ನವದೆಹಲಿ: ತಮ್ಮ ಪಕ್ಷದಲ್ಲಿ ಎಷ್ಟು ಜನ ರೌಡಿಶೀಟರ್ ಇದ್ದಾರೆ ಎಂದು ಕಾಂಗ್ರೆಸ್ ಲೆಕ್ಕ ಹಾಕಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು. ಸೈಲೆಂಟ್ ಸುನೀಲ್ ಜೊತೆಗೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡ ವಿಚಾರದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು. ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಸಮಯ ಕೇಳಿದ್ದು, ನಾಳೆ ಸಮಯ ದೊರೆಯುವ ವಿಶ್ವಾಸವಿದೆ ಎಂದರು. ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ಭೂಪೇಂದ್ರ …
Read More »ನಾಳೆ ಗಡಿ ವಿವಾದ ವಿಚಾರಣೆ ಸಮರ್ಥ ವಾದ ನಡೆಸುವ ಭರವಸೆ: ಬೊಮ್ಮಾಯಿ
ನವದೆಹಲಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರಕರಣ ಇದೇ 30 ರಂದು ವಿಚಾರಣೆಗೆ ಬರಲಿದ್ದು, ಈ ಕುರಿತು ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಕರ್ನಾಟಕದ ಪರವಾಗಿ ಸಮರ್ಥವಾಗಿ ವಾದ ಮಾಡುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನವದೆಹಲಿಯಲ್ಲಿ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ಮಂಗಳವಾರ ಭೇಟಿಯಾದ ಬಳಿಕ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ಮುಕುಲ್ ರೋಹಟಗಿ ಹಿರಿಯ ವಕೀಲರಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ …
Read More »ಬೊಮ್ಮಾಯಿ ಸಾಹೇಬರೇ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ..:ಜತ್ ತಾಲ್ಲೂಕು ಕನ್ನಡ ಹೋರಾಟ ಸಮಿತಿ
ಮೊದಲ ಬಾರಿಗೆ ಸಿಎಂ ಬೊಮ್ಮಾಯಿ ಅವರು ನಮ್ಮ ಪರವಾಗಿ ಮಾತನಾಡಿದ್ದಾರೆ. ಹೀಗಾಗಿ ಕರ್ನಾಟಕ ಮುಖ್ಯಮಂತ್ರಿಗಳ ಹೇಳಿಕೆ ಸ್ವಾಗತಿಸುತ್ತೇವೆ ಎಂದು ಜತ್ ತಾಲ್ಲೂಕು ಕನ್ನಡ ಹೋರಾಟ ಸಮಿತಿಯ ಸೋಮಲಿಂಗ್ ಚೌಧರಿ, ಗೌಡೇಶ ಮಾಡಳ್ಳಿ ಹೇಳಿಕೆ ನೀಡಿದ್ದಾರೆ. ಮಂಗಳವಾರ ಬೆಳಗಾವಿಯ ಖಾಸಗಿ ಹೊಟೇಲ್‍ನಲ್ಲಿ ಮಹಾರಾಷ್ಟ್ರದ ಜತ್ ಕನ್ನಡಿಗರು ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. 50 ವರ್ಷ ಆಯ್ತು ಮಹಾರಾಷ್ಟ್ರ ಸರ್ಕಾರ, ಜನಪ್ರತಿನಿಧಿಗಳು ಬರೀ …
Read More »ನಾಗರಹಾವು ಕಚ್ಚಿದರಿಂದ ಸಾವನಪ್ಪಿದ ಸದಲಗಾ ಪಟ್ಟಣದ ರೈತ
ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ರೈತ ಹೊನ್ನಪ್ಪ ಮಹಾದೇವ ಗಾವಡೆ(45) ಹೊಲದಲ್ಲಿ ಕೆಲಸ ಮಾಡುವ ಸಂಧರ್ಭದಲ್ಲಿ ನಾಗರಹಾವು ಕಚ್ಚಿದರಿಂದ ಸಾವನಪ್ಪಿದ ಘಟನೆ ನಡೆದಿದೆ.ಹೊನ್ನಪ್ಪ ಅವರಿಗೆ ನಾಗರಹಾವು ಕಚ್ಚಿರುವ ಸುದ್ದಿ ತಿಳಿದಾಕ್ಷಣ ಉಪಚಾರಕ್ಕಾಗಿ ಸಂಬಂಧಿಕರು ಚಿಕ್ಕೋಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರಿದ್ದಾರೆ.
