ಗೋಕಾಕ:ನೂತನ ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಅವರಿಗೆ ಸನ್ಮಾನ ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಯವರು ಸಂಸ್ಥೆಯ ಚೇರಮನ ಲಖನ ಜಾರಕಿಹೊಳಿ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ನಿಮಿತ್ತ ಅವರನ್ನು ಗುರುವಾರದಂದು ಸತ್ಕರಿಸಿ ,ಗೌರವಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸದಾನಂದ ಕಲಾಲ, ಮುಖ್ಯೋಪಾಧ್ಯಾಯನಿ .ಸಿ.ಬಿ.ಪಾಗದ, ಶಿಕ್ಷಕ ಎಂ.ಸಿ ವಣ್ಣೂರ ಸೇರಿದಂತೆ ಅನೇಕರು ಇದ್ದರು.
Read More »ಪುನೀತ್ ನಿವಾಸಕ್ಕೆ ಬೇಟಿ ನೀಡಿದ ಕಮಲ್ ಹಾಸನ.
ಬೆಂಗಳೂರು (ಜ.13): ಕನ್ನಡ ಚಿತ್ರರಂಗದ (Sandalwood) ಓನ್ ಆಯಂಡ್ ಓನ್ಲಿ ಯುವರತ್ನ, ಕರ್ನಾಟಕದ ರತ್ನ (Karnataka Rathna), ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಹೃದಯಾಘಾತದಿಂದ ನಮ್ಮನ್ನು ಆಗಲಿದ್ದಾರು. ಅಕ್ಟೋಬರ್ 29, 2021 ಇಡೀ ಭಾರತಕ್ಕೆ (India) ಇದು ಕರಾಳ ದಿನವಾಗಿತ್ತು. ಒಂದೊಂದು ನಿಮಿಷವೂ ಹೇಗಪ್ಪಾ ಕಳೆಯುವುದು ಎನ್ನುವ ಚಿಂತೆ ಕನ್ನಡಿಗರನ್ನು ಕಾಡಿತ್ತು. ಅಪ್ಪುಗೆ ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಾಂತ ಅಭಿಮಾನಿಗಳು ಮತ್ತು ಸ್ನೇಹಿತರಿದ್ದಾರೆ. ಈಗಲೂ ಅವರ ನಿವಾಸಕ್ಕೆ ಆಗಮಿಸಿ …
Read More »3ನೇ ಡೋಸ್ ಪಡಿಯಲು ನೀವು ಅರ್ಹರೆ.
ಬೆಂಗಳೂರು(ಜ.13): ಮುನ್ನೆಚ್ಚರಿಕೆ ಡೋಸ್ (Booster Dose) ಪಡೆಯಲು ಅರ್ಹರಾಗಿರುವ ಬಗ್ಗೆ ಹಾಗೂ ಲಸಿಕೆ(Vaccine) ಪಡೆಯಲು ಎಷ್ಟು ದಿನ ಕಾಯಬೇಕು ಎಂಬ ಬಗ್ಗೆ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಪಡೆಯುವ ಸೌಲಭ್ಯವನ್ನು ಸರ್ಕಾರ ಕಲ್ಪಿಸಿದೆ. selfregistration.cowin.gov.in/ ಈ ಕೊಂಡಿಗೆ ಹೋಗಿ ನೀವು ಮೊದಲೆರಡು ಡೋಸ್ ಲಸಿಕೆ ಪಡೆಯುವಾಗ ನೀಡಿದ್ದ ದೂರವಾಣಿ ಸಂಖ್ಯೆಯನ್ನು(Mobile Number) ನೀಡಿದರೆ ಮುನ್ನೆಚ್ಚರಿಕೆ ಡೋಸ್ ಪಡೆಯಲು ನೀವು ಅರ್ಹರೇ ಮತ್ತು ಲಸಿಕೆ ಪಡೆಯಲು ಇನ್ನೆಷ್ಟು ದಿನ ಕಾಯಬೇಕು ಎಂಬ ಮಾಹಿತಿ ಲಭಿಸುತ್ತದೆ. …
Read More »ಜನರ ಆರೋಗ್ಯ ದೃಷ್ಟಿಯಿಂದ ಪಾದಯಾತ್ರೆ ಕೈಬಿಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಮನವಿ ಮಾಡಿಕೊಂಡಿದ್ದರು.
