ಮಂಗಳೂರು: ಯಾರ ಪ್ರಮಾದವೋ ಏನೋ, ನಮ್ಮ ಮಣ್ಣಿನಲ್ಲಿ ಹುಟ್ಟಿದ ಸಿಂಡಿಕೇಟ್, ಕಾರ್ಪೋರೇಶನ್ ಬ್ಯಾಂಕ್‌ಗಳು ಕಣ್ಮರೆಯಾಗಿವೆ. ಹೀಗಾಗಿ ನಮ್ಮ ಮಣ್ಣಿನಲ್ಲಿ ಹುಟ್ಟಿ ಕಣ್ಮರೆಯಾಗಿರುವ ಬ್ಯಾಂಕುಗಳು ಹಾಗೂ ಇತರೆ ಬ್ಯಾಂಕ್‌ಗಳನ್ನು ಕರ್ಣಾಟಕ ಬ್ಯಾಂಕ್ (Karnataka Bank) ಜತೆ ವಿಲೀನ ಮಾಡಿಕೊಳ್ಳುವಂತಾಗಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ನಗರದಲ್ಲಿ ನಡೆದ ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮ ಮುಂದಿನ ಗುರಿ ನಾವು ಕಳೆದುಕೊಂಡಿರುವ ನಮ್ಮ ಮಣ್ಣಿನ ಬ್ಯಾಂಕುಗಳನ್ನು ಮತ್ತೆ ಕರ್ಣಾಟಕ …
Read More »ಶವಸಂಸ್ಕಾರಕ್ಕೆ ಜಮೀನು ಬಿಡದ ಮಾಲೀಕ, ಗ್ರಾಮಸ್ಥರ ಕಿತ್ತಾಟ
ಬೆಳಗಾವಿ, : ಸ್ಮಶಾನ ವಿಲ್ಲದ ಕಾರಣ ಈ ಹಿಂದೆ ಜಮೀನೊಂದರಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತಿತ್ತು. ಆದರೆ ಈಗ ಜಮೀನಿನ ಮಾಲೀಕ (Land Owner) ಕೋರ್ಟ್ ಆರ್ಡರ್ ತಂದಿದ್ದು ಅಂತ್ಯಸಂಸ್ಕಾರಕ್ಕೆ (Last Rites) ಅಡ್ಡಿಪಡಿಸಿದ್ದಾನೆ. ಈ ಹಿನ್ನೆಲೆ ಕುಟುಂಬಸ್ಥರು, ಸಂಬಂಧಿಗಳು ಕಳೆದ ಎರಡು ಗಂಟೆಗಳಿಂದ ಸ್ಥಳದಲ್ಲಿ ಶವ ಇಟ್ಟು ಆಕ್ರೋಶ ಹೊರ ಹಾಕಿದ್ದರು. ಸದ್ಯ ಗಲಾಟೆಯಿಂದ ಬೇಸತ್ತ ಮಹಿಳೆಯರು ಮುನ್ನುಗ್ಗಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಬೆಳಗಾವಿ (Belagavi) ತಾಲೂಕಿನ ಕಾವಳೇವಾಡಿ ಗ್ರಾಮದಲ್ಲಿ ಸ್ಮಶಾನವಿಲ್ಲದೆ, ಅಂತ್ಯಸಂಸ್ಕಾರ …
Read More »ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಅವರಣದಲ್ಲಿ ಶ್ರೀ ಮಾರುತೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ.
ಗೋಕಾಕ : ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಅವರಣದಲ್ಲಿ ಶ್ರೀ ಮಾರುತೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ಯುವ ನಾಯಕ ಸಂತೋಷ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಅವರಣದಲ್ಲಿ ಶ್ರೀ ಮಾರುತೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ಈ ವಿಶೇಷ ಪೂಜೆ ಸಂದರ್ಭದಲ್ಲಿ ಶ್ರೀಮತಿ ಜಯಶ್ರೀ ರಮೇಶ್ ಜಾರಕಿಹೊಳಿ ಅವರು ಹಾಗೂ ಶ್ರೀಮತಿ ಅಂಬಿಕಾ ಸಂತೋಷ ಜಾರಕಿಹೊಳಿ ಅವರು ಭಾಗವಹಿಸಿದ್ದರು. ಹಿರೇನಂದಿ ಗ್ರಾಮದಿಂದ ಕಾರ್ಖಾನೆಯವರೆಗೆ ಭವ್ಯ …
Read More »ಪಂಚಮಸಾಲಿಯವರಿಗೆ ಐದು ಟಿಕೆಟ್ ಕೊಡಿ: ಕೂಡಲಸಂಗಮ ಶ್ರೀ
ಬೆಳಗಾವಿ: ‘ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಐದು ಕ್ಷೇತ್ರಗಳಲ್ಲಿ ಪಂಚಮಸಾಲಿ ಸಮುದಾಯದ ಅಭ್ಯರ್ಥಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ನವರು ಟಿಕೆಟ್ ನೀಡಬೇಕು’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಿತ್ತೂರು ಕರ್ನಾಟಕದಲ್ಲಿ ಪಂಚಮಸಾಲಿ ಸಮುದಾಯದವರೇ ಬಹುಸಂಖ್ಯಾತರು. ಅದಕ್ಕೆ ಕಿತ್ತೂರು ಕರ್ನಾಟಕದಲ್ಲಿ ಪಂಚಮಸಾಲಿ ಸಮುದಾಯದ ಇಬ್ಬರು, ಕಲ್ಯಾಣ ಕರ್ನಾಟಕದಲ್ಲಿ ಒಬ್ಬರಿಗೆ ಟಿಕೆಟ್ ಕೊಡಬೇಕು. ಮಲೆನಾಡಿನಲ್ಲಿ ಮಲೆಗೌಡ ಸಮುದಾಯಕ್ಕೆ ಮತ್ತು ಮೈಸೂರು …
Read More »ಏಳು ಕೋಟಿ ಕನ್ನಡಿಗರ ಕಿವಿಗೆ ಹೂವಿಟ್ಟ ಸಿಎಂ :H.D.K.
