Breaking News

Uncategorized

ಎಂಡಿಎಂಎ ಡ್ರಗ್ಸ್‌ ಸಹಿತ ಓರ್ವನ ಬಂಧನ

ಮಂಗಳೂರು: ಮಂಗಳೂರು ತಾಲೂಕಿನ ವಾಮಂಜೂರು ಮೈದಾನದಲ್ಲಿರುವ ಶೇಂದಿ ಅಂಗಡಿ ಬಳಿ ಎಂಡಿಎಂಎ ಡ್ರಗ್ಸ್‌ ಸಹಿತ ಓರ್ವನನ್ನು ಪೊಲೀಸರು ಮಂಗಳವಾರದಂದು ಬಂಧಿಸಿದ್ದಾರೆ. ಪೆರ್ಮನ್ನೂರಿನ ದಾವೂದ್‌ ಫ‌ರ್ವೀಜ್‌(37) ಬಂಧಿತ ಆರೋಪಿ. ಈತನಿಂದ 15,000 ರೂ. ಮೌಲ್ಯದ 10 ಗ್ರಾಂ ತೂಕದ ನಿಷೇಧಿತ ಮಾದಕ ವಸ್ತು ಎಂಡಿಎಂಎ ಹಾಗೂ 810 ರೂ ನಗದನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಶ್ರೀಮತಿ ಧನ್ಯಾ ಎನ್.ನಾಯಕ ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ದಕ್ಷಿಣ ಉಪವಿಭಾಗದರವರ ನೇತೃತ್ವದ ಮಾದಕ ದ್ರವ್ಯ ವಿರೋಧಿ …

Read More »

CAA ಅಡಿಯಲ್ಲಿ ಮೊದಲ ಬಾರಿಗೆ 14 ಜನರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರ

CAA ಅಡಿಯಲ್ಲಿ ಮೊದಲ ಬಾರಿಗೆ 14 ಜನರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರ ನವದೆಹಲಿ: ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೂಲಕ ಕೇಂದ್ರವು ಸೂಚನೆ ನೀಡಿದ ಸುಮಾರು ಎರಡು ತಿಂಗಳ ನಂತರ ಇಂದು 14 ಜನರಿಗೆ ಸಿಎಎ ಅಡಿಯಲ್ಲಿ ಮೊದಲ ಪೌರತ್ವ ಪ್ರಮಾಣಪತ್ರಗಳನ್ನು ನೀಡಲಾಯಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇಂದು (ಬುಧವಾರ) ಮಾಹಿತಿಯನ್ನು ಹಂಚಿಕೊಂಡಿದೆ. ಇದರಲ್ಲಿ 14 ಜನರಿಗೆ ಭಾರತೀಯ ಪೌರತ್ವದ …

Read More »

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲ: ಶೆಟ್ಟರ್

ಬೆಳಗಾವಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಹುಬ್ಬಳ್ಳಿ ನಿವಾಸಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಕುರಿತು ಮಾತನಾಡಿದ ಅವರು ಅಂಬಿಗೇರ ಕೊಲೆ ಪ್ರಕರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಹಾಳಾಗಿದ್ದು, ಕಾಂಗ್ರೆಸ್ ಸರ್ಕಾರ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವಲ್ಲಿ ಪದೇ ಪದೇ ವಿಫಲವಾಗುತ್ತಿದೆ‌. ಈ ಸರ್ಕಾರದಲ್ಲಿ …

Read More »

ತಾಕತ್ ಇದ್ದರೆ ನಮ್ಮ ರಾಜ್ಯಕ್ಕೆ ಬರಲಿ: ಸಚಿವ ದರ್ಶನಾಪುರ ಸವಾಲ್

ಯಾದಗಿರಿ: ಮೊದಲು ಮಹಾರಾಷ್ಟ್ರದಲ್ಲಿ ತಮ್ಮ ಸರ್ಕಾರ ಉಳಿಸಿಕೊಳ್ಳಲಿ, ಅಲ್ಲಿ ಏನು‌ ಕಡೆದು ಹಾಕಿಲ್ಲ, ಆದರೆ ಕರ್ನಾಟಕಕ್ಕೆ ಬಂದು‌ ಏನು ಕಡೆದು ಹಾಕುತ್ತಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ವಿರುದ್ಧ ಯಾದಗಿರಿ ಉಸ್ತುವಾರಿ ಮಂತ್ರಿ ಶರಣಬಸಪ್ಪ ದರ್ಶನಾಪುರ ಆಕ್ರೋಶಗೊಂಡರು.

