Breaking News

Uncategorized

ಪ್ರಜ್ವಲ್ ನನ್ನ ಮಗ ಎಂದಿದ್ದ ಎಚ್‌ಡಿಕೆ: ಸಿದ್ದರಾಮಯ್ಯ ಕುಟುಕು

ಬಾಗಲಕೋಟೆ: ‘ಮಹಿಳೆಯರಿಗೆ ಅನ್ಯಾಯ ನಡೆದಿದೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕುಮಾರಸ್ವಾಮಿ, ಪ್ರಜ್ವಲ್ ನನ್ನ ಮಗ ಎಂದಿದ್ದರು. ಈಗ ಅವರ ಕುಟುಂಬವೇ ಬೇರೆ ಎನ್ನುತ್ತಿದ್ದಾರೆ. ಪ್ರಜ್ವಲ್ ವಿಡಿಯೊ ವಿಚಾರ ಬಿಜೆಪಿಯವರಿಗೆ ಮೊದಲೇ ಗೊತ್ತಿತ್ತು. ಆದರೂ, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜಕೀಯ ಮಾಡುವುದು, ಕುಕೃತ್ಯ ಮಾಡುವುದು,‌ ತಪ್ಪು ಮಾಡುವುದು ಒಟ್ಟಿಗೆ ಮಾಡುತ್ತಾರೆ‌. ಇಂತಹ ವಿಷಯ ಬಂದಾಗ ಬೇರೆ ಎನ್ನುತ್ತಾರೆ’ ಎಂದು ಲೇವಡಿ …

Read More »

ಮೇ 7ರಂದು ಮತದಾನ: ಮದ್ಯ ಮಾರಾಟ ನಿರ್ಬಂಧ ಮಾಹಿತಿ

ಚಿಕ್ಕಮಗಳೂರು, ಮೇ 04: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರ ಮಂಗಳವಾರ ಮತದಾನ ನಡೆಯಲಿದೆ. ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮತದಾನದ ಹಿನ್ನಲೆಯಲ್ಲಿ ಮದ್ಯ ಮಾರಾಟದ ಮೇಲೆ ನಿರ್ಬಂಧ ವಿಧಿಸಿ ಆದೇಶಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ, ಚಿಕ್ಕಮಗಳೂರು ಜಿಲ್ಲೆ ಇವರು ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ದಿನಾಂಕ 5/5/2024ರ ಸಂಜೆ 5 ಗಂಟೆಯಿಂದ ದಿನಾಂಕ 7/5/2024ರ ಮಧ್ಯರಾತ್ರಿ 12 ಗಂಟೆಯವರೆಗೆ ಶಿವಮೊಗ್ಗ ಮತ್ತು ದಾವಣಗೆರೆ ಲೋಕಸಭಾ ಕ್ಷೇತ್ರಗಳಿಗೆ …

Read More »

ತಂಗಿಯ ಅಪ್ರಾಪ್ತ ಮಗಳ ಮೇಲೆ ರೌಡಿ ಶೀಟರ್ ನಿಂದ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು

ನಂಜನಗೂಡು: ಟ್ಯೂಷನ್ ಗೆ ಬಿಡುವ ನೆಪದಲ್ಲಿ ಸ್ವಂತ ತಂಗಿಯ ಅಪ್ರಾಪ್ತ ಮಗಳನ್ನ ಕರೆದೊಯ್ದ ಕಾಮುಕ ಸೋದರಮಾವ ಅತ್ಯಾಚಾರವೆಸಗಿ ಪರಾರಿಯಾದ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಪೋಕ್ಸೋ ಕಾಯಿದೆ ಅಡಿ ಆರೋಪಿ ವಿರುದ್ದ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರೌಡಿಶೀಟರ್ ಆಗಿರುವ ಆರೋಪಿ ಅಪ್ರಾಪ್ತ ಬಾಲಕಿಯ ಸೋದರಮಾವನೇ ಆಗಿದ್ದಾನೆ. ರಾಜೇಶ್ ಅಲಿಯಾಸ್ ದೈತ್ಯರಾಜ್ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ದಾಖಲಾಗಿದೆ. ಸಾಕಷ್ಟು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ರಾಜೇಶ್@ ದೈತ್ಯರಾಜ್ ರೌಡಿಶೀಟರ್ ಆಗಿದ್ದು ಕಾಂಗ್ರೆಸ್ ಪ್ರಮುಖರಾದ …

Read More »

