Breaking News

Uncategorized

ಬೆಳಗಾವಿ: ವಿದ್ಯುತ್‌ ಪರಿವರ್ತಕ ಏರಿದ ಮಾನಸಿಕ ಅಸ್ವಸ್ಥ

ಬೆಳಗಾವಿ: ಇಲ್ಲಿನ ಟಿಳಕ ಚೌಕ್‌ನಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಶುಕ್ರವಾರ ವಿದ್ಯುತ್‌ ಪರಿವರ್ತಕ ಒಳಗೊಂಡ ಕಂಬ ಏರಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಸಂಚಾರ ಸಮಸ್ಯೆ ತಲೆದೋರಿತು.   ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಹೆಸ್ಕಾಂ ಸಿಬ್ಬಂದಿ ಮತ್ತು ಪೊಲೀಸರು, ಆತನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾದರು.

Read More »

ಬೆಳಗಾವಿ: ನಿವೃತ್ತಿ ನಂತರ ಬದುಕು ನೀಡಿದ ಡ್ರ್ಯಾಗನ್

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಮೇಟ್ಯಾಲ ಗ್ರಾಮದ ಸ್ವಂತ ಜಮೀನಿನಲ್ಲಿ ಸುರೇಖಾ ಶಿವಾನಂದ ಪೂಜಾರ ದಂಪತಿ ಸಾವಯವ ಡ್ರ್ಯಾಗನ್ ಹಣ್ಣಿನ ಕೃಷಿ ಕೈಗೊಂಡು ಗಮನ ಸೆಳೆದಿದ್ದಾರೆ. ಈ ಭಾಗದಲ್ಲಿ ಹೊಸ ಬೇಸಾಯವಾಗಿ ಗುರುತಿಸಿಕೊಂಡಿರುವ ಈ ಬೆಳೆಯು ರೈತರನ್ನು ಆಕರ್ಷಿಸುವಂತೆ ಮಾಡಿದೆ.

Read More »

ಕಾಹೇರ್‌ ಘಟಿಕೋತ್ಸವ ಮೇ 27ರಂದು: ಉಪರಾಷ್ಟ್ರಪತಿ ಧನ್‌ಕರ್ ಭಾಗಿ

ಬೆಳಗಾವಿ: ‘ಇಲ್ಲಿನ ಕೆಎಲ್‌ಇ ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಷನ್‌ ಆಯಂಡ್‌ ರಿಸರ್ಚ್‌ನ(ಕಾಹೇರ್‌) 14ನೇ ಘಟಿಕೋತ್ಸವ ಮೇ 27ರಂದು ಬೆಳಿಗ್ಗೆ 11.30‌ಕ್ಕೆ ನಡೆಯಲಿದೆ’ ಎಂದು ಕಾಹೇರ್‌ ಕುಲಪತಿಯೂ ಆಗಿರುವ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

Read More »

ಠಾಣೆಗೆ ನುಗ್ಗಿ ಹೊಡಿತಾರೆ ಅಂದ್ರೆ ಸರ್ಕಾರ ಇದ್ಯಾ? ಬಿಹಾರದಂತಾಗಿದೆ.

ಚಿತ್ರದುರ್ಗ: ಲಾಕಪ್ ಡೆತ್ ಆರೋಪ ಹಾಗೂ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದೆ. ಠಾಣೆಗೆ ನುಗ್ಗಿ ಹೊಡೆಯುತ್ತಾರೆ ಎಂದರೆ ಸರ್ಕಾರ ಇದೆಯಾ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ರಾಜ್ಯ ಲಾಲೂ ಪ್ರಸಾದ್ ಆಡಳಿತದ ಬಿಹಾರದಂತಾಗಿದೆ.

Read More »

ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನ ಪಡೆದ ‘ಸಿಎಂ, ಡಿಸಿಎಂ

ದಕ್ಷಿಣ ಕನ್ನಡ: ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿ, ಮಂಜುನಾಥನ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಧರ್ಮಸ್ಥಳದಲ್ಲಿ ಭಕ್ತರು ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಇಂದು ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಧರ್ಮಸ್ಥಳಕ್ಕೆ ಭೇಟಿ ನೀಡಿದರು.

Read More »

ರೈತರ ಪಾಲಿಗೆ ಸತ್ತು ಹೋದ ಕಾಂಗ್ರೆಸ್ ಸರಕಾರ: ಎ.ಎಸ್.ಪಾಟೀಲ ನಡಹಳ್ಳಿ ಟೀಕೆ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ರೈತರ ಪಾಲಿಗೆ ಸತ್ತು ಹೋಗಿದೆ ಎಂದು ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರು ಟೀಕಿಸಿದರು. ನಗರದ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಳೆದ ಸುಮಾರು ಒಂದು ವರ್ಷದಿಂದ ಬರಗಾಲದಿಂದ ತತ್ತರಿಸಿ ಹೋದ ರೈತರಿಗೆ ಸಹಾಯ ಮಾಡಲು ಕೇಂದ್ರ ಸರಕಾರವು ಸಾವಿರಾರು ಕೋಟಿ ರೂ.