Read More »ಶ್ರೀನಗರದಲ್ಲಿ ಆಶ್ರಯ ಮನೆಗಳ ಸರ್ವೇ ಮಾಡಲು ಬಂದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನರು
ಬೆಳಗಾವಿಯ ಶ್ರೀನಗರದಲ್ಲಿ ಆಶ್ರಯ ಮನೆಗಳ ಸರ್ವೇ ಮಾಡಲು ಬಂದ ಅಧಿಕಾರಿಗಳ ವಿರುದ್ಧ ಜೋಪಡಿಪಟ್ಟಿಯಲ್ಲಿ ವಾಸಿಸುವ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು ಮಂಗಳವಾರ ಶ್ರೀನಗರದ ಆಶ್ರಯ ಮನೆಗಳ ಸರ್ವೇ ಮಾಡಲು ಅಧಿಕಾರಿಗಳು ಆಗಮಿಸಿದ್ದರು. ಈ ವೇಳೆ ಆಶ್ರಯ ಮನೆಗಳಲ್ಲಿ ವಾಸಿಸುವ ಜನರ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಜೋಪಡಿಪಟ್ಟಿಯ ನಿವಾಸಿಗಳು ಸರಿಯಾಗಿ ಸರ್ವೇ ಮಾಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು. ಇದೇ ವೇಳೆ ನಮ್ಮ ಜೊತೆಗೆ ಮಾತನಾಡಿದ ಇಲ್ಲಿನ ನಿವಾಸಿ ಮಲ್ಲೇಶ ಹೆಳವರ …
Read More »ಗಡಿ ವಿವಾದ ಸಂಬಂಧ ಸುಪ್ರೀಂಕೋರ್ಟನಲ್ಲಿ ಅಂತಿಮ ವಿಚಾರಣೆ ನಿಪ್ಪಾಣಿಯಲ್ಲಿ ಹೈ ಅಲರ್ಟ ಸಭೆ
ಇದೇ 30ರಂದು ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಸುಪ್ರೀಂಕೋರ್ಟನಲ್ಲಿ ಅಂತಿಮ ವಿಚಾರಣೆ ನಡೆಯಲಿದೆ. ಹೀಗಾಗಿ ಇಂದು ಗಡಿ ತಾಲೂಕು ನಿಪ್ಪಾಣಿಯಲ್ಲಿ ಎಡಿಜಿಪಿ ಅಲೋಕ ಕುಮಾರ ನೇತೃತ್ವದಲ್ಲಿ ಹೈ ಅರ್ಲಟ್ ಸಭೆ ನಡೆಯಿತು. ನಿಪ್ಪಾಣಿ ನಗರದ ಪ್ರವಾಸಿ ಮಂದಿರದಲ್ಲಿ ಎಡಿಜಿಪಿ ಅಲೋಕ್‍ಕುಮಾರ್ ನಡೆಸಿದ ಹೈವೋಲ್ಟೇಜ್ ಸಭೆಯಲ್ಲಿ ರಾಜ್ಯದ ಬೀದರ, ಕಲಬುರಗಿ, ವಿಜಯಪುರ, ಬೆಳಗಾವಿ ಜಿಲ್ಲೆಯ ಜಿಲ್ಲಾ ಪೆÇಲೀಸ್ ವರಿμÁ್ಠದಿಕಾರಿಗಳು ಭಾಗಿಯಾಗಿದ್ದರು. ಅದೇ ರೀತಿ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ, ಸಾಂಗಲಿ, ಸಾತಾರಾ, …
Read More »ದೇವರಹಳೆಯ ಫೋಟೋಗಳನ್ನು ಸಂಗ್ರಹಿಸಿ ಶಾಸ್ತ್ರೋಕ್ತವಾಗಿ ವಿಸರ್ಜಿಸಿದ ಸರ್ವಲೋಕ ಸೇವಾ ಫೌಂಡೇಶನ್
ಬೆಳಗಾವಿಯ ಜಯನಗರದಲ್ಲಿರುವ ಶ್ರೀ ಮಲ್ಲಿಕಾರ್ಜುನ ಮತ್ತು ಕರೆಮ್ಮಾ ದೇವಿ ಮಂದಿರ ಆವರಣದಲ್ಲಿ ದೇವರ ಹಳೆಯ ಫೋಟೋಗಳನ್ನು ಸರ್ವಲೋಕ ಸೇವಾ ಫೌಂಡೇಶನ್ ಸದಸ್ಯರು ಸಂಗ್ರಹಿಸಿದರು. ಮಂಗಳವಾರ ಸರ್ವಲೋಕ ಸೇವಾ ಫೌಂಡೇಶನ್ ನೇತೃತ್ವದಲ್ಲಿ ಶ್ರೀ ಮಲ್ಲಿಕಾರ್ಜುನ ಮತ್ತು ಕರೆಮ್ಮಾ ದೇವಿ ಮಂದಿರ ಆವರಣದಲ್ಲಿ ಇಟ್ಟಿದ್ದ ದೇವರ ಹಳೆಯ ಫೋಟೋಗಳನ್ನು ಶಾಸ್ತ್ರೋಕ್ತವಾಗಿ ವಿಸರ್ಜಿಸಲು ಸಂಗ್ರಹಿಸಲಾಯಿತು. ಇದೇ ವೇಳೆ ಬಿಲ್ವಪತ್ರಿ ಮತ್ತು ಬನ್ನಿ ಮರಗಳನ್ನು ನೆಡಲಾಯಿತು. ಈ ಕಾರ್ಯಕ್ಕೆ ದೇವಸ್ಥಾನ ಕಮೀಟಿ ಅವರು ಕೂಡ ಸಾಥ್ …