ಬೆಂಗಳೂರು(ಜ.13): ಹಲವು ವಿರೋಧಗಳ ನಂತರ ಹೈಕಮಾಂಡ್ ಸೂಚನೆಯಂತೆ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಕೈಗೊಂಡಿದ್ದ ಪಾದಯಾತ್ರೆಯನ್ನು ಮೊಟಕುಗೊಳಿಸಿದ್ದಾರೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ, ಬದ್ಧ, ಜನರ ಆರೋಗ್ಯ ದೃಷ್ಟಿಯಿಂದ ಪಾದಯಾತ್ರೆ ಕೈಬಿಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಮನವಿ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಪಾದಯಾತ್ರೆಯನ್ನು ಸದ್ಯದ ಮಟ್ಟಿಗೆ ಹಿಂಪಡೆದಿದ್ದಾರೆ. ನಮಗೆ ಜನರ ಹಿತ ಮುಖ್ಯ . ನಮ್ಮ ಪಾದಯಾತ್ರೆಯಿಂದ ಕೊರೊನಾ ಉಲ್ಭಣ ಆಗಬಾರದು …
Read More »ರಸ್ತೆ ಅಪಘಾತದಲ್ಲಿ ಅಣ್ಣನ ಮೃತದೇಹ ನೋಡಲು ಬಂದ ತಂಗಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾಳೆ.
ಮೈಸೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಹೋದರನ ಮೃತದೇಹ ಕಂಡು ತೀವ್ರ ಹೃದಯಾಘಾತಕ್ಕೊಳಗಾಗಿ ಸಹೋದರಿಯೂ ಸಾವನ್ನಪ್ಪಿರುವ ಮನಕಲಕುವ ಘಟನೆ ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ. ಕೊಡಗಿನ ಪೊನ್ನಪೇಟೆಯ ನಿವಾಸಿ ಮಂಜುನಾಥ್ ಮತ್ತು ರತ್ನ ದಂಪತಿಯ ಮಗಳಾದ ರಶ್ಮಿ(21) ಸಾವನ್ನಪ್ಪಿರುವ ಯುವತಿ. ಇವರು ಮೈಸೂರಿನ ವಿಜಯ ನಗರದಲ್ಲಿ ವಾಸವಾಗಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ಓದುತ್ತಿದ್ದರು. ಅಪಘಾತದಲ್ಲಿ ಅಣ್ಣ ಸಾವು: ಯುವತಿ ರಶ್ಮಿಯ ದೊಡ್ಡಪ್ಪನ ಮಗ ಕೀರ್ತಿರಾಜ್ ಸೋಮವಾರ ರಾತ್ರಿ …
Read More »ಬ್ಯಾಂಕ್ ಆಫ್ ಬರೋಡಾದಲ್ಲಿ 198 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಅವಕಾಶ
Bank of Baroda Recruitment 2022: ಬ್ಯಾಂಕ್ ಆಫ್ ಬರೋಡ(Bank of Baroda) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 198 ಮ್ಯಾನೇಜರ್, ಜನರಲ್ ಮ್ಯಾನೇಜರ್, ವೈಸ್ ಪ್ರೆಸಿಡೆಂಟ್, ಪ್ರೊಡಕ್ಟ್ ಮ್ಯಾನೇಜರ್, ಹೆಡ್ ಪ್ರಾಜೆಕ್ಟ್ & ಪ್ರೊಸೆಸ್, ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್, MIS ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. …
Read More »ಗೋಕಾಕ: ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನು ಲಕ್ಷ್ಮೀ ಏಜುಕೇಶನ ಟ್ರಸ್ಟಿನ್ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಉದ್ಘಾಟಿಸುತ್ತಿರುವುದು.
