ಕೊಪ್ಪಳ: ವೇಶ್ಯಾವಾಟಿಕೆ ನಡೆಸಿ ಸಿಕ್ಕಿಬಿದ್ದಿದ್ದ ಮಹಿಳೆಯೊಬ್ಬರಿಗೆ ಎಸ್ಪಿಯೊಬ್ಬರು ಊರು ಬಿಟ್ಟು ಹೋಗುವಂತೆ ಗದರಿದ್ದು, ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿದ್ದು ಹಲವರ ಗಮನ ಸೆಳೆದಿದೆ. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಎಚ್ಚರಿಕೆ ನೀಡಿದ್ದಾರೆ. ಆರೋಪಿಗಳ ಪರೇಡ್ ವೇಳೆ ತಪ್ಪಿತಸ್ಥರ ವಿಚಾರಣೆ ನಡೆಸಿದ ಎಸ್ಪಿ ಅರುಣಾಂಶು ಗಿರಿ, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯೊಬ್ಬರಿಗೆ ಈ ಎಚ್ಚರಿಕೆ ನೀಡಿದ್ದಾರೆ. ಒಂದಕ್ಕಿಂತ ಹೆಚ್ಚು ಸಲ ವೇಶ್ಯಾವಾಟಿಕೆ ಅಪರಾಧದಲ್ಲಿ ಸಿಕ್ಕಿಬಿದ್ದಿದ್ದರಿಂದ ಆಕೆಗೆ ಅವರು ಹೀಗೆ ಗದರಿದ್ದಾರೆ. …
Read More »ಕರ್ನಾಟಕದ ಸಿನಿ ಶೆಟ್ಟಿಗೆ ಫೆಮಿನಾ ಮಿಸ್ ಇಂಡಿಯಾ ಕಿರೀಟ!
ಮುಂಬೈ (ಮಹಾರಾಷ್ಟ್ರ): ಭಾನುವಾರ ಇಲ್ಲಿ ನಡೆದ ವಿಎಲ್‌ಸಿಸಿ ಫೆಮಿನಾ ಮಿಸ್ ಇಂಡಿಯಾ ಗ್ರ್ಯಾಂಡ್ ಫಿನಾಲೆಯಲ್ಲಿ ಕರ್ನಾಟಕದ ಸಿನಿ ಶೆಟ್ಟಿ ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022’ ಪ್ರಶಸ್ತಿ ಗೆದ್ದರು. ಒಟ್ಟು 31 ಫೈನಲಿಸ್ಟ್‌ಗಳನ್ನು ಹಿಂದಿಕ್ಕಿದ ಅವರು ಅದ್ಭುತ ಸ್ಥಾನಮಾನ ಪಡೆದರು. ರಾಜಸ್ಥಾನದ ರೂಬಲ್ ಶೇಖಾವತ್ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದರೆ, ಉತ್ತರ ಪ್ರದೇಶದ ಶಿಂತಾ ಚೌಹಾನ್ ಎರಡನೇ ರನ್ನರ್ ಅಪ್ ಗೌರವಕ್ಕೆ ಪಾತ್ರರಾದರು. ಪ್ರತಿ ಬಾರಿಯಂತೆ ಈ ವರ್ಷದ …
Read More »ಆ ದುಷ್ಟ ಶಿಕ್ಷಕನಿಗೆ ಜೀವಮಾನದಲ್ಲೇ ಅವನು ಜೈಲಿನಿಂದ ಹೊರಗೆ ಬರದಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕು : ಶಿವರಾಜ ತಂಗಡಗಿ
ಕೊಪ್ಪಳ: ನೆರೆಮನೆಯ ಮಹಿಳೆಯರು ಮತ್ತು ಮಕ್ಕಳ ಜೊತೆಗೆ ಶಿಕ್ಷಕ ಕಾಮದಾಟವಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿಶಿಕ್ಷಕನ ವಿರುದ್ಧ ಎಫ್‌ಐಆರ್ದಾಖಲಾಗಿದೆ. ಈ ಬಗ್ಗೆ ಮಾಜಿ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯೆ ನೀಡಿದ್ದು, ಆತನಿಗೆ ಸಾಮಾನ್ಯ ಶಿಕ್ಷೆ ಆಗಬಾರದು. ಆತನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಹೇಳಿದ್ದಾರೆ. ನನ್ನ ಕ್ಷೇತ್ರದಲ್ಲಿ ಇಂತಹ ಒಬ್ಬ ದುಷ್ಟ ಶಿಕ್ಷಕನಿದ್ದಾನೆ ಎನ್ನುವುದೇ ಖೇದಕರ ಸಂಗತಿಯಾಗಿದೆ. ಒಬ್ಬ ಶಿಕ್ಷಕನಾಗಿ ಆ ವ್ಯಕ್ತಿ ಅಂತಹ ಕೃತ್ಯದಲ್ಲಿ ತೊಡಗಿದ್ದು ಖಂಡನೀಯ. ಯಾರು …
Read More »ಕಾರು-ಕಂಟೇನರ್ ಮುಖಾಮುಖಿ ಡಿಕ್ಕಿ: ಕಾರು ಚಾಲಕ ಸಹಿತ ಸ್ಥಳದಲ್ಲೇ ಇಬ್ಬರ ಸಾವು, ನಾಲ್ವರಿಗೆ ಗಂಭೀರ ಗಾಯ
