ಮೈಸೂರು: ‘ಯಾವನ್ರೀ ಅವ ಪ್ರಮೋದ್ ಮುತಾಲಿಕ್? ಪಂಚಾಯಿತಿ ಸದಸ್ಯ ಅಥವಾ ಮುನ್ಸಿಪಾಲಿಟಿ ಸದಸ್ಯನಾಗಿ ಕೆಲಸ ಮಾಡಿದ ಅನುಭವ ಇದೆಯಾ? ಸರ್ಕಾರಕ್ಕೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಆಗಲ್ಲ ಅಂದರೆ ಏನರ್ಥ?’ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನ ಹೊರ ಸಹಾಕಿದರು. ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದ ಆಡಳಿತವನ್ನು ಕೆಲವು ಸಂವಿಧಾನಯೇತರ ಶಕ್ತಿಗಳು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವುದು ದುರದೃಷ್ಟಕರ. ರಾಜ್ಯದಲ್ಲಿ ಮುತಾಲಿಕ್ ಸರ್ಕಾರ ಇದೆಯಾ? ಆರ್‌ಎಸ್‌ಎಸ್ …
Read More »ಮಾಸ್ಕ್ ಎಲ್ಲಿ ಇಟ್ಟೀರಿ ಹುಡಕ್ಯಾಡರಿ ಇಂದಿಂದ ಮತ್ತ ಮಾಸ್ಕ್ ಹಾಕೊಬೇಕು: ರಾಜ್ಯ ಸರ್ಕಾರ
ಕೋವಿಡ್ ನಾಲ್ಕನೇ ಅಲೆಯ ಬಗ್ಗೆ ಚರ್ಚೆಯಾಗುತ್ತಿರುವುದು ಹಾಗೂ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವ ಕಾರಣ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿರುವ ಬಗ್ಗೆ ಸೋಮವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಜಾಗಗಳಲ್ಲಿ ಹಾಗೂ ಸಂಚಾರದ ವೇಳೆ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಿದ್ದು, ಅಂಥ ಕ್ರಿಯೆ ಕಂಡು ಬಂದರೆ …
Read More »ಸಾಲದ ಪಟ್ಟಿಯನ್ನು ವಾಟ್ಸ್ ಆಪ್ ಸ್ಟೇಟಸ್ ಗೆ ಹಾಕಿ ಆತ್ಮಹತ್ಯೆಗೆ ಶರಣಾದ ಯುವಕ
ಗುಂಡ್ಲುಪೇಟೆ (ಚಾಮರಾಜನಗರ): ಸಾಲಬಾಧೆ ತಾಳಲಾರದೆ ಯುವಕನೋರ್ವ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಶಿವಪುರದ ಕಲ್ಲುಕಟ್ಟೆ ಕೆರೆಯಲ್ಲಿ ಸೋಮವಾರ ನಡೆದಿದೆ. ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದ ವಿಜಯ್ (27) ಮೃತ ವ್ಯಕ್ತಿ. ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ತಾನು ಕೊಡಬೇಕಿರುವ ಸಾಲದ ಮಾಹಿತಿ ಹಾಗೂ ನನ್ನ ಸಾವಿಗೆ ನಾನೇ ಕಾರಣ, ನಮ್ಮ ಜಮೀನು ಮಾರಿ ಸಾಲಗಾರರಿಗೆ ನೀಡಿ ಎಂದು ಬರೆದುಕೊಂಡಿದ್ದಾನೆ.
