ನವದೆಹಲಿ:“ಭಾರತದ ಮೇಲೆ ವಿದೇಶಿಗರು ಆಕ್ರಮಣ ನಡೆಸಿ, ಆಳಿದ್ದರು ಎಂಬುದು ಇತಿಹಾಸದ ಸತ್ಯ. ನಮಗೆ ಬೇಕಾದಂತೆ ಇತಿಹಾಸವನ್ನು ಬದಲಿಸಲು ಸಾಧ್ಯವಿಲ್ಲ. ಯಾವುದೇ ದೇಶದ ಇತಿಹಾಸವು ಆ ದೇಶದ ವರ್ತಮಾನ ಹಾಗೂ ಭವಿಷ್ಯದ ಪೀಳಿಗೆಯನ್ನು ಕಾಡುವಂತಿರಬಾರದು’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. ವಿದೇಶಿ ಆಕ್ರಮಣಕಾರರಿಂದ ಹೆಸರು ಬದಲಾಗಿರುವ ದೇಶದ ಸಾಂಸ್ಕೃತಿಕ, ಪ್ರಾಚೀನ ಹಾಗೂ ಧಾರ್ಮಿಕ ಕ್ಷೇತ್ರಗಳ ಮೂಲ ಹೆಸರನ್ನೇ ಮತ್ತೆ ಇಡಲು ಮರು ನಾಮಕರಣ ಆಯೋಗ ರಚಿಸಬೇಕು ಎಂದು ಕೋರಿ ವಕೀಲ …
Read More »ವಿಧಾನಸಭೆ ಚುನಾವಣೆ: ಉತ್ತರದಲ್ಲಿ ಗುಜರಾತ್ ಮಾದರಿ: ಹಳಬರಿಗೆ ಕೊಕ್, ಹೊಸಬರಿಗೆ ಟಿಕೆಟ್
ಬೆಂಗಳೂರು: ಹೊಸ ಮುಖಗಳಿಗೆ ಅವಕಾಶ ಸೃಷ್ಟಿಸುವ “ಗುಜರಾತ್ ಮಾದರಿ’ ಪ್ರಯೋಗವನ್ನು ಈ ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ನಡೆಸಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದು, ಇದಕ್ಕೆ ಪೂರಕವಾದ ಕ್ಷೇತ್ರ-ಕಾರ್ಯ, ಸಮೀಕ್ಷೆ ಸದ್ದಿಲ್ಲದೆ ಪ್ರಾರಂಭಗೊಂಡಿದೆ. ರಾಜ್ಯದಲ್ಲಿ ಗುಜರಾತ್ ಮಾದರಿಯಲ್ಲಿ ಹಿರಿಯರಿಗೆ ಟಿಕೆಟ್ ತಪ್ಪಿಸುವ ಸಾಧ್ಯತೆ ಇಲ್ಲ ಎಂದು ಬಿಜೆಪಿಯ ಒಂದು ವಲಯ ವದಂತಿ ಹಬ್ಬಿಸುತ್ತಿದ್ದರೂ ಉತ್ತರ ಕರ್ನಾಟಕ ಭಾಗದಲ್ಲಿ ಹೊಸಬರಿಗೆ ಅವಕಾಶ ಕೊಡಲೇಬೇಕೆಂಬ ವಾದ ಬಲವಾಗತೊಡಗಿದೆ. ಸಿಎಂ ಬಸವರಾಜ ಬೊಮ್ಮಾಯಿ ನಿವಾಸದಲ್ಲಿ …
Read More »ಪ್ರಧಾನಿ ಮೋದಿಯವರು ಇಂದಿನ ವಿಶ್ವ ಮಾನವ: ಶಿವಮೊಗ್ಗದಲ್ಲಿ ಯಡಿಯೂರಪ್ಪ ಬಣ್ಣನೆ
ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರು ಹೇಳಿದ ವಿಶ್ವಮಾನ ತತ್ವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಉದಾಹರಣೆ. ಪ್ರಧಾನಿ ಮೋದಿ ಅವರು ಇಂದಿನ ವಿಶ್ವಮಾನವ. ವಸುದೈವ ಕುಟುಂಬಿಕಂ ಆಶಯವನ್ನು