Breaking News

Uncategorized

ಠಾಣೆಯಲ್ಲೇ ಎಣ್ಣೆ ಪಾರ್ಟಿ ಮಾಡಿರುವ ಆರೋಪ ಹೆಡ್ ಕಾನ್ಸ್‌ಟೇಬಲ್ ಅಮಾನತು

ಬೆಳಗಾವಿ, ಮೇ.28: ಚಿಕ್ಕೋಡಿ ತಾಲೂಕಿನ ಅಂಕಲಿ ಪೊಲೀಸ್ ಠಾಣೆ(Ankali police station)ಯಲ್ಲಿ ತಡರಾತ್ರಿ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿರುವ ಆರೋಪ ಕೇಳಿಬಂದಿತ್ತು.ಜೊತೆಗೆಠಾಣೆ ಮುಂಭಾಗದಲ್ಲಿಮದ್ಯದ ಖಾಲಿ ಬಾಟಲ್, ವಾಟರ್ ಬಾಟಲ್ ಟೇಬಲ್ ಮೇಲೆ ಇರುವ ಫೋಟೋಗಳು ವೈರಲ್ ಆಗಿತ್ತು. ಪೊಲೀಸರ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿತ್ತು. ಈ ಹಿನ್ನಲೆ ಅಂಕಲಿ ಠಾಣೆ ಹೆಡ್ ಕಾನ್ಸ್‌ಟೇಬಲ್ ರಾಮಚಂದ್ರ ಖೋತ ಎಂಬುವವರನ್ನು ಅಮಾನತುಗೊಳಿಸಿ ಎಸ್​ಪಿ ಭೀಮಾಶಂಕರ ಗುಳೇದ್ ಆದೇಶಿಸಿದ್ದಾರೆ. ಸರಕಾರಿ ವಸತಿ …

Read More »

ಸವದತ್ತಿ ಯಲ್ಲಮ್ಮನ ದರ್ಶನ ಪಡೆದ ಶಿವರಾಜ್​ಕುಮಾರ್​

ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​ ಅವರು ‘ಉತ್ತರಕಾಂಡ’ ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬೆಳಗಾವಿಯಲ್ಲಿ ನಡೆಯುತ್ತಿದೆ. ಶಿವರಾಜ್​ಕುಮಾರ್​ ಕೂಡ ಇದರಲ್ಲಿ ಭಾಗಿ ಆಗಿದ್ದಾರೆ. ಶೂಟಿಂಗ್​ ಮುಗಿಸಿದ ನಂತರ ಸವದತ್ತಿಯ ಯಲ್ಲಮ್ಮ ದೇವಸ್ಥಾನಕ್ಕೆ ಅವರು ತೆರಳಿದ್ದಾರೆ.ದೇವರ ದರ್ಶನ ಪಡೆದು ಬಂದಿದ್ದಾರೆ. ನಟ ಶಿವರಾಜ್​ಕುಮಾರ್​ (Shivarajkumar) ಅವರು ಒಂದಷ್ಟು ದಿನಗಳ ಕಾಲ ಸಿನಿಮಾ ಕೆಲಸಗಳಿಗೆ ಬ್ರೇಕ್​ ನೀಡಿದ್ದರು. ಪತ್ನಿ ಗೀತಾ ಶಿವರಾಜ್​ಕುಮಾರ್​ ಪರವಾಗಿ ಚುನಾವಣಾ ಪ್ರಚಾರದಲ್ಲಿ ಅವರು ಭಾಗಿ ಆಗಿದ್ದರು. ಶಿವಮೊಗ್ಗದಲ್ಲಿ …

Read More »

ರೈತರ ಗಮನಕ್ಕೆ.. ಇನ್ಮುಂದೆ ನಿಮ್ಮ RTC ಗೆ ಆಧಾರ್ ಲಿಂಕ್ ಕಡ್ಡಾಯ – ಸರ್ಕಾರದ ಆದೇಶ!

