Breaking News

Uncategorized

ಕ್ಷುಲ್ಲಕ ಕಾರಣಕ್ಕೆ ಮಗನನ್ನೇ ಕೊಂದು ಹಾಕಿದ ಚಿಕ್ಕಪ್ಪ!

ಬೆಂಗಳೂರು : ಕಳೆದ ಎರಡ್ಮೂರು ದಿನಗಳಿಂದ ರಾಜ್ಯದ ರಾಜಧಾನಿಯಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆ ರಾತ್ರಿ ನಗರದಲ್ಲಿ ಮತ್ತೊಂದು ಹತ್ಯೆಯಾಗಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಗನನ್ನೇ ಚಿಕ್ಕಪ್ಪ ಕೊಲೆ ಮಾಡಿರುವ ಘಟನೆ ನಡೆದಿದೆ. ಕೆಂಗೇರಿ ಉಪನಗರದ ಹೊಯ್ಸಳ ಸರ್ಕಲ್ ಸಮೀಪದ ಹ್ಯಾಪಿ ಡೇ ಬಾರ್ ಬಳಿ ಘಟನೆ ನಡೆದಿದೆ. ಕೆಂಗೇರಿಯ ಗಾಂಧಿನಗರ ನಿವಾಸಿ ನವೀನ್ (25) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಂಠಪೂರ್ತಿ ಕುಡಿದು, ಹಳೆ ವೈಷಮ್ಯದ ವಿಚಾರಕ್ಕೆ ಆರಂಭವಾದ ಗಲಾಟೆ …

Read More »

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ವಿವರ ಜಾರಿ

ಬೆಂಗಳೂರು – ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ವಿವರ ನೀಡಿದೆ. ಎಲ್ಲಾ ಗ್ಯಾಂರಟಿ ಯೋಜನೆಗಳು ಇದೇ ವರ್ಷ ಜಾರಿಯಾಗಲಿದೆ ಎಂದು ಸರಕಾರ ತಿಳಿಸಿದೆ. ಸಚಿವಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಈ ಕುರಿತು ಮಾಹಿತಿ ನೀಡಿದ್ದಾರೆ. ಗೃಹ ಜ್ಯೋತಿ ಅಡಿ ವಿದ್ಯುತ್ ಬಳಕೆಯ 12 ತಿಂಗಳ ಸರಾಸರಿ ಆಧಾರದ ಮೇಲೆ ಶೇ.10ರಷ್ಟು ಹೆಚ್ಚು ಸೇರಿಸಿ ಉಚಿತವಾಗಿ ನೀಡುತ್ತೇವೆ ಎಂದು ತಿಳಿಸಿದರು. ಜುಲೈ 1ರಿಂದ ಈ ಯೋಜನೆ ಜಾರಿಯಾಗಲಿದೆ. ಶಕ್ತಿ ಯೋಜನೆಯಡಿ …

Read More »

ಎಲ್‌ಪಿಜಿ ಸಿಲಿಂಡರ್‌ ಬೆಲೆ ₹83.50 ಕಡಿತ

ನವದೆಹಲಿ: ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಉದ್ದಿಮೆಗಳಲ್ಲಿ ಬಳಸುವ ವಾಣಿಜ್ಯ ಉದ್ದೇಶದ ಎಲ್‌ಪಿಜಿ ಸಿಲಿಂಡರ್‌ ದರ ಗುರುವಾರ ₹83.50 ಕಡಿತಗೊಂಡಿದೆ.     ದೆಹಲಿಯಲ್ಲಿ 19ಕೆ.ಜಿಯ ವಾಣಿಜ್ಯ ಸಿಲಿಂಡರ್‌ ಬೆಲೆ ₹1773 ಆಗಿದೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ಗುರುವಾರ ತನ್ನ ಟ್ವಿಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಗೃಹ ಬಳಕೆಯ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

Read More »

ಲೈಂಗಿಕ ಕಿರುಕುಳ ಆರೋಪ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧಿಸುವಂತೆ ಆಗ್ರಹ

ಬೆಳಗಾವಿ: ದೇಶದ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತ ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ ಸಿಂಗ್ ಅವರನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿದವು. ಬೆಳಗಾವಿ, ಶಿವಮೊಗ್ಗ, ಮೈಸೂರು ಸೇರಿದಂತೆ ಹಲವಡೆ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳು, ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಬ್ರಿಜ್ ಭೂಷಣ್ ಶರಣ್ …

Read More »

ಕರ್ನಾಟಕದಲ್ಲಿ ಒಂದೇ ವಾರದಲ್ಲಿಲಘು ವಿಮಾನ ಪತನ;

ಚಾಮರಾಜನಗರ: ಇಲ್ಲಿನ ಭೋಗಪುರ ಬಳಿ ಲಘು ವಿಮಾನವೊಂದು ಪತನವಾಗಿದ್ದು ಇಬ್ಬರು ಪೈಲಟ್ ಗಳು ಅಪಾಯದಿಂದ ಪಾರಾಗಿದ್ದಾರೆ. ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಅಪಾಯದ ಮುನ್ಸೂಚನೆ ಲಭಿಸುತ್ತಿದ್ದಂತೆ ಇಬ್ಬರೂ ಪೈಲಟ್ ಗಳು ಪ್ಯಾರಾಚೂಟ್ ಮೂಲಕ ಕೆಳಗೊಇಳಿದಿದ್ದಾರೆ. ವಿಮಾನ ವೇಗದಲ್ಲಿ ಬಂದು ನೆಲಕ್ಕಪ್ಪಳಿಸುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಈ ಕುರಿತು ತನಿಖೆ ಕೈಗೊಳ್ಳಲಾಗುತ್ತಿದೆ. ಕಳೆದ ಮಂಗಳವಾರವಷ್ಟೇ ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ಸಾಂಬ್ರಾ ನಿಲ್ದಾಣದಿಂದ ಹೊರಟಿದ್ದ …

Read More »

ಗುಣಮಟ್ಟದ ಶಿಕ್ಷಣ ಪಡೆದು ಮಕ್ಕಳು ಸಾಧನೆಯ ಶಿಖರ ಏರಬೇಕೆಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ

ಎಂ.ಕೆ.ಹುಬ್ಬಳ್ಳಿ: ಮಕ್ಕಳಲ್ಲಿ ಉತ್ತಮ ಆಚಾರ-ವಿಚಾರಗಳನ್ನು ಬೆಳೆಸಬೇಕು. ಗುಣಮಟ್ಟದ ಶಿಕ್ಷಣ ಪಡೆದು ಮಕ್ಕಳು ಸಾಧನೆಯ ಶಿಖರ ಏರಬೇಕೆಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು. ಸಮೀಪದ ದಾಸ್ತಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬುಧವಾರ ನಡೆದ 2023-24ನೇ ಸಾಲಿನ ಶಾಲಾ ಪ್ರಾರಂಭೋತ್ಸವದಲ್ಲಿ ಮಾತನಾಡಿದರು. ಸ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಅನುದಾನದ ಜೊತೆಗೆ ಸಾರ್ವಜನಿಕರ ಸಹಾಯ, ಸಹಕಾರವು ಮುಖ್ಯ ಎಂದರು. ಶಾಸಕ ಬಾಬಾಸಾಹೇಬ ಪಾಟೀಲ ಹೂ ಕೊಟ್ಟು, ಸಿಹಿ ತಿನ್ನಿಸಿ ವಿದ್ಯಾರ್ಥಿಗಳನ್ನು …

Read More »

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದರೆ ಮಾತ್ರ ನನಗೆ ಹೆಚ್ಚಿನ ನೆಮ್ಮದಿಯೆಂದು ಶಾಸಕ ವಿಶ್ವಾಸ್ ವೈದ್ಯ

ಸವದತ್ತಿ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದರೆ ಮಾತ್ರ ನನಗೆ ಹೆಚ್ಚಿನ ನೆಮ್ಮದಿಯೆಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು. ಇಲ್ಲಿನ ಯಲ್ಲಮ್ಮ ಪುರಸಭೆ ಸಭಾಂಗಣದಲ್ಲಿ ಜರುಗಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಅವರು, ನಗರದಲ್ಲಿ ಮನೆಗಳಿಗೆ ಪ್ರತಿದಿನ ನೀರು ಪೂರೈಕೆಯಾಗಬೇಕಿದೆ. ಆ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಸಹಕರಿಸಿರಿ. ಜನರ ಮೂಲ ಸೌಕರ್ಯಗಳಿಗೆ ಹೆಚ್ಚು ಆಧ್ಯತೆ ನೀಡಬೇಕಿರುವುದು ಆಧ್ಯ ಕರ್ತವ್ಯವಾಗಿದೆ. 18 ಸಾವಿರ ಜನತೆಗಾಗಿ 1997ರಲ್ಲಿ ಜಾಕ್ವೆಲ್ ಸ್ಥಾಪನೆಯಾಗಿತ್ತು. ಸಧ್ಯ …

Read More »