Read More »

ತಾಯಿ ಚಾಮುಂಡಿಗೆ ಎಲ್ಲವನ್ನೂ ಬಿಟ್ಟಿದ್ದೇನೆ’: ಪುತ್ರ ಪ್ರಜ್ವಲ್ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದ ಹೆಚ್ ಡಿ ರೇವಣ್ಣ

ಮೈಸೂರು: ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ ನಿನ್ನೆ ಮಂಗಳವಾರ ಜೈಲಿನಿಂದ ಬಿಡುಗಡೆ ಆಗಿ ತಮ್ಮ ತಂದೆ ಹೆಚ್ ಡಿ ದೇವೇಗೌಡ ನಿವಾಸಕ್ಕೆ ಆಗಮಿಸಿ ತಂದೆ-ತಾಯಿ ಕಾಲಿಗೆ ನಮಸ್ಕರಿಸಿ ಮಾತುಕತೆ ನಡೆಸಿದ ನಂತರ ಸಾಯಂಕಾಲ ಟೆಂಪಲ್ ರನ್ ನಡೆಸಿದ್ದಾರೆ. ಬಸವನಗುಡಿಯಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ತದನಂತರ ಬನಶಂಕರಿಯ ತಮ್ಮ ನಿವಾಸಕ್ಕೆ ಆಗಮಿಸಿ ಅಲ್ಲಿಯೂ ಸಹ ದೇವರ ಪ್ರಾರ್ಥನೆ ಮಾಡಿದರು. ಬಳಿಕ ಅಲ್ಲಿಂದ ನೇರವಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ …

Read More »

ಚುನಾವಣೆ ಪ್ರಚಾರದ ವೇಳೆ ಚಿತ್ರ ಬಿಡಿಸಿ ಉಡುಗೊರೆ ನೀಡಿದ್ದ ಬಾಗಲಕೋಟೆ ಯುವತಿ: ಕೊಟ್ಟ ಮಾತಿನಂತೆ ಪತ್ರ ಬರೆದ ಪ್ರಧಾನಿ!

ಬಾಗಲಕೋಟೆ: ಚುನಾವಣಾ ಪ್ರಚಾರದ ವೇಳೆ ಪ್ರಧಾನಮಂತ್ರ ನರೇಂದ್ರ ಮೋದಿ ಹಾಗೂ ಅವರ ತಾಯಿ ಇರುವ ಭಾವಚಿತ್ರ ನೀಡಿದ್ದ ಬಾಗಲಕೋಟೆ ಯುವತಿ ನಾಗರತ್ನಾ ಬಸವರಾಜ ಮೇಟಿಯವರಿಗೆ ಮೋದಿ ಅವರು ಧನ್ಯವಾದ ತಿಳಿಸಿ, ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ಅವರು ಬಾಗಲಕೋಟೆಯಲ್ಲಿ ಭಾಷಣ ಮಾಡುವ ವೇಳೆ ನಾಗರತ್ನಾ ಅವರು ಫೋಟೋ ಹಿಡಿದು ನಿಂತಿದ್ದರು. ಇದನ್ನು ಗಮನಿಸಿದ ಮೋದಿಯವರು ತಮ್ಮ ಅಂಗರಕ್ಷಕ ಅಧಿಕಾರಿಗಳಿಂದ ಫೋಟೊ ತರಿಸಿಕೊಂಡು, ಪತ್ರ ಬರೆಯುವುದಾಗಿ ತಿಳಿಸಿದ್ದರು. ಇದೀಗ ಕೊಟ್ಟ ಮಾತಿನಂತೆ …

Read More »

