Breaking News

Uncategorized

ಹದಗೆಟ್ಟ ಪೊಲೀಸ್ ಆಡಳಿತ ವ್ಯವಸ್ಥೆ: ನ್ಯಾಯಕ್ಕಾಗಿ ಕನ್ನಡಿಗ ಪೊಲೀಸರು ಕೋರ್ಟ್ ಮೊರೆ

ಬೆಂಗಳೂರು, ಜ. 29: ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರ ನಿಯಮ ಬಾಹಿರ ತೀರ್ಮಾನಗಳು, ಕನ್ನಡ ವಿರೋಧಿ ನೀತಿ ಅವರನ್ನೇ ಪೇಚಿಗೆ ಸಿಲುಕಿಸುತ್ತಿವೆ. ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸುತ್ತಿರುವ ಡಿಜಿಪಿ ಪ್ರವೀಣ್ ಸೂದ್ ಅವರ ವಿರುದ್ಧ ಪದೇ ಪದೇ ನ್ಯಾಯಾಂಗ ನಿಂದನೆ ನೋಟಿಸ್‌ಗಳು ಜಾರಿಯಾಗಿ ಡಿಜಿಪಿ ಕಚೇರಿ ಕದ ತಟ್ಟುತ್ತಿವೆ. ವರ್ಗಾವಣೆ, ಬಡ್ತಿ, ಐಪಿಎಸ್ ನಾನ್ ಐಪಿಎಸ್ ಹುದ್ದೆಗಳ ಹಂಚಿಕೆ ಸೇರಿದಂತೆ ಪೊಲೀಸ್ ಆಡಳಿತ ವ್ಯವಸ್ಥೆಗೆ ಸಂಬಂಧಸಿದಂತೆ ಡಿಜಿಪಿ …

Read More »

ಕರ್ನಾಟಕ ರತ್ನ ಅಪ್ಪು ಅಗಲಿ 3 ತಿಂಗಳು..ಸಸಿ ನೆಟ್ಟು ಭಾವುಕರಾದ ರಾಘಣ್ಣ

ಬೆಂಗಳೂರು: ಪವರ್​ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ ಮೂರು ತಿಂಗಳು ಕಳೆದಿದೆ. ಕಳೆದ ವರ್ಷ ಅಕ್ಟೋಬರ್ 29 ರಂದು ಹೃದಯಾಘಾತದಿಂದ ಪುನೀತ್​ ರಾಜ್​ ಕುಮಾರ್​ ಇಹಲೋಕ ತ್ಯಜಿಸಿದ್ದರು. ಪುನೀತ್​ ರಾಜ್​ ಕುಮಾರ್​ ನಿಧನರಾಗಿ ಮೂರು ತಿಂಗಳು ಕಳೆದ ಹಿನ್ನೆಲೆ, ಪುನೀತ್ ಸಮಾಧಿ ಬಳಿ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ.   ಸಮಾಧಿ ಬಳಿ ಅಶ್ವಿನಿ ಪುನೀತ್​ ರಾಜ್​ಕುಮಾರ್,​ ಪುತ್ರಿ ಧೃತಿ , ರಾಘವೇಂದ್ರ ರಾಜ್ ಕುಮಾರ್ ಮತ್ತು ಅವರ ಪತ್ನಿ …

Read More »

ಅವಹೇಳನ ಆರೋಪ, ಉಸ್ಮಾನ್ ಘನಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ಆರಂಭ

ಇಳಕಲ್ (ಬಾಗಲಕೋಟೆ ಜಿಲ್ಲೆ): ಭಾರತ ಮಾತೆ, ಗೋವು ಹಾಗೂ ಗಂಗಾ ನದಿಯ ಬಗ್ಗೆ ಎಐಎಂಐಎಂ ರಾಜ್ಯ ಘಟಕದ ಅಧ್ಯಕ್ಷ ಉಸ್ಮಾನ್ ಘನಿ ಹುಮನಾಬಾದ ಅಪಮಾನ ಮಾಡಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ಹಾಗೂ ಬಿಜೆಪಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ.   ಭಾರತ ಮಾತೆ, ಗೋವು ಹಾಗೂ ಗಂಗಾ ನದಿಯ ಬಗ್ಗೆ ಉಸ್ಮಾನ್ ಘನಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಇತ್ತೀಚೆಗೆ ಜಿಲ್ಲೆಯಾದ್ಯಂತ …

Read More »

ಅರಭಾವಿ ಕ್ಷೇತ್ರದ ರಸ್ತೆಗಳು ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ 52 ಕೋಟಿ ರೂ. ಅನುದಾನ ಬಿಡುಗಡೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

  ಗೋಕಾಕ : ಅರಭಾವಿ ಮತಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ 50 ಕೋಟಿ ರೂ. ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ 2 ಕೋಟಿ ರೂ.ಗಳು ಸೇರಿ ಒಟ್ಟು 52 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಕ್ಷೇತ್ರದಲ್ಲಿರುವ ರಸ್ತೆಗಳ ಸುಧಾರಣೆಗಾಗಿ ಲೋಕೋಪಯೋಗಿ ಇಲಾಖೆಯ ಒಟ್ಟು 34.53 ಕಿ.ಮೀ ರಸ್ತೆಗಳ ಸುಧಾರಣೆಗಾಗಿ 32 ಕೋಟಿ ರೂ. ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ …

Read More »

ಅಂಬೇಡ್ಕರ ಪೊಟೊ ತೆಗೆಸಿದ ನ್ಯಾಯಾದೀಶರ ವಿರುದ್ದ ಮೋದಿಗೆ ಪತ್ರ,,

ಅಂಬೇಡ್ಕರ ಪೊಟೊ ತೆಗೆಸಿದ ನ್ಯಾಯಾದೀಶರ ವಿರುದ್ದ ಮೋದಿಗೆ ಪತ್ರ,,   ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ ಬಾವ ಚಿತ್ರ ತೆಗೆಸಿ ಪೂಜೆ ಮಾಡಿ ಅವಮಾನ ಮಾಡಿದ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ವಜಾಗೊಳಿಸಲು ಗೋಕಾಕದಲ್ಲಿ ಬಸವೇಶ್ವರ ವೃತ್ತದಲ್ಲಿ ಗೋಕಾಕದ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೆಂದ್ರ ಮಹಾಸ್ವಾಮಿಗಳ ಮುಖಂಡತ್ವದಲ್ಲಿ ಹಾಗೂ ಯುವ ದಲಿತ ಸಮಿತಿ ನೇತೃತ್ವದಲ್ಲಿ ವಿವಿದ ಸಂಘಟನೆಗಳಿಂದ ಪ್ರದಾನ ಮಂತ್ರಿಯವರಿಗೆ ಸಾವಿರಾರು ಪತ್ರ ಬರೆದು ಪತ್ರ ಚಳುವಳಿ ಮಾಡಲಾಯಿತು. ಈ ಸಮಯದಲ್ಲಿ ಮಾತನಾಡಿದ …

Read More »

ನೂತನವಾಗಿ ಆಯ್ಕೆಯಾದ ತಾಲೂಕಿನ ಪಿಎಸ್‌ಐ ಗಳಿಗೆ ಸನ್ಮಾನ ಶಾಸಕರಾದ ಶ್ರೀ ರಮೇಶ ಜಾರಕಿಹೊಳಿ ಅವರಿಂದ

ಗೋಕಾಕ  ನಗರದ ಸಾಹುಕಾರ ಗೃಹ ಕಛೇರಿಯಲ್ಲಿ ಇಂದು 2021. 22ನೇ ಸಾಲಿನ ಪಿಎಸ್‌ಐ ಹುದ್ದೆಗೆ ಆಯ್ಕೆಯಾದ ಗೋಕಾಕ ತಾಲೂಕಿನ ಶಿವಾಪೂರ.ಕೊ ಗ್ರಾಮದ ಕು.ಕಿರಣ ಬಸಗೌಡ ಪಾಟೀಲಘಟಪ್ರಭಾ ಪಟ್ಟಣದ ಕು.ಚೈತ್ರಾ ಹಣಮಂತ ಗಿಡುರಮಮದಾಪೂರ ಗ್ರಾಮದ ಕು.ಕೀರ್ತಿ ನಿಂಗಪ್ಪ ಕಮತ ಇವರಿಗೆ ಶಾಸಕರಾದ ಶ್ರೀ ರಮೇಶ ಜಾರಕಿಹೊಳಿ ಅವರು ಸನ್ಮಾನಿಸಿ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು, ಈ ಸಂದರ್ಭದಲ್ಲಿ ಭೀಮನಗೌಡ ಪೋಲೀಸಗೌಡರ,ಟಿ.ಆರ್ ಕಾಗಲ್,ಮಡ್ಡೆಪ್ಪ ತೋಳಿನವರ,ಬಿಇಓ ಜಿ.ಬಿ ಬಳಗಾರ,ಸುರೇಶ ಸನದಿ, ಲಕ್ಷ್ಮೀಕಾಂತ ಎತ್ತಿನಮನಿ …

Read More »

ಅಧಿಕಾರದ ಎಂಬ ಆಸೆಯೊಂದಿಗೆ ಯಾರೆಲ್ಲಾ ಕೋಟ್ ಹೊಲಿಸಿಕೊಂಡಿದ್ದಾರೋ ,ವಿಜಯೇಂದ್ರಗೆ ಸ್ಥಾನ ನೀಡುವ ವಿಚಾರಕ್ಕೆ ಯತ್ನಾಳ್ ವ್ಯಂಗ್ಯ, ನಿರಾಣಿ ವಿರುದ್ಧ ವಾಗ್ದಾಳಿ