Read More »ಪೋಸ್ಟ್‌ಮ್ಯಾನ್‍ನಿಂದಲೇ ಬಡ ಜನರ ಲಕ್ಷ, ಲಕ್ಷ ಹಣ ಗುಳುಂ
ಚಿಕ್ಕಬಳ್ಳಾಪುರ: ಬಡವರು, ದಿನ ಕೂಲಿ, ನಾಲಿ ಮಾಡಿ ತಮ್ಮ ಮಕ್ಕಳ ವಿದ್ಯಾಭ್ಯಾಸ, ಮದುವೆ ಸೇರಿದಂತೆ ಕಷ್ಟಕ್ಕೆ ಬೇಕಾಗುತ್ತೆ ಎಂದು ಪೋಸ್ಟ್ ಆಫೀಸ್‍ಗೆ 100-200 ರೂ.ಗಳನ್ನು ಠೇವಣಿ ಕಟ್ಟುತ್ತಿದ್ರು. ಆದ್ರೆ ಜನರ ಬಳಿ ದುಡ್ಡು ಪಡೀತಿದ್ದ ಪೋಸ್ಟ್‌ಮ್ಯಾನ್ ಪೋಸ್ಟ್ ಆಫೀಸ್‍ಗೆ ದುಡ್ಡು ಕಟ್ಟದೆ ತಾನೇ ಸ್ವಂತಕ್ಕೆ ಬಳಸಿಕೊಂಡು ಚೆನ್ನಾಗಿ ಮಜಾ ಮಾಡಿದ್ದಾನೆ. ಈ ವಿಷಯ ತಿಳಿದ ಜನರು ತಮ್ಮ ಹಣ ವಾಪಸ್ ನೀಡುವಂತೆ ಧರಣಿ ಕುಳಿತಿದ್ದಾರೆ. ಚಿಕ್ಕಬಳ್ಳಾಪುರ ನಗರದ ಅಂಚೆಕಚೇರಿಯಲ್ಲಿ ಈ ಘಟನೆ …
Read More »ಪುತ್ರನಿಗೆ ಈಜು ಕಲಿಸಲು ಹೋದ ತಂದೆ – ಇಬ್ಬರು ನೀರು ಪಾಲು
ಬೀದರ್: ಬಾವಿಯಲ್ಲಿ ಪುತ್ರನಿಗೆ ಈಜು ಕಲಿಸಲು ಹೋದ ತಂದೆ ಹಾಗೂ ಮಗ ನೀರು ಪಾಲಾದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ತಾಲೂಕಿನ ಬಗದೂರಿ ಗ್ರಾಮದಲ್ಲಿ ನಡೆದಿದೆ. 42 ವರ್ಷದ ತಂದೆ ಸೂರ್ಯಕಾಂತ್ ಚಂದ್ರಾಶಾ ಹಾಗೂ 16 ವರ್ಷದ ಮಗ ಅಭಿಷೇಕ್ ದುರಂತ ಸಾವನ್ನಪ್ಪಿದ್ದಾರೆ. ಬಾವಿಯಲ್ಲಿ ಅಭಿಷೇಕ್ ನಿಗೆ ಈಜು ಕಲಿಸಲು ಹೋಗಿದ್ದರು. ಈ ವೇಳೆ ಸೂರ್ಯಕಾಂತ್ ಮೊದಲು ಮಗ ಅಭಿಷೇಕ್‍ನನ್ನು ನೀರಿಗೆ ಇಳಿಸಿದ್ದು, ಆತ ಬಾವಿಯ ಕೆಸರಿನಲ್ಲಿ ಸಿಲುಕಿಕೊಂಡಿದ್ದಾನೆ. ಈ ಹಿನ್ನೆಲೆ …
Read More »FDA ನೇಮಕಾತಿಯಲ್ಲೂ ಅಕ್ರಮ- ಒಂದೇ ತಾಲೂಕಿನ 202 ಮಂದಿ ಆಯ್ಕೆ
ಕಲಬುರಗಿ: ಪಿಎಸ್‍ಐ(PSI), ಪಿಡಬ್ಲೂಡಿ(PWD) ಪರೀಕ್ಷೆ ಅಕ್ರಮ ಮಾದರಿಯಲ್ಲೇ ಎಫ್‍ಡಿಎ ಪರೀಕ್ಷೆಯಲ್ಲಿ ಸಹ ಅಕ್ರಮದ ವಾಸನೆ ಕೇಳಿಬರುತ್ತಿದೆ. ಎಫ್‍ಡಿಎ ಪರೀಕ್ಷೆಯಲ್ಲಿ ಅಫಜಲಪುರ ತಾಲೂಕಿನ 202 ಜನ ಆಯ್ಕೆಯಾಗಿರುವುದರಿಂದಲೇ ಇದೀಗ ಅಕ್ರಮ ವಿಚಾರ ಬಯಲಾಗಿದೆ. 