ಕ್ರಮ ಕೈಗೊಳ್ಳದಿದ್ದರೆ ಡ್ರಗ್ಸ್ ಮಾಫಿಯಾದಲ್ಲಿ ಕರ್ನಾಟಕ ಪಂಜಾಬ್ ಅನ್ನು ಮೀರಿಸಲಿದೆ: ಪ್ರಲ್ಹಾದ್ ಜೋಶಿ ಬೆಂಗಳೂರು: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾದಕ ದ್ರವ್ಯ ದಂಧೆ ವಿರುದ್ಧ ತಕ್ಷಣ ಮತ್ತು ಕಠಿಣ ಕ್ರಮ ಕೈಗೊಳ್ಳದಿದ್ದರೆ, ರಾಜ್ಯವು ಡ್ರಗ್ಸ್ ಹಾವಳಿಯಲ್ಲಿ ಪಂಜಾಬ್ ಅನ್ನು ಮೀರಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶನಿವಾರ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ, ಬೆಂಗಳೂರು, ಮಂಗಳೂರು ಭಾಗದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿದ್ದು, …
Read More »ಚನ್ನಗಿರಿ ಲಾಕಪ್ ಡೆತ್: ಪೊಲೀಸ್ ಠಾಣೆ ಧ್ವಂಸ ಪ್ರಕರಣದ ತನಿಖೆ ಸಿಐಡಿಗೆ!
ದಾವಣಗೆರೆ: ದಾವಣಗೆರೆಯ ಚನ್ನಗಿರಿ ಠಾಣೆಯಲ್ಲಿ ಲಾಕಪ್ ಡೆತ್, ಠಾಣೆ ಬಳಿ ದಾಂಧಲೆ ಪ್ರಕರಣದ ತನಿಖೆಯನ್ನು ಇದೀಗ ಸಿಐಡಿಗೆ ವಹಿಸಲಾಗಿದೆ. ಮಟ್ಕಾ ನಡೆಸುತ್ತಿದ್ದ ಆರೋಪದಲ್ಲಿ ಚನ್ನಗಿರಿ ಪೊಲೀಸರು ಅದಿಲ್ ಎಂಬಾತನನ್ನ ವಶಕ್ಕೆ ಪಡೆದಿದ್ದರು. ಠಾಣೆಯಲ್ಲಿ ಅದಿಲ್ ಕುಸಿದು ಬಿದ್ದಿದ್ದು ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದನು. ಈ ವಿಷಯ ತಿಳಿಯುತ್ತಿದ್ದಂತೆ ಉದ್ವಿಗ್ನಗೊಂಡ ಮೃತನ ಸಂಬಂಧಿಕರು ಮತ್ತು ನೂರಾರು ಜನ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದ್ದು ಅಲ್ಲೆ ಠಾಣೆಯ ಮೇಲೆ ಕಲ್ಲು …
Read More »ರಾಜ್ಯದಲ್ಲಿರುವ ಅಕ್ರಮ ಶಾಲೆಗಳ ಪಟ್ಟಿ ಕೊಡಿ: ಪೋಷಕರ ಆಗ್ರಹ
ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು(ಡಿಎಸ್‌ಇಎಲ್) ರಾಜ್ಯದಲ್ಲಿನ ಅಧಿಕೃತ ಅನುದಾನ ರಹಿತ ಶಾಲೆಗಳ ದೀರ್ಘ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಇಲಾಖೆಯ ಅನುಮತಿ ಪಡೆಯದ ಶಾಲೆಗಳ ಪಟ್ಟಿಯನ್ನು ನೀಡದಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ತಮ್ಮ ಮಕ್ಕಳ ಶಾಲೆಗಳ ಹೆಸರನ್ನು ಪತ್ತೆಹಚ್ಚಲು ಅನೇಕ ಪೋಷಕರು ಕಷ್ಟಪಡುತ್ತಿದ್ದಾರೆ. ಏಕೆಂದರೆ BEO ಗಳು ಅಪ್‌ಲೋಡ್ ಮಾಡಿದ ಕೆಲವು ಪಟ್ಟಿಗಳು PDF ಸ್ವರೂಪದಲ್ಲಿರುವ ಫೋಟೋಗಳಾಗಿದ್ದು, ಅವುಗಳಲ್ಲಿ ಹಲವು ಮಸುಕಾಗಿವೆ. …
Read More »ಗಡ್ಕರಿ ಸೋಲಿಗೆ ಫಡ್ನವೀಸ್, ಶಾ ಸಂಚು- ಸಂಜಯ್ ರಾವತ್
