ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಈ ನಡುವೆ ಶಿವಸೇನೆಯ ಬಂಡಾಯ ಶಾಸಕರಿಗೆ ಕೇಂದ್ರ ಸರ್ಕಾರ Y ಶ್ರೇಣಿ ಭದ್ರತೆ ನೀಡಿದೆ. ಮಹಾ ವಿಕಾಸ ಅಘಾಡಿ ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ಸಚಿವ ಏಕನಾಥ್ ಶಿಂಧೆ ನೇತೃತ್ವದ ಶಾಸಕರ ಟೀಂ ಗುವಾಹಟಿ ರೆಸಾರ್ಟ್ ನಲ್ಲಿ ಬೀಡುಬಿಟ್ಟಿದ್ದು, ಪರಿಸ್ಥಿತಿ ಲಾಭ ಪಡೆಯಲು ಮುಂದಾಗಿರುವ ಬಿಜೆಪಿ, ಸರ್ಕಾರ ರಚನೆಗೆ ಕಸರತ್ತು ನಡೆಸಿದೆ. ಇದೀಗ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಶಿವಸೇನೆಯ 15 ಶಾಸಕರಿಗೆ ಕೇಂದ್ರ ಗೃಹ …
Read More »ಚಿಕ್ಕೋಡಿಯಲ್ಲಿ ಆರಕ್ಷಕರಿಗೇ ಇಲ್ಲ ಸೋರದ ಸೂರು!
ಚಿಕ್ಕೋಡಿ(ಬೆಳಗಾವಿ): ಕಳೆದ ಆರು ವರ್ಷದ ಹಿಂದೆ ಅಲ್ಲಿ ಹೊರ ಠಾಣೆಯಿಂದ ಪೊಲೀಸ್ ಠಾಣೆ ಪ್ರಾರಂಭಿಸಲಾಗಿದೆ. 30ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುವ ಆ ಠಾಣೆ ಸ್ವಂತ ಕಟ್ಟಡವಿಲ್ಲದೇ ಅಲ್ಲಿರುವ ಪುರಸಭೆಯ ಹಳೆ ಕಟ್ಟಡದಲ್ಲಿದೆ. ಪುರಸಭೆ ಪಕ್ಕದಲ್ಲೆ ಠಾಣೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಒಂದು ಕಡೆಯಾದರೆ ಇನ್ನೊಂದೆಡೆ ಸಾರ್ವಜನಿಕರಿಗೆ ರಕ್ಷಣೆ ನೀಡುವ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ. ಹೌದು. ಜನರ ರಕ್ಷಣೆ ಮಾಡಬೇಕಾದ ಪೊಲೀಸರ ಪಾಡು ಹೇಳತೀರದಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ …
Read More »ತಾನಾಜಿ ಸಾವಂತ್ ಕಚೇರಿ ಮೇಲೆ ಶಿವಸೇನಾ ಕಾರ್ಯಕರ್ತರದಾಳಿ
ಮುಂಬಯಿ: ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಿರುವ ನಡುವೆಯೇ ಪುಣೆಯಲ್ಲಿ ಬಂಡಾಯ ಶಾಸಕ ತಾನಾಜಿ ಸಾವಂತ್ ಕಚೇರಿ ಮೇಲೆ ಶಿವಸೇನಾ ಕಾರ್ಯಕರ್ತರು ದಾಳಿ ನಡೆಸಿ ಪೀಠೋಪಕರಣ ಧ್ವಂಸಗೊಳಿಸಿರುವ ಘಟನೆ ಶನಿವಾರ (ಜೂನ್ 25) ನಡೆದಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿರು ಶಿವಸೇನಾ ಮುಖಂಡರ ಕಚೇರಿಗಳಿಗೆ ಸೂಕ್ತ ಭದ್ರತೆ ನೀಡುವಂತೆ ಪುಣೆ ಪೊಲೀಸ್ವರಿಷ್ಠಾಧಿಕಾರಿ ಎಲ್ಲಾ ಪೊಲೀಸ್ ಠಾಣೆಗೆಳಿಗೆ ಸಂದೇಶವನ್ನು ರವಾನಿಸಿದ್ದಾರೆ. ಎಲ್ಲಾ ದ್ರೋಹಿಗಳಿಗೂ ಮತ್ತು ನಮ್ಮ ವರಿಷ್ಠ ಉದ್ಧವ್ ಠಾಕ್ರೆಗೆ ಕಿರುಕುಳ ನೀಡಿದ …
Read More »ಇದೊಂದು ಹೀನ ಕೃತ್ಯ… ಬಾಲಚಂದ್ರ ಜಾರಕಿಹೊಳಿ.
