Breaking News

Uncategorized

ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ

ಬಿಬಿಎಂಪಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿಎಂ ಬಲು ಚುರುಕಾಗಿದ್ದಾರೆ. ಸಿಲಿಕಾನ್ ಸಿಟಿಯ ಗದ್ದುಗೆ ಏರಲು ಬಿಜೆಪಿ ತಾಲೀಮು ನಡೆಸುತ್ತಿದೆ. ರಾಜಧಾನಿಯಲ್ಲಿ ಸಿಎಂ ಮಿಂಚಿನ ಸಂಚಾರ ನಡೆಸಿದರು. ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿದರು. ರಾಜ್‌ಕುಮಾರ್‌ ರಸ್ತೆಯ ಮೈಸೂರು ಸ್ಯಾಂಡಲ್‌ ಸೋಪ್‌ ಫ್ಯಾಕ್ಟರಿ ವೃತ್ತದಲ್ಲಿ ಬಸವಧಾಮ ಉದ್ಯಾನವನದಲ್ಲಿ ಸ್ಥಾಪಿಸಲಾಗಿರುವ ಬಸವಣ್ಣ ಪುತ್ಥಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು. ಸಿದ್ಧಗಂಗಾ ಮಠದ …

Read More »

ಈಗ ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ‘ಭದ್ರತಾ ಉಸ್ತುವಾರಿ ಸಮಿತಿ’ಗಳನ್ನು ರಚಿಸಿದೆ

ಬೆಂಗಳೂರು : ನಾಡಿನ ಸೆರೆ ಹಕ್ಕಿಗಳಿಗೆ ಲಭ್ಯವಾಗುವ ರಾಜಾತಿಥ್ಯ ಸೇರಿದಂತೆ ಕಾರಾಗೃಹಗಳಲ್ಲಿ ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ, ಈಗ ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ‘ಭದ್ರತಾ ಉಸ್ತುವಾರಿ ಸಮಿತಿ’ಗಳನ್ನು ರಚಿಸಿದೆ. ಈ ಸಮಿತಿ ನಿಯಮಿತವಾಗಿ ಕಾರಾಗೃಹಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದು, ಆ ವೇಳೆ ಜೈಲುಗಳಲ್ಲಿ ಅಕ್ರಮ ಚಟುವಟಿಕೆಗಳು ಪತ್ತೆಯಾದರೆ ಕೂಡಲೇ ತಪ್ಪಿತಸ್ಥ ಅಧಿಕಾರಿ ಮತ್ತು …

Read More »

ವಡೇರಹಟ್ಟಿ ಗ್ರಾಮದಲ್ಲಿ ಶ್ರೀ ಚಂದ್ರಮ್ಮ ದೇವಿ ಸಮುದಾಯ ಭವನವನ್ನು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ

ಮೂಡಲಗಿ: ವಡೇರಹಟ್ಟಿ ಗ್ರಾಮದಲ್ಲಿ ಶ್ರೀ ಚಂದ್ರಮ್ಮ ದೇವಿ ಸಮುದಾಯ ಭವನವನ್ನು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಉದ್ಘಾಟಿಸಿದರು.       ನಂತರ ಮಾತನಾಡಿದ ಅವರು ಶಾಸಕರ ವಿಶೇಷ ಅನುದಾನ ಅಡಿಯಲ್ಲಿ ನಿರ್ಮಿಸಲಾದ ನೂತನ ಸಮುದಾಯ ಭವನವನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಿ ಎಂದರು.ನಾವು ಸದಾ ನಿಮ್ಮ ಸೇವೆಗೆ ಸಿದ್ಧ, ನಾವು ನಿಮ್ಮ ಕುಟುಂಬದವರೇ ಕ್ಷೇತ್ರದಲ್ಲಿ ಯಾವುದೇ ಕಾರ್ಯ ಇದ್ದರೂ ನಿಮ್ಮೊಂದಿಗೆ ಇರುತ್ತೇವೆ ಎಂದರು.ನಂತರ ಗ್ರಾಮದ ಹಿರಿಯರು ಯುವ ನಾಯಕ …

Read More »

ರಾಜ್ಯ ರೈತರಿಗೆ ಮತ್ತೊಂದು ಗುಡ್ ನ್ಯೂಸ್.