ಈಡೇರಿಸುತ್ತಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಣ್ಣಸಿದರು. ಶಿವಮೊಗ್ಗದ ಸೋಗಾನೆಯಲ್ಲಿ ನೂತನ ವಿಮಾನ ನಿಲ್ದಾಣದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, “ನಿಮ್ಮ ಹುಟ್ಟುಹಬ್ಬದ ದಿನವೇ ವಿಮಾ ನಿಲ್ದಾಣ ಉದ್ಘಾಟನೆ ಮಾಡಬೇಕು. ಅಂದು ನಾನು ಬಂದೇ ಬರುತ್ತೇನೆ ಎಂದು …
Read More »7ನೇ ವೇತನ ಆಯೋಗ: ಲಿಖಿತ ಭರವಸೆ ಸಿಕ್ಕರೆ ಮುಷ್ಕರ ವಾಪಸ್: ಸಿ.ಎಸ್.ಷಡಾಕ್ಷರಿ
ಶಿವಮೊಗ್ಗ: ‘7ನೇ ವೇತನ ಆಯೋಗದ ಮಧ್ಯಂತರ ವರದಿ ಅನುಷ್ಠಾನದ ಬಗ್ಗೆ ಸರ್ಕಾರ ಆದೇಶ ಹೊರಡಿಸಿದರೆ ಮಾತ್ರ ಈಗ ಕರೆ ನೀಡಿರುವ ಮಾರ್ಚ್ 1ರಂದು ನಡೆಯುವ ಮುಷ್ಕರ ವಾಪಸ್ ಪಡೆಯಲಾಗುವುದು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘7 ನೇ ವೇತನ ಆಯೋಗದಿಂದ ಶೀಘ್ರ ಮಧ್ಯಂತರ ವರದಿ ಪಡೆದು ಜಾರಿ ಮಾಡುವಂತೆ ಈ ಹಿಂದಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದೇವೆ. ಬಜೆಟ್‌ನಲ್ಲಿ ಈ …
Read More »47 ವರ್ಷದ ನಟಿಯ ಸೌಂದರ್ಯ ನೋಡಿದ ನೆಟ್ಟಿಗರು ಶಾಕ್
ರಾತ್ರಿ ಮುಂಬೈನಲ್ಲಿ ನಡೆದ ʼಬಿಗ್ ಇಂಪ್ಯಾಕ್ಟ್ಸ್ ಅವಾರ್ಡ್ಸ್ʼನಲ್ಲಿ ಮಲೈಕಾ ಅರೋರಾ, ರೋಹಿಣಿ ಅಯ್ಯರ್, ಹಿನಾ ಖಾನ್ ಮತ್ತು ಸೇರಿದಂತೆ ಹಲವಾರು ಬಿ-ಟೌನ್ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದರು. ತಾರೆಗಳು ಈವೆಂಟ್‌ನಲ್ಲಿ ಭಾಗವಹಿಸಿದ್ದ ನಟಿಯರ ಗ್ಲಾಮರ್ ಲುಕ್ ಹೆಚ್ಚಾಗಿ ಟಾಕ್ ಆಗುತ್ತಿದೆ. ತುಂಡು ತುಂಡು ಬಟ್ಟೆ ತೊಟ್ಟಿದ್ದ ನಟಿಯರ ಸೊಬಗಿಗೆ ಜನ ಫಿದಾ ಆಗಿದ್ದರು. ಇನ್ನು ಶಿಲ್ಪಾ ಶೆಟ್ಟಿ ಕೂಡಾ ತಮ್ಮದೇ ಸ್ಟೈಲ್‌ನಲ್ಲಿ ಮಿಂಚಿದರು. ಬಿಳಿ ಜಂಪ್‌ಸೂಟ್‌ನಲ್ಲಿ ಜಾಕೆಟ್ ಮತ್ತು ಶೀರ್ ಪ್ಯಾನೆಲಿಂಗ್‌ನೊಂದಿಗೆಶಿಲ್ಪಾ ಶೆಟ್ಟಿಕಾರ್ಯಕ್ರಮಕ್ಕೆ …
Read More »ರಾಜ್ಯದ `SSLC-PUC’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಈ ವರ್ಷವೂ ಸಿಗಲಿದೆ ಕೃಪಾಂಕ!
