ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡಿದ ಪ್ರಮಾಣಪತ್ರದ ಆಧಾರದ ಮೇಲೆ ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ಕಾರ್ಡ್ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಅವರಿದ್ದ ಪೀಠವು, ಲೈಂಗಿಕ ಕಾರ್ಯಕರ್ತರ ಲಿಂಗದ ಗೌಪ್ಯತೆಯನ್ನು ಉಲ್ಲಂಘಿಸಬಾರದು. ಅವರ ಗುರುತನ್ನು ಬಹಿರಂಗಪಡಿಸಬಾರದು. ಪ್ರತಿಯೊಬ್ಬ ವ್ಯಕ್ತಿಯನ್ನೂ ಗೌರವದಿಂದ ಕಾಣಬೇಕಿರುವುದು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದೆ ಎಂದು ಹೇಳಿದೆ. ಯುಐಡಿಎಐ ಪ್ರಮಾಣಪತ್ರದ ಆಧಾರದ ಮೇಲೆ …
Read More »ದಿಗ್ಗಜ ನಟರ ವಿರುದ್ಧ ದೂರು ದಾಖಲು
ಸಮಾಜಕ್ಕೆ ಹಾನಿ ಮಾಡುವಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟ, ನಟಿಯರು ಹಾಗೂ ಸಿಲೆಬ್ರಿಟಿಗಳ ಬಗ್ಗೆ ಅಲ್ಲಲ್ಲಿ ವಿರೋಧಗಳು ವ್ಯಕ್ತವಾಗುತ್ತಿವೆ. ಕನ್ನಡ ಸಿನಿಮಾ ರಂಗದಲ್ಲಿ ಹಣಕ್ಕಾಗಿ ಆನ್‌ಲೈನ್ ಆಟಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡುತ್ತಿದ್ದ ಕಲಾವಿದರ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈಗಲೂ ಅದು ಮುಂದುವರಿದಿದೆ. ಹಾಗೆಯೇ ಈ ವಿರೋಧದ ಅಲೆಯು ಬಾಲಿವುಡ್‌ನಲ್ಲೂ ಮುಂದುವರಿದಿದೆ. ಆನ್‌ಲೈನ್ ಜೂಜು, ತಂಬಾಕು ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟರ ಮೇಲೆ ಮುಂಬೈನಲ್ಲಿ ದೂರು ಕೊಟ್ಟಿದ್ದು, …
Read More »ಬೆಳಗಾವಿ: ವಿಚಕ್ಷಣೆಯಲ್ಲಿ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ
ಬೆಳಗಾವಿ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಆಯೋಜಿಸಿರುವ ಸ್ಪರ್ಧಾತ್ಮಕ ಪರೀಕ್ಷೆಯು ನಗರವೂ ಸೇರಿದಂತೆ ಜಿಲ್ಲೆಯ 52 ಕೇಂದ್ರಗಳಲ್ಲಿ ಶನಿವಾರ ಆರಂಭಗೊಂಡಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 11,199 ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 5,967 ಅಭ್ಯರ್ಥಿಗಳು ನೋಂದಾಯಿಸಿದ್ದಾರೆ. ಪಿಎಸ್‌ಐ ನೇಮಕಾತಿ ಅಕ್ರಮದ ಹಿನ್ನೆಲೆಯಲ್ಲಿ ಭಾರಿ ನಿಗಾ ಹಾಗೂ ವಿಚಕ್ಷಣೆಯಲ್ಲಿ ಈ ಪರೀಕ್ಷೆ ನಡೆಸಲಾಗುತ್ತಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪರೀಕ್ಷಾ ಚಟುವಟಿಕೆಗಳ ರೆಕಾರ್ಡಿಂಗ್ ಮಾಡಲಾಗುತ್ತಿದೆ. ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಮೊದಲಾದ …
Read More »ಮೇ 21, 22ರಂದು ಭಾರೀ ಮಳೆಯ ಮುನ್ಸೂಚನೆ: ಹವಾಮಾನ ಇಲಾಖೆ
ಉಡುಪಿ : ಕರಾವಳಿಯ ಜಿಲ್ಲೆಗಳಲ್ಲಿ ಮೇ 21 ಮತ್ತು 22ರಂದು ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿಯ ತೀರದಲ್ಲಿ ಗಂಟೆಗೆ 40ರಿಂದ 60 ಕಿ.ಮೀ. ವೇಗದ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಮುಂದಿನ 24 ಗಂಟೆಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ನಾಳೆ 115ಮಿ.ಮೀಗೂ ಅಧಿಕ ಮಳೆ ಸುರಿಯುವ ಸಾದ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅದೇ ರೀತಿ …
