ಗೋಕಾಕ: ದೇಶದಲ್ಲಿಯೇ ಬಲಿಷ್ಠವಾದ ಯುವಶಕ್ತಿ ಸ್ವಾಮಿ ವಿವೇಕಾನಂದರ ಆದರ್ಶಗಳ ಆಚರಣೆಯೊಂದಿಗೆ ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸುವಂತೆ ನಗರದ ಲಕ್ಷ್ಮೀ ಏಜುಕೇಶನ ಟ್ರಸ್ಟಿನ್ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹೇಳಿದರು. ಬುಧವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಯುವ ಪೀಳಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಹೆಚ್ಚಿನ …
Read More »ಡಿಕೆ ಸೋದರರಿಗೆ ಪೌರುಷ ಇದೆಯಾ?: ಅಶ್ವತ್ಥನಾರಾಯಣ ಸವಾಲು
ರಾಮನಗರ: ಮೇಕೆದಾಟು ಯೋಜನೆಯನ್ನು ಜಾರಿ ಮಾಡುವ ಗಂಡಸುತನ ಇರೋದು ಬಿಜೆಪಿಗೆ ಮಾತ್ರ; ಕಾಂಗ್ರೆಸ್ ಪಕ್ಷಕ್ಕೆ ಇದನ್ನೆಲ್ಲ ಅನುಷ್ಠಾನಗೊಳಿಸುವ ಶಕ್ತಿಯೇ ಇಲ್ಲ. ಈ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರಿಗೆ ಈ ಪೌರುಷವಿದೆಯಾ? ಈ ವಿಚಾರದಲ್ಲಿ ನಾನು ನೇರವಾಗಿ ಅವರಿಬ್ಬರಿಗೂ ಸವಾಲೆಸೆಯುತ್ತಿದ್ದೇನೆ. ತಾಕತ್ತಿದ್ದರೆ ಅವರು ಉತ್ತರಿಸಲಿ’ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪಂಥಾಹ್ವಾನ ನೀಡಿದ್ದಾರೆ. `ಡಿ.ಕೆ.ಶಿವಕುಮಾರ್ ಜಿಲ್ಲೆಯಿಂದ ಏಳು ಬಾರಿ ಶಾಸಕರಾಗಿ, …
Read More »‘ಕೆಜಿಎಫ್ ಸಿನಿಮಾ ಕಥೆ ಆಧರಿಸಿಯೇ ‘ಪುಷ್ಪ’ ಚಿತ್ರ ರೆಡಿ ಆಯ್ತು’;
.‘ಪುಷ್ಪ’ ಸಿನಿಮಾದ (Pushpa Movie) ಬಗ್ಗೆ ಕನ್ನಡದ ಒಂದಷ್ಟು ಮಂದಿಗೆ ಸಿಟ್ಟಿದೆ. ಇದಕ್ಕೆ ಕಾರಣ ತೆಲುಗಿನವರು ‘ಒಂದು ‘ಪುಷ್ಪ’ 10 ‘ಕೆಜಿಎಫ್’ಗೆ (KGF Movie) ಸಮ’ ಎನ್ನುವ ಮಾತನ್ನು ಹೇಳಿದ್ದರು. ಚಿತ್ರ ತೆರೆಕಂಡ ನಂತರದಲ್ಲಿ ಈ ಹೇಳಿಕೆಗೆ ಅರ್ಥವಿಲ್ಲ ಎಂಬುದು ಸಾಬೀತಾಯಿತು. ಅನೇಕರು ಟ್ವಿಟರ್ನಲ್ಲಿ ‘ಪುಷ್ಪ’ ಚಿತ್ರವನ್ನು ಟೀಕೆ ಮಾಡೋಕೆ ಆರಂಭಿಸಿದರು. ‘ಯಶ್ (Yash) ಅಭಿನಯದ ‘ಕೆಜಿಎಫ್’ ಬೆಸ್ಟ್’ ಎಂದು ಹೊಗಳಿಕೊಳ್ಳೋಕೆ ಶುರು ಮಾಡಿದರು. ‘ಪುಷ್ಪ’ ಸಿನಿಮಾ ಈಗ ಒಟಿಟಿಗೆ …
Read More »ಮ್ಮ ಬಳಿ ಈ 5 ರೂ. ನಾಣ್ಯ ಇದ್ದರೆ ಸಿಗಲಿದೆ 10 ಲಕ್ಷ, ಏನು ಮಾಡಬೇಕೆಂದು ತಿಳಿಯಿರಿ
ನವದೆಹಲಿ: ಮನೆಯಲ್ಲಿಯೇ ಕುಳಿತು ಏನೂ ಮಾಡದೆ ನೀವು ಹಣ(Earn Money Online) ಗಳಿಸಲು ಬಯಸಿದರೆ ಇಲ್ಲಿದೆ ಸುವರ್ಣಾವಕಾಶ. ನೀವು ಕೇವಲ 5 ರೂ.ಗೆ ಬದಲಾಗಿ 5 ಲಕ್ಷ ರೂ.ಗಳವರೆಗೆ ಗಳಿಸಬಹುದು. ಈ ರೀತಿ ಹಣ ಗಳಿಸಲು ನೀವು ಎಲ್ಲಿಯೂ ಹೋಗಬೇಕಾಗಿಲ್ಲ. ಯಾವುದೇ ವ್ಯಕ್ತಿಯು ಬಹಳ ಸುಲಭವಾಗಿ ಲಕ್ಷ ಲಕ್ಷ ಹಣ ಗಳಿಸಬಹುದು. ಹಳೆಯ ನಾಣ್ಯಗಳಿಗೆ ಬೇಡಿಕೆ ಹಳೆ ನಾಣ್ಯಗಳಿಗೆ ಲಕ್ಷಗಟ್ಟಲೆ ಹಣ(Indian Currency) ಸಿಗುತ್ತದೆ ಎನ್ನುವ ಸುದ್ದಿಯನ್ನು ನೀವು ಆಗಾಗ ಓದಿರಬಹುದು. …