ಅಶ್ಲೀಲ ವಿಡಿಯೋ ಪ್ರಕರಣ: ಮೇ 10ರೊಳಗೆ ವಿಚಾರಣೆಗೆ ಹಾಜರಾಗಲು ಪ್ರಜ್ವಲ್ ರೇವಣ್ಣ ನಿರ್ಧಾರ

ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ವಿದೇಶಕ್ಕೆ ತೆರಳಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇ 10ರೊಳಗೆ ದೇಶಕ್ಕೆ ಬಂದು ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ನುರಿತ ವಕೀಲರ ಸಲಹೆಯ ಮೇರೆಗೆ ಪ್ರಜ್ವಲ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಬೆಂಗಳೂರು, ಮೇ 4: ಅಶ್ಲೀಲ ವಿಡಿಯೋ ಪ್ರಕರಣಕ್ಕೆ (Prajwal Video Case) ಸಂಬಂಧಿಸಿ ಸದ್ಯ ವಿದೇಶದಲ್ಲಿದ್ದುಕೊಂಡೇ ವಕೀಲರ ಸಲಹೆ ಪಡೆಯುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಮೇ 10ರೊಳಗೆ ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. …

Read More »

ಪ್ರಜ್ವಲ್ ರೇವಣ್ಣನ ಮುಂದೆ ಉಮೇಶ್ ರೆಡ್ಡಿಯೂ ಶೂನ್ಯ: ಮಾಜಿ ಸಂಸದ ಶಿವರಾಮೇಗೌಡ

ಮಂಡ್ಯ: ಪ್ರಜ್ವಲ್ ರೇವಣ್ಣನ ಮುಂದೆ ಉಮೇಶ್ ರೆಡ್ಡಿ ಕೂಡ ಶೂನ್ಯ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ. ಪ್ರಜ್ವಲ್ ಇಷ್ಟೆಲ್ಲ ಮಾಡುತ್ತಿದ್ದರೂ ಅವರ ಅಪ್ಪ, ಅಮ್ಮ ಕತ್ತೆ ಕಾಯುತ್ತಿದ್ದರಾ? ಒಂದು ಕಡೆ ಅಪ್ಪ, ಮತ್ತೊಂದು ಕಡೆ ಮಗ ಈ ರೀತಿ ಮಾಡಿ ದೊಡ್ಡ ಗೌಡರನ್ನು ಚಿಂತೆ ಮಾಡುವ ಪರಿಸ್ಥಿತಿಗೆ ತಂದಿದ್ದಾರೆ.ಅವರು ಮಾಡಿರುವ ಪಾಪ ಅವರೇ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.   ದೇವರಾಜೇಗೌಡ ಪೆನ್ ಡ್ರೈವ್ ಬಿಡುವ ಹೇಳಿಕೆ ಕೊಟ್ಟಿದ್ದರು. …

Read More »

ನೇಹಾ ಹತ್ಯೆ ಆರೋಪಿ ಫಯಾಜ್‍ಗೆ ಗಲ್ಲು ಶಿಕ್ಷೆ ನೀಡುವಂತೆ’ ಸಹಿ ಸಂಗ್ರಹ ಅಭಿಯಾನ

ಔರಾದ್: ‘ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಮಾಡಿದ ಆರೋಪಿ ಫಯಾಜ್‍ಗೆ ಗಲ್ಲು ಶಿಕ್ಷೆ ನೀಡುವಂತೆ’ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಸಹಿ ಸಂಗ್ರಹ ಅಭಿಯಾನ ನಡೆಸಿದರು. ಪಟ್ಟಣದ ಇಕ್ರಾ ಪಿಯು ಕಾಲೇಜಿನಲ್ಲಿ ನಡೆದ ಸಹಿ ಸಂಗ್ರಹ ಅಭಿಯಾನದಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಶಶಿಕಾಂತ ರಾಕ್ಲೆ ‘ಸಿಐಡಿ ತನಿಖೆಯಿಂದ ನೊಂದ ಕುಟುಂಬಸ್ಥರಿಗೆ ನ್ಯಾಯ ಸಿಗುವುದಿಲ್ಲ.ಇದನ್ನು ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸಬೇಕು’ ಎಂದು ಆಗ್ರಹಿಸಿದರು. …

Read More »

ಗರ್ಭಿಣಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಇಬ್ಬರಿಗೆ ಗಲ್ಲು ಶಿಕ್ಷೆ

ವಿಜಯಪುರ: 9 ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಿದ್ದ ಮರ್ಯಾದಾ ಹತ್ಯೆ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಹಾಗೂ ಇತರ ಐವರಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ವಿಜಯಪುರ ಜಿಲ್ಲಾ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ. 2017ರಲ್ಲಿ ಗರ್ಭಿಣಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಇಬ್ಬರಿಗೆ ಗಲ್ಲು ಶಿಕ್ಷೆ ಮತ್ತು ಇತರೆ ಐವರು ಅಪರಾಧಿಗಳಿಗೆ …

Read More »

ಮಾಜಿ ಮಿನಿಸ್ಟರ್ ರೇವಣ್ಣ ವಿರುದ್ಧ ದಾಖಲಾಯ್ತು ಕಿಡ್ನ್ಯಾಪ್ ಕೇಸ್ !

