Breaking News

Uncategorized

‘ಪೊಲೀಸ್ ಇಲಾಖೆಯಲ್ಲಿ ಕೆಲಸ‌ ಮಾಡುವವರು ಸಂದರ್ಭಕ್ಕೆ ತಕ್ಕಂತೆ ಧೈರ್ಯದಿಂದ ಕೆಲಸ ಮಾಡಬೇಕು’ : ಕಮಿಷನರ್ ಎಸ್.ಎನ್.ಸಿದ್ರಾಮಪ್ಪ

ಬೆಳಗಾವಿ: ‘ಪೊಲೀಸ್ ಇಲಾಖೆಯಲ್ಲಿ ಕೆಲಸ‌ ಮಾಡುವವರು ಸಂದರ್ಭಕ್ಕೆ ತಕ್ಕಂತೆ ಧೈರ್ಯದಿಂದ ಕೆಲಸ ಮಾಡಬೇಕು’ ಎಂದು ನಗರ ಪೊಲೀಸ್ ಕಮಿಷನರ್ ಎಸ್.ಎನ್.ಸಿದ್ರಾಮಪ್ಪ ಕರೆ ನೀಡಿದರು. ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ತಮ್ಮ ಸೇವಾನಿವೃತ್ತಿ ಹಿನ್ನೆಲೆಯಲ್ಲಿ ಪೊಲೀಸರಿಂದ ಬುಧವಾರ ಗೌರವವಂದನೆ ಸ್ವೀಕರಿಸಿ ಅವರು ಮಾತನಾಡಿದರು‌.   ‘ಬೆಳಗಾವಿಯಲ್ಲಿ ನಡೆಯುವ ಗಣೇಶ ಉತ್ಸವದ ವಿಸರ್ಜನೆಯಂಥ ಸಂದರ್ಭ ನಾವು 18ರಿಂದ 20 ತಾಸು ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಪೊಲೀಸ್ ಇಲಾಖೆ …

Read More »

ವಾಕಿಂಗ್ ಹೋದವರ ಮೇಲೆ ಕರಡಿ ದಾಳಿ.

ಶಿವಮೊಗ್ಗ: ಚಿರತೆ, ಕಾಡಾನೆ ಕಾಡು ಬಿಟ್ಟು ನಾಡಿನತ್ತ ಹೆಜ್ಜೆ ಹಾಕುತ್ತಿರುವುದು ಹೊಸತೇನು ಅಲ್ಲ ಆದರೆ ಈ ಬಾರಿ ಕರಡಿಯೊಂದು ನಗರ ಪ್ರದೇಶದಲ್ಲಿ ಕಂಡು ಬಂದಿದ್ದು ಬೆಳ್ಳಂಬೆಳಗ್ಗೆ ವಾಕಿಂಗ್ ಹೋಗುವವರ ಮೇಲೆ ದಾಳಿ ನಡೆಸಿದ ಘಟನೆ ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.   ಘಟನೆಯಲ್ಲಿ ತುಕಾರಂ ಶೆಟ್ಟಿ ಎಂಬುವವರ ಹೊಟ್ಟೆಯ ಭಾಗಕ್ಕೆ ತರಚಿದ ಗಾಯಗಳಾಗಿವೆ. ಸೋಮವಾರ ಬೆಳಗ್ಗೆ ತುಕಾರಾಂ ಶೆಟ್ಟಿ ಅವರು ವಾಕಿಂಗ್ ಹೋದ ವೇಳೆ ಕರಡಿಯನ್ನು ಬೀದಿ …

Read More »

