿ ಶೋನಲ್ಲಿ ಆಲ್ಕೋಹಾಲ್ ಸೇವನೆ.. ಕಪಿಲ್ ಶರ್ಮಾ ವಿರುದ್ಧ FIR
ರಿಯಾಲಿಟಿ ಶೋ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸುವ ಕಪಿಲ್ ಶರ್ಮಾಗೆ ಇದೀಗ ಸಂಕಷ್ಟ ಎದುರಾಗಿದೆ. ಕಪಿಲ್ ಶರ್ಮಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ತನ್ನ ರಿಯಾಲಿಟಿ ಶೋನ ಶೂಟ್ ಒಂದರಲ್ಲಿ ಕೋರ್ಟ್ ಸೀನ್ ಶೂಟ್ ಮಾಡುವಾಗ ಮದ್ಯ ಸೇವಿಸಿದ್ದಾರೆ ಎಂದು ಮಧ್ಯಪ್ರದೇಶದಲ್ಲಿ ದೂರು ನೀಡಲಾಗಿದ್ದು ಎಫ್ಐಆರ್ ದಾಖಲಾಗಿದೆ. ಮಧ್ಯಪ್ರದೇಶದ ವಕೀಲರೊಬ್ಬರು ಸಿಜೆಎಂ ಕೋರ್ಟ್ನಲ್ಲಿ ಈ ಎಫ್ಐಆರ್ ದಾಖಲಿಸಿದ್ದಾರೆ. ಅಕ್ಟೋಬರ್ 1 ರಂದು ಪ್ರಕರಣದ ವಿಚಾರಣೆ ನಡೆಯಲಿದೆ ಎನ್ನಲಾಗಿದೆ. ದೂರು ನೀಡಿರುವ ವಕೀಲರು.. …
Read More »