ಖಾನಾಪುರ: ಖಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾಗರಾಳಿ ಬಳಿ ಕಾರು-ಕಂಟೇನರ್ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಸಹಿತ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ಕಾರು ಚಾಲಕ ಸಾಗರ ಬಿಡಕರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟ ಇನ್ನೊಬ್ಬ ಬಾಲಕನಾಗಿದ್ದು ಹೆಸರು ತಿಳಿದುಬರಬೇಕಿದೆ. ಅಳ್ನಾವರದ ಗಿರೀಶ್ ನಾಂದೋಲ್ಕರ್, ವೀರಣ್ಣ ಕೋಟಾರಶೆಟ್ಟಿ, ರೇಮಾಕಾಂತ ಪಾಲ್ಕರ್, ವಿಠ್ಠಲ ಕಾಕಡೆ ಅವರಿಗೆ ಗಂಭೀರ ಗಾಯಗಳಾಗಿವೆ. …
Read More »ಸರ್ಕಾರಿ ಶಾಲೆಗಳ ಮಕ್ಕಳಿಗೂ ಸ್ಕೂಲ್ ಬಸ್ ವ್ಯವಸ್ಥೆ:
ಬೆಂಗಳೂರು; ಖಾಸಗಿ ಶಾಲೆಗಳ ರೀತಿಯಲ್ಲೇ ಸರ್ಕಾರಿ ಶಾಲೆಗಳ ಮಕ್ಕಳಿಗೂ ಸ್ಕೂಲ್ ಬಸ್ ವ್ಯವಸ್ಥೆ ಮಾಡುವುದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಮಕ್ಕಳಿಗೆ ಶಾಲಾ ವಾಹನ ಖರೀದಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇನ್ಮುಂದೆ ಖಾಸಗಿ ಶಾಲೆಗಳಂತೆ ಮಕ್ಕಳಿಗೆ ಪಿಕ್ ಅಪ್ & ಡ್ರಾಪ್ ಕೊಡಲಾಗುತ್ತದೆ. ಬಸ್ ಖರೀದಿಗೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಬಳಕೆ ಮಾಡಲಾಗುತ್ತದೆ. ಚಾಲಕರ ವೇತನ, ಡೀಸೆಲ್ ಖರೀದಿಗೆ ಈ ಹಣ ಬಳಕೆಗೆ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದೆ. ರಾಜ್ಯದಲ್ಲಿ …
Read More »2022ರ ವಿಧಾನಸಭೆ ಚುನಾವಣೆ ಮಾಜಿ ಸಿಎಂ ಸಿದ್ದರಾಮಯ್ಯ ಸವದತ್ತಿ ಯಿಂದ ಸ್ಪರ್ಧೆ ?
ಬೆಳಗಾವಿ: 2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಹೆಚ್ಚಿರುವ ವಿಧಾನಸಭೆ ಕ್ಷೇತ್ರಗಳ ಮೇಲೆ ಕಾಂಗ್ರೆಸ್‌ನ ಕೆಲವು ಪ್ರಮುಖ ನಾಯಕರು ಕಣ್ಣಿಟ್ಟಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರು ತಾವು ಈಗ ಶಾಸಕರಾಗಿರುವ ಕ್ಷೇತ್ರವನ್ನು ಮುಂದಿನ ಚುನಾವಣೆಯಲ್ಲಿ ಉಳಿಸಿಕೊಳ್ಳಲು ಸಮರ್ಥರಿದ್ದರೂ ಕೂಡ ಕ್ಷೇತ್ರ ಬದಲಾಯಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿಯ ಆನಂದ್ ಮಾಮ್ನಿ ಗೆದ್ದಿರುವ ಪಕ್ಷದ ಮತಗಳ …
Read More »ಪಕ್ಷ ಸಂಘಟನೆಗೆ ಸಾಮಾಜಿಕ ಜಾಲತಾಣ ಸದ್ಬಳಕೆ ಅಗತ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಘಟಫ್ರಭ: ಸಾಮಾಜಿಕ ಜಾಲತಾಣ ಸದ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ತಳ ಮಟ್ಟದಲ್ಲಿ ಸಂಘಟಿಸಲು ಆದ್ಯತೆ ನೀಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಪಟ್ಟಣದ ಡಾ. ಎನ್.ಎಸ್. ಹರ್ಡೇಕರ್ ತರಬೇತಿ ಕೇಂದ್ರದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ನವ ಸಂಕಲ್ಪ ಚಿಂತನಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳು ದೇಶ-ವಿದೇಶಗಳಲ್ಲಿನ ಬೆಳೆವಣಿಗೆಗಳನ್ನು ಸೆಂಕೆಂಡ್‌ಗಳಲ್ಲಿ ಜನಸಾಮಾನ್ಯರಿಗೆ ತಲುಪಿಸಿ ಅವರ ನಡುವೆ ಸಂವಹನ ಸಾಮರ್ಥ್ಯವನ್ನು …
Read More »40 ದಿನ ಬೆಳಗಾವಿ, ಬಳ್ಳಾರಿ ಜೈಲಿನಲ್ಲಿದ್ದ ಏಕನಾಥ ಶಿಂಧೆ!