ಮುಂಬೈ: ಲೋಕಸಭೆ ಚುನಾವಣೆಯಲ್ಲಿ ನಿತಿನ್ ಗಡ್ಕರಿ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಮತ್ತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೆಲಸ ಮಾಡಿದ್ದಾರೆ ಎಂದು ಶಿವಸೇನೆ-ಯುಬಿಟಿ ನಾಯಕ ಸಂಜಯ್ ರಾವುತ್ ಭಾನುವಾರ ಹೇಳಿದ್ದಾರೆ. ನಾಗ್ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗಡ್ಕರಿ ಅವರ ಪ್ರಚಾರ ಮಾಡಲು ಫಡ್ನವೀಸ್ ಗೆ ಇಚ್ಚೆ ಇರಲಿಲ್ಲ. ಆದರೆ, ಕೇಂದ್ರ ಸಚಿವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದಾಗ ಫಡ್ನವೀಸ್ ಇಚ್ಛೆಯಿಲ್ಲದೆ ಪ್ರಚಾರ ಮಾಡಿದ್ದರು …
Read More »ಹೆಲ್ಮೆಟ್ ಧರಿಸಿಲ್ಲವೆಂದು ಲಾರಿ ಚಾಲಕನಿಗೆ ದಂಡ ಹಾಕಿದ ಪೊಲೀಸರು!
ಕಾರವಾರ, : ಟಿಪ್ಪರ್ ಲಾರಿ ಚಾಲಕರೊಬ್ಬರಿಗೆ ಹೆಲ್ಮೆಟ್ ಧರಿಸಿಲ್ಲವೆಂದು ಹೊನ್ನಾವರ ಸಂಚಾರ ಠಾಣೆ ಪೊಲೀಸರು (honnavar traffic Police) ವಿಥೌಟ್ ಹೆಲ್ಮೆಟ್ ದಂಡ ಹಾಕಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಚಂದ್ರಕಾಂತ್ ಹಳ್ಳೇರ ಎನ್ನುವರು ಮರಳು ತುಂಬಿದ ಟಿಪ್ಪರ್ ಲಾರಿಯನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಹೊನ್ನಾವರ ಸಂಚಾರಿ ಪೊಲೀಸರು, ಅಳ್ಳಂಕಿ ಎಂಬಲ್ಲಿ ತಡೆದು 500 ರೂಪಾಯಿ ದಂಡ ಹಾಕಿ ರಶೀದಿ ನೀಡಿದ್ದಾರೆ. ಬಳಿಕ ಚಾಲಕ ರಶೀದಿಯನ್ನು ನೋಡಿ ಒಂದು ಕ್ಷಣ …
Read More »ಮದ್ವೆಯಲ್ಲಿ ಮಹಿಳೆಯ ಚಿನ್ನದ ಸರಕ್ಕೆ ಕೈ ಹಾಕಿದ ಕಳ್ಳನಿಗೆ ಧರ್ಮದೇಟು ಬಿತ್ತು
ಚಿಕ್ಕಬಳ್ಳಾಪುರ, ಮೇ.26: ಜಿಲ್ಲೆಯ ಗೌರಿಬಿದನೂರು(Gauribidanur) ನಗರದ ಸಾಯಿಕೃಷ್ಣ ಫಂಕ್ಷನ್ ಹಾಲ್ನಲ್ಲಿ ನಡೆದಿದ್ದ ಮದುವೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಚಿನ್ನದ ಸರ ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖದೀಮನಿಗೆ ಮದುವೆ ಮನೆಯವರೇ ಸೇರಿ ಧರ್ಮದೇಟು ಕೊಟ್ಟು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಆಂಧ್ರದ ಮುಲ್ಲಮೋತುಕಪಲ್ಲಿ ಗ್ರಾಮದ ನರೇಶ್ ಎಂಬಾತ ಬಂಧಿತ ಆರೋಪಿ. ಈ ಕುರಿತು ಗೌರಿಬಿದನೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Read More »ಹೊರಗುತ್ತಿಗೆಯಲ್ಲಿ ಮೀಸಲಾತಿ ತರಲು ಮುಂದಾದ ಸರ್ಕಾರ: ಆರೋಗ್ಯ ಇಲಾಖೆ ನೌಕರರ ವಿರೋಧ ಏಕೆ?
