ಬೆಳಗಾವಿ : ಆಟವಾಡುವ ಸಂದರ್ಭದಲ್ಲಿ ಮನೆಯ ಸಂಪ್ ಒಳಗೆ ಬಿದ್ದ 2 ವರ್ಷದ ಮಗು ಸಾವಣಪ್ಪಿರುವ ಘಟನೆ ಬೆಳಗಾವಿಯ ಕಂಗ್ರಾಳ ಗಲ್ಲಿಯಲ್ಲಿ ನಡೆದಿದೆ. ಮೃತ ಮಗು ಸಾಯೀಶಾ ಸಂದೀಪ್ ಬಡವನಾಚೆ (2) ಎಂದು ತಿಳಿದುಬಂದಿದೆ. ಆಟವಾಡುತ್ತಿದ್ದ ಮಗು ಕಣ್ಮರೆಯಾದ ಕಾರಣ ಪೋಷಕರು ಹುಡುಕಾಟ ನಡೆಸಿದ್ದಾರೆ. ಎಷ್ಟೇ ಹುಡುಕಿದರು ಮಗು ಸಿಗದ ಕಾರಣ ನೀರಿನ ಸಂಪ್ ನೋಡಿದಾಗ ಘಟನೆ ತಿಳಿದುಬಂದಿದೆ. ಕೂಡಲೇ ಸಮೀಪದ ಆಸ್ಪತ್ರೆಗೆ ಮಗವನ್ನು ಪೋಷಕರು ಕರೆದೊಯ್ದಿದ್ದರು, ಆಸ್ಪತ್ರೆಗೆ ದಾಖಲಿಸುವ …
Read More »ಸಿಲಿಂಡರ್ ಸ್ಫೊಟಗೊಂಡ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಹೆಬ್ಬಾಳ್ಕರ್
ಬೆಳಗಾವಿ : ಬೆಳಗಾವಿಯ ಸುಳಗಾ (ಯು) ಗ್ರಾಮದಲ್ಲಿ ಸಿಲಿಂಡರ್ ಸ್ಫೊಟಗೊಂಡು ದಂಪತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮೃತರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಗ್ರಾಮದ ಕಲ್ಲಪ್ಪ ಪಾಟೀಲ್ ಮತ್ತು ಸುಮನ್ ಪಾಟೀಲ್ ಸಿಲಿಂಡರ್ ಸ್ಫೋಟದಿಂದ ಸಾವಿಗೀಡಾಗಿದ್ದಾರೆ. ಕುಟುಂಬದವರಿಗೆ ಸಾಂತ್ವನ ಹೇಳಿದ ಸಚಿವರು, ವಯಕ್ತಿಕವಾಗಿ ಆರ್ಥಿಕ ನೆರವು ನೀಡಿದರು. ಅಲ್ಲದೇ ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದರು.ಈ …
Read More »ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ ; ಮೇ. 31 ಕ್ಕೆ ಎಸ್ಐಟಿ ಮುಂದೆ ಹಾಜರಾಗುವ ನಿರ್ಧಾರ
ಬೆಂಗಳೂರು : ಅಶ್ಲೀಲ ವೀಡಿಯೋ ವಿಚಾರವಾಗಿ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಧ್ಯ ಪ್ರತ್ಯಕ್ಷವಾಗಿದ್ದು, ಬರುವ ಮೇ. 31 ರಂದು ಎಸ್ಐಟಿ ಮುಂದೆ ಹಾಜರಾಗುವೆ ಎಂದು ಹೇಳಿದ್ದಾರೆ. ಈ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಪ್ರಜ್ವಲ್ ರೇವಣ್ಣ. ಪೂರ್ವ ನಿಗದಿತ ಪ್ರವಾಸದ ಹಿನ್ನಲೆಯಲ್ಲಿ ನಾನು ಚುನಾವಣೆ ನಂತರ ವಿದೇಶಿ ಪ್ರವಾಸಕ್ಕೆ ಹೊರಟಿದ್ದೆ. ಇದಾದ ನಂತರ ನಾಲ್ಕು ದಿನಗಳಾದ ಮೇಲೆ ನನ್ನ ಮೇಲೆ ಪ್ರಕರಣ ದಾಖಲಾಗಿದ್ದು ತಿಳಿದುಬಂದಿದೆ. …
Read More »ಭೀಕರ ರಸ್ತೆ ಅಪಘಾತ; ಬಿತ್ತನೆ ಬೀಜ ಖರೀದಿಸಲು ಬಂದಿದ್ದ ರೈತರಿಬ್ಬರು ಸ್ಥಳದಲ್ಲೇ ಮೃತ್ಯು
ಗದಗ: ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ನಲ್ಲಿದ್ದ ಇಬ್ಬರು ರೈತರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಹಳ್ಳಿಗುಡಿ ಗ್ರಾಮದ ರೈತ ಪರಸಪ್ಪ ಜೋಗಿನ ಹಾಗೂ ಪೇಠಾಲೂರ ಗ್ರಾಮದ ಮಾರುತಿ ಯಾಟಿ ಎಂದು ಗುರುತಿಸಲಾಗಿದೆ. ಬಿತ್ತನೆ ಬೀಜ ಖರೀದಿಗಾಗಿ ಇಬ್ಬರು ರೈತರು ಮುಂಡರಗಿಗೆ ಬಂದಿದ್ದರು ಖರೀದಿ ಮುಗಿಸಿ ತಮ್ಮ ಊರಿನತ್ತ ಬೈಕ್ ನಲ್ಲಿ ತೆರಳುತ್ತಿದ್ದ …