ಬೆಂಗಳೂರು: ಪ್ರಾಣಿಗಳ ರಕ್ಷಣೆಗಾಗಿ ಜುಲೈ 19ರಂದು ಬೆಳಗಾವಿ ಜಿಲ್ಲೆಗೆ 82 ‘ಪಶು ಸಂಜೀವಿನಿ’ ಆಂಬ್ಯುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡಲಾಗವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಭಾನುವಾರ ಹೇಳಿದ್ದಾರೆ.   ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪಶುಸಂಗೋಪನಾ ಇಲಾಖೆಯು ಕಲ್ಯಾಣ ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಅನುದಾನದಲ್ಲಿ 15 ಪಶು ಸಂಜೀವಿನಿ ಆಂಬ್ಯುಲೆನ್ಸ್ಗಳನ್ನು ಪ್ರಾರಂಭಿಸಿತು. ಇತರ ಪ್ರಾಣಿಗಳು ಸೇರಿದಂತೆ ಹಸುಗಳು, ಎತ್ತು, ಎಮ್ಮೆಗಳಂತಹ ಪ್ರಾಣಿಗಳಿಗೆ ಸೂಕ್ತ ಆರೋಗ್ಯ ಸೇವೆಗಳನ್ನು ಒದಗಿಸಲು ಈ …

Read More »

ಬೈಲಹೊಂಗಲ ಪಟ್ಟಣದ ಧಾರವಾಡ- ಸವದತ್ತಿ ಮಾರ್ಗದ ಬೈಪಾಸ್ ರಸ್ತೆಯ ಮೇಲೆ ಧರಣಿ ಕುಳಿತ ಪ್ರತಿಭಟನಾಕಾರರು,

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪಟ್ಟಣದ ಎಲ್ಲ 27 ವಾರ್ಡ್‌ಗಳಲ್ಲಿಯೂ ರಸ್ತೆಗಳು ಸಂಪೂರ್ಣ ಹಾಳಾಗಿವೆ. ತಕ್ಷಣ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಸೋಮವಾರ ರಸ್ತೆ ತಡೆ ನಡೆಸಿದರು.   ಬೈಲಹೊಂಗಲ ಪಟ್ಟಣದ ಧಾರವಾಡ- ಸವದತ್ತಿ ಮಾರ್ಗದ ಬೈಪಾಸ್ ರಸ್ತೆಯ ಮೇಲೆ ಧರಣಿ ಕುಳಿತ ಪ್ರತಿಭಟನಾಕಾರರು, ಸ್ಥಳೀಯ ಶಾಸಕ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸ್ಥಳೀಯ ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರ ವಿರುದ್ಧವೂ ಕಿಡಿ ಕಾರಿದರು.   ಜೆಡಿಎಸ್ ಜಿಲ್ಲಾ …

Read More »

2023ರ ಚುನಾವಣೆ ಬಳಿಕ ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ,ಯಾವ ಸ್ಥಾನಮಾನ, ಹುದ್ದೆಯೂ ನನಗೆ ಬೇಡ.: ಸಿದ್ದರಾಮಯ್ಯ

ಮೈಸೂರು: 2023ರ ಚುನಾವಣೆ ಬಳಿಕ ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಯಾವ ಸ್ಥಾನಮಾನ, ಯಾವುದೇ ಹುದ್ದೆಯೂ ನನಗೆ ಬೇಡ. ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ. ನನ್ನನ್ನು ಖುಷಿಪಡಿಸಲೆಂದು ಈ ವಿಚಾರ ಮತ್ತೆ ಪ್ರಸ್ತಾಪ ಮಾಡಬೇಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ರವಿವಾರ ಜರಗಿದ ಚಾಮುಂಡೇಶ್ವರಿ ಮತ್ತು ಇಳವಾಲ, ಜಯಪುರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಮುಂಚೂಣಿ ಘಟಕಗಳ ಪದಗ್ರಹಣ ಸಮಾರಂಭದಲ್ಲಿ ಅವರು ಈ ವಿಷಯ ತಿಳಿಸಿದರು. ಕಾರ್ಯಕ್ರಮದ ಆರಂಭದಲ್ಲಿ …

Read More »

ಸತೀಶ್ ಜಾರಕಿಹೊಳಿ ಜೊತೆ ಸೆಲ್ಫಿ ತೆಗೆದುಕೊಂಡ ಲಕ್ಷ್ಮಿ ಹೆಬ್ಬಾಳ್ಕರ್

ಕಳೆದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುವುದರ ಜೊತೆಗೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ, ಈ ಅಭಿವೃದ್ಧಿ ಕೆಲಸಗಳೇ ಮುಂಬರಲಿರುವ ವಿಧಾನಸಭಾ ಚುನಾವಣೆಗೆ ವರದಾನವಾಗಲಿವೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿಶ್ವಾಸ ವ್ಯಕ್ತಪಡಿಸಿದರು. ಕುಡಚಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮತ್ತು ಪಕ್ಷದ ಸಂಘಟನೆಯ ಹಿತ ದೃಷ್ಟಿಯಿಂದ 6 ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸೈಕಲ್ ಜಾಥಾದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಾಧ್ಯಕ್ಷ …