ತುಮಕೂರು, ಮೇ 26: ಹೊರಗುತ್ತಿಗೆ ಪದ್ಧತಿಯಲ್ಲೂ ಮೀಸಲಾತಿ (reservation) ತರಲು ಸರ್ಕಾರ ಮುಂದಾಗಿದೆ. ಆದರೆ ಸರ್ಕಾರದ ನಡೆಗೆ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರಗುತ್ತಿಗೆ ನೌಕರರಿಂದ ವಿರೋಧ ವ್ಯಕ್ತವಾಗಿದೆ. ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ವಿರೋಧ ವ್ಯಕ್ತಪಡಿಸಿರುವ ನೌಕರರು (employees), ಹೊರಗುತ್ತಿಗೆಯಲ್ಲಿ ಮೀಸಲಾತಿ ಜಾರಿಯಾದರೆ ಬೀದಿ ಪಾಲಾಗುತ್ತವೆ. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಕುಟುಂಬಗಳು ಬೀದಿ ಪಾಲಾಗುತ್ತವೆ. ಯಾವುದೇ ಕಾರಣಕ್ಕೂ ಹೊರಗುತ್ತಿಗೆಯಲ್ಲಿ ಮೀಸಲಾತಿಯನ್ನ ತರಬಾರದು ಎಂದು ಒತ್ತಾಯಿಸಿದ್ದಾರೆ.ಇನ್ನು ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ …
Read More »ಭೀಕರ ಬರಗಾಲಕ್ಕೆ ಬತ್ತಿದ 500 ಎಕರೆ ಜಂಬಗಿ ಕೆರೆ
ವಿಜಯಪುರ, ಮೇ.26: ಜಿಲ್ಲೆಯಲ್ಲಿ ಅನೇಕ ಕೆರೆಗಳು ಹಾಗೂ ಜಲ ಮೂಲಗಳು ಬತ್ತಿ ಹೋಗಿವೆ. ಸದ್ಯ ಮಳೆಗಾಲ ) ಆರಂಭವಾಗಿದ್ದರೂ ಕೆರೆಗಳಿಗೆ ನೀರು ಭರ್ತಿಯಾಗುವಷ್ಟು ಮಳೆಯಾಗಿಲ್ಲ. ಒಂದೆರೆಡು ಬಾರಿ ಮಳೆಯಾಗಿದ್ದರೂ ಮತ್ತೇ ಮಳೆ ಮಾಯವಾಗಿ ವಾರವೇ ಆಗಿದೆ. ವಿಜಯಪುರತಾಲೂಕಿನ ಜಂಬಗಿಗ್ರಾಮದಲ್ಲಿ 500 ಎಕರೆ ವಿಸ್ತಾರದಲ್ಲಿರುವ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಕೆರೆ, ನೀರಿಲ್ಲದೇ ಖಾಲಿ ಖಾಲಿಯಾಗಿದೆ. ಜಂಬಗಿ, ಆಹೇರಿ, ಶಿರಕನಹಳ್ಳಿ, ಅಂಕಲಗಿ, ಹೊನ್ನಳ್ಳಿ ಹಾಗೂ ಇತರೆ ಗ್ರಾಮಗಳ ಜನ-ಜಾನುವಾರುಗಳ ಹಾಗೂ ಪ್ರಾಣಿ-ಪಕ್ಷಿಗಳಿಗೆ ನೀರಿನ …
