ಬೆಳಗಾವಿ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಂಗವಿಕಲರಿಗೆ ಕೆಲಸ ನೀಡುವುದಕ್ಕೆ ಆದ್ಯತೆ ಕೊಡಲಾಗುತ್ತಿದೆ. 18 ವರ್ಷ ಮೇಲ್ಪಟ್ಟ ಅಶಕ್ತರಿಗೆ ಉದ್ಯೋಗ ಒದಗಿಸಿ, ಅವರಿಗೆ ಸ್ವಾವಲಂಬಿ ಬದುಕು ನಡೆಸುವುದಕ್ಕೆ ನೆರವಾಗಲು ಯೋಜನೆ ಬಳಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಗ್ರಾಮೀಣ ಮತ್ತು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು, ಐಇಸಿ ಸಂಯೋಜಕರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಏ.1ರಿಂದ ಕೂಲಿಯನ್ನು ₹289ರಿಂದ ₹309 ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ನಾಲೆಗಳ ನಿರ್ಮಾಣ, ರಾಜಕಾಲುವೆಗಳ ಅಭಿವೃದ್ಧಿ, …
Read More »ನಕಲಿ ಜಾತಿ ಪ್ರಮಾಣಪತ್ರ: ವಿಚಾರಣೆಗೆ ಹಾಜರಾಗದ ಕೆಂಪಯ್ಯ
ಬೆಂಗಳೂರು, ಏಪ್ರಿಲ್ 26: ಕೆಂಪಯ್ಯನವರಿಗೆ ವಿಚಾರಣೆಗೆ ಹಾಜರಾಗುವಂತೆೆ ನೋಟೀಸ್ ನೀಡಲಾಗಿತ್ತು. ಆದರೆ ಕೆಂಪಯ್ಯನವರು ವಿಚಾರಣೆಗೆ ಹಾಜರಾಗಿಲ್ಲ ಡಿಐಜಿ ಡಾ. ರವೀಂದ್ರನಾಥ್ ಹೇಳಿದ್ದಾರೆ. ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯರ ಸುಳ್ಳು ಜಾತಿ ಪತ್ರ ಪ್ರಕರಣದ ಕಡತವೇ ಕಣ್ಮರೆಯಾಗಿತ್ತು. ಈ ಪ್ರಕರಣದ ಕಡತವನ್ನು ಹುಡುಕಿಸಲಾಗಿದೆ. ಕಡತ ನಾಪತ್ತೆಯಾಗಲು ಕಾರಣವಾಗಿದ್ದ ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಕೆಂಪಯ್ಯನವರಿಗೆ ವಿಚಾರಣೆಗೆ ಹಾಜರಾಗುವಂತೆೆ ನೋಟೀಸ್ ನೀಡಲಾಗಿತ್ತು. ಆದರೆ, ಕೆಂಪಯ್ಯನವರು ವಿಚಾರಣೆಗೆ ಹಾಜರಾಗಿಲ್ಲ. ಕೆಂಪಯ್ಯನವರ ಮನೆಗೆ ನೋಟೀಸ್ ಅಂಟಿಸಿ …
Read More »ಹುಬ್ಬಳ್ಳಿ ಗಲಭೆ – ಪುಂಡರ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಕ್ಕೆ ಪ್ಲ್ಯಾನ್
ಹುಬ್ಬಳ್ಳಿ: ನಗರದ ಗಲಭೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಪೈಕಿ 40 ಕ್ಕೂ ಹೆಚ್ಚು ಪುಂಡರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಪೊಲೀಸರು ಚಿಂತನೆ ನಡೆಸಿದ್ದಾರೆ. ಹುಬ್ಬಳ್ಳಿ ಪೊಲೀಸರು 40 ಜನ ಆರೋಪಿಗಳ ವಿರುದ್ಧ ರೌಡಿ ಶೀಟ್ ಓಪನ್ ಮಾಡಲು ಮುಂದಾಗಿದ್ದಾರೆ. ಗಲಭೆಯ ಸೂತ್ರಧಾರಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸಲು ಸಿದ್ಧತೆ ನಡೆಸಿದ್ದಾರೆ. 20 ಆರೋಪಿಗಳ ವಿರುದ್ಧ ಕಮ್ಯೂನಲ್ ಗೂಂಡಾಗಳು ಎಂದು ಗುರುತಿಸಲು ಚಿಂತನೆ ನಡೆಸಿದ್ದಾರೆ.