ಆರ್‌ಟಿಸಿಗೆ ಆಧಾರ್ ಜೋಡಣೆ ಮಾಡಲು ಅನುಕೂಲವಾಗುವಂತೆ ಸರ್ಕಾರ ಹೊಸದಾದ ತಂತ್ರಾಂಶವನ್ನು ಸಿದ್ಧಗೊಳಿಸಿದೆ. ಈ ಕುರಿತು ಗ್ರಾಮ ಆಡಳಿತ ಅಧಿಕಾರಿಗಳು ಪ್ರಕಟಣೆ ಮೂಲಕ ಮಾಹಿತಿಯನ್ನು ನೀಡಿದ್ದಾರೆ. ಈ ಕಡ್ಡಾಯವಾದ ಕಾರ್ಯವನ್ನು ಮಾಡಲು ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದೆ. ಅಗತ್ಯ ದಾಖಲೆಗಳು : ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಪಡೆಯಲು, ಬ್ಯಾಂಕ್ ಸೌಲಭ್ಯಗಳನ್ನು ಪಡೆಯಲು ಮತ್ತು ಕೃಷಿ ಇಲಾಖೆ ಸೌಲಭ್ಯಗಳನ್ನು ಪಡೆಯಲು ಮತ್ತು ಬೆಳೆ ಪರಿಹಾರ ಪಡೆಯಲು ಜಮೀನಿನ ಉತಾರಗಳಿಗೆ ಆಧಾರ್ …

Read More »

ಚುನಾವಣೆ ಬಳಿಕ ಸಿಎಂ ಸ್ಥಾನದಿಂದ ಯೋಗಿಗೆ ಗೇಟ್​ಪಾಸ್, ಮೊದಲ ಬಾರಿ ಮೌನ ಮುರಿದ ಯುಪಿ ಸಿಎಂ

ನವದೆಹಲಿ(ಮೇ.28): ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 80ರಲ್ಲಿ 80 ಸ್ಥಾನಗಳನ್ನು ಗೆಲ್ಲುವುದಾಗಿ ಭಾರತೀಯ ಜನತಾ ಪಕ್ಷ ಹೇಳಿಕೊಳ್ಳುತ್ತಿದೆ. ಚುನಾವಣೆಯ ನಂತರ ಪಕ್ಷವು ಯೋಗಿ ಆದಿತ್ಯನಾಥ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುತ್ತದೆ ಎಂದು ಪ್ರತಿಪಕ್ಷಗಳು ಹೇಳುತ್ತಿವೆ. ಹೀಗಿರುವಾಗ ಆಜ್ ತಕ್ ನ ನಡೆಸಿದ ವಿಶೇಷ ಸಂವಾದದಲ್ಲಿ ಮಾತನಾಡಿದ ಸಿಎಂ ಯೋಗಿ ನಾನೊಬ್ಬ ಯೋಗಿ. ನನ್ನ ಆದ್ಯತೆ ಅಧಿಕಾರಕ್ಕಾಗಿ ಅಲ್ಲ ಆದರೆ ಪಕ್ಷದ ಮೌಲ್ಯಗಳು ಮತ್ತು ತತ್ವಗಳಿಗಾಗಿ ಕೆಲಸ ಮಾಡುವುದು ಎಂದಿದ್ದಾರೆ. 400 …

Read More »

ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಪುನರಾರಂಭ

ಬೆಂಗಳೂರು : ರಾಜ್ಯಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 29ರ ಇಂದಿನಿಂದ ಪುನರಾರಂಭವಾಗುತ್ತಿದ್ದು, 31 ರಂದು ರಾಜ್ಯದ ಎಲ್ಲ ಶಾಲೆಗಳಲ್ಲೂ ಏಕಕಾಲಕ್ಕೆ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ. 2024-25ನೇ ಸಾಲಿನ ಶಿಕ್ಷಣವನ್ನು ʼಶೈಕ್ಷಣಿಕ ಬಲವರ್ಧನೆʼ ಪರಿಕಲ್ಪನೆಯ ಆಧಾರದಲ್ಲಿ ನಿರ್ವಹಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಘೋಷವಾಕ್ಯ ಸಿದ್ಧಪಡಿಸಿದ್ದು, ಕಲಿಕಾ ಗುಣಮಟ್ಟ ಹಾಗೂ ತಂತ್ರಜ್ಞಾನ ಆಧಾರಿತ ಬೋಧನೆಗೆ ಹೆಚ್ಚಿನ ಒತ್ತು ನೀಡಲು ಸೂಚಿಸಿದೆ. ಶಾಲಾ ಮಕ್ಕಳಿಗೆ ಮೊದಲ ದಿನವೇ ಪಠ್ಯಪುಸ್ತಕ, 2 ಜೊತೆ …

Read More »

ಜಾರಿ ನಿರ್ದೇಶನಾಲಯ (ED) ದಾಳಿ ಮಾಡಿದ ಬಳಿಕ ವಶಪಡಿಸಿಕೊಂಡ ಹಣ ಏನಾಗುತ್ತದೆ?