ರಾಜ್ಯಸಭಾ ಚುನಾವಣೆ: ಬಿಜೆಪಿ, ಜೆಡಿಎಸ್ ವಿರುದ್ಧ ಡಿಕೆಶಿ ‘ಆಪರೇಷನ್ ಬಾಂಬ್’ ಆರೋಪ

ಬೆಂಗಳೂರು: ಇಂದು ರಾಜ್ಯಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಇದೇ ವೇಳೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಬಿಜೆಪಿ, ಜೆಡಿಎಸ್ ವಿರುದ್ಧ ಆಪರೇಷನ್ ಬಾಂಬ್ ಆರೋಪ ಮಾಡಿದ್ದಾರೆ. ಈ ಕುರಿತಂತೆ ಬೆಂಗಳೂರಿನ ಹಿಲ್ಟನ್ ಹೋಟೆಲ್ ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನಮ್ಮ 42 ಶಾಸಕರನ್ನು ಬಿಜೆಪಿ, ಜೆಡಿಎಸ್ ನವರು ಸಂಪರ್ಕಿಸಿ, ಆಪರೇಷನ್ ಮಾಡೋ ಪ್ರಯತ್ನ ನಡೆಸಿದ್ದಾರೆ. ಅವರಿಗೆ ರಾಜಕೀಯದ ಬಗ್ಗೆ ಬೇಸಿಕ್ ಕಾಮನ್ ಸೆನ್ಸ್ ಇಲ್ಲ ಎಂಬುದಾಗಿ ವಾಗ್ಧಾಳಿ ನಡೆಸಿದರು. ಹಣ ಇದೆ …

Read More »

ನಾಳೆ ರಾಜ್ಯಸಭಾ ಕದನ; ಅಡ್ಡಮತದಾನ ಭೀತಿ, ಕೈಗೆ ಫಜೀತಿ!

ಬೆಂಗಳೂರು: ರಾಜ್ಯದಲ್ಲಿ ರಾಜ್ಯಸಭಾ ಕದನ (Rajya Sabha Election) ಕುತೂಹಲ ಕೆರಳಿಸಿದೆ. “ನಂಬರ್‌ ಗೇಮ್‌” ಆರಂಭವಾಗಿರುವ ಹಿನ್ನೆಲೆಯಲ್ಲಿ ಮೂರೂ ರಾಜಕೀಯ ಪಕ್ಷಗಳೂ ತಂತ್ರಗಾರಿಕೆಯಲ್ಲಿ ತೊಡಗಿವೆ. ಒಟ್ಟು ನಾಲ್ಕು ಸ್ಥಾನಕ್ಕೆ ಐವರು ಅಭ್ಯರ್ಥಿಗಳು ಇರುವುದರಿಂದ ಚುನಾವಣಾ ಕಣ ರೋಚಕವಾಗಿದೆ. ಈ ಹಿನ್ನೆಲೆಯಲ್ಲಿ ಅಡ್ಡ ಮತದಾನದ ಭೀತಿ ಎದುರಾಗಿದ್ದು, ಕಾಂಗ್ರೆಸ್‌ ತನ್ನ ಶಾಸಕರನ್ನು (Congress MLAs) ರೆಸಾರ್ಟ್‌ಗೆ (Resort Politics) ಶಿಫ್ಟ್‌ ಮಾಡಲು ಪ್ಲ್ಯಾನ್‌ ಮಾಡಿದೆ. ಈ ಸಂಬಂಧ ಈಗಾಗಲೇ ಸೂಚನೆಯನ್ನೂ ನೀಡಿದೆ. ಆಡಳಿತ …

Read More »

