ಬೆಂಗಳೂರು: ಹೋಲ್ಸೇಲ್ ದರದಲ್ಲಿ ಕೋಟ್ಯಂತರ ರೂ. ಮೌಲ್ಯದ ಬಟ್ಟೆಗಳನ್ನು ಖರೀದಿಸಿ ಪೋಸ್ಟ್ ಡೇಟೆಡ್ ಚೆಕ್ ನೀಡಿ ವಂಚಿಸುತ್ತಿದ್ದ ಇಬ್ಬರು ಅಂತರಾಜ್ಯ ವಂಚಕರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಉತ್ತರ ಭಾರತ ಮೂಲದ ಪದಮ್ ಸಿಂಗ್, ವಿಮಲ್ ಬಂಧಿತರು. ಆರೋಪಿಗಳಿಂದ ೩೦ ಲಕ್ಷ ರೂ. ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ೨೦೨೧ ಮಾರ್ಚ್ ೬ ರಂದು ಜಯನಗರದ ಐಕಾನ್ ಫ್ಯಾಷನ್ ಗಾರ್ಮೆಂಟ್ಸ್ಗೆ ತೆರಳಿ ತಮ್ಮನ್ನು ಸಿದ್ಧಿ ವಿನಾಯಕ ಟ್ರೇಡರ್ಸ್ ಮಾಲೀಕರೆಂದು ಪರಿಚಯಿಸಿಕೊಂಡಿದ್ದರು. …
Read More »ಲೋಕಾಯುಕ್ತ ಬಲೆಗೆ ಬಿದ್ದ ಗೃಹರಕ್ಷಕ; ನಿವೃತ್ತ ಇನ್ಸ್ಪೆಕ್ಟರ್ಗೆ ವೈದ್ಯಕೀಯ ವೆಚ್ಚ ಕೊಡಿಸಲು ಲಂಚ ಪಡೆಯುವಾಗ ಬಂಧನ
ಬೆಂಗಳೂರು: ನಿವೃತ್ತ ಇನ್ಸ್ಪೆಕ್ಟರ್ ಅವರ ವೈದ್ಯಕೀಯ ಬಿಲ್ ಕೊಡಿಸುವುದಾಗಿ ನಂಬಿಸಿ 20 ಸಾವಿರ ರೂ. ಲಂಚ ಪಡೆಯುತ್ತಿದ್ದ ಗೃಹ ರಕ್ಷಕನನ್ನು ಲೋಕಾಯುಕ್ತ ಪೊಲೀಸರು ರೆಡ್ಹ್ಯಾಂಡೆಡ್ ಆಗಿ ಬಂಧಿಸಿದ್ದಾರೆ. ಗೃಹ ಇಲಾಖೆ ಸಚಿವಾಲಯದಲ್ಲಿ ನಿಯೋಜಿತ ಗೃಹ ರಕ್ಷಕ ಸತೀಶ್ ಬಂಧಿತ. ನಿವೃತ್ತ ಇನ್ಸ್ಪೆಕ್ಟರ್ ಪಿ.ಎನ್. ಗಣೇಶ್ ಅವರು ತಮ್ಮ ವೈದ್ಯಕೀಯ ವೆಚ್ಚದ ಮರುಪಾವತಿಗಾಗಿ ಗೃಹ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ವಿಷಯ ತಿಳಿದ ಗೃಹ ರಕ್ಷಕ ಸತೀಶ್, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಬಿಲ್ ಮೊತ್ತ …
Read More »ಲೈಂಗಿಕ ದೌರ್ಜನ್ಯ ಎಸಗಿದ್ದವನಿಗೆ 40 ವರ್ಷ ಕಠಿಣ ಶಿಕ್ಷೆ
ಮೈಸೂರು: ನಗರದಲ್ಲಿರುವ ಚಲನಚಿತ್ರ ನಟರೊಬ್ಬರ ಫಾರ್ಮ್ಹೌಸ್ನಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಬಿಹಾರ ಮೂಲದವನಿಗೆ ನಗರದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶೈಮಾ ಖಮ್ರೋಜ್ ಅವರು 40 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದ್ದಾರೆ. ಬಿಹಾರ ಮೂಲದ ನಾಜೀಮ್ ಶಿಕ್ಷೆಗೆ ಗುರಿಯಾದ ಅಪರಾಧಿ. ಶಿಕ್ಷೆ ಜತೆಗೆ 51 ಸಾವಿರ ರೂ. ದಂಡ ವಿಧಿಸಿದ್ದಾರೆ. ತಿ.ನರಸೀಪುರ ರಸ್ತೆಯ ಫಾರ್ಮ್ಹೌಸ್ನಲ್ಲಿ ನಾಜೀಮ್ ಕುದುರೆಗಳಿಗೆ ಲಾಳ ಕಟ್ಟುವ ಕೆಲಸ ಮಾಡಿಕೊಂಡಿದ್ದ. ಕುಟುಂಬದೊಂದಿಗೆ …
Read More »ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರಾಗಿ ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಅವಿರೋಧವಾಗಿ ಆಯ್ಕೆ
ಖಾನಾಪೂರ ತಾಲೂಕಿನ ನಂದಗಡದಲ್ಲಿರುವ ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರಾಗಿ ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ 17 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅರವಿಂದ್ ಪಾಟೀಲ್ ಅವರು ತಾಲೂಕಾ ಮಾರ್ಕೆಟಿಂಗ್ ಸೂಸೈಟಿಯ ಅಭಿವೃದ್ಧಿಗೆ ಸತತ ಪರಿಶ್ರಮ ಪಟ್ಟಿದ್ದು ಹಾಲಿ ಅಧ್ಯಕ್ಷರಾದ ಶ್ರೀಶೈಲ ಮಾಟೋಳ್ಳಿ ಅವರು ಎರಡು ವರ್ಷಗಳ ಅವಧಿಯ ನಂತರ ರಾಜೀನಾಮೆ ನೀಡಿದ್ರು. ಖಾಲಿ ಇದ್ದ ಈ ಸ್ಥಾನಕ್ಕೆ ಇನ್ನಿತರ ನಿರ್ದೇಶಕರು …
Read More »ನಂದಿನಿ ಹಾಲಿನ ದರ ಇಂದು ಪರಿಷ್ಕರಣೆ ಸಂಭವ, 2-3 ರೂ. ಏರಿಕೆ?