ಬೆಂಗಳೂರು, ಮೇ 28: ಜಾರಿ ನಿರ್ದೇಶನಾಲಯ (ED) ಆರ್ಥಿಕ ಅಪರಾಧಗಳು, ಮನಿ ಲಾಂಡರಿಂಗ್, ಭ್ರಷ್ಟಾಚಾರ ಇತ್ಯಾದಿಗಳನ್ನು ಒಳಗೊಂಡ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಹಲವು ರಾಜಕಾರಣಿಗಳು ಮತ್ತು ಅಧಿಕಾರಿಗಳ ನಿವೇಶನಗಳ ಮೇಲೆ ಇಡಿ ದಾಳಿ ನಡೆಸಿ ನಗದು ಮತ್ತು ದೋಷಾರೋಪಣೆಯ ದಾಖಲೆಗಳನ್ನು ವಶಪಡಿಸಿಕೊಂಡಿರುವ ಹಲವು ನಿದರ್ಶನಗಳಿವೆ. ಈಗ, ಇಡಿ ವಸೂಲಿ ಮಾಡಿದ ನಗದು ಏನಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ವರದಿಗಳ ಪ್ರಕಾರ, ತನಿಖಾ ಸಂಸ್ಥೆಯು ಹಣವನ್ನು ವಶಪಡಿಸಿಕೊಳ್ಳಲು ಅಧಿಕಾರವನ್ನು ಹೊಂದಿದೆ. ಆದರೆ …

Read More »

ಆದಾಯ ತೆರಿಗೆ ಪಾವತಿ’ದಾರರೇ ಗಮನಿಸಿ: ಮೇ.31ರೊಳೆಗೆ ‘ಪ್ಯಾನ್’ಗೆ ಆಧಾರ್ ಲಿಂಕ್ ಮಾಡದಿದ್ರೇ, ದುಪ್ಪಟ್ಟು TDS ಫಿಕ್ಸ್

ನವದೆಹಲಿ: ಮೇ 31 ರೊಳಗೆ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡುವಂತೆ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಜ್ಞಾಪನೆ ನೀಡಿದೆ. ಒಂದು ವೇಳೆ ಲಿಂಕ್ ಮಾಡದೇ ಇದ್ದರೇ ದುಪ್ಪಟ್ಟು ಟಿಡಿಎಸ್ ಕಟ್ ಆಗಲಿದೆ ಅಂತ ಎಚ್ಚರಿಸಿದೆ. ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ಐಟಿ ಇಲಾಖೆ, ಮೂಲದಲ್ಲಿ ಹೆಚ್ಚಿನ ತೆರಿಗೆ ಕಡಿತಗಳನ್ನು (Tax Deductions at Source -TDS) ತಪ್ಪಿಸಲು ಈ ಗಡುವನ್ನು ಪೂರೈಸುವುದು ಮುಖ್ಯ ಎಂದು ಹೇಳಿದೆ. …

Read More »

