Breaking News

Uncategorized

ಅಂತರ ರಾಜ್ಯ ಜಲ ವಿವಾದ: ಸರ್ವೋಚ್ಚ ನ್ಯಾಯಾಲಯದ ಪೀಠ ರಚನೆಗೆ ರೆಜಿಸ್ಟ್ರಾರ್ ಗೆ ಮನವಿ

ಅಂತರ ರಾಜ್ಯ ಜಲ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯಕ್ಕೆ ಸಂಬಂಧಪಟ್ಟ ಅಂತರಾಜ್ಯ ಜಲ ವಿವಾದಗಳ ಬಗ್ಗೆ ಸರ್ವೋಚ್ಚ ನ್ಯಾಲಯಗಳಲ್ಲಿ ಇದ್ದಂತಹ ಪ್ರಕರಣಗಳಿಗೆ ಸಿ.ಎಂ ಬಸವರಾಜ ಬೊಮ್ಮಾಯಿಯವರ ಅಧ್ಯಕ್ತೆಯಲ್ಲಿ ಇಂದು ಕಾನುನು ತಂಡ ಮತ್ತು ಅಧಿಕಾರಿಗಳ ಸಭೆಯಲ್ಲಿ ಕೃಷ್ಣಾ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ನ್ಯಾಯಪೀಠದ ಇಬ್ಬರೂ ಸದಸ್ಯರು ಹಿಂದೆ …

Read More »

ಸೇವಾದಳದಲ್ಲಿ ತರಬೇತಿ ಪಡೆದು ಸೇನೆ, ಪೊಲೀಸ್ ಇಲಾಖೆಗೆ ಆಯ್ಕೆಯಾದರೆ ನಮ್ಮ ಶ್ರಮ ಸಾರ್ಥಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಘಟಪ್ರಭ ಸೇವಾದಳದಲ್ಲಿ ತರಬೇತಿ ಪಡೆದು ಸೇನೆ, ಪೊಲೀಸ್ ಇಲಾಖೆಗೆ ಆಯ್ಕೆಯಾದರೆ ನಮ್ಮ ಶ್ರಮ ಸಾರ್ಥಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಯಾಗಲು ಕರೆ ಬೆಳಗಾವಿ: ಗ್ರಾಮೀಣ, ಬಡ ಮತ್ತು ಶೋಷಿತ ಸಮುದಾಯದ ಆಕಾಂಕ್ಷಿಗಳಿಗೆ 100 ಜನ ಸಾಮರ್ಥ್ಯದ ಪೂರ್ಣ ಪ್ರಮಾಣದ ಸೈನಿಕ ಹಾಗೂ ಪೊಲೀಸ್ ತರಬೇತಿ ಕೇಂದ್ರವನ್ನು ಯಮಕನಮರಡಿಯಲ್ಲಿ ನಿರ್ಮಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.   ಘಟಪ್ರಭದ ಡಾ.ಎನ್.ಎಸ್.ಹರ್ಡೀಕರ್ …

Read More »

ಸಿದ್ದಗಂಗಾ ಶ್ರೀ ʼಶಿವಕುಮಾರ ಸ್ವಾಮೀಜಿʼ 3ನೇ ವರ್ಷದ ಪುಣ್ಯಸ್ಮರಣೆ

ತುಮಕೂರು : ಇಂದು ಸಿದ್ದಗಂಗೆ ಮಠಾಧೀಶರಾಗಿದ್ದ ದಿವಂಗತ ಶ್ರೀ ಶಿವಕುಮಾರ ಸ್ವಾಮೀಜಿ ಅವರ 3ನೇ ವರ್ಷದ ಪುಣ್ಯ ಸ್ಮರಣೆಯಿದೆ. ಕೊರೊನಾ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿಯೇ ಸರಳವಾಗಿ ಆಚರಿಸಲು ಮಠದ ಆಡಳಿತ ಮಂಡಳಿ ನಿರ್ಧರಿಸಿದೆ. ಇನ್ನು ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಸಹ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಗದ್ದುಗೆಯ ದರ್ಶನ ಪಡೆಯಲಿದ್ದಾರೆ ಎನ್ನಲಾಗ್ತಿದೆ.