ಬೆಳಗಾವಿ: ಅತ್ಯಂತ ತಳಮಟ್ಟದಿಂದ ಬದುಕು ಆರಂಭಿಸಿ ಇಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದವರೆಗೂ ಪಯಣ ಬೆಳೆಸಿರುವ ಏಕನಾಥ ಶಿಂದೆ ತಮ್ಮ ಹೋರಾಟದ ಬದುಕಿನಲ್ಲಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಮಾರು 40 ದಿನಗಳ ಕಾಲ ಬೆಳಗಾವಿಯ ಹಿಂಡಲಗಾ ಹಾಗೂ ಬಳ್ಳಾರಿ ಜೈಲಿನಲ್ಲಿ ಕಳೆದಿದ್ದರು. 1985 ರಲ್ಲಿ ಭುಗಿಲೆದ್ದಿದ್ದ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದ ದಳ್ಳುರಿ ಬೆಳಗಾವಿಯನ್ನು ಅಕ್ಷರಶಃ ಬೆಂಕಿಯುಂಡೆಯಾಗಿಸಿತ್ತು. ಈ ವೇಳೆ ಬೆಳಗಾವಿಯಲ್ಲಿ ಶರದ್ ಪವಾರ್ ನೀಡಿದ ಕರೆಯಂತೆ ನಡೆದ ಗಡಿ …
Read More »ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಾವನ್ನೇ ಬಯಸಿದರಾ ಮಾಜಿ ಶಾಸಕ?
ಹಾಸನ: ರಾಜಕಾರಣಿಗಳು ವಾಗ್ದಾಳಿ ನಡೆಸುವ ಬರದಲ್ಲಿ ಮಾತಿನ ನಿಯಂತ್ರಣ ಕಳೆದುಕೊಳ್ಳುತ್ತಾರೆ ಎಂಬುದು ಪದೇ ಪದೇ ಗೋಚರಿಸುತ್ತಿರುತ್ತದೆ. ಆದರೆ ಅದು ಮಾಜಿ ಪ್ರಧಾನಿಯೊಬ್ಬರ ಸಾವನ್ನು ಬಯಸುವ ಮಟ್ಟಕ್ಕೆ ಹೋಗುತ್ತದೆ ಎಂಬುದು ವಿಪರ್ಯಾಸ. ಇಂಥದ್ದೊಂದು ವಿವಾದವನ್ನು ಸೃಷ್ಟಿಸಿದ್ದಾರೆ ಮಾಜಿ ಶಾಸಕ ಕೆ.ಎನ್.ರಾಜಣ್ಣ. ಸಮಾರಂಭವೊಂದರಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಶಾಸಕ ಕೆ.ಎನ್ ರಾಜಣ್ಣ, ಪರೋಕ್ಷವಾಗಿ ದೇವೇಗೌಡರ ಸಾವಿನ ಬಗ್ಗೆ ಮಾತನಾಡಿದ್ದು, ಜನಾಕ್ರೋಶಕ್ಕೆ ಗುರಿಯಾಗಿದ್ದಾರೆ. ಹೆಚ್.ಡಿ.ದೇವೇಗೌಡರು ಈಗಾಗಲೇ …
Read More »ಬೆಳಗಾವಿ-ನಿಪ್ಪಾಣಿ ರಸ್ತೆ ಅಗಲೀಕರಣಕ್ಕೆ ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್
ಬೆಂಗಳೂರು: ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬೆಳಗಾವಿ-ನಿಪ್ಪಾಣಿ ನಡುವಿನ ರಸ್ತೆ ಅಗಲೀಕರಣಕ್ಕೆ ಅನುಮೋದನೆ ನೀಡಲಾಗಿದೆ. ಅಲ್ಲದೇ ಚಿಕ್ಕೋಡಿಯಲ್ಲಿ ಕೋರ್ಟ್ ಕಟ್ಟಡ ನಿರ್ಮಾಣಕ್ಕೂ ಅನುದಾನ ಬಿಡುಗಡೆ ಮಾಡಲಾಗಿದೆ. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಬೆಳಗಾವಿ ಜಿಲ್ಲೆಯ ಅಥಣಿ-ನಿಪ್ಪಾಣಿ ರಸ್ತೆ ಅಗಲೀಕರಣಕ್ಕೆ ಸಂಪುಟ ಸಭೆ ಸಮ್ಮತಿ ಸೂಚಿಸಿದೆ. 32 ಕೋಟಿ ರೂ ವೆಚ್ಚದಲ್ಲಿ ಅಥಣಿ-ನಿಪ್ಪಾಣಿ ರಸ್ತೆ ಅಗಲೀಕರಣಕ್ಕೆ ಅನುಮೋದನೆ ನೀಡಲಾಗಿದೆ ಎಂದರು. ಹಲವು …
Read More »