ರಾಮದುರ್ಗ: ಮಹಾರಾಷ್ಟ್ರದ ಸಚಿವದ್ವಯರು ಡಿ. 6ರಂದು ಬೆಳಗಾವಿಗೆ ಬರಲು ಸಜ್ಜಾಗಿರುವಂತೆಯೇ ಅವರ ಭೇಟಿಗೆ ವಿರೋಧ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹಾ ಸಚಿವರು ಗಡಿ ಪ್ರವೇಶಿಸದಂತೆ ಪ್ರತಿಬಂಧಕಾಜ್ಞೆ ಹೊರಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಫ್ಯಾಕ್ಸ್ ಮೂಲಕ ಸಂದೇಶ ಕಳುಹಿಸಿದ್ದಾರೆ. ಎರಡೂ ರಾಜ್ಯಗಳ ಮಧ್ಯೆ ವಿಷಮ ಪರಿಸ್ಥಿತಿ ಇದೆ. ಹೀಗಿರುವಾಗ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರುವುದು ಸೂಕ್ತವಲ್ಲ. ಯಾವುದೇ ಕಾರಣಕ್ಕೂ ಬರಬಾರದು …
Read More »ಹತ್ತಿ ಹೊಲದಲ್ಲೇ ಬಿತ್ತು ಜೋಡಿ ಶವ!
ಕಲಬುರಗಿ: ಹತ್ತಿ ಹೊಲದಲ್ಲಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬರ್ಬರವಾಗಿ ಗಂಡನೇ ಕೊಂದ ಭೀಕರ ಘಟನೆ ಸುರಪುರ ತಾಲೂಕಿನ ಕಾಚಾಪುರದಲ್ಲಿ ಸಂಭವಿಸಿದೆ. ನಾಡಗೌಡ(36) ಮತ್ತು ಮಲ್ಲಮ್ಮ(30) ಕೊಲೆಯಾದ ದುರ್ದೈವಿಗಳು. ಹತ್ತಿ ಹೊಲದಲ್ಲಿ ರಕ್ತದ ಮಡುವಲ್ಲಿ ಬಿದ್ದಿದ್ದ ಜೋಡಿ ಶವ ನೋಡಿ ಸ್ಥಳೀಯರು ಬೆಚ್ಚಿಬಿದ್ದಾರೆ. ಕೊಲೆಗೆ ಅಕ್ರಮ ಸಂಬಂಧ ಕಾರಣ ಎನ್ನಲಾಗಿದೆ. ಪ್ರಿಯಕರನೊಂದಿಗೆ ಹೊಲದಲ್ಲಿದ್ದ ಪತ್ನಿಯನ್ನ ಗಂಡನೇ ಕುಡುಗೋಲಿನಿಂದ ಕೊಚ್ಚಿದ್ದಾನೆ. ಪ್ರಿಯಕರನನ್ನೂ ಅಲ್ಲೇ ಕೊಂದಿದ್ದಾರೆ. ಇಬ್ಬರ ಶವಗಳು ಪಕ್ಕದಲ್ಲೇ ಬಿದ್ದಿದ್ದವು. ಸುದ್ದಿ …
Read More »ಮೋದ್ ಮತಾಲಿಕ್ ಗೆ ಜೀವ ಬೆದರಿಕೆ
ಧಾರವಾಡ: ರಾಜ್ಯ ಸರ್ಕಾರ 10 ಮುಸ್ಲಿಂ ಕಾಲೇಜುಗಳಿಗೆ ಅನುಮತಿ ಕೊಡಲು ಮುಂದಾಗಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಜೀವ ಬೆದರಿಕೆ ಸಂದೇಶವೊಂದು ಬಂದಿದೆ. ಮೊಬೈಲ್ ನಂಬರ್‌ನಿಂದ ವಾಟ್ಸಪ್ ವಾಯ್ಸ್ ಮೆಸೇಜ್ ಒಂದು ಬಂದಿದ್ದು, ಇದರಲ್ಲಿ ಆ ವ್ಯಕ್ತಿ ಪ್ರಮೋದ್ ಮುತಾಲಿಕ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಜೀವ ಬೆದರಿಕೆ ಕೂಡ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿಯ ಮೇಲೆ ಧಾರವಾಡದ ಉಪನಗರ ಠಾಣೆಯಲ್ಲಿ ಮುತಾಲಿಕ್ …
Read More »ಆಸ್ಪತ್ರೆಗೆ ದಾಖಲಾದ ಸಿದ್ದರಾಮಯ್ಯ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕ್ಕ ಶಸ್ತ್ರಕ್ರಿಯೆಗೆ ಒಳಗಾಗಲಿದ್ದಾರೆ. ಹಿಂದೆ ಮೂಲವ್ಯಾಧಿಗೆ ಚಿಕಿತ್ಸೆ ಪಡೆದಿದ್ದ ಜಾಗದಲ್ಲಿ ಸಣ್ಣ ಗುಳ್ಳೆಯಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಆಪರೇಷನ್ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ಕಚೇರಿ ಮೂಲಗಳು ತಿಳಿಸಿವೆ. ಮೈನರ್ ಆಪರೇಷನ್ ಬಳಿಕ ನಾಲ್ಕು ದಿನ ವಿಶ್ರಾಂತಿ ಪಡೆಯಲಿರುವ ಸಿದ್ದರಾಮಯ್ಯ, ಇಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.