Read More »

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದು: ಅಧಿಕೃತ ಘೋಷಣೆ ಒಂದೇ ಬಾಕಿ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೊವಿಡ್ ಸಭೆಯಲ್ಲಿ ವೀಕೆಂಡ್ ಕಫ್ರ್ವೂವನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಒಂದೇ ಬಾಕಿಯಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಇಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಕೊವಿಡ್ ತಜ್ಞರ, ಸಚಿವರ ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಯಿತು. ಈ ವೇಳೆ ಹಲವು ಸಚಿವರು ವೀಕೆಂಡ್ ಕಫ್ರ್ಯೂವನ್ನು ಜಾರಿ ಮಾಡದಂತೆ ಹಲವು ಸಚಿವರು ಸಿಎಂ ರನ್ನು ಕೇಳಿಕೊಂಡರು. ಈ ವೇಳೆ ಸಚಿವರ ಮಾತಿಗೆ ಸಹಮತ …

Read More »

ಸಿದ್ಧಗಂಗಾ ಶ್ರೀಮಠದ ದಾಸೋಹ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಡಾ. ಶಿವಕುಮಾರ ಸ್ವಾಮಿಯವರ ಲಿಂಗೈಕ್ಯ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ದಾಸೋಹ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಠದ ವಿದ್ಯಾರ್ಥಿಗಳಿಗೆ ದಾಸೋಹ ಬಡಿಸಿದರು. ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಡಾ. ಶಿವಕುಮಾರ ಸ್ವಾಮಿಯವರ ಲಿಂಗೈಕ್ಯ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ದಾಸೋಹ ದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದರು. ಈ ವೇಳೆ ಶ್ರೀಮಠದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ದಾಸೋಹ ದಿನದ …

Read More »

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಪ್ರಾರಂಭವಾದ ಕೊವಿಡ್ ಸಭೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶುಕ್ರವಾರ ರಾಜ್ಯದ ಕೋವಿಡ್ ಸ್ಥಿತಿಗತಿ ಕುರಿತು ಗೃಹ ಕಚೇರಿ ಕೃμÁ್ಣದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಕೊವಿಡ್ ಪರಿಣಿತರು, ಸಚಿವರು, ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಸಚಿವರಾದ ಆರ್. ಅಶೋಕ್, ಗೋವಿಂದ ಕಾರಜೋಳ, ಡಾ. ಕೆ. ಸುಧಾಕರ್, ಆರಗ ಜ್ಞಾನೇಂದ್ರ, ಬಿ.ಸಿ. ನಾಗೇಶ್, …

Read More »

ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಶಾಸಕ ಅನಿಲ ಬೆನಕೆ ಶಿಕ್ಷಣ ಕ್ರಾಂತಿ

  ಬೆಳಗಾವಿ ಉತ್ತರ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ. ಅನಿಲ ಬೆನಕೆ ರವರು ಶತಮಾನ ಪೂರೈಸಿರುವ ಶಾಲೆಗಳ ಅಭಿವೃದ್ಧಿಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಅವರ ಸತತ ಪ್ರಯತ್ನದ ಫಲವಾಗಿ ಇಂದು ಮತಕ್ಷೇತ್ರದ ಶತಮಾನ ಪೂರೈಸಿರುವ 2 ಶಾಲೆಗಳಾದ ಸರಕಾರಿ ಸರದಾರ ಪ್ರೌಢ ಶಾಲೆಗೆ ರೂ. 15.00 ಲಕ್ಷ ಮತ್ತು ಕಣಬರ್ಗಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ರೂ. 16.50 ಲಕ್ಷ ಮಂಜೂರು ಮಾಡಿಸಿದ್ದರಿಂದ ಶಾಲೆಯ ಸಿಬ್ಬಂದಿಗಳು ಮತ್ತು ಅಲ್ಲಿನ ಆಡಳಿತ …

Read More »

ಬೆಳಗಾವಿ ಡಿಸಿ, ಹಿರೇಮಠ ಅವರಿಗೂ ಕೊರೋನಾ ಸೊಂಕು..