ಮಲಗಿದಲ್ಲೇ ಪ್ರಾಣ ಬಿಟ್ಟ ಮದ್ಯವ್ಯಸನಿ ದಂಪತಿ

ಧಾರವಾಡ: ತಾಲ್ಲೂಕಿನ ಸಲಕಿನಕೊಪ್ಪ ಗ್ರಾಮದ ಸಮೀಪದಲ್ಲಿ ಕುಡಿತದ ದಾಸರಾಗಿದ್ದ ದಂಪತಿ ಮಲಗಿದ ಸ್ಥಳದಲ್ಲೇ ಪ್ರಾಣ ಬಿಟ್ಟಿರುವ ಘಟನೆ ಸೋಮವಾರ ನಡೆದಿದೆ. ಧಾರವಾಡ ಭವಾನಿನಗರದ ನಿವಾಸಿಗಳಾಗಿದ್ದ ರಾಜು ರೇವಾಳ (46) ಹಾಗೂ ಗೀತಾ ರೇವಾಳ (40) ಮೃತಪಟ್ಟವರು.   ಕಟ್ಟಡ ಕೂಲಿ ಕಾರ್ಮಿಕರಾಗಿದ್ದ ಈ ದಂಪತಿ, ಸಲಕಿನಕೊಪ್ಪ ಗ್ರಾಮಕ್ಕೆ ಮಾವಿನ ತೋಟ ಕಾಯುವ ಕೆಲಸಕ್ಕೆ ಬಂದಿದ್ದರು. ಕುಟುಂಬಸ್ಥರಿಂದ ದೂರವಿದ್ದ ಇಬ್ಬರು ವಿಪರೀತ ಮದ್ಯವ್ಯಸನಿಗಳಾಗಿದ್ದರು. ಅಲ್ಲದೇ ರಾಜು ಎಂಬಾತ ಗ್ಯಾಂಗ್ರಿನ್ ಕಾಯಿಲೆಯಿಂದ ಬಳಲುತ್ತಿದ್ದರು. …

Read More »

ವಾಮಾನ ಇಲಾಖೆ ಮಾಹಿತಿ ನೀಡಿರುವ ಪ್ರಕಾರ ಅಕಾಲಿಕ ಮುಂಗಾರಿನ ಪರಿಣಾಮ ಗುಜರಾತ್​ನಲ್ಲಿ ಇನ್ನೆರಡು ದಿನ ಗಾಳಿ ಮಳೆಯಾಗಲಿದೆ.

ಅಹಮದಾಬಾದ್​ (ಗುಜರಾತ್): ಶುಭಮನ್​ ಗಿಲ್​, ರಶೀದ್​ ಖಾನ್​, ಹಾರ್ದಿಕ್​ ಪಾಂಡ್ಯರ ಚುರುಕಿನ ಆಟ, ಕ್ರಿಕೆಟ್​ನ ಮಾಸ್ಟರ್​ ಮೈಂಡ್​ ಎಮ್​ಎಸ್​ ಧೋನಿ ಅವರ ಚಾಣಾಕ್ಷ ನಡೆಯ ಪಂದ್ಯವನ್ನು ನೋಡಲು ನಿನ್ನೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂಗೆ ಬಂದಿದ್ದ ಅಭಿಮಾನಿಗಳಿಗೆ ವರುಣ ಬೇಸರ ಉಂಟುಮಾಡಿದ್ದ. ಆದರೆ, ಪಂದ್ಯವನ್ನು ಸೋಮವಾರ (ಇಂದು)ದ ಮೀಸಲು ದಿನಕ್ಕೆ ಮುಂದೂಡಲಾಯಿತು. ಹಾಗಾದರೆ ಇಂದಿನ ಹವಾಮಾನ ವರದಿ ಏನಿದೆ..?   ಗುಜರಾತ್​ನಲ್ಲಿ ಅಕಾಲಿಕ ಮಳೆ ಅನಾಹುತ ಸೃಷ್ಟಿಸುತ್ತಿದೆ. ಚಂಡಮಾರುತದ ಚಲನೆಯಿಂದಾಗಿ, ಕಳೆದ …

Read More »

ಖಾಸಗಿ ಬಸ್ ಮತ್ತು ಇನ್ನೋವಾ ಕಾರ್ ನಡುವೆ ಭೀಕರ ಅಪಘಾತ: 6 ಮಂದಿ ಸಾವು..

ಮೈಸೂರು: ಖಾಸಗಿ ಬಸ್ ಮತ್ತು ಇನ್ನೋವಾ ಕಾರ್ ನಡುವೆ ಡಿಕ್ಕಿ ಸಂಭವಿಸಿ ಕಾರ್​ನಲ್ಲಿ ಪ್ರಯಾಣಿಸುತ್ತಿದ್ದ 6 ಮಂದಿ ಸಾವನ್ನಪ್ಪಿರುವ ದುರ್ಘಟನೆ ಮೈಸೂರಿನ ಕೊಳ್ಳೇಗಾಲ ಮುಖ್ಯರಸ್ತೆಯ ಕುರುಬೂರು ಗ್ರಾಮದ ಬಳಿ ನಡೆದಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ನಡೆದ ಸ್ಥಳಕ್ಕೆ ನರಸೀಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರ್​​ನಲ್ಲಿ ಪ್ರಯಾಣಿಸುತ್ತಿದ್ದವರನ್ನು ಬಳ್ಳಾರಿ ಮೂಲದವರು ಎಂದು ಹೇಳಲಾಗುತ್ತಿದ್ದು, ಮಲೆ ಮಾದೇಶ್ವರನ ದರ್ಶನಕ್ಕೆ ಹೋಗಿ ಮೈಸೂರು ನಗರದತ್ತ ಆಗಮಿಸುತ್ತಿದ್ದರು. ಈ …

Read More »