ಬೆಂಗಳೂರು: ಬಿಜೆಪಿ (BJP) ಅಧಿಕಾರದಲ್ಲಿ ಇದ್ದಾಗ ಬಸವರಾಜ್ ಬೊಮ್ಮಾಯಿ (Basavaraj Bommai) ಬಜೆಟ್ (budget) ಮಂಡನೆ ವೇಳೆ ಕಿವಿಗೆ ಹೂವು ಇಟ್ಟುಕೊಂಡು ಬಂದಿದ್ದ ಸಿದ್ದರಾಮಯ್ಯ (siddaramayya) ಅವರು ಈ ಬಾರಿ ರಾಜ್ಯದ ಏಳು ಕೋಟಿ ಜನರ ಕಿವಿ ಮೇಲೆ ಹೂವು ಮೂಡಿಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್. ಡಿ. ಕುಮಾರಸ್ವಾಮಿ ಹೇಳಿದರು. ರಾಜ್ಯ ಬಜೆಟ್ ಕುರಿತಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ದಾಖಲೆಯ …
Read More »ಸತತ 3 ಗಂಟೆ 14 ನಿಮಿಷ ‘ಬಜೆಟ್’ ಮಂಡಿಸಿದ ‘ಸಿಎಂ FULL BUDGET DETAILS
ಬೆಂಗಳೂರು: ಇಂದು ಸಿಎಂ ಸಿದ್ಧರಾಮಯ್ಯ ಅವರು, ಒಟ್ಟು 3,71,383 ಕೋಟಿ ಗಾತ್ರದ ರಾಜ್ಯ ಬಜೆಟ್ 2024-25 ಮಂಡಿಸಿದರು. ಇದಕ್ಕಾಗಿ ಒಟ್ಟು 3 ಗಂಟೆ 14 ನಿಮಿಷಗಳನ್ನು ತೆಗೆದುಕೊಂಡರು. ಕಳೆದ ಬಾರಿ ಸಿದ್ದರಾಮಯ್ಯ ಅವರು 3.27 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದರು. ಇಂದು 3.17 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಆ ರಾಜ್ಯ ಬಜೆಟ್ 2024-25ರ ಸಂಪೂರ್ಣ ಹೈಲೈಟ್ಸ್ ಮುಂದೆ ಓದಿ. ನಾನು 2024-25ನೇ ಸಾಲಿನ ಆಯವ್ಯಯವನ್ನು …
Read More »ಬೆಳಗಾವಿಯ ನಾಲ್ವರು ಪೊಲೀಸರ ಕರ್ತವ್ಯ ಪ್ರಜ್ಞೆ, ಕೆಲಸಕ್ಕೆ ಇಡೀ ಪೊಲೀಸ್ ಇಲಾಖೆ, ಕೋರ್ಟ್ ಅಪಾರ ಮೆಚ್ಚುಗೆ!
ಬೆಳಗಾವಿ ಪೊಲೀಸ್ ಆಯುಕ್ತರ ಸೂಚನೆಯಂತೆ ಅಂದು ಬೆಳಗ್ಗೆಯೇ ಅಖಾಡಕ್ಕಿಳಿದ ಪೊಲೀಸರು ಮನೆ ಮನೆಗೆ ಹೋಗಿ ಎಲ್ಲರ ಮೊಬೈಲ್ ಪರಿಶೀಲನೆ ಮಾಡ್ತಾರೆ. ಖುದ್ದು ಇವರೇ ಮೊಬೈಲ್ ನಲ್ಲಿನ ವಿಡಿಯೋ ಡಿಲಿಟ್ ಮಾಡುತ್ತಾರೆ, ಕೆಲ ಯುವಕರು ಊರು ಬಿಟ್ಟಿದ್ದು ಅವರನ್ನೂ ಕರೆಯಿಸಿ ಮೊಬೈಲ್ ನಲ್ಲಿ ವಿಡಿಯೋ ಡಿಲಿಟ್ ಮಾಡಿಸ್ತಾರೆ. ಯಾರಾದ್ರೂ ವೈರಲ್ ಮಾಡಿದ್ರೇ ಅವರ ವಿರುದ್ದ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಇವರೇ ಊರ ತುಂಬ ಅನೌನ್ಸ್ ಕೂಡ ಮಾಡಿರುತ್ತಾರೆ. ಅದು ಡಿಸೆಂಬರ್ …
Read More »ರಸ್ತೆ ಕಾಮಗಾರಿ | ಹುಬ್ಬಳ್ಳಿಯಲ್ಲಿ ಸಂಚಾರ ದಟ್ಟಣೆ; ಸಂಕಷ್ಟ!
