ವಿಟ್ಲ: ಮುಸ್ಲಿಂ ಮದುಮಗನೊಬ್ಬ ತನ್ನ ಮದುವೆಯ ಸಂದರ್ಭದಲ್ಲಿ ಕೊರಗಜ್ಜನ ವೇಷ ಹಾಕಿ ಕುಣಿದಿದ್ದು ಈ ಸಂಬಂಧ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೊಳ್ನಾಡು ಗ್ರಾಮದ ಅಝೀಝ್ ಅವರ ಪುತ್ರಿಯ ಜೊತೆ ಮಂಜೇಶ್ವರ ತಾಲೂಕಿನ ಉಪ್ಪಳದ ಉಮರುಲ್ಲಾ ಬಶೀತ್ ನ ಮದುವೆ ನಿಶ್ಚಿಯವಾಗಿತ್ತು. ಇಂದು ಮಧ್ಯಾಹ್ನ ಇಬ್ಬರ ವಿವಾಹ ನಡೆದಿತ್ತು. ಇನ್ನು ಕಳೆದ ರಾತ್ರಿ ವರನ ಕಡೆಯವರು ವಧುವಿನ ಮನೆಗೆ ಬರುವ ಸಂದರ್ಭದಲ್ಲಿ ವರ ತುಳುನಾಡಿನ ಆರಾಧ್ಯ ದೈವವಾದ ಕೊರಗಜ್ಜನ ವೇಷ ಧರಿಸಿ …
Read More »ರೇಷನ್ ಕಾರ್ಡ್’ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: 2.76 ಲಕ್ಷ ಬಿಪಿಎಲ್ ಕಾರ್ಡ್ ವಿತರಣೆ
ಬೆಂಗಳೂರು: ಪಡಿತರ ಚೀಟಿ ಪಡೆಯುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಕಳೆದ ಮೂರ್ನಾಲ್ಕು ವರ್ಷಗಳಿಂದ ವಿಲೇವಾರಿಯಾಗದೆ ಉಳಿದುಕೊಂಡಿದ್ದ ಪಡಿತರ ಚೀಟಿಗಳನ್ನು ಮಂಜೂರು ಮಾಡಲಾಗಿದೆ. 2017 ರಿಂದ ಪಡಿತರ ಚೀಟಿ ಪೋರ್ಟಲ್ ಸ್ಥಗಿತವಾಗಿದ್ದು, ಮತ್ತೆ ಕಾರ್ಯಾರಂಭ ಮಾಡಿದೆ. ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ, ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಮರು ಚಾಲನೆಯ ನಂತರ ಹೊಸದಾಗಿ 2.76 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ಮಂಜೂರು ಮಾಡಲಾಗಿದೆ. …
Read More »ತವರಿನ ‘ಹೋಟೆಲ್ ಊಟ’ ಗಂಡನ ಮನೆಯಲ್ಲಿ ಸಿಗಲಿಲ್ಲ- ಇಬ್ಬರು ಕಂದಮ್ಮಗಳ ಜತೆ ಬೆಂಕಿ ಹಚ್ಚಿಕೊಂಡ ದೊಡ್ಡಬಳ್ಳಾಪುರದ ಮಹಿಳೆ!
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಎಸ್ ಎಂ ಗೊಲ್ಲಹಳ್ಳಿಯಲ್ಲಿಯಲ್ಲೊಂದು ನಿನ್ನೆ ದೊಡ್ಡ ದುರಂತ ನಡೆದಿತ್ತು. ಮಹಿಳೆಯೊಬ್ಬರು ತನ್ನಿಬ್ಬರು ಪುಟಾಣಿ ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿ ಸಂಧ್ಯಾ (33) ಮತ್ತು ಆಕೆಯ 4 ಹಾಗೂ 2 ವರ್ಷದ ಮಕ್ಕಳು ಮೃತಪಟ್ಟಿದ್ದಾರೆ. ಸಂಧ್ಯಾ ಅವರ ವಿವಾಹವು ಶ್ರೀಕಾಂತ ಎನ್ನುವವರ ಜತೆ ಐದು ವರ್ಷಗಳ ಹಿಂದೆ ನಡೆದಿದೆ. ಅತ್ತೆ-ಮಾವನ ಜತೆ ಸಂಧ್ಯಾ ನೆಲೆಸಿದ್ದರು. ಈ ತಾಯಿ …
Read More »ಜನವರಿ-ಫೆಬ್ರವರಿ ವೇಳೆಗೆ ಭಾರತದಲ್ಲಿ ಪರಿಸ್ಥಿತಿ ತೀರಾ ಕೆಡಲಿದ್ದು, ಓಮೈಕ್ರಾನ್ ಪ್ರಕರಣಗಳು ಹೆಚ್ಚಾಗಲಿವೆ:: ತಜ್ಞರು