Read More »

ಸಭೆಯಲ್ಲಿಯೇ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಉಮೇಶ್‌ ಕತ್ತಿಗೇ ತಿರುಗೇಟು ನೀಡಿದ್ದಾರೆ

ಬೆಂಗಳೂರು: ಬಿಜೆಪಿ ಚಿಂತನಾ ಸಭೆಯಲ್ಲಿ ಬೆಳಗಾವಿ ರಾಜಕೀಯ ಕುರಿತು ಚರ್ಚೆ ನಡೆದಿದೆ. ಚಿಂತನಾ ಸಭೆಯಲ್ಲಿ ಬೆಳಗಾವಿಯಲ್ಲಿ ವಿಧಾನ ಪರಿಷತ್‌ ಚುನಾವಣೆ ಸೋಲಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್‌ ಕತ್ತಿ ಆಗ್ರಹಿಸಿದ್ದಾರೆ ಎನ್ನಲಾಗಿದ್ದು, ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಆಗ್ರಹಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.   ಅವರ ಮಾತಿಗೆ ಸಭೆಯಲ್ಲಿಯೇ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ತಿರುಗೇಟು …

Read More »

ದಾಖಲಾತಿಗಳ ಪರಿಶೀಲನೆಗೆಂದು ಸುಖಾಸುಮ್ಮನೆ ವಾಹನಗಳನ್ನು ತಡೆಯದಂತೆ ಡಿಜಿ, ಐಜಿಪಿ ಪ್ರವೀಣ್ ಸೂದ್ ಮತ್ತೊಮ್ಮೆ ಪೊಲೀಸರಿಗೆ ಖಡಕ್ ಸೂಚನೆ

ಬೆಂಗಳೂರು: ದಾಖಲೆಗಳ ಪರಿಶೀಲನೆಗಾಗಿ ವಾಹನಗಳನ್ನು ತಡೆದು ನಿಲ್ಲಿಸದಂತೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತೊಮ್ಮೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಈ ಆದೇಶ ಅನ್ವಯ. ಡ್ರಿಂಕ್ ಆ್ಯಂಡ್ ಡ್ರೈವ್ ಮಾಡುವವರನ್ನು ಮಾತ್ರ ಪರಿಶೀಲನೆ ಮಾಡಿ. ಕಣ್ಣಿಗೆ ಕಾಣುವಂತಹ ಅಪರಾಧ ಕಂಡುಬಂದರೆ ಮಾತ್ರ ವಾಹನ ನಿಲ್ಲಿಸಬೇಕು. ಆದೇಶ ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.  

Read More »

ಭಾರತೀಯರು ಸ-ಹೃದಯಿಗಳು, ಪ್ರೀತಿಯ ಪ್ರತೀಕರು : ಶ್ರೀ ಸಿದ್ದೇಶ್ವರ ಸ್ವಾಮಿಜಿ

ಮುಗಳಖೋಡ: ಯಾವ ವ್ಯಕ್ತಿ ಸಿಹಿ ಮನಸ್ಸಿನಿಂದ ತುಂಬು ಹೃದಯದ ಪ್ರೀತಿ ಮತ್ತು ಭಕ್ತಿ ಭಾವದಿಂದ ಬೇರೆ ವ್ಯಕ್ತಿಗಳನ್ನು ಗೌರವಿಸುವರವು ದೇವರಿಗೆ ಹತ್ತಿರ ಇರುವರು.   ಮತ್ತು ತಂದೆ ತಾಯಿ, ಹಿರಿಯರು , ಶರಣರಿಗೆ ಪೂಜ್ಯ ಭಾವದಿಂದ ನೋಡಿ ಧಾರ್ಮಿಕತೆ ಬೇಳೆಸುವ ಜನರೆ ಭಾರತೀಯರು ಎಂದು ವಿಜಯಪೂರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮಿಜಿ ಹೇಳಿದರು.   ಅವರು ಮುಗಳಖೋಡ ಪಟ್ಟಣದ ಚವಿವ ಸಂಘದ ಆವರಣದಲ್ಲಿರುವ ಸಾಯಿ ಪ್ರತಿಷ್ಠಾಪನೆಯ ದಶಮಾನೋತ್ಸವ ಹಾಗೂ …

Read More »