ಮುಂಗಾರು ಆರಂಭವಾಗುವವರೆಗೂ ಹೆಚ್ಚಿನ ಗುಡುಗು- ಧೂಳು ಸಹಿತ ಬಿರುಗಾಳಿ: IMD ಎಚ್ಚರಿಕೆ

ಬೆಂಗಳೂರು: ನೈಋತ್ಯ ಮಾನ್ಸೂನ್ ಪ್ರಾರಂಭವಾಗುವವರೆಗೆ ಹೆಚ್ಚಿನ ಗುಡುಗು ಮತ್ತು ಧೂಳು ಸಹಿತ ಬಿರುಗಾಳಿ ಬೀಸುವ ಸಾಧ್ಯತೆಯಿದೆ, ಆದರೆ ರಾಜ್ಯ ಮತ್ತು ದೇಶದಲ್ಲಿ ಯಾವುದೇ ಶಾಖದ ಅಲೆ ಎಚ್ಚರಿಕೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮುಂಬಯಿಯ ಘಾಟ್‌ಕೋಪರ್ ನಲ್ಲಿ ಅಕ್ರಮ ಸಂಗ್ರಹಣೆಯು ಇಂಧನ ಮಾರಾಟ ಕೇಂದ್ರದ ಮೇಲೆ ಬಿದ್ದು ಕನಿಷ್ಠ ಹೋರ್ಡಿಂಗ್ ಬಿದ್ದು 14 ಮಂದಿಯನ್ನು ಬಲಿತೆಗೆದುಕೊಂಡ ಪ್ರಕರಣ ಉಲ್ಲೇಖಿಸಿರುವ , ಇಲಾಖೆಯು ಜನರಿಗೆ ಎಚ್ಚರಿಕೆ ನೀಡಿ ಸುರಕ್ಷಿತವಾಗಿರಲು ಸಲಹೆ …

Read More »

SSLC ಪರೀಕ್ಷೆ ಟಾಪರ್ ಸನ್ಮಾನಿಸಿ, ಬಹುಮಾನ ಪ್ರಕಟಿಸಿದ ಸಿಎಂ ಸಿದ್ದರಾಮಯ್ಯ!

ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಪಡೆದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತ ಹಾಗೂ ದ್ವಿತೀಯ ರ‍್ಯಾಂಕ್‌ ಪಡೆದ ಮಂಡ್ಯ ತಾಲೂಕಿನ ತುಂಬಿಗೆರೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ನವನೀತ್ ಕೆ.ಸಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸನ್ಮಾನಿಸಿದ್ದು, ಶುಭ ಹಾರೈಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ಅಮೋಘ ಸಾಧನೆ ಮಾಡಿದ ಈ ವಿದ್ಯಾರ್ಥಿಗಳ ಮುಂದಿನ‌ …

Read More »

ಬೆಂಗಳೂರು: 21 ವರ್ಷದ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು: ನಗರದ ಖಾಸಗಿ ಕಾಲೇಜುವೊಂದರ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು 21 ವರ್ಷದ ಯುವಕ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಬಳ್ಳಾರಿ ಮೂಲದ ಸಿ ರಾಹುಲ್ ಎಂದು ಗುರುತಿಸಲಾಗಿದೆ. ಮೂರನೇ ವರ್ಷದ ಇಂಜಿನಿಯರಿಂಗ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಹುಲ್ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ.   ಅವರ ತಂದೆ ವಿದೇಶದಲ್ಲಿ ಕೆಲಸ ಮಾಡುತ್ತಾರೆ ಎಂಬುದು ತಿಳಿದುಬಂದಿದೆ. ತಡವಾಗಿ ಬಂದಿದ್ದರಿಂದ ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ನಿರಾಕರಿಸಿದ್ದರಿಂದ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದಾನೆ ಎನ್ನಲಾಗಿದೆ. ಆತ …

Read More »

ಸಿಎಸ್ ಆರ್ ಅನುದಾನ ಅಡಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ: ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡಿರುವ ಟಾಪರ್‌ಗಳನ್ನು ಬೆಂಗಳೂರಿನಲ್ಲಿ ನಿನ್ನೆ ಮಂಗಳವಾರ ಸನ್ಮಾನಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯದ ಅನುದಾನವನ್ನು ಅವಲಂಬಿಸದೆ ಸರ್ಕಾರಿ ಶಾಲೆಗಳನ್ನು ಸಿಎಸ್‌ಆರ್ ಅಡಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಯಿದೆ ಎಂದು ಹೇಳಿದರು. ಎಸ್‌ಎಸ್‌ಎಲ್‌ಸಿ ಟಾಪರ್‌ಗಳಾದ ಪ್ರಥಮ ರ್ಯಾಂಕ್ ಪಡೆದ ಅಂಕಿತಾ ಮತ್ತು ತೃತೀಯ ರ್ಯಾಂಕ್ ಪಡೆದ ನವನೀತ್ ಅವರಿಗೆ ಕ್ರಮವಾಗಿ 5 ಲಕ್ಷ ಮತ್ತು 2 ಲಕ್ಷ ರೂಪಾಯಿಗಳನ್ನು …

Read More »