ಸಂಕೇಶ್ವರ-ಮೈಸೂರು ಬಸ್ ಆರಂಭ

ಸಂಕೇಶ್ವರ: ವಾಯವ್ಯ ಸಾರಿಗೆ ಸಂಸ್ಥೆಯ ಸಂಕೇಶ್ವರ ಘಟಕದಿಂದ ಮೈಸೂರಿಗೆ ಹೊಸ ಬಸ್ ಸಂಚಾರವನ್ನು ಗುರುವಾರ ಆರಂಭಿಸಲಾಗಿದೆ. ಈ ಬಸ್ ಮಧ್ಯಾಹ್ನ 12.30ಕ್ಕೆ ಕೊಲ್ಹಾಪುರದಿಂದ ಹೊರಟು, ಮಧ್ಯಾಹ್ನ 2 ಗಂಟೆಗೆ ಸಂಕೇಶ್ವರ ಬಸ್ ನಿಲ್ದಾಣಕ್ಕೆ ಬರಲಿದೆ. ಸಂಕೇಶ್ವರದಿಂದ 2.10ಕ್ಕೆ ಹೊರಟು, ಮರುದಿನ ಬೆಳಿಗ್ಗೆ 5 ಗಂಟೆಗೆ ಮೈಸೂರು ತಲುಪಲಿದೆ.   ರಾತ್ರಿ 8 ಗಂಟೆಗೆ ಮೈಸೂರಿನಿಂದ ಹೊರಡುವ ಬಸ್, ಮಧ್ಯಾಹ್ನ 12.30ಕ್ಕೆ ಕೊಲ್ಹಾಪುರ ತಲುಪಲಿದೆ.730 ಕಿ.ಮೀ. ದೂರದ ಪ್ರಯಾಣಕ್ಕೆ ₹700 ದರ ನಿಗದಿಪಡಿಸಲಾಗಿದೆ.

Read More »

ಲೋಕಸಭೆ ಚುನಾವಣೆ: ಪರಿಶಿಷ್ಟರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಆಗ್ರಹ

ರಾಮದುರ್ಗ: ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಈ ಬಾರಿ ಎಸ್‍ಸಿ/ಎಸ್‍ಟಿ ಸಮುದಾಯದ ಅನಂತಕುಮಾರ ಬ್ಯಾಕೋಡ ಅವರಿಗೆ ನೀಡಬೇಕು ಎಂದು ಪಕ್ಷದ ಎಸ್‍ಸಿ/ಎಸ್‍ಟಿ ಘಟಕದ ಉಪಾಧ್ಯಕ್ಷೆ ಲಕ್ಷ್ಮೀ ನಾಗಣ್ಣವರ ವರಿಷ್ಠರನ್ನು ಒತ್ತಾಯಿಸಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಪರಿಶಿಷ್ಟ ಜಾತಿಯವರಿಗೆ 50 ವರ್ಷಗಳಿಂದಲೂ ಟಿಕೆಟ್‌ ನೀಡಿಲ್ಲ. ಸುಮಾರು 6 ಲಕ್ಷ ಮತಗಳಿದ್ದರೂ ಈ ಜನಾಂಗಕ್ಕೆ ವಿಧಾನ ಪರಿಷತ್, ವಿಧಾನಸಭೆ ಮತ್ತು ನಿಗಮ ಮಂಡಳಿಗೂ ಪರಿಗಣಿಸಿಲ್ಲ’ ಎಂದು ಆಕ್ರೋಶ …

Read More »

ರಾಜ್ಯ ಕಾನೂನು ವಿವಿ: 2 ವರ್ಷಗಳಿಂದ ನಡೆದಿಲ್ಲ ಘಟಿಕೋತ್ಸವ

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ (ಅಕಾಡೆಮಿಕ್‌ ಕೌನ್ಸಿಲ್‌) ರಚನೆ ವಿಳಂಬ ಆಗಿರುವ ಕಾರಣ ಎರಡು ವರ್ಷಗಳಿಂದ ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆದಿಲ್ಲ. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ರಾಜ್ಯದ 108 ಕಾನೂನು ಕಾಲೇಜುಗಳಿವೆ. 2021-22 ಮತ್ತು 2022-23ನೇ ಸಾಲಿನ ಘಟಿಕೋತ್ಸವ ಈವರೆಗೆ ನಡೆದಿಲ್ಲ. ಕಾನೂನು ಪದವಿ ಹಾಗೂ ಸ್ನಾತಕೋತ್ತರ ಪದವಿಯ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಮಾಣ ಪತ್ರದ ನಿರೀಕ್ಷೆಯಲ್ಲಿದ್ದಾರೆ. ರಚನೆಯಾಗದ ಮಂಡಳಿ: ‘ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ …

Read More »