ಮೂಡಲಗಿ ಪಟ್ಟಣದ ಬಸ್ ನಿಲ್ದಾಣದ ಬಳಿಯಲ್ಲಿಯ ಹಳ್ಳಕ್ಕೆ ಹತ್ಯೆ ಮಾಡಿರುವ 7 ಭ್ರೂಣಗಳನ್ನು ಎಸೆದಿರುವ ಸಂಗತಿಯು ನನ್ನ ಗಮನಕ್ಕೆ ಬಂದಿದೆ. ಇದು ಹೀನ ಕೃತ್ಯವಾಗಿದ್ದು, ಸಮಾಜ ತಲೆ ತಗ್ಗಿಸುವಂತ ಸಂಗತಿಯಾಗಿದೆ. ಕಾನೂನುಬಾಹಿರವಾಗಿ ಮಾಡಿರುವ ವ್ಯಕ್ತಿಗಳನ್ನು ಗುರುತಿಸಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿರುವೆನು. ಈ ತರಹ ಪುನ: ನಡೆಯದಂತೆ ಆರೋಗ್ಯ ಇಲಾಖೆಯವರು ಕಟ್ಟೆಚ್ಚರವಹಿಸಬೇಕು ಎಂದು ಸೂಚಿಸಿರುವೆನು’* *ಬಾಲಚಂದ್ರ ಜಾರಕಿಹೊಳಿ,* *ಕೆಎಂಎಫ್ ಅಧ್ಯಕ್ಷರು, ಶಾಸಕರು ಅರಭಾವಿ ಕ್ಷೇತ್ರ* *ಮೂಡಲಗಿ ಹಳ್ಳದಲ್ಲಿ …
Read More »ಬಿಜೆಪಿಗೆ ಬೇಸತ್ತ ಜನತೆ, ದೇಶ, ರಾಜ್ಯದ ಪ್ರಗತಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅನಿವಾರ್ಯ ಎಂದ ಶಾಸಕ ಸತೀಶ್ ಜಾರಕಿಹೊಳಿ
ಘಟಫ್ರಭ: ತಳ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ, ಬಲಪಡಿಸಿದರೆ 2023ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಪಟ್ಟಣದ ಡಾ. ಎನ್.ಎಸ್. ಹರ್ಡೇಕರ್ ಮಂಜಪ್ಪ ತರಬೇತಿ ಕೇಂದ್ರದಲ್ಲಿ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ನವ ಸಂಕಲ್ಪ ಚಿಂತನಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ತಾಂತ್ರಿಕತೆ ಬಹಳಷ್ಟು ಅಭಿವೃದ್ಧಿ ಹೊಂದಿದ್ದು, ಹೀಗಾಗಿ ಚುನಾವಣೆಗಳನ್ನು ಗೆಲ್ಲಬೇಕಾದರೆ …
Read More »ಸಿಎಂ ಕೂರಲು, ಏಳಲು ಸಹ ದೆಹಲಿಗೆ ಹೋಗಿ ಪರ್ಮಿಶನ್ ಪಡೆದು ಬರಬೇಕು!
ಬೆಂಗಳೂರು, ಜೂನ್ 24; ಕರ್ನಾಟಕದ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿನವದೆಹಲಿ ಪ್ರವಾಸದಲ್ಲಿದ್ದಾರೆ. 2021ರ ಜುಲೈ 28ರಂದು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ 11ನೇ ಬಾರಿ ಅವರು ದೆಹಲಿಗೆ ತೆರಳಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ಬಸವರಾಜ ಬೊಮ್ಮಾಯಿ ನವದೆಹಲಿ ಭೇಟಿ ಬಗ್ಗೆ ಟ್ವೀಟ್ ಮಾಡಿದೆ. “ಸಿಎಂ ಕೂರಲು, ಏಳಲು, ಮಲಗಲೂ ಸಹ ದೆಹಲಿಗೆ ಹೋಗಿ ಪರ್ಮಿಶನ್ ಪಡೆದು ಬರಬೇಕು ಎನಿಸುತ್ತದೆ!” ಎಂದು ಟೀಕಿಸಿದೆ. ಗುರುವಾರ ಬಸವರಾಜ ಬೊಮ್ಮಾಯಿ ದೆಹಲಿಗೆ ಭೇಟಿ ನೀಡಿದ್ದಾರೆ. ಕೇಂದ್ರ ಸಚಿವ, ಧಾರವಾಡ …
Read More »ಹದಗೆಟ್ಟ ರಸ್ತೆಗಳನ್ನು ನಿರ್ಮಿಸಿಕೊಟ್ಟು ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಹದಗೆಟ್ಟ ರಸ್ತೆಗಳನ್ನು ನಿರ್ಮಿಸಿಕೊಟ್ಟು ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾದದ್ದು ಎಂದು ಯಾದವಾಡ ಜಿಪಂ ಮಾಜಿ ಸದಸ್ಯ ರಂಗಪ್ಪ ಇಟ್ಟನ್ನವರ ತಿಳಿಸಿದರು. ತಾಲೂಕಿನ ಯಾದವಾಡದಲ್ಲಿ ಇತ್ತೀಚೆಗೆ ಜರುಗಿದ ಗುಲಗಂಜಿಕೊಪ್ಪ-ಯಾದವಾಡ ರಸ್ತೆ ಕಾಮಗಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾದವಾಡ-ಗುಲಗಂಜಿಕೊಪ್ಪ ರಸ್ತೆಯ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಅವರಿಗೆ ಸಮಸ್ತ ಸಾರ್ವಜನಿಕರ ಪರವಾಗಿ ಕೃತಜ್ಞತೆ …
Read More »ಗೋಕಾಕ : 20 ವರ್ಷದ ಮಹಿಳೆ ನಾಪತ್ತೆ……?