Read More »ಕಲ್ಲು ತೂರಾಟ ಮಾಡಿರುವ ಮಹಾ ಪುಂಡರ ವಿರುದ್ಧ ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಪ್ರತಿಭಟನೆ
ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‍ಗಳಿಗೆ ಮಸಿ ಬಳಿದು, ಕಲ್ಲು ತೂರಾಟ ಮಾಡಿರುವ ಮಹಾ ಪುಂಡರ ವಿರುದ್ಧ ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಪ್ರತಿಭಟನೆ ನಡೆಸಲಾಯಿತು. ಮಂಗಳವಾರ ಬೆಳಗಾವಿಯ ಚನ್ನಮ್ಮಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಮಹಾರಾಷ್ಟ್ರ ಸಿಎಂ, ಡಿಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅದೇ ರೀತಿ ಕೈಯಲ್ಲಿ ಬೆಳಗಾವಿ ಶಾಸಕರು ಕಾಣೆಯಾಗಿದ್ದಾರೆ ಎಂಬ ಬರಹದ ಫಲಕಗಳನ್ನು ಹಿಡಿದು ತಮ್ಮ ಅಸಮಾಧಾನ ಹೊರ …
Read More »ಬೆಳಗಾವಿ ಗಡಿ ವಿವಾದ: ಮುಕುಲ್ ರೋಹಟಗಿ ಜತೆ ಸಿಎಂ ಬೊಮ್ಮಾಯಿ ಇಂದು ಚರ್ಚೆ
ಬೆಂಗಳೂರು: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದ ಪ್ರಕರಣ ಇದೇ 30 ರಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ನ್ಯಾಯಾಲಯದಲ್ಲಿ ರಾಜ್ಯದ ನಿಲು ವನ್ನು ಪ್ರತಿಪಾದಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಯಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮುಕುಲ್ ರೋಹಟಗಿ ಜತೆ ಮಂಗಳವಾರ ಚರ್ಚೆ ನಡೆಸಲಿದ್ದಾರೆ. ಸಭೆಯ ಬಳಿಕ ಬೊಮ್ಮಾಯಿ ಅವರು ಕೇಂದ್ರ ಸಚಿವ ಪೀಯೂಷ್ ಗೋಯೆಲ್ ಮತ್ತು ಒಂದಿಬ್ಬರು ಕೇಂದ್ರ ಸಚಿವರನ್ನೂ ಭೇಟಿ ಮಾಡಲಿದ್ದಾರೆ. ಪಕ್ಷದ …
Read More »‘ಜೋಡೆತ್ತುಗಳು ಚಿರತೆಗಳಾಗಿ ಬಿಜೆಪಿಯವರನ್ನು ಬೆನ್ನು ಹತ್ತುತ್ತಿವೆ: ಸತೀಶ್ ಜಾರಕಿಹೊಳಿ
ಕೊಪ್ಪಳ: ಬಿಜೆಪಿಗಿಂತಲೂ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೆ ಹಿಂದೂಗಳಿಗೆ ಹೆಚ್ಚು ರಕ್ಷಣೆ ಸಿಗುತ್ತದೆ ಎಂದು ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ಹಟ್ಟಿ ಕ್ರಾಸ್ ಬಳಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಿ.ಟಿ. ರವಿ ನೀಡಿದ್ದ ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆ ಹೆಚ್ಚಾಗುತ್ತದೆ’ ಎನ್ನುವ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದರು. ‘ಬಿಜೆಪಿ ಅಧಿಕಾರದಲ್ಲಿ ಇರುವಾಗ ಹಿಂದೂಗಳ ಹತ್ಯೆಗಳಾಗುತ್ತಿಲ್ಲವೇ? ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ಇತ್ತೀಚೆಗೆ …
Read More »