ಹೆಚ್​​.ಡಿ.ರೇವಣ್ಣಗೆ ಮತ್ತೆ ಸಂಕಷ್ಟ

ಬೆಂಗಳೂರು: ಲೈಂಗಿಕ ಕಿರುಕುಳ ಹಾಗೂ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಜಾಮೀನು ಪಡೆದು ಟೆಂಪಲ್​​ ರನ್​​ ಮಾಡುತ್ತಿರುವ ಮಾಜಿ ಸಚಿವ ಹೆಚ್​​.ಡಿ.ರೇವಣ್ಣಗೆ ಮತ್ತೆ ಸಂಕಷ್ಟ ಎದುರಾಗಿದೆ. ಲೈಂಗಿಕ ದೌರ್ಜನ್ಯ ಮತ್ತು ಕಿಡ್​​​ನ್ಯಾಪ್​​ ಕೇಸ್​​​ ಎರಡಕ್ಕೂ ಸಂಬಂಧಿಸಿ ರೇವಣ್ಣಗೆ ಈಗಾಗಲೇ ಸೆಷೆನ್ಸ್​​ ಕೋರ್ಟ್​​​​​ ಜಾಮೀನು ಮಂಜೂರು ಮಾಡಿತ್ತು.   ಈ ಜಾಮೀನನ್ನು ರದ್ದುಗೊಳಿಸುವಂತೆ ಎಸ್​​​ಐಟಿ ಇಂದು ಹೈಕೋರ್ಟ್​​​​​​​ಗೆ ಅರ್ಜಿ ಸಲ್ಲಿಸಿದೆ. ಎಸ್​​ಐಟಿ ವಿಚಾರಣೆಯನ್ನು ಹೈಕೋರ್ಟ್​​ ಮೇ.31ರಂದು ಮಾಡುವ ಸಾಧ್ಯತೆ ಇದೆ.  

Read More »

ಕರ್ನಾಟಕ ಈಗ ಕೂಲ್.. ಕೂಲ್; ಈ ಎಲ್ಲಾ ಜಿಲ್ಲೆಗಳಲ್ಲಿ ಭರ್ಜರಿ ಮಳೆ.!

ಏಪ್ರಿಲ್ 2024ರಲ್ಲಿ ಒಂದೊಂದು ಹನಿ ನೀರಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ಬೆನ್ನಲ್ಲೇ ಇದೀಗ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ & ಬೆಂಗಳೂರು ನಗರವು ಸೇರಿ ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ರಾಮನಗರ, ಶಿವಮೊಗ್ಗ ಜಿಲ್ಲೆಗೆ ಮಳೆಯ ಸಿಂಚನ ಆಗಲಿದೆ.ಆದರೂ ವಿಜಯನಗರ, ತುಮಕೂರು, ಮೈಸೂರು, ಮಂಡ್ಯ, ಕೋಲಾರ & ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಗಳಲ್ಲೂ ಮಳೆ ಸುರಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಸದ್ಯ ಸಿಲಿಕಾನ್​ ಸಿಟಿ ಬೆಂಗಳೂರು ಸೇರಿದಂತೆ, ಕರ್ನಾಟಕದ …

Read More »

ಟಿಕೆಟ್‌ ಕೇಳೋದು ತಪ್ಪಾ? ಕಮಲವೇ ಉಸಿರು ಎಂದವರಿಗೆ ಪಕ್ಷದಿಂದ ಗೇಟ್‌ಪಾಸ್‌: ಬಿಜೆಪಿಯಲ್ಲಿ ಏನಾಗುತ್ತಿದೆ?

ಬೆಂಗಳೂರು, ಮೇ 28: ಬಿಜೆಪಿಯೇ ಉಸಿರು ಎಂಬ ಕಮಲ ಕಲಿಗಳನ್ನ ಪಕ್ಷದಿಂದ ಹೊರ ಹಾಕಿದ್ದಾರೆ. ಬಿಜೆಪಿಯ ಶಿಸ್ತಿನ ಸಿಪಾಯಿಗಳು ಟಿಕೆಟ್‌ ಕೇಳಿದ್ದಕ್ಕೆ ಪಕ್ಷ ಅವರನ್ನ ತನ್ನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದೆ. ಬಿಜೆಪಿ ಪಕ್ಷ ಕಟ್ಟಿದವರಲ್ಲಿ ಒಬ್ಬರಾದ ಮಾಜಿ ಉಪಮುಖ್ಯಮಂತ್ರಿ ಕೆ ಎಸ್‌ ಈಶ್ವರಪ್ಪ ಹಾಗೂ ಹಿಂದು ಹುಲಿ ರಘುಪತಿ ಭಟ್‌ ಅವರನ್ನ ಪಕ್ಷ ಉಚ್ಚಾಟಿಸಿದೆ. ಹೌದು, ಟಿಕೆಟ್‌ ಕೇಳೋದು ತಪ್ಪಾ? ಈ ಪ್ರಶ್ನೆಗೆ ಉತ್ತರ ಮಾತ್ರವಿಲ್ಲ. ಪಕ್ಷವೇ ಉಸಿರು, ಬಿಜೆಪಿಯೇ …

Read More »