ಬೆಂಗಳೂರು : ಎಸ್ ಎಸ್‌ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಈ ವರ್ಷವೂ 10, 12 ನೇ ತರಗತಿ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲು ನಿರ್ಧರಿಸಲಾಗಿದೆ. ಕೊರೊನಾ ಕಾರಣದಿಂದ ಕಲಿಕೆ ಮೇಲೆ ಉಂಟಾಗಿರುವ ಪರಿಣಾಮದಿಂದ ಇನ್ನೂ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಚೇತರಿಸಿಕೊಳ್ಳದ ಕಾರಣ ಈ ವರ್ಷವೂ ಒಟ್ಟಾರೆ ಕನಿಷ್ಟ ಅಂಕ ಗಳಿಸುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶೇ. 10, ಪಿಯುಸಿ ವಿದ್ಯಾರ್ಥಿಗಳಿಗೆ ಶೇ. 5 …
Read More »ಶಿಕಾರಿಪುರಕ್ಕೆ ವಿಜಯೇಂದ್ರ ಅಭ್ಯರ್ಥಿ: ಯಡಿಯೂರಪ್ಪ
ಬೆಂಗಳೂರು: ಚುನಾವಣ ರಾಜಕಾರಣದಲ್ಲಿ ಭಾಗಿಯಾಗುವುದಿಲ್ಲ ಎಂದು ಘೋಷಿಸಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ತಮ್ಮ ಕಾರ್ಯಕ್ಷೇತ್ರ ಶಿಕಾರಿಪುರ ವಿಧಾನಸಭಾ ಕ್ಷೇತ್ರಕ್ಕೆ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಉತ್ತರಾಧಿಕಾರಿಯಾಗಿ ಮತ್ತೆ ಘೋಷಣೆ ಮಾಡಿದ್ದಾರೆ. ವಿಧಾನಸಭೆ ಕಲಾಪದ ಬಳಿಕ ಅಂಬೇಡ್ಕರ್ ಪ್ರತಿಮೆ ಹಾಗೂ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ವಿಧಾನಸೌಧದಿಂದ ನಡೆದುಕೊಂಡೇ ಬಂದು ಗಾಂಧಿ ಪ್ರತಿಮೆಗೆ ಅವರು ನಮನ ಸಲ್ಲಿಸಿದರು. ಶಿಕಾರಿಪುರಕ್ಕೆ ಬಹುತೇಕ ವಿಜಯೇಂದ್ರ ಅವರೇ …
Read More »ಶಹಬ್ಬಾಸ್..! ರಸ್ತೆ ಮಧ್ಯೆ ಹೃದಯಾಘಾತಗೊಂಡ ವ್ಯಕ್ತಿಗೆ CPR ನೀಡಿ ಬದುಕಿಸಿದ ಟ್ರಾಫಿಕ್ ಪೊಲೀಸ್
ತೆಲಂಗಾಣ : ನಡುರಸ್ತೆಯಲ್ಲೆ ಹೃದಯಾಘಾತಗೊಂಡ ವ್ಯಕ್ತಿಯೊಬ್ಬನಿಗೆ ಸಿಪಿಆರ್ ನೀಡಿ ಬದುಕಿಸಿದ ಟ್ರಾಫಿಕ್ ಪೊಲೀಸ್ ವಿಡಿಯೋ ವೈರಲ್ ಆಗಿದೆ. ಸೈಬರಾಬಾದ್‌ನ ರಾಜೇಂದ್ರನಗರ ಟ್ರಾಫಿಕ್ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ರಾಜೀಂದರ್ ಎಂಬವರು ಹೃದಯಾಘಾತಕ್ಕೆ ಒಳಗಾಗಿದ್ದ ಎಲ್‌ಬಿ ನಗರದ ಬಾಲರಾಜು ಎನ್ನುವ ವ್ಯಕ್ತಿಗೆ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ ಅನ್ನು ನೀಡಿ ಅವರ ಜೀವವನ್ನು ರಕ್ಷಣೆ ಮಾಡುವ ಮೂಲಕ ಮಾನವೀಯತೆಯನ್ನುಮೆರೆದಿದ್ದಾರೆ. ಬಳಿಕ ಸ್ಥಳೀಯ ಆಸ್ಪತ್ರೆಗೆ ತಕ್ಷಣವೇ ದಾಖಲು ಮಾಡಿ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆಂದು ವರದಿಯಾಗಿದೆ. …
Read More »ಬರ್ಬರವಾಗಿ ಹೆಂಡತಿಯನ್ನೇ ಕೊಲೆಗೈದ ಗಂಡ
ರಾಯಚೂರು: ಪತ್ನಿಯ ಶೀಲ ಶಂಕಿಸಿ ಪತಿ ಮಹಾಶಯ ಹೆಂಡತಿಯನ್ನೇ ಬರ್ಬರವಾಗಿ ಹತ್ಯೆಗೈದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸಾದಪುರದಲ್ಲಿ ನಡೆದಿದೆ. ಪವಿತ್ರಾ ಅಲಿಯಾಸ್ ಮಮತಾ (22) ಮೃತ ಮಹಿಳೆ. ಆರೋಪಿ ನಾಗರಾಜ್ ಪತ್ನಿಯನ್ನೇ ಕೊಂದ ಪತಿ. ಕಳೆದ ವರ್ಷವಷ್ಟೇ ವಿವಾಹವಾಗಿದ್ದ ಮಮತಾ ಹಾಗೂ ನಾಗರಾಜ್ ಮಾನ್ವಿ ಬಳಿಯ ಇಟ್ಟಿಗೆ ತಯಾರಿಕಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ನಾಗರಾಜ್ ಗೆ ಪತ್ನಿ ಮಮತಾ ಮೇಲೆ ಅನುಮಾನ. ಅನುಮಾನ ವಿಪರೀತಕ್ಕೆ ಹೋಗಿ ಈಗ ಹೆಂಡತಿಯನ್ನೇ …
Read More »7 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಯಾರು, ಎಲ್ಲಿಗೆ? ಇಲ್ಲಿದೆ ವಿವರ.
ಬೆಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತ ಸೇರಿದಂತೆ 7 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶಿಸಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರನ್ನು ಡಿಐಜಿ ರೈಲ್ವೆ ಹುದ್ದೆಗೆ ನಿಯೋಜಿಸಿದ ಸರ್ಕಾರ, ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಹಿರಿಯ ಎಸ್‌ಪಿ ಕುಲದೀಪ್ ಕುಮಾರ್ ಜೈನ್ ಅವರನ್ನು ನೇಮಿಸಿದೆ. ಬೆಂಗಳೂರು ನಗರಕ್ಕೆ ಹೊಸದಾಗಿ ದಕ್ಷಿಣ (ಸಂಚಾರ) ವಿಭಾಗವನ್ನು ಸೃಜಿಸಿ ಮಹಮ್ಮದ್ ಸುಜೀತಾ ನೇಮಕ ಮಾಡಿದೆ. …
Read More »