Read More »ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾತನ ಸೆರೆ
ಬೆಳಗಾವಿ: ಪ್ರೀತಿ ನಿರಾಕರಿಸಿದ ಯುವತಿಗೆ ಕೊಲೆ ಬೆದರಿಕೆ ಒಡ್ಡಿದ್ದ ಆರೋಪದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮದ ತಿಪ್ಪಣ್ಣ ಡೋಕರೆ ಎಂಬಾತನು ತನ್ನು ಪ್ರೀತಿಯನ್ನು ನಿರಾಕರಿಸಿದ ಯುವತಿ ಮನೆ ಮೇಲೆ ಕಲ್ಲು ತೂರಾಟ ಮಾಡಿ ಕಿಟಕಿ ಗಾಜು ಪುಡಿ ಮಾಡಿದ್ದಾನೆ. ಭಯಭೀತರಾದ ಯುವತಿ ಮನೆಯವರು ಗ್ರಾಮೀಣ ಠಾಣೆಗೆ ದೂರು ನೀಡಿದ್ದು, ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ. ಇದೇ ಗ್ರಾಮದ ಬಿಕಾಂ ವಿದ್ಯಾರ್ಥಿನಿಯ ಬೆನ್ನು ಬಿದ್ದಿದ್ದ ಈತ ಮೂರು ವರ್ಷಗಳಿಂದ …
Read More »ರಾಜ್ಯಕ್ಕೆ ಬರುತ್ತಿದ್ದ ನೀರನ್ನು ತಡೆ ಹಿಡಿದ ಮಹಾ ಸರ್ಕಾರದ ಕ್ರಮಕ್ಕೆ ರೈತರು ಆಕ್ರೋಶ
ಚಿಕ್ಕೋಡಿ: ಕೃಷ್ಣಾ ನದಿಯಿಂದ ಹರಿದು ಬರುತ್ತಿದ್ದ ನೀರನ್ನು ಮಹಾರಾಷ್ಟ್ರ ಸರ್ಕಾರ ತಡೆ ಹಿಡಿದಿದೆ. ಇದರಿಂದ ಮಹಾರಾಷ್ಟ್ರ ಸರ್ಕಾರ ಕರ್ನಾಟಕ ರಾಜ್ಯದ ವಿರುದ್ದ ಮತ್ತೆ ಕ್ಯಾತೆ ತೆಗೆದಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ಕೃಷ್ಣಾ ನೀರಿನ ವಿಷಯವಾಗಿ ಮತ್ತೆ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆದಿದೆ. ಕರ್ನಾಟಕಕ್ಕೆ ಹರಿದು ಬರುತ್ತಿದ್ದ ನೀರನ್ನು ಮೇ.26ರ ರವಿವಾರ ಮಹಾರಾಷ್ಟ್ರ ಸರಕಾರ ತಡೆ ಹಿಡಿದಿದೆ. ಗಡಿ ಭಾಗದ ರಾಜಾಪೂರ ಬ್ಯಾರೇಜ್ ಮೂಲಕ ಕರ್ನಾಟಕಕ್ಕೆ ಹರಿದು ಬರುತ್ತಿದ್ದ ಕೃಷ್ಣಾ ನದಿ …
Read More »ಮಾಜಿ ಸಿಎಂ ‘BSY’ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ್ದ ಮಹಿಳೆ ಸಾವು
ಬೆಂಗಳೂರು : ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ್ದ ಮಹಿಳೆ ಮೃತಪಟ್ಟ ಘಟನೆ ಹುಳಿಮಾವು ಬಳಿಯ ನ್ಯಾನೋ ಆಸ್ಪತ್ರೆಯಲ್ಲಿ ನಡೆದಿದೆ. ಉಸಿರಾಟ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇರೆಗೆ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು, ನಂತರ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿ ಡಿಜಿ, ಐಜಿಪಿ ಅಲೋಕ್ …
Read More »ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಅಂಗಡಿ.
