ಹುಬ್ಬಳ್ಳಿ : ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಪುತ್ರಿ ನೇಹ ಹಿರೇಮಠಳನ್ನು ಚಾಕುವಿನಿಂದ ಭೀಕರವಾಗಿ ಹತ್ಯೆ ಮಾಡಿರುವ ಆರೋಪಿ ಫಯಾಜ್ ನನ್ನು ನಮಗೆ ಕೊಡಿ ಆತನ ರುಂಡ ಕತ್ತರಿಸಿ ಹುಬ್ಬಳ್ಳಿ ಬಾಗಿಲಿಗೆ ಕಟ್ಟುತ್ತೇವೆ ಎಂದು ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಆಕ್ರೋಶ ಹೊರಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಫಯಾಜ್ ನನ್ನು ನಮಗೆ ಕೊಡಿ ತುಂಡು ತುಂಡು ಮಾಡಿ ಎಸೆಯುತ್ತೇವೆ.ಆರೋಪಿ ಫಯಾಜ್ ರುಂಡ ಕತ್ತರಿಸಿ ಹುಬ್ಬಳ್ಳಿ ಬಾಗಿಲಿಗೆ …
Read More »ರಾಜ್ಯದಲ್ಲಿ ಎನ್‌ಕೌಂಟರ್ ಕಾನೂನು ಜಾರಿ ಅವಶ್ಯ: ಸಂತೋಷ್ ಲಾಡ್
ಹುಬ್ಬಳ್ಳಿ: ಗೃಹ ಸಚಿವರು ಹೇಳಿದಂತೆ ಇದೊಂದು ಆಕಸ್ಮಿಕ ಘಟನೆ. ರಾಜ್ಯದಲ್ಲಿ ಎನ್‌ಕೌಂಟರ್ ಕಾನೂನು ಜಾರಿಗೆ ತಂದರೆ ನೇಹಾ ಹತ್ಯೆಯಂತಹ ಹೇಯ ಕೃತ್ಯಗಳು ನಿಲ್ಲುತ್ತವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಎನ್‌ಕೌಂಟರ್ ಕಾನೂನು ಜಾರಿಗೊಳಿಸಿದರೆ ಯುಪಿ ಮಾದರಿಯ ಬುಲ್ಡೋಜರ್ ಕಾನೂನಿನ ಅಗತ್ಯವೇ ಬರುವುದಿಲ್ಲ. ಬಿಜೆಪಿಯವರು ನೇಹಾಳ ಹತ್ಯೆಯನ್ನು ರಾಜಕೀಯ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇದನ್ನು ರಾಜಕೀಯ ಮಾಡಬಾರದು. ಆದರೆ ಈ ರೀತಿಯ ಘಟನೆಗಳು …
Read More »ಹುಬ್ಬಳ್ಳಿ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಕೊಲೆಗೆ ಕಾರಣ ತಿಳಿಸಿದ ಪರಮೇಶ್ವರ್
ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಬಿವಿಬಿ ಕಾಲೇಜು ಆವರಣದಲ್ಲಿ ಗುರುವಾರ ಮಧ್ಯಾಹ್ನ ಎಂಸಿಎ ವಿದ್ಯಾರ್ಥಿನಿ ನೇಹಾ ಎಂಬುವರನ್ನು ಫಯಾಜ್ ಕೊಲೆ ಮಾಡಿದ್ದನು. ಕೊಲೆ ಪ್ರಕರಣ ಸಂಬಂಧ ವಿದ್ಯಾನಗರ ಪೊಲೀಸರು ಆರೋಪಿ ಫಯಾಜನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.