Read More »ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ: ಇನ್ಮುಂದೆ ಸಿಗಲಿದೆ ‘ಬಲವರ್ಧಿತ ಅಕ್ಕಿ’
ಹಾವೇರಿ: ಪಡಿತರ ಚೀಟಿದಾರರಿಗೆ ಮೇ-2022ಮಾಹೆಗೆ ಪೋಷಕಾಂಶಯುಕ್ತ ಬಲವರ್ಧಿತ ಅಕ್ಕಯನ್ನು ಸರ್ಕಾರದಿಂದ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಹಾವೇರಿ ತಹಶೀಲ್ದಾರ ಎನ್.ಬಿ.ಗೆಜ್ಜಿ ಅವರು ತಿಳಿಸಿದ್ದಾರೆ. ಅಂತ್ಯೋದಯ ಪಡಿತರ ಚೀಟಿ ಹೊಂದಿದ ಪ್ರತಿ ಪಡಿತರ ಚೀಟಿಗೆ ಉಚಿತವಾಗಿ 15 ಕೆ.ಜಿ.ಜೋಳ ಹಾಗೂ 20 ಕೆಜಿ ಅಕ್ಕಿ ಮತ್ತು ಪಿಎಂಕೆಎವೈ ಯೋಜನೆಯಡಿ ಉಚಿತವಾಗಿ ಪ್ರತಿ ಸದಸ್ಯರಿಗೆ 5 ಕೆ.ಜಿ.ಅಕ್ಕಿ ಬಿಡುಗಡೆ ಮಾಡಲಾಗಿದೆ. ಪಿ.ಎಚ್.ಎಚ್. (ಬಿಪಿಎಲ್) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ಎನ್‍ಎಫ್‍ಎಸ್‍ಎ ಯೋಜನೆಯಡಿ ಉಚಿತವಾಗಿ …
Read More »ವಿಧಾನಪರಿಷತ್ ಚುನಾವಣೆ| ಮುಹೂರ್ತ ಪ್ರಕಾರ ನಾಮಪತ್ರ ಸಲ್ಲಿಸಿದ ಹಣಮಂತ ನಿರಾಣಿ
ಬೆಳಗಾವಿ: ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಾಯವ್ಯ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಜೂನ್ 13ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸದಸ್ಯ ಹಣಮಂತ ನಿರಾಣಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯಕ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರಿಗೆ 2 ಸೆಟ್ ನಾಮಪತ್ರಗಳನ್ನು ಶುಕ್ರವಾರ ಸಲ್ಲಿಸಿದರು. ಅವರಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮುಖಂಡ ಆರ್.ಎಸ್. ಮುತಾಲಿಕ್, ಪಕ್ಷದ ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ ಮೊದಲಾದವರು …
Read More »ರಾಜ್ಯದ ಹಲವೆಡೆ ಧಾರಾಕಾರ ಮಳೆ: ಮೂರು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ
ಬೆಂಗಳೂರು/ ಮೈಸೂರು: ರಾಜ್ಯದ ಹಲವೆಡೆ ಗುರುವಾರವೂ ಧಾರಾಕಾರ ಮಳೆ ಮುಂದುವರಿದಿದ್ದು, ವಿವಿಧೆಡೆ ಜನ ಜೀವನ ಅಸ್ತವ್ಯಸ್ತವಾಗಿದೆ. ಕೆಲವೆಡೆ ಕೆರೆ ಏರಿಗಳು ಒಡೆದಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿವೆ. ಕೃಷಿ ಜಮೀನಿನಲ್ಲಿ ನೀರು ನಿಂತು ಬೆಳೆಗಳು ಕೊಳೆಯಲಾರಂಭಿಸಿವೆ. ಮಡಿಕೇರಿ- ಚಟ್ಟಳ್ಳಿ ರಸ್ತೆ ಬದಿಯ ನಾಲ್ಕು ಸ್ಥಳದಲ್ಲಿ ಮಣ್ಣು ಕುಸಿದು ಅಪಾಯದ ಮುನ್ಸೂಚನೆ ನೀಡುತ್ತಿದೆ. ಸಿಡಿಲು ಬಡಿದು ಬೀದರ್ ತಾಲ್ಲೂಕಿನ ಚಿಮಕೋಡ ಗ್ರಾಮದ ರೈತ ಮಹಿಳೆ ವಿದ್ಯಾವತಿ ನರಸಪ್ಪ ಟೊಳ್ಳೆ (52) ಮತ್ತು ಯಾದಗಿರಿ ಜಿಲ್ಲೆಯ …
Read More »ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸಂಜನಾ ಗಲ್ರಾನಿ..!