ರಾಯಚೂರು: ನಗರದ ಮಹಾವೀರ ವೃತ್ತದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಗಿಗಾ ಬೈಟ್ ಎನ್ನುವ ಎಲೆಕ್ಟ್ರಿಕ್ ಬೈಕ್ ಗಳ ಅಂಗಡಿಗೆ ಬೆಂಕಿ ಬಿದ್ದು ಹೊತ್ತಿ ಉರಿದಿದೆ. ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು ಕ್ಷಣಾರ್ಧದಲ್ಲಿ ಎಲ್ಲ ವಸ್ತುಗಳು ಸುಟ್ಟು ಭಸ್ಮವಾಗಿದೆ. ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ಹಾನಿಯಾಗಿದೆ. ಘಟನೆಯಲ್ಲಿ ಮೂರು ಎಲೆಕ್ಟ್ರಿಕ್ ವಾಹನಗಳು, ಎರಡು ಬೈಕ್ ಗಳು ಸುಟ್ಟು ಕರಕಲಾಗಿವೆ. ಎರಡು ಅಂತಸ್ತಿನ ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿದ್ದು, ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ಹರಡಿಕೊಂಡಿದೆ. ಕಟ್ಟಡದೊಳಗೆ ಕಾರ್ಮಿಕರು …
Read More »ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ : ಮೇ 31ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿಗಳಿಕೆ ಕೇಸ್ ಗೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಸಮ್ಮತಿಯನ್ನು ಹಿಂಪಡೆದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನು ಹೈ ಕೋರ್ಟ್ ಮೇ 31ಕ್ಕೆ ಮುಂದೂಡಿತು. ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ರಿಟ್ ಅರ್ಜಿ ವಿಚಾರಣೆ ನಡೆಯುತ್ತಿದ್ದು ಸಿ.ಬಿ.ಐ ತನಿಖೆಗೆ ಸಮ್ಮತಿ ಹಿಂಪಡೆದ ಸರಕಾರದ ಕ್ರಮ ಪ್ರಶ್ನಿಸಿ ರಿಟ್ ಅರ್ಜಿ ಕುರಿತಂತೆ ಡಿಕೆ ಶಿವಕುಮಾರ್ ಪರ ಹಿರಿಯ …
Read More »ಗ್ರಾಹಕರಿಗೆ ಬಂಪರ್ ಆಫರ್ ನೀಡಿದ ಬಿಎಸ್‌ಎನ್‌ಎಲ್
BSNL ಭಾರತದ ಹಳೆಯ ಟೆಲಿಕಾಂ ಕಂಪನಿ. ಒಂದು ಕಾಲದಲ್ಲಿ ಈ ಕ್ಷೇತ್ರದಲ್ಲಿ ರಾಜನಂತೆ ಮೆರೆದ ಕಂಪನಿ, ಇಂದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದೆ. ಮಾರುಕಟ್ಟೆಯಲ್ಲಿರುವ ಹಲವು ಟೆಲಿಕಾಂ ಕಂಪನಿಗಳ ಜೊತೆ ಸರ್ಕಾರಿ ಟೆಲಿಕಾಂ ಕಂಪನಿ ಸ್ಪರ್ಧೆ ಮಾಡುವಲ್ಲಿ ಕೊಂಚ ಹಿಂದೆ ಬಿದ್ದಿದೆ. ಆದರೆ ಈಗ ಕಾಲ ಬದಲಾಗಿದೆ. ಬಿಎಸ್‌ಎನ್‌ಎಲ್ (BSNL) ಸಹ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ. ಬಿಎಸ್‌ಎನ್‌ಎಲ್ ಬಿಟ್ಟಿರುವ ಆಫರ್ ಕಂಡು ಇತರ ಟೆಲಿಕಾಂ ಕಂಪನಿಗಳ ನಿದ್ದೆ …
Read More »