ಬೆಳಗಾವಿ- ಮಹಾಮಾರಿ ಕೊರೋನಾ ಈಗ ಸಾಮಾನ್ಯವಾಗಿದೆ ಯಾಕಂದ್ರೆ ಇದು ಎಲ್ಲರ ಬೆನ್ನಿಗೆ‌ ಬಿದ್ದಿದೆ.ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರಿಗೂ ಸೊಂಕು ತಗಲಿರುವದು ದೃಡವಾಗಿದೆ. ಜಿಲ್ಲಾಧಿಕಾರಿಗಳು ರ್ಯಾಪೀಡ್ ಟೆಸ್ಟ್ ಮಾಡಿಸಿದ್ದರು ಅದರಲ್ಲಿ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಅವರು RTPCR ಟೆಸ್ಟ್ ಮಾಡಿಸಿಕೊಂಡಿದ್ದರು ಅದರಲ್ಲಿಯೂ ರಿಪೋರ್ಟ್ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಆದ್ರೆ ಈ ಕುರಿತು ಜಿಲ್ಲಾಡಳಿತ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

Read More »

ಬಾಗಲಕೋಟೆ :ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಭಾರಿ ಸ್ಪೋಟಕ ವಶ

ಬಾಗಲಕೋಟೆ : ಜಿಲ್ಲೆಯ ವಿವಿಧೆಡೆ ಕಲ್ಲು ಗಣಿಗಾರಿಕೆಗೆ ಪೂರೈಸಲು ಬಳಸುವ ಭಾರಿ ಸ್ಪೋಟಕ ವಸ್ತುಗಳನ್ನು ತಾಲೂಕಿನ ಹೊನ್ನಾಕಟ್ಟಿಯ ತೋಟದ ಮನೆಯ ಶೆಡ್ ವೊಂದರಲ್ಲಿ ಸಂಗ್ರಹಿಸಿಟ್ಟಿದ್ದು, ಗುರುವಾರ ಪೊಲೀಸರು ಹಠಾತ್ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.   ತಾಲೂಕಿನ ಸಂಗಮ ಕ್ರಾಸ್ ಬಳಿಯ ಹೊನ್ನಾಕಟ್ಟಿ ಗ್ರಾಮದ ಗುರುನಾಥ ಹಾದಿಮನಿ ಎಂಬುವವರ ತೋಟದ ಮನೆಯ ಶೆಡ್‌ನಲ್ಲಿ ಈ ಭಾರಿ ಸ್ಪೋಟಕ ವಸ್ತುಗಳು ಪತ್ತೆಯಾಗಿದ್ದು, ಮಂಜುನಾಥ ಕಂಕಣಮೇಲಿ, ವಿಜಯ ನಾರಾ ಎಂಬುವವರು ಈ ಅಕ್ರಮ ಸ್ಟೋಟಕ ವಸ್ತುಗಳನ್ನು …

Read More »

ಲ್ಯಾಮಿಂಗ್ಟನ್ ಶಾಲೆಯಲ್ಲಿ ಸೋಂಕು ಪತ್ತೆ, ಶಾಲೆ ಸೀಲ್‍ಡೌನ್

ಕೊರೊನಾ ಮಹಾಮಾರಿ ಸೋಂಕು ಶಾಲೆಗೆ ಲಗ್ಗೆ ಇಟ್ಟಿದ್ದು, ಲ್ಯಾಮಿಂಗ್ಟನ್ ಶಾಲೆಯಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸೀಲ್‍ಡೌನ್ ಮಾಡಲಾಯಿತು. ಹೈಸ್ಕೂಲ್‍ನ ಕೆಲವು ವಿದ್ಯಾರ್ಥಿಗಳಿಗೆ, ಸೋಂಕು ಒಕ್ಕರಿಸಿದ್ದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಶಾಲೆಯನ್ನು ಮುಂದಿನ ಆದೇಶ ಬರುವವರೆಗೂ ಸೀಲ್‍ಡೌನ್ ಮಾಡಲಾಗಿದೆ. ಸ್ಥಳಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಶಾಲೆಯನ್ನು ಸೀಲ್‍ಡೌನ್ ಮಾಡಿದರು.

Read More »