Read More »ಕೆಎಂಎಫ್ ವಾರ್ಷಿಕವಾಗಿ 17 ಸಾವಿರ ಕೋಟಿ ರೂ ಗಳ, ವ್ಯವಹಾರ ನಡೆಸುತ್ತಿರುವ ರಾಜ್ಯದ ನಂ1 ಸಹಕಾರಿ ಸಂಸ್ಥೆ
ಮೂಡಲಗಿ: ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳಿಂದ ಕೂಡಿರುವ ಕೆ.ಎಂ.ಎಫ್ ವಾರ್ಷಿಕವಾಗಿ ಸುಮಾರು 17 ಸಾವಿರ ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿರುವ ರಾಜ್ಯದ ಅಗ್ರಗಣ್ಯ ಸಹಕಾರಿ ಸಂಸ್ಥೆಯಾಗಿದೆ. ಈ ಮೂಲಕ ಹೈನೋದÀ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ರೈತರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಸೋಮವಾರದಂದು ತಾಲೂಕಿನ ನಾಗನೂರು ಹಾಲು ಉತ್ಪಾದಕರ ಸಹಕಾರಿ ಸಂಘದ …
Read More »ಹುಬ್ಬಳ್ಳಿಯಲ್ಲಿ ಪತಿ ನಡೆಸುತ್ತಿದ್ದ ಲಾಡ್ಜ್ನಲ್ಲೇ ಮಹಿಳಾ ಪರಿಸರ ಅಭಿಯಂತರ ಅಧಿಕಾರಿ ಆತ್ಮಹತ್ಯೆ!
ಹುಬ್ಬಳ್ಳಿ: ಸರ್ಕಾರಿ ಅಧಿಕಾರಿಯೊಬ್ಬಳು ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಮೈಸೂರು ಮೂಲದ ಶಾಂತಲಾ ಸುಪ್ರೀತ ಬೆಳಗಾವಿ ಮೃತರು. ಶಾಂತಲಾ ನೆಲಮಂಗಲದ ಪರಿಸರ ಅಭಿಯಂತರರಾಗಿದ್ದರು. ಇವರು ಭಾನುವಾರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್ನಲ್ಲಿ ಏನಿದೆ ಎಂಬುದು ತಿಳಿದುಬಂದಿಲ್ಲ. ಮೃತ ಅಧಿಕಾರಿ ತೀವ್ರವಾದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗ್ತಿದೆ. ಅಲ್ಲದೇ, ಅಕ್ಟೋಬರ್ನಲ್ಲಿ ಇವರ ಮಗಳು ಸಹ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಶಾಂತಲಾ ಕೂಡಾ …
Read More »ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಹಿನ್ನಲೆ: ಸಚಿವ ಗೋವಿಂದ ಕಾರಜೋಳರಿಂದ ಮತ್ತೊಂದು ದಾಖಲೆ ಬಿಡುಗಡೆ
ಬಾಗಲಕೋಟೆ: ಮೇಕೆದಾಟು ಯೋಜನೆಯನ್ನು ಜಾರಿಗೊಳಿಸುವ ಕುರಿತು 2013 ರಿಂದ 2018 ರವರೆಗೆ ಅಂದಿನ ಸಿದ್ದರಾಮಯ್ಯನವರ ಸರಕಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಪಶುಸಂಗೋಪನಾ ಮತ್ತು ಮುಜರಾಯಿ ಸಚಿವರಾಗಿದ್ದ, ಟಿ.ಬಿ.ಜಯಚಂದ್ರ ರವರು ಮುಖ್ಯಮಂತ್ರಿಗಳಿಗೆ ಕಳುಹಿಸಿದ್ದ ಸಕರಾತ್ಮಕ ಟಿಪ್ಪಣಿ ಹಾಗೂ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅನುಮೋದನೆಯ ನಂತರವೂ ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಯಾವುದೇ ಕ್ರಮ ಕೈಗೊಳ್ಳದೇ ನಿಷ್ಕ್ರಿಯರಾಗಿದ್ದರು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದು ಕಟುವಾಗಿ ಟೀಕಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮ …
Read More »ಮೇಕೆದಾಟು ಪಾದಯಾತ್ರೆಯಲ್ಲಿ ಶಿವರಾಜ್‌ಕುಮಾರ್ ಭಾಗಿಯಾಗುತ್ತಾರೆ: ಉಮಾಶ್ರೀ,
ರಾಮನಗರ: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್‌ನಿಂದ ಪಾದಯಾತ್ರೆ ನಡೆಸಲಾಗುತ್ತಿದೆ. ಪಾದಯಾತ್ರೆಯಲ್ಲಿ ಸ್ಯಾಂಡಲ್ವುಡ್ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಭಾಗಿಯಾಗುತ್ತಾರೆ. ನಿನ್ನೆಯೂ ಅರ್ಧ ದಾರಿಗೆ ಬಂದು ವಾಪಸ್ ಹೋಗಿದ್ದಾರೆ. ಇದು ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟ. ಎಲ್ಲರೂ ಇದಕ್ಕೆ ಕೈ ಜೋಡಿಸಬೇಕು. ಬಿಜೆಪಿಯವರೇ ಇದರಲ್ಲಿ ರಾಜಕೀಯ ಮಾಡದೇ ಯೋಜನೆ ಜಾರಿ ಮಾಡಲಿ. ಈ ಪಾದಯಾತ್ರೆ ಯಶಸ್ವಿಯಾಗಿ ಸಾಗಲಿದೆ. ಕನ್ನಡ ಚಿತ್ರರಂಗ ಕೂಡ ಕೈ ಜೋಡಿಸಲಿದೆ ಎಂದು ಟಿವಿ9ಗೆ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿಕೆ …
Read More »ಕೊರೊನಾ ಸ್ಪೋಟ: ತಮಿಳುನಾಡಿನಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಣೆ..!
ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಗಳು ಈಗ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿವೆ. ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ನಿಯಮಗಳನ್ನು ರೂಪಿಸಿವೆ ಮತ್ತು ಜಿಲ್ಲಾವಾರು ನಿರ್ಬಂಧಗಳನ್ನು ಹೇರಿವೆ. ತಮಿಳುನಾಡಿನಲ್ಲಿ, ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ನಡುವೆ ಚೆನ್ನೈನಲ್ಲಿ ಇಂದು ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ. ರಾತ್ರಿ ಕರ್ಫ್ಯೂ, ಶಾಲಾ ಕಾಲೇಜುಗಳನ್ನು ಮುಚ್ಚುವುದು, ಕೆಲಸದ ಸ್ಥಳವನ್ನು ಅರ್ಧದಷ್ಟು ಕಡಿಮೆ ಮಾಡುವುದು, ಸಾರ್ವಜನಿಕ ಸಾರಿಗೆಯಲ್ಲಿ ಸೀಮಿತ ಸಂಖ್ಯೆಯ ಪ್ರಯಾಣಿಕರಂತಹ ಹಲವಾರು ಕ್ರಮಗಳನ್ನು …
Read More »ವೀಕೆಂಡ್ ಕಫ್ರ್ಯೂಗೆ ಎರಡನೇ ದಿನವೂ ಬೆಳಗಾವಿಯಲ್ಲಿ ಜನ ಡೋಂಟ್ ಕೇರ್ ಎಂದಿದ್ದಾರೆ.
ವೀಕೆಂಡ್ ಕಫ್ರ್ಯೂಗೆ ಎರಡನೇ ದಿನವೂ ಬೆಳಗಾವಿಯಲ್ಲಿ ಜನ ಡೋಂಟ್ ಕೇರ್ ಎಂದಿದ್ದಾರೆ. ಬೆಳಗಾವಿಯ ಜೈ ಕಿಸಾನ್ ವೋಲ್‍ಸೇಲ್ ತರಕಾರಿ ಖಾಸಗಿ ಮಾರುಕಟ್ಟೆಯಲ್ಲಿ ಜನಜಾತ್ರೆ ಕಂಡು ಬಂದಿದೆ. ಇತ್ತಿಚೆಗೆ ಉದ್ಘಾಟನೆಗೊಂಡಿರುವ ಬೆಳಗಾವಿ ಹೊರವಲಯದ ಗಾಂಧಿನಗರದ ಬಳಿಯ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದಲ್ಲೇ ಇರುವ ಜೈ ಕಿಸಾನ್ ವೋಲ್‍ಸೇಲ್ ತರಕಾರಿ ಖಾಸಗಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ. ಮಹಾರಾಷ್ಟ್ರ, ಗೋವಾದಿಂದ ನಿತ್ಯ ನೂರಾರು ವ್ಯಾಪಾರಿಗಳು ಆಗಮಿಸುತ್ತಿದ್ದಾರೆ. …
Read More »
Laxmi News 24×7