Read More »ಗುಣಮುಖವಾಗದ ಕಾಯಿಲೆ, ಮದುವೆಯಾಗದ ಕೊರಗು : ನೇಣು ಬಿಗಿದು ಯುವಕ ಆತ್ಮಹತ್ಯೆ
ಹುನಗುಂದ : ಪಟ್ಟಣದ ಅಮರಾವತಿ ರಸ್ತೆಯಲ್ಲಿರುವ ಇಂಡಿಯನ್ ಗ್ಯಾಸ್ ಗೋಡಾನ್ ಕಪೌಂಡ್ ನ ಒಳಗಡೆಯಲ್ಲಿರುವ ತೆಂಗಿನಮರಕ್ಕೆ ಯುವಕನೊರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಬಸವರಾಜ ಸಿದ್ರಾಮಪ್ಪ ಕೊಡಗಲಿ (27) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ. ಘಟನೆಯ ವಿವರ : ಅಮರಾವತಿ ಗ್ರಾಮದ ಯುವಕ ಬಸವರಾಜ ಸಿದ್ರಾಮಪ್ಪ ಕೊಡಗಲಿ ಕೆಲವು ತಿಂಗಳಿಂದ ಬಿಳಿ ಕಾಮಲೆ ರೋಗದಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆದರೂ ಗುಣಮುಖವಾಗದೇ ಇರೋದು ಮತ್ತು ಕಳೆದ ಎರಡು ವರ್ಷದಿಂದ …
Read More »ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ : ಮಿಶ್ರತಳಿ ಹಸು, ಎಮ್ಮೆ ಖರೀದಿಗೆ 20 ಸಾವಿರ ರೂ. ಸಬ್ಸಿಡಿ
ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಹೈನುಗಾರಿಕೆ ಮಾಡುವ ರೈತರ ಮುಖ್ಯಮಂತ್ರಿ ಅಮೃತ ಜೀವನ ಯೋಜನೆಯಡಿ ಮಿಶ್ರತಳಿ ಹಸು, ಎಮ್ಮೆ ಖರೀದಿಗೆ 20 ಸಾವಿರ ರೂ. ಸಬ್ಸಿಡಿ ನೀಡಲಿದೆ. ಮುಖ್ಯಮಂತ್ರಿ ಅಮೃತ ಜೀವನ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 20665 ರೂಪಾಯಿ ಸಹಾಯಧನ, ಸಾಮಾನ್ಯ ವರ್ಗದ ರೈತರಿಗೆ 15,500 ರೂಪಾಯಿ ಸಹಾಯಧನ ನೀಡಲಾಗುತ್ತದೆ. ಸಹಾಯಧನದ ಜೊತೆಗೆ ಸಾಲಸೌಲಭ್ಯ ನೀಡಲಿದೆ. ಪರಿಶಿಷ್ಟ …
Read More »ದೇಶದಲ್ಲಿ ಕೊರೊನಾ 4 ನೇ ಅಲೆ ಭೀತಿ : ಇಂದು ಸಿಎಂಗಳ ಜೊತೆಗೆ ಪ್ರಧಾನಿ ಮೋದಿ `ಕೋವಿಡ್ ಕಂಟ್ರೋಲ್ ಮೀಟಿಂಗ್’