ಪ್ರಕರಣ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ. ತುಮಕೂರು, ಏಪ್ರಿಲ್ 19: ನಗರದ ಬಿವಿಬಿ ಇಂಜಿನಿಯರ್ ಕಾಲೇಜು (BVB Engineering College) ಆವರಣದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ (Student Neha) ಕೊಲೆ ಪ್ರಕರಣಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. …
Read More »ಹುಬ್ಬಳ್ಳಿ ವಿದ್ಯಾರ್ಥಿನಿಯ ಹತ್ಯೆ ಪ್ರಕರಣದ ಆರೋಪಿಗೆ ಗರಿಷ್ಠ ಶಿಕ್ಷೆಯಾಗುವಂತೆ ಕ್ರಮ : ಸಿಎಂ
ಬೆಂಗಳೂರು : ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಅವರ ಹತ್ಯೆ ಖಂಡನೀಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಬರೆದುಕೊಂಡಿರುವ ಅವರು, “ಘಟನೆ ಸಂಬಂಧ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಕಟ್ಟುನಿಟ್ಟಿನ ತನಿಖೆ ನಡೆಸಿ, ಆರೋಪಿಗೆ ಗರಿಷ್ಠ ಶಿಕ್ಷೆಯಾಗುವಂತೆ ಕ್ರಮವಹಿಸಲು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದೇನೆ” ಎಂದು ತಿಳಿಸಿದರು. “ಘಟನೆ ಸಂಬಂಧ ಯಾರೊಬ್ಬರೂ …
Read More »ಶ್ರೀ ಶ್ರೀ ಹರಿ ವಿಠಲ ಪಾಂಡುರಂಗ ದೇವರಿಗೆ ತೊಟ್ಟಿಲೋತ್ಸವ ಸೇವೆ !
ಹುಬ್ಬಳ್ಳಿ; ನಗರದ ಎಸ್.ಎಸ್. ಕೆ. ಪಂಚ ಟ್ರಸ್ಟ್, ಶ್ರೀ ದುರ್ಗಾದೇವಿ ದೇವಸ್ಥಾನ, ದಾಜಿಬಾನ ಪೇಟ,ಹುಬ್ಬಳ್ಳಿ ಈ ಸಂಸ್ಥೆಯ , ದಾಜಿಬಾನ ಪೇಟನಲ್ಲಿರುವ ಶ್ರೀ ಶ್ರೀ ಹರಿ ವಿಠಲ ಪಾಂಡುರಂಗ ಶ್ರೀ ರುಕ್ಮಾಯಿ ದೇವಸ್ಥಾನದಲ್ಲಿ ಶ್ರೀ ರಾಮನವಮಿ ನಿಮಿತ್ಯ, ಶ್ರೀ ಶ್ರೀ ಹರಿ ಪಾಂಡುರಂಗ ವಿಠ್ಠಲ ದೇವರಿಗೆ ತೊಟ್ಟಿಲೋತ್ಸವ ಪೂಜೆಯು ನೆರವೇರಿತು. ಶ್ರೀ ರಾಮನವಮಿ ನಿಮಿತ್ಯ, ಶ್ರೀ ವಿಠ್ಠಲ ರುಕ್ಮಾಯಿ ಯರಿಗೆ ವಿಶೇಷ ಅಲಂಕಾರ ಮಾಡಿ,ಸಿಹಿ ನೈವೇದ್ಯ ಅರ್ಪಿಸಿ ಪೂಜೆ ಮಾಡಲಾಯಿತು. ದೇವಸ್ಥಾನದಲ್ಲಿ …
Read More »ಧಾರವಾಡ: ಮನೆಯೊಂದರಲ್ಲಿ ಕಂತೆ ಕಂತೆ ಹಣ ಪತ್ತೆ; ಸುಮಾರು ₹ 18 ಕೋಟಿ?
