ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾದ ಘಟನೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದೆ. ಘಟನೆಯಲ್ಲಿ 10 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಬ್ಯಾಡಗಿ ತಾಲೂಕು ಸರಕಾರಿ ಆಸ್ಪತ್ರೆ ಮತ್ತು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಬಸ್‌ನಲ್ಲಿ 30 ಜನರು ಪ್ರಯಾಣಿಸುತ್ತಿದ್ದರು. ಬೆಂಗಳೂರಿನಿಂದ ಮುಂಬೈನತ್ತ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ …
Read More »ಕಸ ಗುಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಸ್ಥಳದಲ್ಲೇ ಮೃತ
ಬೆಳಗಾವಿ: ನಗರದ ಬಸವೇಶ್ವರ ವೃತ್ತದ ಬಳಿಯ ಎಲ್ಐಸಿ ಕಚೇರಿಯ ಆವರಣದಲ್ಲಿ ಕಸ ಗುಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ, ತೀವ್ರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರ್ಘಟನೆ ಇಂದು ಬೆಳಗ್ಗೆ ನಡೆದಿದೆ ಟೀಳಕವಾಡಿಯ ಪಿಕೆ ಕ್ವಾರ್ಟಸ್ನಲ್ಲಿರುವ ಅನಿತಾ ರಾಜೇಶ್ ಬನ್ಸ್ (52) ಮೃತಪಟ್ಟವರು. ಅನಿತಾ ಎಂದಿನಂತೆ ಎಲ್ಐಸಿ ಕಚೇರಿಗೆ ಆಗಮಿಸಿ ಆವರಣ ಶುಚಿಗೊಳಿಸುತ್ತಿದ್ದರು. ಈ ಸಂದರ್ಭದಲ್ಲಿ ಎಲ್ಐಸಿ ಆವರಣದಿಂದ ಕಾರು ಹೊರತೆಗೆಯುವ ಸಂದರ್ಭದಲ್ಲಿ ಚಾಲಕ ಗುರುರಾಜ ಕುಲಕರ್ಣಿ, ಮಹಿಳೆಗೆ …
Read More »ಪಿಎಸ್‍ಐ ಪರೀಕ್ಷೆ ಹಗರಣವನ್ನು ಇಡಿಗೆ ವರ್ಗಾವಣೆ ಮಾಡುವ ಅವಶ್ಯಕತೆಯಿಲ್ಲ: ಗೃಹ ಸಚಿವ
ಅಕ್ರಮ ಪಿಎಸ್‍ಐ ಪರೀಕ್ಷೆ ಹಗರಣವನ್ನು ಇಡಿಗೆ ವರ್ಗಾವಣೆ ಮಾಡುವ ಅವಶ್ಯಕತೆಯಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಮಹತ್ವದ ಹೇಳಿಕೆ ನೀಡಿದ್ದಾರೆ. ಗೃಹ ಸಚಿವ ಅರಗ ಜ್ಞಾನೇಂದ್ರರವರು ನಿಪ್ಪಾಣಿ ನಗರ ಮತ್ತು ಗ್ರಾಮೀಣ ಪೆÇಲೀಸ್ ಠಾಣೆಗಳ ನೂತನ ಕಟ್ಟಡಗಳ ಉದ್ಘಾಟನೆ ಸಮಾರಂಭ ನೆರವೇರಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಗೃಹ ಸಚಿವರ ಆರಗ ಜ್ಞಾನೇಂದ್ರ ಅಕ್ರಮ ಪಿಎಸ್‍ಐ ಪರೀಕ್ಷೆ ಹಗರಣವನ್ನು ಇಡಿಗೆ ವರ್ಗಾವಣೆ ಮಾಡುವ ಅವಶ್ಯಕತೆಯಿಲ್ಲ. ಈಗಾಗಲೇ ನಮ್ಮ ಸಿಐಡಿ …
Read More »ಕಲಬುರಗಿ ನಗರದ ಹೋಟೆಲ್‌ವೊಂದರಲ್ಲಿ ವೇಶ್ಯಾವಾಟಿಕೆ: ಪ್ರಿಯಾಂಕ್ ಖರ್ಗೆ ಆರೋಪ
ಕಲಬುರಗಿ: ‘ನಗರದ ಹೋಟೆಲ್ ಒಂದದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ. ಗುರುತಿನ ಚೀಟಿ ಪರಿಶೀಲನೆ ನಡೆಸದೆ ರೂಮ್ ಬುಕ್ ಆಗುತ್ತಿವೆ. ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು. ‘ವೇಶ್ಯಾವಾಟಿಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಒಂದು ಹರಿದಾಡುತ್ತಿದೆ. ಇಂತಹ ವಿಡಿಯೊಗಳಲ್ಲಿ ಬಿಜೆಪಿ ನಾಯಕರು ಸಿಕ್ಕಿ ಬೀಳುತ್ತಿದ್ದಾರೆ. ಇದೇ ಏನು ಬಿಜೆಪಿಯವರು ಮಹಿಳೆಯರ ಬಗ್ಗೆ ನಡೆದುಕೊಳ್ಳುವ ರೀತಿ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು. ‘ಜಿಲ್ಲೆಯಲ್ಲಿ ಪಡಿತರ …
Read More »ರೈಲ್ವೆ ಗೇಟ್ ದಾಟಿ ಹಳಿ ಮೇಲೇ ನಿಂತ ಲಾರಿ; ಬಂದಪ್ಪಳಿಸಿಯೇ ಬಿಡ್ತು ಎಕ್ಸ್ಪ್ರೆಸ್ ಟ್ರೇನ್!