ನವದೆಹಲಿ: ಕೋವಿಡ್ ಪ್ರಕರಣಗಳು ( Covid-19 cases ) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ( Prime Minister Narendra Modi ) ಮಹತ್ವದ ಕೊರೋನಾ ನಿಯಂತ್ರಣ ಸಭೆಯನ್ನು ನಡೆಸಲಿದ್ದಾರೆ. ಈ ಬಗ್ಗೆ ಪ್ರಧಾನಿ ಕಚೇರಿ ಮೂಲಗಳಿಂದ ಖಚಿತ ಮಾಹಿತಿ ನೀಡಿದ್ದು, ದೇಶಾದ್ಯಂತ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ …
Read More »ಪಿಎಸ್ಐ ನೇಮಕಾತಿ ಹಗರಣ: ಅಕ್ರಮಕ್ಕೆ ಬಳಸ್ತಿದ್ದ ಬ್ಲೂಟೂತ್ ಡಿವೈಸ್ ಕುರಿತ ಸ್ಫೋಟಕ ಮಾಹಿತಿ ಬಹಿರಂಗ
ಕಲಬುರಗಿ: 545 ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣ ಬಗೆದಷ್ಟೂ ಆಳ ಎಂಬಂತಾಗಿದೆ. ಈ ಪ್ರಕರಣದ ಹಲವರ ಕೈವಾಡವಿದ್ದು, ಒಂದೊಂದಾಗಿ ಬಯಲಾಗುತ್ತಿದೆ. ಇದೀಗ ಇದೇ ಪ್ರಕರಣದಕ್ಕೆ ಸಂಬಂಧಿಸಿದ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅದೇನೆಂದರೆ, ಪರೀಕ್ಷೆಯಲ್ಲಿ ಅಕ್ರಮ ಎಸಗಲು ಅಭ್ಯರ್ಥಿಗಳು ಬಳಸುತ್ತಿದ್ದ ಬ್ಲೂಟೂತ್ ಅನ್ನು ಒಡಿಶಾದಲ್ಲಿ ಖರೀದಿಸಲಾಗಿದೆ ಎಂಬ ಸಂಗತಿ ಬಯಲಾಗಿದೆ. ಅಕ್ರಮದಲ್ಲಿ ಭಾಗಿಯಾಗಿದ್ದವರೆಲ್ಲ ಬ್ಲೂಟೂತ್ ಬಳಸಿ ಪರೀಕ್ಷೆ ಎದುರಿಸಿರುವುದು ತನಿಖೆಯಿಂದ ಬಯಲಾಗುತ್ತಿದೆ. ಅಭ್ಯರ್ಥಿಗಳು ಬಳಸಿದ ಬ್ಲೂಟೂತ್ಗಳನ್ನು ಓಡಿಶಾದಲ್ಲಿ ಖರೀದಿ ಮಾಡಲಾಗಿದೆ. …
Read More »ಇಫ್ತಾರ್ ಕೂಟ ಟೋಪಿ ಹಾಕಲು ನಿರಾಕರಿಸಿದ ಸಂಸದ ಪ್ರಜ್ವಲ್ ರೇವಣ್ಣ
ಹುಣಸೂರು: ಹುಣಸೂರಿನಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ಸಂಸದ ಪ್ರಜ್ವಲ್ ರೇವಣ್ಣ ಟೋಪಿ ಹಾಕಿಸಿಕೊಳ್ಳಲು ಹಿಂದೇಟು ಹಾಕಿದರು. ಕೆಲ ಮುಸ್ಲಿಂ ಯುವಕರು ಟೋಪಿ ಹಾಕಲು ಮುಂದಾದಾಗ ನಯವಾಗಿಯೇ ಕೈಯಲ್ಲಿ ಹಿಡಿದುಕೊಂಡು ಮುಂದೆ ನಡೆದರು. ಈ ವೇಳೆ ಸಾಮೂಹಿಕ ಉಪಾಹಾರ ಸೇವಿಸುವಂತೆ ಮಾಡಿದ ಮನವಿಗೆ ಎಲ್ಲರ ಜತೆಯಲ್ಲಿ ಊಟಕ್ಕೆ ಕುಳಿತ ಪ್ರಜ್ವಲ್ ರೇವಣ್ಣ, ಅನಂತರ ಸಿಹಿ ತಿಂದು ಊಟ ನಿರಾಕರಿಸಿದರು.