Read More »

ಎಚ್.ಡಿ. ಕುಮಾರಸ್ವಾಮಿ ಪೆನ್ ಡ್ರೈವ್ ಪಿತಾಮಹ: ಸಚಿವ ಕೆ.ಎನ್. ರಾಜಣ್ಣ

ಬೆಂಗಳೂರು: ‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರೇ ಪೆನ್ ಡ್ರೈವ್ ಪಿತಾಮಹ. ಮೊದಲು ಜೇಬಿನಿಂದ ಪೆನ್ ಡ್ರೈವ್ ತೆಗೆದು ತೋರಿಸಿದ್ದವರೇ ಅವರು’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು. ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಪೆನ್ ಡ್ರೈವ್ ಬಗ್ಗೆ ನಮಗೆ ಏನೂ ಗೊತ್ತಿಲ್ಲ.

Read More »

ರೇವ್ ಪಾರ್ಟಿ ಪ್ರಕರಣ: ಆಂಧ್ರ ಸಚಿವ, ಎಂಎಲ್​ಎ ಆಪ್ತರು ವಶಕ್ಕೆ

ಬೆಂಗಳೂರು, ಮೇ.25: ಜಿ.ಆರ್.ಫಾರ್ಮ್ ಹೌಸ್ ರೇವ್ ಪಾರ್ಟಿ (Rave Party) ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಪಾರ್ಟಿಯೊಳಗಿನ ಮೋಜು ಮಸ್ತಿಯ ವಿಡಿಯೋಗಳು ವೈರಲ್ ಆದ್ರೆ, ಸಿಸಿಬಿ (CCB) ಅಧಿಕಾರಿಗಳಿಗಳ ಜೊತೆಗೆ ನಟಿ ಹೇಮಾ ಮಾಡಿದ ಡ್ರಾಮಾ ಕೂಡ ಗೊತ್ತಾಗಿದೆ. ಇದೆಲ್ಲದರ ನಡುವೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗಳ ತಲೆದಂಡ ಕೂಡ ಆಗಿದೆ. ಅಷ್ಟೇ ಅಲ್ಲದೆ ಇದೀಗ ಆಂಧ್ರ ಸಚಿವ ಕಾಕನಿ ಗೋವರ್ಧನ ರೆಡ್ಡಿ (Kakani Govardhan Reddy) ಹಾಘೂ  ಎಂಎಲ್ಎ …

Read More »

ಚನ್ನಗಿರಿ ಠಾಣೆ ಮೇಲೆ ಕಲ್ಲು ತೂರಾಟ, 11 ಪೊಲೀಸರಿಗೆ ಗಾಯ

ದಾವಣಗೆರೆ, ಮೇ 25: ಲಾಕಪ್‌ಡೆತ್‌ (LockupDeath) ​​ಅಂತ ಆರೋಪಿಸಿ ಮೃತನ ಸಂಬಂಧಿಕರು ಚನ್ನಗಿರಿ ಪೊಲೀಸ್​ ಠಾಣೆ (Channagiri Police Station) ಮೇಲೆ ಶುಕ್ರವಾರ ರಾತ್ರಿ ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ 11 ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 10ಕ್ಕೂ ಹೆಚ್ಚು ಪೊಲೀಸ್ ವ್ಯಾನ್​ಗಳು ಜಖಂ‌ಗೊಂಡಿವೆ. ಪ್ರಕರಣ ಸಂಬಂಧ ದಾವಣಗೆರೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ (SP) ಉಮಾ ಪ್ರಶಾಂತ ಮಾತನಾಡಿ, ಮೃತ ಆದಿಲ್​ನನ್ನು​ ಶುಕ್ರವಾರ ಪೊಲೀಸರು ಠಾಣೆಗೆ ಕರೆತಂದರು. ಬಳಿಕ ಆದಿಲ್​ …

Read More »

ಸರ್ಕಾರೇತರ ವಾಹನಗಳ ಮೇಲೆ ಸರ್ಕಾರಿ ಲಾಂಛನ, ಚಿಹ್ನೆಗೆ ಬ್ರೇಕ್; ವಿಶೇಷ ತಂಡ ಕಾರ್ಯಾಚರಣೆ

ಬೆಂಗಳೂರು, ಮೇ.25: ರಾಜ್ಯದಲ್ಲಿ ಕೇಂದ್ರ ಹಾಗೂ ಸರ್ಕಾರದ ವಾಹನಗಳಿಗೆ (Government Vehicles) ಮಾತ್ರ ಕರ್ನಾಟಕ ಸರ್ಕಾರದ ಹೆಸರು, ಲಾಂಛನ ಹಾಗೂ ಚಿಹ್ನೆ ಬಳಸಲು ಅವಕಾಶವಿದೆ. ಆದರೆ ಬೆಂಗಳೂರಲ್ಲಿ ಸರ್ಕಾರದ ಅಧೀನದ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ತಮ್ಮ ವಾಹನಗಳ ಮೇಲೆ ಅನಧಿಕೃತವಾಗಿ ಸರ್ಕಾರದ ಲಾಂಛನ, ಚಿಹ್ನೆಗಳನ್ನು ಅಳವಡಿಸಿರುವುದು ಕಂಡುಬರುತ್ತಿದೆ. ಈಗಾಗಲೇ ಸಾರಿಗೆ ಇಲಾಖೆಯಲ್ಲಿ (Transport Department) ಈ ಬಗ್ಗೆ ನೂರಾರು ಪ್ರಕರಣಗಳು ದಾಖಲಾಗಿವೆ. ಇಂತಹ ನೋಂದಣಿ ಫಲಕಗಳನ್ನು ತೆರವುಗೊಳಿಸಲು ರಾಜ್ಯ ಸಾರಿಗೆ …

Read More »