Read More »Delete BJP Not Voter ID ಅಭಿಯಾನ ಆರಂಭಿಸಿದ ಕಾಂಗ್ರೆಸ್
ಬೆಂಗಳೂರು: ಕಾಂಗ್ರೆಸ್ ನಿಂದ DeleteBJPNotVoterID ಅಭಿಯಾನ ಪ್ರಾರಂಭಿಸಲಾಗಿದೆ. ಬೆಂಗಳೂರು ಮತದಾರರ ದತ್ತಾಂಶ ಕಳ್ಳತನ ಪ್ರಕರಣ ಬಹಿರಂಗಗೊಂಡ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಡಿಜಿಟಲ್ ಅಭಿಯಾನ ಆರಂಭಿಸಿದೆ. ರಾಷ್ಟ್ರೀಯ ಚುನಾವಣಾ ಸಂಸ್ಥೆಯು ಸಮಗ್ರ ತನಿಖೆ ನಡೆಸುವಂತೆ ಮಾಡಿದೆ. ಬೆಂಗಳೂರಿನಲ್ಲಿ 6.6 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಅಂದಾಜಿಸಲಾಗಿದ್ದರೂ, ಮತದಾರರ ಪಟ್ಟಿಯಲ್ಲಿ ತಮ್ಮ ನೋಂದಣಿಯನ್ನು ಟೋಲ್ ಫ್ರೀ ಸಂಖ್ಯೆ ಮತ್ತು ವೆಬ್ ಸೈಟ್ ನೊಂದಿಗೆ ಪರಿಶೀಲಿಸಲು ಇಸಿಐ ಮತದಾರರಿಗೆ ವಿನಂತಿಸಿದೆ. …
Read More »ಮತದಾರರ ಪಟ್ಟಿ ಅಕ್ರಮ ನಡೆದಿಲ್ಲವಾದರೆ ಅಧಿಕಾರಿಗಳ ಸಸ್ಪೆಂಡ್ ಮಾಡಿದ್ದೇಕೆ: ಎಂ.ಬಿ.ಪಾಟೀಲ ಪ್ರಶ್ನೆ
ವಿಜಯಪುರ: ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನು ಗುರಿ ಮಾಡಿಲ್ಲ, ಅನಧಿಕೃತ ಮತದಾರರನ್ನು ಪಟ್ಟಿಯಿಂದ ರದ್ದು ಮಾಡಿದ್ದಾಗಿ ಹೇಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ, ಚಿಲುಮೆ ಸಂಸ್ಥೆ ಬೆಂಗಳೂರಿನಲ್ಲಿ ಏನು ಮಾಡಿದೆ ಎಂದು ಗೊತ್ತಿಲ್ಲವೆ? ಮತದಾರರ ಪರಿಷ್ಕರಣೆ ಹೆಸರಲ್ಲಿ ಅಕ್ರಮ ನಡೆದಿಲ್ಲ ಎಂದಾದರೆ ಐಎಎಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇಕೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಶುಕ್ರವಾರ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಅಕ್ರಮವಾಗಿ ಮತದಾರರ ರದ್ದತಿ, ಸೇರ್ಪಡೆ …
Read More »ಹನುಮ ಮಾಲೆ ಧರಿಸಿ ಅಂಜನಾದ್ರಿ ಬೆಟ್ಟಕ್ಕೆ ಹೊರಟ ಮುಸ್ಲಿಂ ಭಕ್ತ
ವಿಜಯಪುರ: ದೇಶದೆಲ್ಲೆಡೆ ಜಾತಿ ಹೆಸರಲ್ಲಿ ಮತೀಯ ಸಂಘರ್ಷಗಳೇ ವಿಜೃಂಭಿಸಿ, ಸುದ್ದಿಯಾಗುತ್ತಿವೆ. ಈ ಹಂತದಲ್ಲೇ ಬಸವ ಜನ್ಮಭೂಮಿ ಮುಸ್ಲಿಂ ಭಕ್ತನೊಬ್ಬ ಹನುಮ ಮಾಲಾ ಧರಿಸಿ ಹನುಮ ಜನ್ಮಭೂಮಿ ಅಂಜನಾದ್ರಿ ಬೆಟ್ಟಕ್ಕೆ ಹೊರಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ. ಬಸವೇಶ್ವರ ಜನ್ಮಭೂಮಿಯಾದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದ ಜಾಫರ್ ಬೆಣ್ಣೆ ಎಂಬವರೇ ಭಾವೈಕ್ಯತೆ ಮೆರೆದ ಹನುಮಭಕ್ತ. ಹಣೆಗೆ ಗಂಧ, ತಿಲಕ ಇರಿಸಿ, ಕೇಸರಿ ವಸ್ತ್ರ ಧರಿಸಿ, ಕೊರಳಲ್ಲಿ ಹನುಮ ಮಾಲಾ ಧರಿಸಿ, …
