ತಾಯಂದಿರ ದಿನದ ಆ ಪ್ರಯುಕ್ತ ತಾಯಿಯ ಜೊತೆ ದೇವಸ್ಥಾನಕ್ಕೆ ಹೋಗಿ ವಾಪಸ್ಸು ಬರುವ ಸಂದರ್ಭದಲ್ಲಿ ನಟ ಚೇತನ್ ಚಂದ್ರ ಅವರ ಮೇಲೆ ಕೆಲವು ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ನಟನ ಕಾರಿಗೂ ಹಾನಿ ಮಾಡಿದ್ದಾರೆ. ಮಾರಣಾಂತಿಕವಾಗಿ ಹಲ್ಲೆಗೆ ಒಳಗಾಗಿರುವ ಚೇತನ್ ಚಂದ್ರ ಅವರು ಕಗ್ಗಲಿಪುರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಕನ್ನಡದ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ನಟ ಚೇತನ್ ಚಂದ್ರ (Chetan Chandra) ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಬೆಂಗಳೂರಿನ ಕಗ್ಗಲಿಪುರ …
Read More »ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಆರೋಗ್ಯದಲ್ಲಿ ಏರು ಪೇರು.!
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. Advertisement ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ 92 ವರ್ಷದ ಮಾಜಿ ಮುಖ್ಯಮಂತ್ರಿಯನ್ನು ಏಪ್ರಿಲ್ 29 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಶ್ವಾಸಕೋಶಶಾಸ್ತ್ರಜ್ಞ ಡಾ.ಸತ್ಯನಾರಾಯಣ ಮೈಸೂರು ಅವರಿಂದ ಚಿಕಿತ್ಸೆ ಪಡೆಯುತ್ತಿದ್ದರು.ಶನಿವಾರದ ವೇಳೆಗೆ, ಅವರು ಐಸಿಯುನಲ್ಲಿ ಚಿಕಿತ್ಸೆ ಮತ್ತು ಬೆಂಬಲವನ್ನು ಪಡೆಯುತ್ತಿದ್ದಾರೆ. ಡಾ.ಸುನಿಲ್ ಕಾರಂತ್ ನೇತೃತ್ವದ ತೀವ್ರ …
Read More »ಭೀಕರ ಅಪಘಾತದಲ್ಲಿ ಕನ್ನಡದ ಕಿರುತೆರೆ ಜನಪ್ರಿಯ ನಟಿ `ಪವಿತ್ರ ಜಯರಾಂ’ ನಿಧನ!
ಬೆಂಗಳೂರು : ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ ಜನಪ್ರಿಯರಾಗಿರುವ ಕನ್ನಡತಿ ಪವಿತ್ರ ಜಯರಾಂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆಂಧ್ರಪ್ರದೇಶದ ಕರ್ನೂಲು ಸಮೀಪದಲ್ಲಿ ಇಂದು (ಮೇ.12) ಮುಂಜಾನೆ ಅಪಘಾತವಾಗಿದೆ ಎಂದು ವರದಿಯಾಗಿದೆ.ಪವಿತ್ರ ಪ್ರಯಾಣಿಸುತ್ತಿದ್ದ ಕಾರು ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ಜನಪ್ರಿಯರಾಗಿದ್ದರು. ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ಇಬ್ಬರು ಮಕ್ಕಳು ಇದ್ದಾರೆ. ಕನ್ನಡದ ರೋಬೋ ಫ್ಯಾಮಿಲಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ …
Read More »ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್; ಮತ್ತೋರ್ವ ಮಹಾ ನಾಯಕನ ಹೆಸರು ಬಹಿರಂಗ ಪಡಿಸಿದ ಆರೋಪಿ
ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿಡಿಯೋ ವೈರಲ್ ಪ್ರಕರಣದ ಆರೋಪಿಗಳಲ್ಲೊಬ್ಬನಾದ ನವೀನ್ ಗೌಡ ಪೆನ್ ಡ್ರೈವ್ ಹಿಂದಿನ ಮತ್ತೋರ್ವ ಮಹಾ ನಾಯಕನ ಹೆಸರನ್ನು ಬಹಿರಂಗಪಡಿಸಿದ್ದಾನೆ. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಷ್ಟು ದಿನ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡುತ್ತಿದ್ದರು. ಆದರೆ ಇದೀಗ ವಿಡಿಯೋ ವೈರಲ್ ಪ್ರಕರಣದ ಆರೊಪಿ ನವೀನ್ ಗೌಡ, ಜೆಡಿಎಸ್ ಶಾಸಕರೊಬ್ಬರ ವಿರುದ್ಧವೇ ಸ್ಫೋಟಕ …
Read More »ಜೆಡಿಎಸ್ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಆದರೆ ಯಾರಿಂದಲೂ ಅದು ಸಾಧ್ಯವಿಲ್ಲ : ಶಾಸಕ ಎ.ಮಂಜು ಹೇಳಿಕೆ
ಮೈಸೂರು : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ನವೀನ್ ಗೌಡ ಫೇಸ್ಬುಕ್ನಲ್ಲಿ ಪೆನ್ ಡ್ರೈವ್ ಅನ್ನು ಅರಕಲಗೂಡು ಶಾಸಕ ಎ ಮಂಜು ಅವರಿಗೆ ನೀಡಿದ್ದೇನೆ ಎಂದು ಪೋಸ್ಟ್ ಹಾಕಿದ್ದು, ಈ ಕುಡಿದಂತೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಶಾಸಕ ಎ ಮಂಜು ನನಗೆ ಮಾಹಿತಿ ಇರೋ ಪ್ರಕಾರ ಈ ಪ್ರಕಾರಣ ಇಟ್ಟುಕೊಂಡು ಜೆಡಿಎಸ್ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಆದರೆ ಯಾರಿಂದಲೂ ಅದು ಸಾಧ್ಯವಿಲ್ಲ …
Read More »ಗುಡುಗು ಸಹಿತ ಭಾರೀ ಮಳೆ! ಸಿಡಿಲು ಬಡಿದು ಓರ್ವ ಬೈಕ್ ಸವಾರ ಸಾವು
ಬಾಗಲಕೋಟೆ: ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ ಗುಡುಗು, ಮಿಂಚು ಸಹಿತ ಮಳೆ ಸುರಿಯುತ್ತಿದೆ. ಇಂದು ಬಾಗಲಕೋಟೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆ, ಗಾಳಿ, ಮಿಂಚು, ಗುಡುಗಿನ ಅಬ್ಬರ ಜೋರಾಗಿದ್ದು, ಸಿಡಿಲು ಬಡಿದು ಓರ್ವ ಬೈಕ್ ಸವಾರ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿ ಮಳೆಗಿಂತ ಗುಡುಗು, ಸಿಡಿಲಿನ ಆರ್ಭಟ ಜೋರಾಗಿದ್ದು, ಮೃತ ಬೈಕ್ ಸವಾರನನ್ನು ಪ್ರಕಾಶ್ ವಗ್ಗರ್ (21) ಎಂದು ಗುರುತಿಸಲಾಗಿದೆ. ಪ್ರಕಾಶ್ ಮೂಲತಃ ವಿಜಯಪುರ ಜಿಲ್ಲೆಯ ಗೋನಾಳ ಗ್ರಾಮದವರು …
Read More »ನಗರದಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರ ಸಂಖ್ಯೆ 30 ಲಕ್ಷಕ್ಕೆ ಏರಿಕೆ
ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆ ಆಗಿದೆ. ಬೆಂಗಳೂರಿನಲ್ಲಿ 2024ರ ಏಪ್ರಿಲ್ ವರೆಗೆ 30,61,524 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ದ್ವಿಚಕ್ರ ವಾಹನಗಳ ನಿಯಮ ಉಲ್ಲಂಘನೆ ಸಂಖ್ಯೆಯೇ ಶೇಕಡಾ 86.89 ರಷ್ಟಾಗಿದೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ವಾಹನಗಳ ಸಂಖ್ಯೆಯಲ್ಲಿ ಆಟೋ ಸಂಖ್ಯೆ 5971 ಆಗಿದ್ದು, ಕಾರುಗಳ ನಿಯಮ ಉಲ್ಲಂಘನೆ ಮಾಡಿದ ಸಂಖ್ಯೆ 3,67,006 ಆಗಿದೆ. 4405 ಗೂಡ್ಸ್ ಗಾಡಿಗಳ ಮೇಲೆ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿದ್ದು, …
Read More »ಹಾವೇರಿ: ಬಿಸಿಲಿಗೆ ಕುಕ್ಕುಟೋದ್ಯಮ ತತ್ತರ
ಹಾವೇರಿ: ಜಿಲ್ಲೆಯಲ್ಲಿ ದಿನೇದಿನೇ ಉಷ್ಣಾಂಶ ಏರುಮುಖವಾಗುತ್ತಿದ್ದು, ಬಿರು ಬಿಸಿಲಿಗೆ ಕೋಳಿಗಳು ಸಾಯುತ್ತಿರುವುದರ ಜೊತೆಗೆ ಮೊಟ್ಟೆಯ ಉತ್ಪಾದನೆ ಕಡಿಮೆಯಾಗಿ ಕುಕ್ಕುಟೋದ್ಯಮ ಬಿಸಿಲನ ಝಳದಿಂದ ನಷ್ಟವನ್ನು ಅನುಭಸುತ್ತಿದೆ. ನಗರದ ಹೊರವಲಯದಲ್ಲಿ ಇರುವ ಪತ್ರಿ ಫೌಲ್ಟ್ರೀ ಫಾರಂನಲ್ಲಿ ತಾಪಮಾನ ಕಡಿಮೆ ಮಾಡಲು ಸ್ಪ್ರಿಂಕ್ಲರ್ ಮೂಲಕ ಚಾವಣೆಗೆ ನೀರುನ್ನು ಸಿಂಪಡಣೆ ಮಾಡುತ್ತಿದ್ದಾರೆ.ಪತ್ರಿ ಕೋಳಿ ಸಾಕಾಣಿಕೆ ಕೇಂದ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಕೋಳಿಗಳನ್ನು ಸಾಕಾಣಿಕೆ ಮಾಡಲಾಗುತ್ತದೆ. ಈ ಬಾರಿ ಜಿಲ್ಲೆಯಾದ್ಯಂತ ಪ್ರತಿನಿತ್ಯ 39ರಿಂದ 40ರಷ್ಟು ಉಷ್ಣಾಂಶ ದಾಖಲಾಗುತ್ತಿದೆ. …
Read More »ಬಿಸಲಿನ ತಾಪಕ್ಕೆ ಹೊಂಡದಲ್ಲಿ ಸಾಕಿದ್ದ 17 ಸಾವಿರ ಮೀನುಗಳು ಸಾವು; ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಯುವ ರೈತ ಕಂಗಾಲು
ವಿಜಯಪುರ, ಮೇ. 12: ಜಿಲ್ಲೆಯಲ್ಲಿ ಬಿಸಿಲಿನ ಕಾಟ ಮುಂದುವರೆದಿದ್ದು, ಹಿಂದೆಂದಿಗಿಂತ ಹೆಚ್ಚಿನ ತಾಪಮಾನದ ಬಿಸಿಲು ಅಂದರೆ 42 ರಿಂದ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇಂತಹ ಬಿರು ಬಿಸಿಲಿಗೆ ಮೀನು ಕೃಷಿ ಮಾಡಿದ ಯುವಕ ಬಾರೀ ನಷ್ಟವನ್ನು ಅನುಭವಿಸುವಂತಾಗಿದೆ. ವಿಜಯಪುರ(Vijayapur) ನಗರದ ನಿವಾಸಿ ವಿಜಯಕುಮಾರ ಕವಟಗಿ ಬಿಇ ಪದವೀಧರ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ವಿಜಯಪುರ ತಾಲೂಕಿನ ಮದಭಾವಿ ತಾಂಡಾ 2 ರ ಬಳಿಯಿರುವ ಸ್ವಂತ ಜಮೀನಿನಲ್ಲಿ ಮೀನು ಕೃಷಿ(Fish …
Read More »ಸ್ನಾನಕ್ಕೆ ತೆರಳಿದ್ದ ವ್ಯಕ್ತಿ ಮೊಸಳೆಗೆ ಬಲಿ
ಚಿಕ್ಕೋಡಿ(ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಸದಲಗಾ ಪಟ್ಟಣದ ಬಳಿ ದೂಧಗಂಗಾ ನದಿಗೆ ಸ್ನಾನಕ್ಕೆ ತೆರಳಿದ್ದ ಮಹಾದೇವ ಪುನ್ನಪ್ಪ ಖುರೆ (72) ಎಂಬುವರು ಮೊಸಳೆ ದಾಳಿಗೆ ಸಿಲುಕಿ, ಮೃತಪಟ್ಟಿದ್ದಾರೆ. ಅವರು ಈಜುತಿದ್ದ ವೇಳೆ ಕಾಲನ್ನು ಮೊಸಳೆ ಎಳೆದೊಯ್ಯಿತು. ಅವರ ಮೃತದೇಹ ಪತ್ತೆಯಾಗಿದೆ ಎಂದು ಸದಲಗಾ ಠಾಣೆ ಪೊಲೀಸರು ತಿಳಿಸಿದ್ದಾರೆ.
Read More »