ಗೋಕಾಕ ತಾಲೂಕಿನ ಕೆಮ್ಮನಕೋಲ ಗ್ರಾಮದ ೨೦ ವರ್ಷದ ಬಸವ್ವ ಬಸವರಾಜ ಹಣಮಂತನ್ನವರ ಜೂನ್ ೧೬ ರಂದು ಬೆಳಿಗ್ಗೆ ೬ ಗಂಟೆಯ ಸುಮಾರಿಗೆ ಮನೆಯಿಂದ ಹೊರಟು ನಾಪತ್ತೆಯಾಗಿದ್ದಾರೆ. ನಾಪತ್ತೆ ಮಹಿಳೆ ಚಹರೆ: ಎತ್ತರ ೫’೩, ಸದೃಢ ಮೈ, ಮುಖ ಬಣ್ಣ ಸಾದಾಗಪ್ಪು ಬಣ್ಣ , ಮಾತನಾಡುವ ಭಾಷೆ ಕನ್ನಡ , ಧರಿಸಿರುವ ಉಡುಪು ಚಾಕಲೇಟ್ ಗವನ. ಮಹಿಳೆ ಪತ್ತೆಯಾದ್ದಲ್ಲಿ ಕುಲಗೋಡ ಪೋಲಿಸ್ ಠಾಣೆಯ ದೂರವಾಣಿ ಸಂಖ್ಯೆ – ೦೮೩೩೪-೨೨೨೨೩೩ನ್ನು ಸಂಪರ್ಕಿಸಬಹುದು …
Read More »ಗೌಂಡವಾಡ ಗ್ರಾಮಕ್ಕೆ ಭೇಟಿ-ಗ್ರಾಮಸ್ಥರಲ್ಲಿ ಧೈರ್ಯ ತುಂಬಿದ ಶಾಸಕ ಸತೀಶ್ ಜಾರಕಿಹೊಳಿ
ಬೆಳಗಾವಿ: ಗೌಂಡವಾಡ ಗ್ರಾಮದಲ್ಲಿ ದೇವಸ್ಥಾನ ಜಮೀನಿಗಾಗಿ ಗ್ರಾಮಸ್ಥರಿಗೆ ಬೆನ್ನೆಲುಬಾಗಿ ನಿಂತಿದ್ದ ಹತ್ಯೆಯಾದ ಸತೀಶ್ ಪಾಟೀಲ್ ಮನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾಕಿಹೊಳಿ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಇದೇ ವೇಳೆ ಸತೀಶ್ ತಾಯಿ ತಮ್ಮ ಅಳಲು ತೋಡಿಕೊಂಡು, ನನ್ನ ಮಗ ಅಮಾಯಕ, ಗ್ರಾಮಸ್ಥರ ಒತ್ತಾಯದ ಮೇರೆಗೆ ದೇವಸ್ಥಾನದ ಜಮೀನಿಗಾಗಿ ಪೈಟ್ ಮಾಡುತ್ತಿದ್ದ, ಇದೇ ವಿಷಯ ಇಟ್ಟುಕೊಂಡು ಮೂರು ಬಾರಿ ಮಗನ ಕೊಲೆಗೆ ಯತ್ನಿಸಿದ್ದರು. ಆದರೆ …
Read More »ಮನೆ ಕಳ್ಳನನ್ನು ಬಂಧಿಸಿದ ಹುಕ್ಕೇರಿ ಪೊಲೀಸರು
ಹುಕ್ಕೇರಿ – ಐದು ದಿನಗಳ ಹಿಂದೆ ಹುಕ್ಕೇರಿ ಪಟ್ಟಣದ ವಿವಿಧ ಗಲ್ಲಿಗಳಲ್ಲಿ 6 ಮನೆಗಳ ಸರಣಿ ಕಳ್ಳತನ ಆಗಿ ಸುಮಾರು 48,000/-ರೂ ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣ ಹಾಗೂ 5000/- ರೂ ನಗದು ಕಳ್ಳತನ ಆಗಿತ್ತು. ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ (ಅಪರಾಧ ಸಂಖ್ಯೆ: 116/2022, ಕಲಂ 454, 457, 380, 51 ಐ.ಪಿ.ಸಿ) ಪ್ರಕರಣ ದಾಖಲಾಗಿತ್ತು. ಹುಕ್ಕೇರಿ ತಾಲೂಕಿನ ಸಂಕೇಶ್ವರ, ಯಮಕನಮರಡಿ ಮತ್ತು ಹುಕ್ಕೇರಿ ಠಾಣಾ …
Read More »