ಹುಬ್ಬಳ್ಳಿ: ನಗರದಲ್ಲಿ ಪ್ರಮುಖ ರಸ್ತೆಗಳು ಸಂಧಿಸುವ ರಾಣಿ ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧೆಡೆ ನನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿಗಳನ್ನು ಏಕಕಾಲಕ್ಕೆ ಆರಂಭಿಸಲಾಗಿದೆ. ಇದರಿಂದ ಚನ್ನಮ್ಮ ವೃತ್ತದಲ್ಲಿ ಸೋಮವಾರ ದಿನವಿಡೀ ವಾಹನಗಳ ಸಂಚಾರ ದಟ್ಟಣೆ ಏರ್ಪಟ್ಟಿತ್ತು. ಚನ್ನಮ್ಮ ವೃತ್ತದಿಂದ ಯುರೇಕಾ ಟವರ್ ಪಕ್ಕದಿಂದ ನವಲಗುಂದದತ್ತ ವಾಹನಗಳು ಸಂಚರಿಸುವುದನ್ನು ಬಂದ್ ಮಾಡಲಾಗಿದ್ದು, ಪರ್ಯಾಯವಾಗಿ ಕಾಮತ್ ಹೋಟೆಲ್ ಎದುರು ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಕ್ಕಟ್ಟಿನಲ್ಲಿ ವಾಹನಗಳು ಆಮೆಗತಿಯಲ್ಲಿ ಸಂಚರಿಸುತ್ತಿದ್ದು, …
Read More »ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’11 DYSP, 51 PI’ ವರ್ಗಾವಣೆ
ಬೆಂಗಳೂರು: ರಾಜ್ಯ ಸರ್ಕಾರದಿಂದ ಮುಂಬರುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ, 51 ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ 11 ಡಿವೈಎಸ್ಪಿ ವರ್ಗಾವಣೆ ಮಾಡಿ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ವರ್ಗಾವಣೆ ಅಧಿಸೂಚನೆ ಹೊರಡಿಸಿದ್ದು, ಲೋಕಸಭಾ ಚುನಾವಣೆ ನಿಮಿತ್ತ ವರ್ಗಾವಣೆಗೊಳಿಸಲಾಗಿದ್ದ ಆದೇಶವನ್ನು ಭಾಗಶಃ ಮಾರ್ಪಡಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಅವರ 11 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದಿದೆ. ಟಿಎಂ ಶಿವಕುಮಾರ್ ಅವರನ್ನು ಕಲಬುರ್ಗಿಯ ಸಂಚಾರ ಉಪವಿಭಾಗಕ್ಕೆ, ಅಸ್ಲಂ ಪಾಷಾ ಅವರನ್ನು …
Read More »ಲೋಕಸಭೆ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡುವಂತೆ ಖರ್ಗೆಗೆ ಶಾಮನೂರು ಶಿವಶಂಕರಪ್ಪ ಪತ್ರ
ಬೆಂಗಳೂರು, ಫೆ.12: ರಾಜ್ಯಸಭೆ (Rajya Sabha) ಮತ್ತು ಲೋಕಸಭೆ ಚುನಾವಣೆ (Lok Sabha Elections) ಸಮೀಪಿಸುತ್ತಿದ್ದು, ಟಿಕೆಟ್ಗಾಗಿ ಕಾಂಗ್ರೆಸ್ನಲ್ಲಿ ಲಾಭಿಗಳು ಆರಂಭಗೊಂಡಿವೆ. ಈ ನಡುವೆ, ಮುಂಬರುವ ಎರಡು ಚುನಾವಣೆಗಳಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡುವಂತೆ ಕೋರಿ ಅಖಿಲ ಭಾರತ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರು ಎಐಸಿಸಿ ಅಧ್ಯಕ್ಷಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯಸಭೆಯಲ್ಲಿ ಮೂರು ಸ್ಥಾನಗಳು ಕಾಂಗ್ರೆಸ್ಗೆ ದೊರೆಯಲಿವೆ. ಈ ಮೂರು ಸ್ಥಾನಗಳಲ್ಲಿ ಒಂದು …
Read More »