K.M.F.ನಂದಿನಿ ಹಾಲಿನ ದರದಲ್ಲಿ (Nandini milk price) ಲೀಟರ್ಗೆ 2-3 ರೂ. ಏರಿಕೆಯಾಗುವ ಸಾಧ್ಯತೆ ಇದೆ. ಇಂದು ಸಂಜೆ 5ಕ್ಕೆ ಪಶುಸಂಗೋಪನೆ ಸಚಿವರ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಲಿದ್ದಾರೆ. ಕಳೆದ ವಾರದ ಆದೇಶಕ್ಕೆ ಸಿಎಂ ತಡೆ ಹಿಡಿದಿದ್ದರು. ಆಗ ಪ್ರತಿ ಲೀಟರ್ ಹಾಲಿನ ಮೇಲೆ 3 ರೂಪಾಯಿ ಏರಿಕೆ ಮಾಡಲಾಗಿತ್ತು. ಪ್ರತಿ ಕೆಜಿ ಮೊಸರಿನ ಮೇಲೆ 3 ರೂಪಾಯಿ ಏರಿಸಲಾಗಿತ್ತು. ಈ ಹಿನ್ನೆಲೆ ಇಂದು ಸಂಜೆ 5 …
Read More »ಶ್ರೀರಾಮುಲು ರಕ್ತ ಪವಿತ್ರ, ಮುಂದೊಂದು ದಿನ ಮುಖ್ಯಮಂತ್ರಿ ಆಗ್ತಾನೆ: ಸಿಎಂ ಬೊಮ್ಮಾಯಿ
ಬಳ್ಳಾರಿ: ಶ್ರೀರಾಮುಲು ರಕ್ತ ಪವಿತ್ರ ರಕ್ತ, ಹಿಂದೆ ಅವರ ಬಗ್ಗೆ ಹಗುರವಾಗಿ ಮಾತಾಡಿದ್ರಿ. ರಾಮುಲು ಅನ್ನು ಪೆದ್ದ ಅಂದ್ರು, ರಾಮುಲು ಈ ಸಮುದಾಯದ ಹೃದಯ ಸಾಮ್ರಾಟ. ರಾಮುಲುಗೆ ಪೆದ್ದ ಅಂತೀಯಾ ಸಿದ್ದರಾಮಣ್ಣಾ? ನೀನ್ ಬಾಳ ಬುದ್ಧಿವಂತ ಅಲ್ವಾ? ನೀನು ಮುಖ್ಯಮಂತ್ರಿಯಾಗಿದ್ದೆ, ಮುಂದೊಂದು ದಿನ ಅವಕಾಶ ಬಂದ್ರೆ ಶ್ರೀರಾಮುಲು ಕೂಡ ಮುಖ್ಯಮಂತ್ರಿ ಆಗ್ತಾನೆ. ಸಾಮಾಜಿಕ ನ್ಯಾಯ ಕೊಡೋದು ಬಿಜೆಪಿ ಮಾತ್ರ ಎಂದು ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಬಳ್ಳಾರಿಯಲ್ಲಿ …
Read More »ಒತ್ತಡದ ಮಧ್ಯೆ ಆರೋಗ್ಯ ಕಾಪಾಡಿಕೊಳ್ಳಿ: ರಾಜೇಂದ್ರ ಕಲಘಟಗಿ
ಬೆಳಗಾವಿ: ‘ಪ್ರತಿದಿನವೂ ನಿಯಮಿತ ಹಾಗೂ ಸಮತೋಲನದ ಆಹಾರ ಸೇವನೆ, ಸಮಯಕ್ಕೆ ಸರಿಯಾಗಿ ವಾಯುವಿಹಾರ, ಯಾವುದೇ ಒತ್ತಡ ಪರಿಸ್ಥಿತಿಯಲ್ಲಿಯೂ ಹೊರಗಿನ ಪದಾರ್ಥ ಸೇವಿಸದೇ ಇರುವುದೇ ನನ್ನ ಆರೋಗ್ಯದ ಗುಟ್ಟು. ಪೊಲೀಸ್ ಪಡೆ ಸೇರಿದವರು ಇಂಥ ಜೀವನಶೈಲಿ ರೂಢಿಸಿಕೊಳ್ಳುವುದು ಅಗತ್ಯ’ ಎಂದು ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ ಕಿವಿಮಾತು ಹೇಳಿದರು. ನಗರ ಪೊಲೀಸ್ ಆಯುಕ್ತಾಲಯ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಆಯೋಜಿಸಿದ ಎರಡು ದಿನಗಳ …
Read More »ಜಾರಕಿಹೊಳಿ ಕುಟುಂಬಕ್ಕೆ ಜನರೇ ಬ್ರ್ಯಾಂಡ್… ಸರ್ವೋತ್ತಮ ಜಾರಕಿಹೊಳಿ