ನವದೆಹಲಿ(ಜ.07): ಕೊರೋನಾ ವೈರಸ್ನ ಹೊಸ ರೂಪಾಂತರ ಓಮೈಕ್ರಾನ್ ಪ್ರಾರಂಭದಲ್ಲೇ ತನ್ನ ಪ್ರಭಾವವನ್ನು ತೋರಿಸುತ್ತಿದೆ. ಜನವರಿ-ಫೆಬ್ರವರಿ ವೇಳೆಗೆ ಭಾರತದಲ್ಲಿ ಪರಿಸ್ಥಿತಿ ತೀರಾ ಕೆಡಲಿದ್ದು, ಓಮೈಕ್ರಾನ್ ಪ್ರಕರಣಗಳು ಹೆಚ್ಚಾಗಲಿವೆ ಎಂದು ತಜ್ಞರು ಹೇಳಿದ್ದಾರೆ. ಇದು ಕೇವಲ ಪ್ರಾರಂಭ ಅಷ್ಟೇ ಆಗಿದ್ದು, ಮುಂದಿನ ದಿನಗಳಲ್ಲಿ ಓಮೈಕ್ರಾನ್ ತನ್ನ ನಿಜರೂಪ ತೋರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಬುಧವಾರ ಭಾರತದಲ್ಲಿ ಸುಮಾರು 91,000 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದು ಬಹಳ ಕಳವಳಕಾರಿಯಾದ …
Read More »ವಿಧಾನಸೌಧ, ವಿಕಾಸಸೌಧ, MS ಕಟ್ಟಡ’ಗಳಿಗೆ ‘ಸಾರ್ವಜನಿಕರ ಪ್ರವೇಶ’ಕ್ಕೆ ನಿರ್ಬಂಧ
ಬೆಂಗಳೂರು: ಕೊರೋನಾ ಹಾಗೂ ಓಮಿಕ್ರಾನ್ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳದ ಕಾರಣದಿಂದಾಗಿ, ವಿಧಾನಸೌಧ (Vidhan Soudha ), ವಿಕಾಸಸೌಧ ( Vikas Soudha ) ಹಾಗೂ ಬಹುಮಹಡಿ ಕಟ್ಟಡಗಳಿಗೆ ( MS Building ) ಸಾರ್ವಜನಿಕರ ಪ್ರವೇಶಕ್ಕೆ ( Public Entry ) ರಾಜ್ಯ ಸರ್ಕಾರ ( Karnataka Government ) ನಿರ್ಬಂಧ ವಿಧಿಸಿದೆ. 2 ಡೋಸ್ ಕೊರೋನಾ ಲಸಿಕೆ ಪಡೆದವರಿಗೆ ಮಾತ್ರವೇ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. …
Read More »ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ತಾರೆಯರ ನಡುವೆ ಮತ್ತೆ ಯುದ್ಧ ಶುರುವಾಯ್ತಾ?
ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ತಾರೆಯರ ನಡುವೆ ಮತ್ತೆ ಯುದ್ಧ ಶುರುವಾಯ್ತಾ? ಇಬ್ಬರು ನಟರ ನಡುವೆ ಕಿತ್ತಾಟ ಆರಂಭ ಆಗಿದೆಯಾ? ಇಂಥದ್ದೊಂದು ಪ್ರಶ್ನೆ ಮೂಡಲು ಕಾರಣ ಒಂದು ವಿಡಿಯೋ. ಶಿವಣ್ಣ ಹಾಗೂ ರಾಜ್ ಬಿ ಶೆಟ್ಟಿ ನಡುವೆ ನಡೆದ ಒಂದು ಸಂಭಾಷಣೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಶಿವರಾಜ್‌ಕುಮಾರ್ ರೌದ್ರಾವತಾರ ತಾಳಿದ್ದು, ಒಂದು ಮೊಟ್ಟೆಯ ಕಥೆ ಸಿನಿಮಾ ನಾಯಕನಿಗೆ ಅವಾಜ್ ಹಾಕಿದ್ದಾರೆ. ಶಿವಣ್ಣ ಎಷ್ಟು ಆರಾಮಾಗಿರುತ್ತಾರೋ ಅಷ್ಟೇ ಖಡಕ್ ವ್ಯಕ್ತಿತ್ವ. …
Read More »ರಾಜ್ಯಾದ್ಯಂತ 2 ವಾರಗಳ ಕಾಲ ವೀಕೆಂಡ್ ಲಾಕ್ಡೌನ್..!
ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ರೂಪಾಂತರಿ ವೈರಸ್(Omicron Variant)ಹಾವಳಿ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಗಳ ಮೂಲಕ ಟಫ್ ರೂಲ್ಸ್ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ರಾಜ್ಯಾದ್ಯಂತ 2 ವಾರಗಳ ಕಾಲ ವೀಕೆಂಡ್ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಶುಕ್ರವಾರ(ಜ.6)ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 5ರವರೆಗೆ ಲಾಕ್ ಡೌನ್ ಜಾರಿ ಮಾಡಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿ ಹೊರತುಪಡಿಸಿ ಉಳಿದೆಲ್ಲ ಕಡೆ ಆಫ್ಲೈನ್ ತರಗತಿಗಳು ನಿಲ್ಲಲಿವೆ. …
Read More »ಕೋವಿಡ್ ಟೆಸ್ಟ್ ಅನ್ನೋದು ಒಂದು ಹಗರಣ, ಇದರಿಂದ ನಾನು ಅಂತ್ಯಕ್ರಿಯೆಗೆ ಹೋಗೋದು ತಪ್ಪಿದೆ’
ಲಂಡನ್‌ನಿಂದ ಮಾವನ ಅಂತ್ಯಕ್ರಿಯೆಗಾಗಿ ಭಾರತಕ್ಕೆ ಬಂದ ವ್ಯಕ್ತಿ ಮತ್ತು ಆತನ ಪತ್ನಿಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿದೆ. ಇದರಲ್ಲಿ ಪಾಸಿಟಿವ್ ರಿಸಲ್ಟ್ ಬಂದಿದ್ದು, ಇವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಹಾಗಾಗಿ ಈ ಜೋಡಿ ಅಂತ್ಯಕ್ರಿಯೆಗೆ ಹೋಗುವುದು ತಪ್ಪಿದೆ. ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿರುವ ವ್ಯಕ್ತಿ, ಕೋವಿಡ್ ಟೆಸ್ಟ್ ಅನ್ನೋದು ಹಗರಣವಾಗಿ ಬಿಟ್ಟಿದೆ ಎಂದು ಆರೋಪಿಸಿದ್ದಾರೆ. ಮನೋಜ್ ಲಾಡ್ವಾ ಎಂಬವರ ಪತ್ನಿಯ ತಂದೆಯ ಅಂತ್ಯಕ್ರಿಯೆಯ ಸಲುವಾಗಿ ಲಂಡನ್‌ನಿಂದ ಮುಂಬೈಗೆ ಬಂದಿದ್ದರು. …
Read More »ಜ. 31ರವರೆಗೂ ಶಾಲೆಗಳಿಗೆ ರಜೆ; 1ರಿಂದ 9ರ ವರೆಗಿನ ತರಗತಿಗಳಿಗಷ್ಟೇ ಅನ್ವಯ: ಬಿಎಂಸಿ ಘೋಷಣೆ
ಮುಂಬೈ: ದೇಶಾದ್ಯಂತ ಕರೊನಾ ಭೀತಿ ಅತಿಯಾಗಿದ್ದು, ಸದ್ಯದಲ್ಲೇ ದಿನಕ್ಕೆ ಸುಮಾರು 60 ಸಾವಿರ ಮಂದಿ ಸೋಂಕಿತರಾಗಿ ಆಸ್ಪತ್ರೆಗೆ ಸೇರಲಿದ್ದಾರೆ ಎಂಬ ಅಧ್ಯಯನವೊಂದರ ಅಂಶ ಮತ್ತಷ್ಟು ಆತಂಕವನ್ನು ಮೂಡಿಸಿದೆ. ದೇಶದಲ್ಲಿ ಒಮಿಕ್ರಾನ್ ಅಲೆ ಗರಿಷ್ಠ ಮಟ್ಟ ತಲುಪುವ ವೇಳೆ ದೈನಿಕ ಸುಮಾರು 60,000 ಜನರು ಆಸ್ಪತ್ರೆಗಳಿಗೆ ದಾಖಲಾಗಬಹುದು. ಸದ್ಯ ದೇಶದಲ್ಲಿ ಒಮಿಕ್ರಾನ್ ಪ್ರಭೇದವೇ ಪ್ರಮುಖ ತಳಿಯಾಗಿದ್ದು ಶೀಘ್ರವೇ ಆರೋಗ್ಯ ಬಿಕ್ಕಟ್ಟು ಅಪ್ಪಳಿಸಬಹುದು ಎಂದು ಖಾಸಗಿ ಅಧ್ಯಯನವೊಂದು ಹೇಳಿದೆ. ಈ ನಡುವೆ ಮಹಾರಾಷ್ಟ್ರದಲ್ಲಿ ಈಗಾಗಲೇ …
Read More »ಮಕ್ಕಳ ಲಸಿಕೆಗೆ ಪೋಷಕರು ಸಹಕಾರ ನೀಡಬೇಕು :ಸಚಿವ ಬಿ.ಸಿ.ನಾಗೇಶ್
ಇಂದಿನಿಂದ ರಾಜ್ಯಾದ್ಯಂತ ಆರಂಭವಾಗಿರುವ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಕಾರ ನೀಡಬೇಕು,ಕೋವಿಡ್ ಜೊತೆ ಜೀವನ ನಡೆಸುವುದು ಅನಿವಾರ್ಯವಾಗಿದ್ದು, ಕೋವಿಡ್ ಎದುರಿಸಲು ಎಲ್ಲರೂ ಲಸಿಕೆ ಪಡೆಯುವುದು ಅಗತ್ಯ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕರೆ ನೀಡಿದ್ದಾರೆ. ಉಚಿತವಾಗಿ ನೀಡುತ್ತಿರುವ ಕೋವಿಡ್ ಲಸಿಕೆಯನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ದೇಶದ 145 ಕೋಟಿ ಜನರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. …
Read More »