2021 ರಲ್ಲಿ ನಡೆದ ಎಫ್‍ಡಿಎ ಪರೀಕ್ಷೆ ನಡೆದಿತ್ತು. ಇದರಲ್ಲಿ ಪಿಎಸ್‍ಐ/ಪಿಡಬ್ಲ್ಯೂಡಿ ಪರೀಕ್ಷೆಯಂತೇ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಅಕ್ರಮ ಎಸಗಲಾಗಿತ್ತು. ಒಂದೇ ತಾಲೂಕಿನ 202 ಜನ ಆಯ್ಕೆಯಾಗೋದು ಎಂಟನೇ ಅದ್ಭುತವೇ. ಆಯ್ಕೆಯಾದ 202 ಜನರಲ್ಲಿ 11ಜನ ಸ್ಟೇಟ್ ಟಾಪರ್ಸ್ ಕೂಡ …
Read More »ಸರ್ಕಾರ ಕತ್ತೆ ಕಾಯ್ತಿದ್ಯಾ? ಕಡ್ಲೆಪುರಿ ತಿಂತಿದ್ಯಾ? ಆರೋಪಿ ವಿರುದ್ಧ FIR ದಾಖಲಿಸಿಲ್ಲ ಯಾಕೆ – ಪ್ರಿಯಾಂಕ್ ಖರ್ಗೆ ಪ್ರಶ್ನೆ
ಬೆಂಗಳೂರು: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ವಿಚಾರವಾಗಿ ಸರ್ಕಾರ ಕತ್ತೆ ಕಾಯ್ತಿದೆಯಾ? ಕಡ್ಲೆಪುರಿ ತಿನ್ನುತ್ತಿದೆಯಾ? ಕೋಲಾಟ ಆಡುತ್ತಿದೆಯಾ? ನನ್ನ ಬಳಿ ಇನ್ಯಾವ ಸಾಕ್ಷಿ ಕೇಳುತ್ತಿದ್ದೀರಾ? ಆಡಿಯೋ ರಿಲೀಸ್ ಆಗಿ ಮೂರು ದಿನವಾದರೂ ಆರೋಪಿ ವಿರುದ್ಧ ಯಾಕೆ ಎಫ್‍ಐಆರ್ ದಾಖಲಿಸುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಸಂಜೆ ನನ್ನ ಮನೆಗೆ ಸಿಐಡಿಯವರು ಒಂದು ನೋಟಿಸ್ ಕೊಟ್ಟಿದ್ದಾರೆ. ಅದರಲ್ಲಿ ಸುದ್ದಿಗೋಷ್ಠಿ …
Read More »ಸಿದ್ದರಾಮಯ್ಯ ಪರ MLC ಹೆಚ್.ವಿಶ್ವನಾಥ್ ಬ್ಯಾಟಿಂಗ್
ಮೈಸೂರು: ಸಿಎಂ ಆದವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು. ವಿಪಕ್ಷ ನಾಯಕ ಸಿದ್ದರಾಮಯ್ಯ 5 ವರ್ಷ ಯಶಸ್ವಿ ಆಡಳಿತ ನಡೆಸಿದವರು, ಹುಣಸೂರಿನಿಂದ ಸ್ಪರ್ದಿಸಿದರೆ ಅವರನ್ನು ಗೆಲ್ಲಿಸುತ್ತೇವೆ ಎಂದು ಹೇಳುವ ಮೂಲಕ ಎಂಎಲ್ ಸಿ ಹೆಚ್.ವಿಶ್ವನಾಥ್ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, ಸಿದ್ದರಾಮಯ್ಯ ಯಶಸ್ವಿಯಾಗಿ ಆಡಳಿತ ನಡೆಸಿದವರು, ಮುಂಬರುವ ಚುನಾವಣೆಗೆ ಸಿದ್ದರಾಮಯ್ಯ ಹುಣಸೂರಿನಿಂದ ಸ್ಪರ್ಧೆ ಮಾಡಿದರೆ ಅವರನ್ನು ಗೆಲ್ಲಿಸುತ್ತೇವೆ. ಅಂತ ಶೆಟ್ರ ಮಂಜನನ್ನೇ ಗೆಲ್ಲಿಸಿದ್ವಿ, ನಿಮ್ಮನ್ನು ಗೆಲ್ಲಿಸಲ್ವಾ? …
Read More »ಈ ಗ್ರಾಮದ ಮನೆಗಳಿಗೆ ಬಾಗಿಲೇ ಇಲ್ಲ…!