ಭಾರತದಲ್ಲಿ ತಾಯಿಗಿದೆ ಪರಮೋಚ್ಛ ಸ್ಥಾನ: ಸಿದ್ಧರಾಮ ಸ್ವಾಮೀಜಿ

ಹಂದಿಗುಂದ: ‘ತಾಯಿ ಬಗ್ಗೆ ಎಷ್ಟೇ ವರ್ಣಿಸಿದರೂ ಕಡಿಮೆಯೇ. ನಮ್ಮ ದೇಶದಲ್ಲಿ ತಾಯಿ ಪರಮೋಚ್ಛ ಸ್ಥಾನ ನೀಡಲಾಗಿದೆ’ ಎಂದು ಗದಗ-ಡಂಬಳದ ತೋಂಟದಾರ್ಯ ಸಂಸ್ಥಾನಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು. ಹಂದಿಗುಂದದಲ್ಲಿ ನಡೆದ ಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ ಪೂರ್ವಾಶ್ರಮದ ತಾಯಿ ಶಿವಗಂಗಮ್ಮ ಮಠದ ಅವರ ಅಮೃತ ಮಹೋತ್ಸವ ಮತ್ತು ಮಾತೃವಂದನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಶಿವಾನಂದ ಸ್ವಾಮೀಜಿ, ‘ಪ್ರತಿಯೊಬ್ಬರೂ ಹೆತ್ತವರ ಬಗ್ಗೆ ಕಾಳಜಿ ಮಾಡಬೇಕು. ಎಲ್ಲವನ್ನೂ ಮಾಡಿ ನಾನೇನು …

Read More »

ಗೌಡತಿಯರ ಸೇನೆಯಿಂದ ದರ್ಶನ್ ವಿರುದ್ದ ದೂರು

ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ತಗಡೇ ಹಾಗೂ ಗುಮ್ಮಿಸ್ಕೊತ್ತೀಯಾ ಪದ ಬಳಕೆಗೆ ದೂರು ದಾಖಲಾದ ಬೆನ್ನಲ್ಲೇ ಗೌಡತಿಯರ ಸೇನೆಯಿಂದ ನಟ ವಿರುದ್ದ ದೂರು ಸಲ್ಲಿಸಲಾಗಿದೆ. ಈ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದರೆ ಈಗ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.  ಜಯಶ್ರೀ , ರೇಣುಕಾ ನೇತೃತ್ವದಲ್ಲಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ ಮಹಿಳೆಯರು ನಟ ಮಹಿಳೆಯರ ಕುರಿತು ಮಾಡಿದ ಕಮೆಂಟ್ ಖಂಡಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಇತ್ತೀಚೆಗೆ ನಡೆದ ದರ್ಶನ್ …

Read More »

ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ

ಬೆಂಗಳೂರು,ಫೆ.22- ರಾಜ್ಯಸಭಾ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜೆಡಿಎಸ್‍ನ ಕುಪೇಂದ್ರ ರೆಡ್ಡಿ ಅವರನ್ನು ಗೆಲ್ಲಿಸುವ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿಯ ಮಹತ್ವದ ಶಾಸಕಾಂಗ ಸಭೆ ಸಂಜೆ ನಡೆಯಲಿದೆ. ಸಂಜೆ ಏಳು ಗಂಟೆಗೆ ಖಾಸಗಿ ಹೋಟೆಲ್‍ನಲ್ಲಿ ನಡೆಯಲಿರುವ ಸಭೆಯಲ್ಲಿ ಪಕ್ಷದ ಎಲ್ಲ ಶಾಸಕರ ಭಾಗವಹಿಸಬೇಕೆಂದು ಸೂಚಿಸಲಾಗಿದೆ. ಸಭೆಯಲ್ಲಿ ರಾಜ್ಯಸಭಾ ಚುನಾವಣೆಗೆ ಅನುಸರಿಸಬೇಕಾದ ಕಾರ್ಯತಂತ್ರಗಳು ಹಾಗೂ ಎನ್‍ಡಿಎ ಅಭ್ಯರ್ಥಿ ಗೆಲುವಿನ ಕುರಿತು ರಣತಂತ್ರ ರೂಪಿಸಲಾಗುತ್ತದೆ ಎನ್ನಲಾಗಿದೆ. ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ …

Read More »