ಗೋಕಾಕ: ಜನರ ಆಶೀರ್ವಾದವೇ ನಮ್ಮ ಕುಟುಂಬಕ್ಕೆ ಶ್ರೀರಕ್ಷೆಯಾಗಿದೆ. ಕಳೆದ ನಾಲ್ಕು ದಶಕಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿರುವ ನಮ್ಮ ಕುಟುಂಬಕ್ಕೆ ಎಲ್ಲ ರೀತಿಯ ಸಹಕಾರ ಹಾಗೂ ಬೆಂಬಲ ನೀಡುತ್ತಿರುವ ಜನರೇ ನಮ್ಮ ಕುಟುಂಬಕ್ಕೆ ಬ್ರ್ಯಾಂಡ್ ಆಗಿದ್ದಾರೆಂದು ಯುವ ಮುಖಂಡ ಸರ್ವೋತ್ತಮ ಭೀಮಶಿ ಜಾರಕಿಹೊಳಿ ತಿಳಿಸಿದರು. ಶನಿವಾರದಂದು ನಗರದ ಮಹಾಲಕ್ಷ್ಮೀ ದೇವಸ್ಥಾನದ ಸಭಾ ಭವನದಲ್ಲಿ ನಡೆದ ತಮ್ಮ 23ನೇ ಹುಟ್ಟು ಹಬ್ಬದ ಸಮಾರಂಭದಲ್ಲಿ ಅಭಿಮಾನಿಗಳಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಜನರ ಪ್ರೀತಿ ವಿಶ್ವಾಸಕ್ಕೆ …
Read More »ಶಾಸಕರಿಗೆ ಹಣದ ಆಮಿಷ ಪ್ರಕರಣ ಬಿ.ಎಲ್.ಸಂತೋಷ್ಗೆ ಸಮನ್ಸ್ ಜಾರಿ
ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಪಕ್ಷದ ಶಾಸಕರಿಗೆ ಬಿಜೆಪಿಗೆ ಸೇರುವಂತೆ ಹಣದ ಆಮಿಷವೊಡ್ಡಿದ ಪ್ರಕರಣ ಸಂಬಂಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ. ತೆಲಂಗಾಣ ವಿಶೇಷ ತನಿಖಾ ತಂಡ (ಎಸ್ಐಟಿ) ಶುಕ್ರವಾರ ಈ ಸಮನ್ಸ್ ಜಾರಿ ಮಾಡಿದೆ. ಶಾಸಕರಿಗೆ ಹಣದ ಆಮಿಷವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ. 21ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಬಿ.ಎಲ್.ಸಂತೋಷ್ಗೆ ಸಮನ್ಸ್ ಜಾರಿಗೊಳಿಸಿರುವ ಎಸ್ಐಟಿ, ತಪ್ಪಿದರೆ ಬಂಧನದ ಎಚ್ಚರಿಕೆಯನ್ನೂ …
Read More »ಇಂದಿನಿಂದ ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ
ಬೆಂಗಳೂರು: ಪರಂಪರಾಗತ ಆಚಾರ ವಿಚಾರಗಳು, ಸಂಸ್ಕೃತಿ-ಸಾಹಿತ್ಯ ಪ್ರಕಾರಗಳ ಜತೆಗೆ ಈ ನಾಡಿನ ಕಲೆಗಳಾದಿಗಳು ಒಂದೆಡೆ ಕೇ೦ದ್ರೀಕೃತವಾಗುವ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಾನದಲ್ಲಿ ನ.19ರಿಂದ ನ.23ರವರೆಗೆ ನಾಡಿನ ಗಣ್ಯರು, ವಿದ್ವಾಂಸರು ಹಾಗೂ ಕಲಾವಿದರ ಸಹಭಾಗಿತ್ವದಲ್ಲಿ ಲಕ್ಷದೀಪೋತ್ಸವ ನೆರವೇರಲಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ, ಧರ್ಮಸ್ಥಳ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಹಾಗೂ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದ 90ನೇ ಅಧಿವೇಶನವು ನೆರವೇರಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ದೇವಸ್ಥಾನ, …
Read More »