ಬೀದರ್: ರೈಲ್ವೆ ಗೇಟ್ ದಾಟಿ ಬಂದ ಲಾರಿಯೊಂದು ಹಳಿ ಮೇಲೇ ನಿಂತು ಬಿಟ್ಟಿದ್ದರಿಂದ ಎಕ್ಸ್ಪ್ರೆಸ್ ಟ್ರೇನ್ ಬಂದು ಅದಕ್ಕೆ ಅಪ್ಪಳಿಸಿದಂಥ ಅಪಘಾತವೊಂದು ಸಂಭವಿಸಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಈ ಅವಘಡ ಉಂಟಾಗಿದೆ. ಭಾಲ್ಕಿ ತಾಲೂಕಿನ ಹಲಬುರ್ಗಾ ಬಳಿ ರೈಲು ಬರುವ ಸಮಯದೊಳಕ್ಕೆ ಹೋಗಿ ಬಿಡೋಣ ಎಂದುಕೊಂಡು ವೇಗವಾಗಿ ಬಂದ ಚಾಲಕ ಲಾರಿಯನ್ನು ನುಗ್ಗಿಸಿದ್ದಾನೆ. ಆದರೆ ಅಷ್ಟರಲ್ಲಿ ಮತ್ತೊಂದು ಭಾಗದಲ್ಲಿ ಎರಡನೇ ಗೇಟ್ ಹಾಕಲ್ಪಟ್ಟಿದ್ದರಿಂದ ಮುಂದಕ್ಕೆ ಹೋಗಲಾಗದೆ ಲಾರಿ ಹಳಿ ಮೇಲೇ …
Read More »ಔಟ್..! ಹುಬ್ಬಳ್ಳಿ ಪೊಲೀಸರ ಮುಂದೆ ಸ್ಫೋಟಕ ಹೇಳಿಕೆ ನೀಡಿದ ಹಂತಕರು..!
ಹುಬ್ಬಳ್ಳಿ : ಚಂದ್ರಶೇಖರ್ ಗುರೂಜಿ ಬೇನಾಮಿ ಆಸ್ತಿಗಳ ಸೀಕ್ರೆಟ್ ಔಟ್ ಆಗಿದ್ದು, ಹುಬ್ಬಳ್ಳಿ ಪೊಲೀಸರ ಮುಂದೆ ಹಂತಕರು ಸ್ಫೋಟಕ ಹೇಳಿಕೆ ನೀಡಿದ್ಧಾರೆ. ಚಂದ್ರಶೇಖರ್ ಗುರೂಜಿ ಮುಂಬೈ, ಹುಬ್ಬಳ್ಳಿ, ಬೆಂಗಳೂರು ಸೇರಿ ಹಲವೆಡೆ ಆಸ್ತಿ ಮಾಡಿದ್ದಾರೆ. ಗುರೂಜಿ ಎಲ್ಲೆಲ್ಲಿ ಆಸ್ತಿ ಮಾಡಿದ್ರು ಅಂತಾ ಶಿಷ್ಯ ಬಾಯಿಬಿಟ್ಟಿದ್ದಾನೆ. ಮಾಜಿ ನೌಕರ ಮಹಾಂತೇಶ್ ಶಿರೂರಗೆ ಪೊಲೀಸ್ ಡ್ರಿಲ್ ಮಾಡಿದ್ದು, ಕಳೆದ ರಾತ್ರಿ ಕಮಿಷನರ್ ಲಾಬೂರಾಮ್ ವಿಚಾರಣೆ ನಡೆಸಿದ್ಧಾರೆ. 5 ಕೋಟಿ ಆಸ್ತಿ ವಿಚಾರಕ್ಕೆ ಕೊಲೆ ಮಾಡಿದ್ದಾಗಿ …
Read More »ಚಂದ್ರಶೇಖರ್ ಗುರೂಜಿ ಹತ್ಯೆ ಕೇಸ್;ಮರಣೋತ್ತರ ಪರೀಕ್ಷಾ ವರದಿ ಬಹಿರಂಗ
ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ, ವಾಸ್ತು ತಜ್ಞ ಡಾ.ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ದೇಹದ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ವರದಿ ಬಹಿರಂಗವಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಡಾ.ಸುನೀಲ್ ಬಿರಾದಾರ್ ನೇತೃತ್ವದಲ್ಲಿ ಚಂದ್ರಶೇಖರ್ ಗುರೂಜಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿಯಲ್ಲಿ ಗುರೂಜಿಯವರಿಗೆ ಬರೋಬ್ಬರಿ 42 ಬಾರಿ ಚಾಕುವಿನಿಂದ ಇರಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚಂದ್ರಶೇಖರ್ ಗುರೂಜಿ ಕುತ್ತಿಗೆಯ ಭಾಗದಲ್ಲಿ ಎರಡು ಕಡೆ ಇರಿದ ಗುರುತು ಪತ್ತೆಯಾಗಿದ್ದು, …