Read More »“ನಾನು ಏನು ಆಗಲ್ಲ ಅಂದ್ಮೇಲೆ ತಕರಾರು ಯಾಕೆ” : ಸಿಎಂ ಎದುರು ಶಾಸಕ ಯತ್ನಾಳ್ ಅಸಮಾಧಾನ
ವಿಜಯಪುರ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದೆಯೇ ವೇದಿಕೆಯಲ್ಲಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತ ಪಡಿಸಿದ ಘಟನೆ ನಡೆದಿದೆ. ಸಧ್ಯ ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಶಾಸಕ ಯತ್ನಾಳ್, ‘ಮುಂದಿನ ಬಾರಿಯೂ ಬೊಮ್ಮಾಯಿಯವರೇ ಸಿಎಂ ಆಗ್ತಾರೆ. ಬೊಮ್ಮಾಯಿ ಮತ್ತೆ ಸಿಎಂ ಆದ್ರೆ ನಮಗೇನು ತಕರಾರು ಇಲ್ಲ’ ಎಂದರು. ಆಗ ಯತ್ನಾಳ್ ಮಾತಿಗೆ ಸಿಎಂ ಬೊಮ್ಮಾಯಿ ಕೂಡ ಕೈಮುಗಿದ ನಸು ನಕ್ಕರು. ಮಾತು ಮುಂದುವರೆಸಿದ ಶಾಸಕ, ನಮ್ಮದೇನಾದರೂ ತಕರಾರು …
Read More »ಶೌಚಾಲಯದಲ್ಲಿ ಸಮೋಸಾ ಹಾಗೂ ಇತರ ಖಾದ್ಯ ತಯಾರಿಕೆ – 30 ವರ್ಷಗಳ ಬಳಿಕ ರೆಸ್ಟೊರೆಂಟ್ ಬಂದ್
ಬರೋಬ್ಬರಿ 30 ವರ್ಷಗಳಿಂದ ಶೌಚಾಲಯದಲ್ಲಿ ಸಮೋಸಾ ಹಾಗೂ ಇತರ ಖಾದ್ಯಗಳನ್ನು ತಯಾರಿಸುತ್ತಿದ್ದ ಉಪಹಾರ ಗೃಹವನ್ನು ಪತ್ತೆ ಹಚ್ಚಿ, ಮುಚ್ಚಿಸಿರುವ ಘಟನೆ ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದಿದೆ. ಕೇಳಿದಂತೆಯೇ ವಾಕರಿಕೆ ಬರುವಂತಹ ವಿಚಿತ್ರ ಆಹಾರ ಸಂಸ್ಕೃತಿಯನ್ನು ಅನುಸರಿಸಿಕೊಂಡಿದ್ದ ಸೌದಿ ಅರೇಬಿಯಾದ ಉಪಹಾರ ಗೃಹದ ಬಗ್ಗೆ ಅಲ್ಲಿನ ಸ್ಥಳೀಯ ಅಧಿಕಾರಿಗಳು ಮಾಹಿತಿ ಪಡೆದಿದ್ದರು. ಇದೀಗ ಬರೋಬ್ಬರಿ 3 ದಶಕಗಳ ಬಳಿಕ ಅದನ್ನು ಮುಚ್ಚಿಸಲಾಗಿದೆ. ಉಪಹಾರ ಗೃಹದ ಟಾಯ್ಲೆಟ್‌ನಲ್ಲಿ ತಿಂಡಿ ಹಾಗೂ ಊಟವನ್ನು …
Read More »