ಧಾರವಾಡ: ನಗರದ ನಾರಾಯಣಪುರ ಮುಖ್ಯರಸ್ತೆಯ ಆರ್ನಾ ರೆಸಿಡೆನ್ಸಿಯ ಮೂರನೇ ಅಂತಸ್ತಿನ ಮನೆಯೊಂದರಲ್ಲಿ ಮಂಗಳವಾರ ರಾತ್ರಿ ಚೀಲಗಳಲ್ಲಿ ಹಣದ ಕಂತೆಗಳು ಪತ್ತೆಯಾಗಿವೆ. ಸುಮಾರು ₹ 18 ಕೋಟಿ ಹಣ ಇದೆ ಎಂದು ಹೇಳಲಾಗುತ್ತಿದ್ದು, ಎಣಿಕೆ ಪೂರ್ಣಗೊಂಡ ಬಳಿಕ ನಿಖರ ಮಾಹಿತಿ ಸಿಗಲಿದೆ. ಮನೆಯಲ್ಲಿ ಮದ್ಯ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಮನೆಗೆ ತೆರಳಿ ತಪಾಸಣೆ ನಡೆಸಿದರು. ಆಗ ತಿಜೋರಿಯ ಚೀಲಗಳಲ್ಲಿ ಹಣದ ಕಂತೆಗಳು ಸಿಕ್ಕವು. ಆದಾಯ …
Read More »ಯುಪಿಎಸ್ಸಿ: ಹುಬ್ಬಳ್ಳಿಯ ಕೃಪಾ ಜೈನ್‌ಗೆ 440ನೇ ರ‍್ಯಾಂಕ್
ಹುಬ್ಬಳ್ಳಿ: ಯುಪಿಎಸ್ಸಿಯಲ್ಲಿ 440ನೇ ರ‍್ಯಾಂಕ್ ಪಡೆಯುವ ಮೂಲಕ ಇಲ್ಲಿನ ರಾಜನಗರದ ನಿವಾಸಿ ಕೃಪಾ ಜೈನ್ ಜಿಲ್ಲೆಗೆ ಹೆಸರು ತಂದಿದ್ದಾರೆ. ಇವರ ತಂದೆ ಅಭಯ ಪಾರ್ಲೆಚಾ ಇಲ್ಲಿನ ಎಪಿಎಂಸಿಯಲ್ಲಿ ದಿನಸಿ ಹೋಲ್‌ಸೇಲ್ ವ್ಯಾಪಾರಸ್ಥರಾಗಿದ್ದಾರೆ. ತಾಯಿ ಇಂದಿರಾ ಗೃಹಿಣಿ. ಮೂಲತಃ ಹೊಸಪೇಟೆಯವರು. ಬಹಳ ವರ್ಷಗಳ ಹಿಂದೆಯೇ ಹುಬ್ಬಳ್ಳಿಗೆ ಬಂದು ನೆಲೆಯೂರಿದ್ದಾರೆ. ಕೃಪಾ ಜೈನ್ ಹುಬ್ಬಳ್ಳಿಯಲ್ಲಿಯೇ ಜನಿಸಿದ್ದಾರೆ. ತಮ್ಮ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಡಿ.ಕೆ. ಪಬ್ಲಿಕ್ ಸ್ಕೂಲ್‌ನಲ್ಲಿ ಪೂರೈಸಿದ್ದಾರೆ. ಕೆಎಲ್‌ಇ ಸಂಸ್ಥೆಯ ಪ್ರೇರಣಾ ಕಾಲೇಜಿನಲ್ಲಿ 2016ರಲ್ಲಿ ಪಿಯುಸಿ …
Read More »ಧರ್ಮ ಯುದ್ಧದಲ್ಲಿ ನಮ್ಮ ಗೆಲುವು ಕಟ್ಟಿಟ್ಟ ಬುತ್ತಿ ಎಂದ ದಿಂಗಾಲೇಶ್ವರ ಶ್ರೀಗಳು,ಜೋಶಿಗೆ ಸೋಲಿನ ಭಯ
ಹುಬ್ಬಳ್ಳಿ: ಧರ್ಮ ಯುದ್ಧದಲ್ಲಿ ನಮ್ಮ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಫಕೀರೇಶ್ವರ ಮಠದ ದಿಂಗಾಲೇಶ್ವರ ಶ್ರೀ (Dingaleshwara Sri) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು ದಿಂಗಾಲೇಶ್ವರ ಶ್ರೀಗಳಿಗೆ ಬೆಂಬಲ ಸೂಚಿಸಿ ಸನ್ಮಾನಿಸಿದರು. ಈ ಸಭೆಯಲ್ಲಿ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು, ಕ್ಷೇತ್ರದ ಮನೆ ಮನೆಯಲ್ಲಿ ಸ್ವಾಮೀಜಿಯನ್ನ ಬೆಂಬಲಿಸಬೇಕು ಅನ್ನೋ ಮಾತು ಕೇಳಿ ಬರುತ್ತಿದೆ. ಧರ್ಮಯುದ್ಧದಲ್ಲಿ (Lok Sabha Election 2024) ನಾವು ಗೆದ್ದೇ …
Read More »ಚುನಾವಣೆಗೆ ಸ್ಪರ್ಧಿಸದಂತೆ ದಿಂಗಾಲೇಶ್ವರ ಶ್ರೀಗೆ ಮತ್ತೊಮ್ಮೆ ಮನವಿ ಮಾಡುವೆ: BSY
ಹುಬ್ಬಳ್ಳಿ: ‘ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯದಂತೆ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಮತ್ತೊಮ್ಮೆ ಮನವಿ ಮಾಡುತ್ತೇನೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ‘ಕ್ಷೇತ್ರದ ಜನ ಪಕ್ಷದ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರವಾಗಿದ್ದಾರೆ. ಅವರ ವಿರುದ್ಧ ಸ್ಪರ್ಧಿಸುವ ದುಸ್ಸಾಹಸಕ್ಕೆ ಸ್ವಾಮೀಜಿ ಕೈ ಹಾಕಬಾರದು. ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡಬಾರದೆಂದು ಅವರನ್ನು ಕೋರುವೆ. ಮುಂದೆ ಏನು …
Read More »ನಿರ್ವಹಣೆ ಕೊರತೆ: ಪಾಳುಬಿದ್ದ 150ಕ್ಕೂ ಹೆಚ್ಚು ಗರಡಿಮನೆ
ಹುಬ್ಬಳ್ಳಿ: ‘ಧಾರವಾಡದ ಪೈಲ್ವಾನ್ರ ಅಂದ್ರ ಹಗರಂತ ಮಾಡಿದ್ರೇನ..? ಕೊಲ್ಹಾಪುರ, ಪುಣಾ, ಬಾಂಬೆ.. ಹಿಂಗ ಎಲ್ಲಿಗೇ ಕುಸ್ತಿ ಆಡಾಕ ಹೋದ್ರ ಕಣದಾಗ ನಂಬರ್ ಹಚ್ಚಲಾರದ ಬರ್ತಿರಲಿಲ್ಲ. ಕುಸ್ತಿಗಿ ರಾಜ್ಯದಾಗ ಧಾರವಾಡ ಜಿಲ್ಲಾ ಹೆಸರಾಗಿತ್ತ.. ಆದ್ರ ಈಗ ಹಂಗ ಉಳಿದಿಲ್ಲರೀ’…! ಹೀಗೆ ನೋವಿನಿಂದ ಹೇಳುತ್ತಾರೆ ಕುಸ್ತಿ ಪೈಲ್ವಾನರು. ನಿರ್ವಹಣೆ ಕೊರತೆಯಿಂದ ಪಾಳು ಬಿದ್ದು ಇತಿಹಾಸದ ಪುಟ ಸೇರುತ್ತಿರುವ ಗರಡಿ ಮನೆಗಳೇ ಇದಕ್ಕೆ ಕಾರಣ ಎಂಬುದು ಅವರ ಬೇಸರ. ಗ್ರಾಮೀಣ ಪ್ರದೇಶದಲ್ಲಿ ಈ ಹಿಂದೆ ಮನೆಗೊಬ್ಬರು …
Read More »