ಗೋಕಾಕ: ದೇಶದಲ್ಲಿಯೇ ಬಲಿಷ್ಠವಾದ ಯುವಶಕ್ತಿ ಸ್ವಾಮಿ ವಿವೇಕಾನಂದರ ಆದರ್ಶಗಳ ಆಚರಣೆಯೊಂದಿಗೆ ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸುವಂತೆ ನಗರದ ಲಕ್ಷ್ಮೀ ಏಜುಕೇಶನ ಟ್ರಸ್ಟಿನ್ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹೇಳಿದರು. ಬುಧವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಯುವ ಪೀಳಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಹೆಚ್ಚಿನ …
Read More »ಡಿಕೆ ಸೋದರರಿಗೆ ಪೌರುಷ ಇದೆಯಾ?: ಅಶ್ವತ್ಥನಾರಾಯಣ ಸವಾಲು
ರಾಮನಗರ: ಮೇಕೆದಾಟು ಯೋಜನೆಯನ್ನು ಜಾರಿ ಮಾಡುವ ಗಂಡಸುತನ ಇರೋದು ಬಿಜೆಪಿಗೆ ಮಾತ್ರ; ಕಾಂಗ್ರೆಸ್ ಪಕ್ಷಕ್ಕೆ ಇದನ್ನೆಲ್ಲ ಅನುಷ್ಠಾನಗೊಳಿಸುವ ಶಕ್ತಿಯೇ ಇಲ್ಲ. ಈ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರಿಗೆ ಈ ಪೌರುಷವಿದೆಯಾ? ಈ ವಿಚಾರದಲ್ಲಿ ನಾನು ನೇರವಾಗಿ ಅವರಿಬ್ಬರಿಗೂ ಸವಾಲೆಸೆಯುತ್ತಿದ್ದೇನೆ. ತಾಕತ್ತಿದ್ದರೆ ಅವರು ಉತ್ತರಿಸಲಿ’ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪಂಥಾಹ್ವಾನ ನೀಡಿದ್ದಾರೆ. `ಡಿ.ಕೆ.ಶಿವಕುಮಾರ್ ಜಿಲ್ಲೆಯಿಂದ ಏಳು ಬಾರಿ ಶಾಸಕರಾಗಿ, …
Read More »‘ಕೆಜಿಎಫ್ ಸಿನಿಮಾ ಕಥೆ ಆಧರಿಸಿಯೇ ‘ಪುಷ್ಪ’ ಚಿತ್ರ ರೆಡಿ ಆಯ್ತು’;
.‘ಪುಷ್ಪ’ ಸಿನಿಮಾದ (Pushpa Movie) ಬಗ್ಗೆ ಕನ್ನಡದ ಒಂದಷ್ಟು ಮಂದಿಗೆ ಸಿಟ್ಟಿದೆ. ಇದಕ್ಕೆ ಕಾರಣ ತೆಲುಗಿನವರು ‘ಒಂದು ‘ಪುಷ್ಪ’ 10 ‘ಕೆಜಿಎಫ್’ಗೆ (KGF Movie) ಸಮ’ ಎನ್ನುವ ಮಾತನ್ನು ಹೇಳಿದ್ದರು. ಚಿತ್ರ ತೆರೆಕಂಡ ನಂತರದಲ್ಲಿ ಈ ಹೇಳಿಕೆಗೆ ಅರ್ಥವಿಲ್ಲ ಎಂಬುದು ಸಾಬೀತಾಯಿತು. ಅನೇಕರು ಟ್ವಿಟರ್ನಲ್ಲಿ ‘ಪುಷ್ಪ’ ಚಿತ್ರವನ್ನು ಟೀಕೆ ಮಾಡೋಕೆ ಆರಂಭಿಸಿದರು. ‘ಯಶ್ (Yash) ಅಭಿನಯದ ‘ಕೆಜಿಎಫ್’ ಬೆಸ್ಟ್’ ಎಂದು ಹೊಗಳಿಕೊಳ್ಳೋಕೆ ಶುರು ಮಾಡಿದರು. ‘ಪುಷ್ಪ’ ಸಿನಿಮಾ ಈಗ ಒಟಿಟಿಗೆ …
Read More »ಮ್ಮ ಬಳಿ ಈ 5 ರೂ. ನಾಣ್ಯ ಇದ್ದರೆ ಸಿಗಲಿದೆ 10 ಲಕ್ಷ, ಏನು ಮಾಡಬೇಕೆಂದು ತಿಳಿಯಿರಿ
ನವದೆಹಲಿ: ಮನೆಯಲ್ಲಿಯೇ ಕುಳಿತು ಏನೂ ಮಾಡದೆ ನೀವು ಹಣ(Earn Money Online) ಗಳಿಸಲು ಬಯಸಿದರೆ ಇಲ್ಲಿದೆ ಸುವರ್ಣಾವಕಾಶ. ನೀವು ಕೇವಲ 5 ರೂ.ಗೆ ಬದಲಾಗಿ 5 ಲಕ್ಷ ರೂ.ಗಳವರೆಗೆ ಗಳಿಸಬಹುದು. ಈ ರೀತಿ ಹಣ ಗಳಿಸಲು ನೀವು ಎಲ್ಲಿಯೂ ಹೋಗಬೇಕಾಗಿಲ್ಲ. ಯಾವುದೇ ವ್ಯಕ್ತಿಯು ಬಹಳ ಸುಲಭವಾಗಿ ಲಕ್ಷ ಲಕ್ಷ ಹಣ ಗಳಿಸಬಹುದು. ಹಳೆಯ ನಾಣ್ಯಗಳಿಗೆ ಬೇಡಿಕೆ ಹಳೆ ನಾಣ್ಯಗಳಿಗೆ ಲಕ್ಷಗಟ್ಟಲೆ ಹಣ(Indian Currency) ಸಿಗುತ್ತದೆ ಎನ್ನುವ ಸುದ್ದಿಯನ್ನು ನೀವು ಆಗಾಗ ಓದಿರಬಹುದು. …
Read More »