‘ಗಂಡ ಹೆಂಡತಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡ ನಟಿ ಸಂಜನಾ ಗಲ್ರಾನಿ. ಡ್ರಗ್ಸ್ ಪ್ರಕರಣದಲ್ಲಿ ಹೆಸರು ತಳುಕು ಹಾಕಿಕೊಂಡ ಹಿನ್ನಲೆಯಲ್ಲಿ, ಗಂಡ ಹೆಂಡತಿ ನಾಯಕಿಯ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅದೇ ಸಮಯದಲ್ಲಿ ಬಹುದಿನದ ಗೆಳೆಯ, ಅಜೀಜ್ ಪಾಷಾ ಜೊತೆ ಸಂಜನಾ ಗಲ್ರಾನಿ ಮದುವೆ ಮಾಡಿಕೊಂಡಿದ್ದರು. ಇದರ ಫಲವಾಗಿ ಸಂಜನಾ ಗಲ್ರಾನಿ ಅವರಿಗೆ ಇಂದು, ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ …
Read More »ಕರ್ತವ್ಯ ಲೋಪ ಸಹಿಸೆನು: ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ
ಬೆಂಗಳೂರು: ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಬುಧವಾರ ನಗರದ ಎಂಟು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಗಳು, ಎಸಿಪಿಗಳು ಹಾಗೂ ಇನ್‌ಸ್ಪೆಕ್ಟರ್‌ಗಳ ಮೊದಲ ಸಭೆ ನಡೆಸಿದ್ದಾರೆ. ಈ ವೇಳೆ ಈ ಹಿಂದಿನ ನಗರ ಪೊಲೀಸ್ ಆಯಕ್ತ ಕಮಲ್ ಪಂತ್ ಅವರು ಏನೆಲ್ಲ ಯೋಜನೆಗಳು ಹಾಗೂ ಕಾನೂನು ಸುವ್ಯವಸ್ಥೆ ತಡೆಯಲು ರೂಪಿಸಿರುವ ತಂತ್ರಗಳು ಯಥಾ ಪ್ರಕಾರ ಮುಂದುವರಿಸಬೇಕು. ಎಲ್ಲ ಮಾದರಿಯ ಅಪರಾಧಗಳ ನಿಯಂತ್ರಣಕ್ಕೆ ಸೂಚಿಸಿರುವ ತಂತ್ರಗಳು ಈಗಲೂ ಮುಂದುವರಿಯಲಿವೆ. ಅದರಲ್ಲಿ …
Read More »ಹೊಸ ಮಾದರಿಯಲ್ಲಿ ಭಾವಿ ಪತಿಗಾಗಿ ಹುಡುಕಾಟ ಫಲಕವನ್ನು ಹಿಡಿದು ಬೀದಿ ಬೀದಿಯಲ್ಲಿ ಮಹಿಳೆ ಅಲೆದಾಡುತ್ತಿದ್ದಾಳೆ.
ದುಬೈ: ಸುಡಾನ್ ಮೂಲದ ಯುವತಿಯೊಬ್ಬಳು ಹೊಸ ಮಾದರಿಯಲ್ಲಿ ಭಾವಿ ಪತಿಗಾಗಿ ಹುಡುಕಾಟ ನಡೆಸುತ್ತಿದ್ದಾಳೆ. ವರ ಬೇಕು ಎಂಬ ಭಿತ್ತಿ ಫಲಕವನ್ನು ಹಿಡಿದು ಸುಡಾನ್ನ ರಾಜಧಾನಿ ಖಾರ್ಟೂಮ್ನ ಬೀದಿ ಬೀದಿಯಲ್ಲಿ ಮಹಿಳೆ ಅಲೆದಾಡುತ್ತಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದೆ. ಅದರಲ್ಲಿ ಯುವತಿ ಟ್ರಾಫಿಕ್ ಸಿಗ್ನಲ್ ಬಳಿ ಭಿತ್ತಿ ಫಲಕ ಹಿಡಿದು ನಿಂತಿದ್ದಾಳೆ. ನನಗೆ ವರ ಬೇಕಿದ್ದಾನೆ. ನಾನು ಮದುವೆಯಾಗಬೇಕಿದೆ. ನಾನು ಬಹುಪತ್ನಿತ್ವ ಸ್ವೀಕರಿಸಲೂ ಸಿದ್ಧಳಾಗಿದ್ದೇನೆ ಎಂಬ ಬರಹ ಯುವತಿ ಹಿಡಿದಿರುವ ಭಿತ್ತಿ …
Read More »