ಬೆಂಗಳೂರು: ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರಗೆ (BY Vijayendra) ಪಕ್ಷ ಹಾಗೂ ಸರ್ಕಾರದಲ್ಲಿ ಸ್ಥಾನಮಾನ ನೀಡುವ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Bsanagouda Patil Yatnal) ವ್ಯಂಗ್ಯವಾಡಿದ್ದಾರೆ. ಅಧಿಕಾರ ಸಿಗುತ್ತದೆ ಎಂಬ ಆಸೆಯೊಂದಿಗೆ ಯಾರೆಲ್ಲಾ ಕೋಟ್ ಹೊಲಿಸಿಕೊಂಡಿದ್ದಾರೋ ಗೊತ್ತಿಲ್ಲ. ಬಿಜೆಪಿಯಿಂದ (BJP) ಬಹಳ ಜನ ಹೋಗ್ತಾರೆ ಎಂಬ ಮಾತು ಕೇಳಿಬಂದಿದ್ದು ಒಳ್ಳೇದಾಯ್ತು. ಸಚಿವ ಸೋಮಶೇಖರ್ ಸೇರಿ ಹಲವರು ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು ಎಂದರು. ಮಾಧ್ಯಮಗಳು …

Read More »

ಯತ್ನಾಳ್​-ಸಾಹುಕಾರ್​ ತೆರೆಮರೆ ತಂತ್ರ!

ಬೆಂಗಳೂರು: 2023ರ ಚುನಾವಣೆ ರಾಜ್ಯದಲ್ಲಿ ಹೊಸ ಪಕ್ಷಗಳ ಉದಯಕ್ಕೆ ನಾಂದಿ ಆಗುತ್ತಾ? 2013ರ ಘಟನೆಗಳು ಮರುಕಳಿಸುವ ಸೂಚನೆಗಳು ಸಿಗ್ತಿವೆ. ಸಾಹುಕಾರ್ ಮನೆಯಲ್ಲಿ ಹೊಸ ಪಕ್ಷ ರಚನೆ ಬಗ್ಗೆ ಚರ್ಚೆ ಆಗಿದೆ ಅನ್ನೋ ಸುದ್ದಿ ಹಬ್ಬಿದೆ. 2023ರ ಚುನಾವಣೆಗೆ ಹೊಸ ರಂಗು ಪಡೆಯಲಿದೆ. ರಾಜ್ಯದಲ್ಲಿ ಹೊಸ ಪಕ್ಷ ಉದಯವಾಗುವ ಬಗ್ಗೆ ರಾಜಕೀಯ ವಲಯದಲ್ಲಿ ರಿಂಗಣಿಸುತ್ತಿದೆ. ಸಾಹುಕಾರ್ ಮನೆಯಲ್ಲಿ ಹೊಸ ಪಕ್ಷ ಕಟ್ಟುವ ಚರ್ಚೆ ನಡೆದಿದೆ. ಯತ್ನಾಳ್ ಜೊತೆ ಸೇರಿ ಜಾರಕಿಹೊಳಿ ಹೊಸ …

Read More »

ಲೋಳಸುರ ಗ್ರಾಮದಲ್ಲಿ ಟ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಅಜ್ಜಿ ಸ್ಥಳದಲ್ಲಿ ಸಾವು..

ಗೋಕಾಕ ತಾಲೂಕಿನ ಲೋಳಸುರ ಗ್ರಾಮದಲ್ಲಿ ಟ್ರಾಕ್ಟರ್ ಹಾಯ್ದು ಮಹಿಳೆಯೊಬ್ಬರು ಸಾವಪ್ಪನ್ನಪಿದ ಘಟನೆ ನಡೆದಿದೆ.   ಗೋಕಾಕ ತಾಲೂಕಿನ ಲೋಳಸುರದಲ್ಲಿ ರಸ್ತೆ ದಾಟುವ ವೇಳೆ ಈ ಅವಘಡ ನಡೆದಿದ್ದು ಮಹಿಳೆ ಟ್ರಾಕ್ಟರ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮಹಿಳೆಯ ಹೆಸರು ಯಲ್ಲವ್ವ ಕೊಡ್ಲಿವಾಡ .‌ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ‌ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಆಸ್ಪತ್ರೆ ಮೇಲ್ದರ್ಜೆಗೇರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ವಿಜಯಪುರದ ಕಾಂಗ್ರೆಸ್ ಮುಖಂಡರು ಮನವಿ ಮಾಡಿದರು.

ವಿಜಯಪುರ: ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಜತೆಗೆ ವಿಜಯಪುರದಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸಿ ಆಸ್ಪತ್ರೆ ಮೇಲ್ದರ್ಜೆಗೇರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ವಿಜಯಪುರದ ಕಾಂಗ್ರೆಸ್ ಮುಖಂಡರು ಮನವಿ ಮಾಡಿದರು. ಬೆಂಗಳೂರಿನಲ್ಲಿ ಸಚಿವ ಡಾ.ಕೆ.ಸುಧಾಕರ್ ಅವರ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿದ ಮುಖಂಡರು, ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿರುವುದಕ್ಕೆ ಅವರನ್ನು ಅಭಿನಂದಿಸಿ ಮನವಿ ಪತ್ರ ಸಲ್ಲಿಸಿದರು. ದೇವನಹಳ್ಳಿ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿದೆ. ರಸ್ತೆಗಳು ಅಭಿವೃದ್ಧಿಯಾಗಬೇಕು. …

Read More »