Read More »ಕೃಷ್ಣಾ ನದಿ ನೀರು ತಡೆದ ಮಹಾರಾಷ್ಟ್ರ: ಬ್ಯಾರೇಜ್ ಸುತ್ತ ಪೊಲೀಸರ ನಿಯೋಜನೆ
ಚಿಕ್ಕೋಡಿ, ಮೇ 26: ಕೊಲ್ಹಾಪುರ ಜಿಲ್ಲೆಯಲ್ಲಿರುವ ರಾಜಾಪುರ ಬ್ಯಾರೇಜ್ ಮೂಲಕ ಕರ್ನಾಟಕಕ್ಕೆ ಹರಿದು ಬರುತ್ತಿದ್ದ ಕೃಷ್ಣಾ ನದಿ ನೀರನ್ನು ಮಹಾರಾಷ್ಟ್ರ ಸರ್ಕಾರ ತಡೆಹಿಡಿದಿದೆ. ಅಲ್ಲದೆ ಮಹಾರಾಷ್ಟ್ರ ಸರ್ಕಾರ ಬ್ಯಾರೇಜ್ ಬಳಿ ಪೊಲೀಸ್ ಇಲಾಖೆ ಹಾಗೂ ನೀರಾವರಿ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ನಿಯೋಜನೆ ಮಾಡಿದೆ. ನಾಲ್ವರು ಸಿಬ್ಬಂದಿಯ ಎರಡು ತಂಡ ಬ್ಯಾರೇಜ್ ಬಳಿ ನಿರಂತರವಾಗಿ ಗಸ್ತು ಹಾಕುತ್ತಿರುತ್ತದೆ.ಹೆಚ್ಚು ಪ್ರಮಾಣದಲ್ಲಿ ಮಳೆಯಾಗುತ್ತಿದ್ದರಿಂದ ಕೃಷ್ಣ ನದಿಗೆ ಒಡಲಿಗೆ ಹೆಚ್ಚು ನೀರು ಹರಿದು ಬರುತ್ತಿದೆ. ಹೀಗಾಗಿ …
Read More »7 ವರ್ಷ ಬಳಿಕ 13 ಕೋಟಿ ರೂ. ವೆಚ್ಚದ ಗೋದಾಮು ಕಾಮಗಾರಿ ಆರಂಭ:
ಬೀದರ್, ಮೇ 26: ರೈತರು (Farmers) ಬೆಳೆಸಿದ ದವಸ ಧಾನ್ಯವನ್ನ ಸಂಗ್ರಹಿಸಲು ಬೃಹತ್ ಗೋದಾಮು ನಿರ್ಮಿಸಲಾಗುತ್ತಿತ್ತು. 13 ಕೋಟಿ ರೂ. ವೆಚ್ಚದ ಗೋದಾಮು (godown) ಕಾಮಗಾರಿ ಅರ್ಧಕ್ಕೆ ಬಿಟ್ಟು ಗುತ್ತಿಗೆದಾರ ಪಲಾಯನ ಮಾಡಿದ್ದ. ಸ್ಥಳೀಯ ನಿವಾಸಿಯೊಬ್ಬರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಎರಡು ವರ್ಷದ ಸತತ ಹೋರಾಟದ ಬಳಿಕ ಗೋದಾಮು ಕಾಮಗಾರಿ ಆರಂಭವಾಗಿದ್ದು ರೈತರ ಖಷಿ ಹೆಚ್ಚಿಸಿದೆ. ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಗುತ್ತಿಗೆದಾರ ಪಲಾಯನ ರೈತರ ದವಸ ಧಾನ್ಯಗಳನ್ನ ಸಂಗ್ರಹ ಮಾಡುವ ಉದ್ದೇಶದಿಂದ ಬೀದರ್ ಜಿಲ್ಲೆಯ …
Read More »