Read More »ಉಗಾರ ಹೆಸ್ಕಾಂ ಇಲಾಖೆಯ ಕಚೇರಿ ಎದರು ಪ್ರತಿಭಟನೆ ಕೈಗೊಂಡ ರೈತ ಮುಖಂಡ ಸುರೇಶ್ ಚೌಗುಲೆ,ರಾಜು ಕಾಗೆ
ಕಾಗವಾಡ ತಾಲೂಕಿನ ಶಿರಗುಪ್ಪಿ, ಶೇಡಬಾಳ, ಉಗಾರ, ಮಂಗಸೂಳಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮದ ರೈತರು, ರೈತ ಮುಖಂಡ ಸುರೇಶ್ ಚೌಗುಲೆ ಇವರ ನೇತೃತ್ವದಲ್ಲಿ, ಮಾಜಿ ಶಾಸಕ ರಾಜು ಕಾಗೆ ಇವರ ಮುಖ್ಯ ಉಪಸ್ಥಿತಿಯಲ್ಲಿ ಗುರುವಾರ ರಂದು ಉಗಾರ ಹೆಸ್ಕಾಂ ಇಲಾಖೆಯ ಕಚೇರಿ ಎದರು ಪ್ರತಿಭಟನೆ ಕೈಗೊಂಡಿದರು. ಪ್ರತಿದಿನ ರೈತರ ಪಂಪ್ಸೆಟ್‍ಗಳಿಗೆ 6 ಗಂಟೆ ವಿದ್ಯುತ್ ಪೂರೈಸುತಿದಾರೆ. ಇದರಿಂದ ರೈತರ ಬೆಳೆಗಳು ಕಮರಿ ಹೋಗುತ್ತಿವೆ ಇನ್ನುಳಿದ ತಾಲೂಕಗಳಲ್ಲಿ 7 ಗಂಟೆ ವಿದ್ಯುತ …
Read More »ಲಂಚ ಪಡೆಯಿತ್ತಿದ್ದಎಪಿಎಂಸಿ ಆಂತರಿಕ ಲೆಕ್ಕ ಪರಿಶೋಧಕ ಅಧಿಕಾರಿ ಲೋಕಾಯುಕ್ತ ಬಲೆಗೆ
ಎಪಿಎಂಸಿ ಆಂತರಿಕ ಲೆಕ್ಕ ಪರಿಶೋಧಕ ಲೋಕಾಯುಕ್ತ ಬಲೆಗೆ ಬಿದಿದ್ದಾನೆ. ವಿಜಯಪುರ ಎಪಿಎಂಸಿ ಆಂತರಿಕ ಲೆಕ್ಕಪರಿಶೋಧಕ ಶಂಕರಯ್ಯ ಹಿರೇಮಠ ಲೋಕಾ ಬಲೆಗೆ ಬಿದಿದ್ದು 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು ಎಪಿಎಂಸಿಯಲ್ಲಿ ವ್ಯಾಪಾರ ಮಾಡಲು ಟ್ರೇಡಿಂಗ್ ಲೈಸೆನ್ಸ್ ನೀಡಲು ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಹೆಚ್ಚುವರಿ ಯಾಗಿ ಸಿಕ್ಕ 39 ಸಾವಿರ ಹಣವನ್ನು ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿದ್ದಾರೆ. ಲೋಕಾಯುಕ್ತ ಎಸ್ಪಿ ಅನೀತಾ ಹದ್ದನ್ನವರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
Read More »ಮ.ಹಾ.ರಾಷ್ಟ್ರದ ಗಡಿ ಉಸ್ತುವಾರಿ ಸಚಿವರಿಗೆ ಬೆಳಗಾವಿ ಪ್ರವೇಶಿಸದಂತೆ ಸಿಎಂಗೆ ಮನವಿ: ಕರವೇ
ಮಹಾರಾಷ್ಟ್ರದ ಇಬ್ಬರು ಗಡಿ ಉಸ್ತುವಾರಿ ಸಚಿವರು ಡಿ.6 ರಂದು ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಒಂದಲ್ಲ ಒಂದು ನೆಪದಲ್ಲಿ ಭೇಟಿ ನೀಡುವ ಮೂಲಕ ಇಲ್ಲಿನ ಎಂಇಎಸ್ ಹಾಗೂ ಶಿವಸೇನೆಯ ಕಾರ್ಯಕರ್ತರನ್ನು ಬೆಂಬಲಿಸಿ ಕರ್ನಾಟಕ ಸರಕಾರದ ವಿರುದ್ಧ ಪ್ರಚೋದನೆ ನೀಡುವ ಉದ್ದೇಶವಾಗಿದೆ. ಅವರು ಗಡಿಭಾಗದಲ್ಲಿ ಪ್ರವೇಶ ಮಾಡದಂತೆ ನೋಡಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಕರವೇ ಕಾರ್ಯಕರ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿದರು. ಗಡಿ ಸಂರಕ್ಷಣಾ …
Read More »