Read More »ಬೆಳಗಾವಿಗೆ ಇಂದು ಹಲವು ಸಚಿವರು ನಿಪ್ಪಾಣಿಯಲ್ಲಿ ಜ್ಯೋತಿ ಪ್ರಸಾದ ಜೊಲ್ಲೆ ವಿವಾಹ ಸಮಾರಂಭ
ಬೆಳಗಾವಿ: ಕುಂದಾನಗರಿ ಬೆಳಗಾವಿ ಜಿಲ್ಲೆಗೆ ಇಂದು ಸಚಿವರ ದಂಡೆ ಆಗಮಿಸಲಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸೇರಿದಂತೆ ಹಲವು ಸಚಿವರು ಆಗಮಿಸಲಿದ್ದಾರೆ. ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಪುತ್ರ ಜ್ಯೊತಿ ಪ್ರಾಸಾದ್ ಜೊಲ್ಲೆ ಅವರ ವಿವಾಹ ಸಮಾರಂಭದ ಆರತಕ್ಷತೆ ಕಾರ್ಯಕ್ರಮ ಇಂದು ನಿಪ್ಪಾಣಿಯಲ್ಲಿ ನಡೆಯಲಿದ್ದು, ರಾಜ್ಯ ಸರ್ಕಾರದ ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಧು-ವರರಿಗೆ ಶುಭ ಹಾರೈಸಲಿದ್ದಾರೆ. …
Read More »ಸಹಾಯಧನ ಚೇಕ್ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ.!
ಸಹಾಯಧನ ಚೇಕ್ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ.! ಗೋಕಾಕ: ಆಕಸ್ಮೀಕ ಸಿಡಿಲು ಬಡಿದು ಮೃತಪಟ್ಟ ಜಾನುವಾರು ಮಾಲಕಿ ನಾಗವ್ವ ಪರಸನ್ನವರ ಅವರಿಗೆ ಶಾಸಕ ರಮೇಶ ಜಾರಕಿಹೊಳಿ ಬುಧವಾರದಂದು ತಮ್ಮ ಗೃಹ ಕಚೇರಿಯಲ್ಲಿ ೩೦ಸಾವಿರ ರೂಗಳ ಚೇಕ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ಗ್ರಾಮ ಲೆಕ್ಕಾಧಿಗಳು ಇದ್ದರು.
Read More »ಸ್ವ ಸಹಾಯ ಗುಂಪುಗಳಿಗೆ ಹಣಕಾಸು ನೆರವು; ಬೆಳಗಾವಿಯಲ್ಲಿ ಹೀಗೆ ಅರ್ಜಿ ಸಲ್ಲಿಸಿ
ಬೆಳಗಾವಿ: ಸ್ವ ಸಹಾಯ ಸಂಘಗಳ ಅಭಿವೃದ್ಧಿಗೆ ಪೂರಕವಾಗಿ ಹಣಕಾಸಿನ ನೆರವು ನೀಡಲು ಸರಕಾರವು ಮುಂದಾಗಿದೆ. ಯಾವುದೇ ಮಹಿಳಾ ಅಥವಾ ಪುರುಷ ಸದಸ್ಯರುಗಳುಳ್ಳ ಸ್ವ ಸಹಾಯ ಸಂಘಗಳು (Self Help Groups) ಧನ ಸಹಾಯ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. 2022-23 ನೇ ಸಾಲಿನ ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿಯಲ್ಲಿ ಸ್ವ ಸಹಾಯ ಗುಂಪುಗಳ ಸಾಮಾಜಿಕ ಕ್ರೋಢೀಕರಣ ಮತ್ತು ಸಾಂಸ್ಥಿಕ ಅಭಿವೃದ್ಧಿ ಉಪಘಟಕದಡಿ ಬೆಳಗಾವಿಯ (Belagavi News) …
Read More »