ಹಾಸನ (Hassan) ಜಿಲ್ಲೆಯ ರಾಜಕಾರಣದಲ್ಲಿ ತಮ್ಮನ್ನು ಬಿಟ್ಟು ಬೇರೆ ಯಾರೂ ಇಲ್ಲ ಎನ್ನುವಂತಿದ್ದ ದೇವೇಗೌಡರ (Devegowda) ಕುಟುಂಬಕ್ಕೆ ಸಿಡಿಲು ಬಡಿದಿದೆ. ಹೆಚ್.ಡಿ ರೇವಣ್ಣ (HD Revanna) ಪುತ್ರ ಪ್ರಜ್ವಲ್ ರೇವಣ್ಣ (Prajwal revanna) ಅವರದ್ದು ಎನ್ನಲಾದ ವಿಡಿಯೋಗಳು ವೈರಲ್ (viral) ಆದ ಬಳಿಕ ಎಸ್‌ಐಟಿ ತನಿಖೆ ಶುರುವಾಗಿದೆ. ಈ ನಡುವೆ ನಿರೀಕ್ಷಣಾ ಜಾಮೀನು ಕೋರಿ ರೇವಣ್ಣ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಇಂದು ಕೋರ್ಟ್ (court) ತೀರ್ಪು ನೀಡುವ ಸಾಧ್ಯತೆ …

Read More »

ಒಂದು ಮತ; ಐದು ವರ್ಷ ಪುಕ್ಕಟೆ ಕೆಲಸ- ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ

ವಿಜಯಪುರ: ರಾಜ್ಯ ರಾಜಕೀಯದಲ್ಲಿ ‘ಅಜಾತ ಶತ್ರು’ ಎಂದೇ ಗುರುತಿಸಿಕೊಂಡಿರುವ ದಲಿತ ನಾಯಕ, ಬಿಜೆಪಿ ಲೋಕಸಭೆ ಅಭ್ಯರ್ಥಿ ರಮೇಶ ಜಿಗಜಿಣಗಿ ಏಳನೇ ಬಾರಿಗೆ ಸಂಸತ್‌ ಭವನ ಪ್ರವೇಶಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ರಾಜ್ಯ ಮಾತ್ರವಲ್ಲದೇ, ರಾಷ್ಟ್ರ ರಾಜಕಾರಣದಲ್ಲೂ ಛಾಪು ಮೂಡಿಸಿರುವ ರಮೇಶ ಜಿಗಜಿಣಗಿ ಅವರು ಈ ಬಾರಿ ಗೆಲುವು ದಾಖಲಿಸಿದರೆ ಬಹುತೇಕ ಹೊಸ ಇತಿಹಾಸ ನಿರ್ಮಾಣವಾಗಲಿದೆ.ತಮ್ಮ ಸರಳ, ಸಜ್ಜನಿಕೆ, ಮೃದುಭಾಷೆ, ಹಮ್ಮು,ಬಿಮ್ಮು, ಗತ್ತು, ಗೈರತ್ತು ಇಲ್ಲದ ನಡೆಯಿಂದಲೇ ಜನರನ್ನು ಸೆಳೆಯುವ ಹಾಗೂ …

Read More »

ರಾಯಚೂರಿನಲ್ಲಿ ತಾಪಮಾನ ಹೆಚ್ಚಲು ಕಾಂಗ್ರೆಸ್‌ ಅಭ್ಯರ್ಥಿ ಕಾರಣ: ಅಮರೇಶ್ವರ್ ನಾಯಕ್

ರಾಯಚೂರು: ರಾಯಚೂರಿನಲ್ಲಿ ತಾಪಮಾನ ಹೆಚ್ಚಳವಾಗಿರುವುದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯಕ್ (G. Kumar Nayak) ಪಾತ್ರವಿದೆ ಎಂದು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯಕ್ (Raja Amareshwar Nayak) ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್,‌ ಪವರ್ ಗ್ರಿಡ್‌ನಿಂದ ನಮಗೆ ಶಾಖ ಹೆಚ್ಚಾಗಿದೆ.ಜಿಲ್ಲೆಗೆ ವೈಟಿಪಿಎಸ್ ತಂದವರು ಈಗಿನ ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ್ ನಾಯಕ್. ಇದು ಜಿ. ಕುಮಾರ್ ನಾಯಕ್ ಜನರಿಗೆ ಕೊಟ್ಟಂತ ಕಾಣಿಕೆ. ಕುಮಾರ್ ನಾಯಕ್ …

Read More »