ಮುಂಬೈ: ಒಂದು ಊರಿದೆ. ಆ ಊರಿನ ಮನೆಗಳಿಗೆ ಬಾಗಿಲೂ ಇಲ್ಲ, ಬೀಗವೂ ಹಾಕುವುದಿಲ್ಲ. ಹೌದು ಬರೋಬ್ಬರಿ 4000 ಮಂದಿ ವಾಸಿಸುತ್ತಿರುವ ಮಹಾರಾಷ್ಟ್ರದ ಶನಿ ಶಿಂಗ್ನಾಪುರದಲ್ಲಿ ಇದುವರೆಗೇ ಯಾವ ಮನೆಗೂ ಬಾಗಿಲೂ ಇಲ್ಲ, ಬೀಗವೂ ಇಲ್ಲ ಎಂದರೆ ಆಶ್ಚರ್ಯವಾದರೂ ಸತ್ಯ. ʼಸಬ್ ಭಗವಾನ್ ಭರೋಸೆ’ ಎಂಬ ಮಾತನ್ನು ಈ ಗ್ರಾಮದ ಜನರು ಅಕ್ಷರಶಃ ಅನುಸರಿಸುತ್ತಿದ್ದಾರೆ. ಏಕೆಂದರೆ ಮಹಾರಾಷ್ಟ್ರದ ಶನಿ ಶಿಂಗ್ನಾಪುರದಲ್ಲಿನ ಮಂದಿ ಹಿಂದೂ ದೇವತೆಯಾದ ಶನಿ (ಶನಿ ಗ್ರಹದ ಅಧಿಪತಿ) ಯಲ್ಲಿ ಅಪಾರ …
Read More »ಶಾಲೆಯಲ್ಲೇ ಶಿಕ್ಷಕಿಯೊಂದಿಗೆ ಸಂಭೋಗ ನಡೆಸಿದ ಪ್ರಾಂಶುಪಾಲ ಅಮಾನತು
ಛತ್ತೀಸ್‌ಗಢ: ಛತ್ತೀಸ್‌ಗಢದ ಕಂಕೇರ್‌ನ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲ ಶಾಲೆಯಲ್ಲೇ ಶಿಕ್ಷಕಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದು, ಅಮಾನತುಗೊಂಡಿದ್ದಾನೆ. ಗ್ರಾಮದ ಕೆಲವರು ಕುಟುಕು ಕಾರ್ಯಾಚರಣೆ ನಡೆಸಿ ಶಿಕ್ಷಕನ ಕಾಮಚೇಷ್ಟೆಯನ್ನು ವಿಡಿಯೋ ಮಾಡಿದ್ದಾರೆ. ಪ್ರಾಂಶುಪಾಲ ಮತ್ತು ಮಹಿಳಾ ಸಿಬ್ಬಂದಿಯ ಈ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾಲೆಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಈ ಹಿಂದೆಯೇ ಕೆಲ ಗ್ರಾಮಸ್ಥರು ಆರೋಪಿಸಿದ್ದರು. ಇದೀಗ ಅವರೇ ವಿಡಿಯೋ ಸೆರೆ ಹಿಡಿದು ಕೃತ್ಯ ಬಯಲು ಮಾಡಿದ್ದಾರೆ. …
Read More »