Breaking News

ರಾಷ್ಟ್ರೀಯ

ಮೊಟ್ಟೆ ಡೀಲ್ ಅಪೌಷ್ಠಿಕ ಮಕ್ಕಳ ಯೋಜನೆ ಅಡಿಯಲ್ಲಿ ಅಕ್ರಮಕ್ಕೆ ಮುಂದಾಗಿ ಕಮಿಷನ್​ ಪಡೆಯಲು ಮುಂದಾಗಿದ್ದ ಶಶಿಕಲಾ ಜೊಲ್ಲೆ!

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ಮೊಟ್ಟೆ ಡೀಲ್​​ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ವರದಿ ಕೇಳಿದ್ದಾರೆ. ಬಡವರ, ಅಪೌಷ್ಠಿಕ ಮಕ್ಕಳ ಯೋಜನೆ ಅಡಿಯಲ್ಲಿ ಅಕ್ರಮಕ್ಕೆ ಮುಂದಾಗಿ ಕಮಿಷನ್​ ಪಡೆಯಲು ಮುಂದಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರ ಮುಖವಾಡವನ್ನ ರಹಸ್ಯ ಕಾರ್ಯಾಚರಣೆ ನಡೆಸಿ ಬಯಲು ಮಾಡಿತ್ತು.  ವರದಿ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್​ ಸಿಎಂ …

Read More »

ಪ್ರವಾಹ ಭೀತಿ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳ ಜನರ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

  ಗೋಕಾಕ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭಾ ನದಿಗೆ ಒಳಹರಿವು ಪ್ರಮಾಣ ಹೆಚ್ಚುತ್ತಿರುವುದರಿಂದ ನದಿ ತೀರದ ಗ್ರಾಮಗಳ ನಾಗರೀಕರ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶುಕ್ರವಾರ ಮಧ್ಯಾಹ್ನ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೆಳಗಾವಿ ಜಿಲ್ಲೆಯೂ ಸೇರಿದಂತೆ ನೆರೆಯ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ನಮ್ಮ ಅವಳಿ …

Read More »

ಮಹಾರಾಷ್ಟ್ರದಲ್ಲಿ ‘ಮಹಾ’ ಪ್ರವಾಹ – ಸೂಕ್ಷ್ಮ ಪ್ರದೇಶಗಳಲ್ಲಿನ ಜನರ ಸ್ಥಳಾಂತರ..!

ಮುಂಬೈ : ನೆರೆಯ ಮಾಹಾರಾಷ್ಟ್ರದಲ್ಲಿ ಬಾರೀ ಮಳೆಯಾಗ್ತಾಯಿದ್ದು, ಜನರ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.. ಮಹಾರಾಷ್ಟ್ರಕ್ಕೆ ಒಂದು ರೀತಿ ಮಳೆ ಹಾಗೂ ಕೊರೊನಾ ಶಾಪವಾಗಿದ್ದು, ಮಳೆಯ ಪ್ರಬಾವೂ ಇಲ್ಲಿಯೇ ಹೆಚ್ಚಾಗಿ ಬೀರಿದ್ರೆ , ಕೊರೊನಾ ಪರಿಣಾಮವನ್ನ ಹೆಚ್ಚಾಗಿ ಅನುಭವಿಸಿದ ರಾಜ್ಯವೂ ಇದೇ ಆಗಿದೆ.. ಮಹಾರಾಷ್ಟ್ರದಲ್ಲಿ ವರುಣನ ಅಬ್ಬರಕ್ಕೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.. ಆದ್ರೆ ವರುಣ ಮಾತ್ರ ಶಾಂತನಾಗುವ ಲಕ್ಷಣ ಕಾಣುತ್ತಿಲ್ಲ.. ಧಾರಾಕಾರ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.. ರಸ್ತೆಗಳು ಕೆರೆಯಂತೆ …

Read More »

ಭಾರಿ ಮಳೆ: ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ

ಪುಣೆ: ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ರಸ್ತೆಗಳು ಜಲಾವೃತಗೊಂಡಿರುವುದರಿಂದ, ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಕೊಲ್ಹಾಪುರದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ನೆರೆಯ ರಾಜ್ಯಗಳಿಗೆ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಿದ್ದಾರೆ. ಕೊಲ್ಹಾಪುರ ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಪಂಚಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಜಿಲ್ಲೆಯ ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿನ ಸಂಚಾರ ಪರಿಸ್ಥಿತಿ ಕುರಿತು ಮಾಹಿತಿ ನೀಡಿದ ಕೊಲ್ಹಾಪುರದ ಜಿಲ್ಲಾ …

Read More »

ನಟಿ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಮನೆ ಮೇಲೆ ದಾಳಿ ಮಾಡಿದಾಗ 70 ನೀಲಿ ಚಿತ್ರಗಳು ಸಿಕ್ಕವೂ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಮನೆ ಮೇಲೆ ದಾಳಿ ಮಾಡಿದಾಗ 70 ನೀಲಿ ಚಿತ್ರಗಳು ಸಿಕ್ಕವೂ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ರಾಜ್ ಕುಂದ್ರಾ ಮಾಜಿ ಆಪ್ತ ಸಹಾಯಕ ಉಮೇಶ್​​ ಕಾಮತ್​​​ ಇತರೆ ಪ್ರೊಡಕ್ಷನ್​​​ ಹೌಸ್​​ನೊಂದಿಗೆ ಸೇರಿಕೊಂಡು ಈ 70 ನೀಲಿ ಚಿತ್ರಗಳನ್ನು ಮಾಡಿದ್ದರು ಎನ್ನಲಾಗಿದೆ. ನೀಲಿ ಚಿತ್ರಗಳ ತಯಾರಿಕೆಯಿಂದ ಇದುವರೆಗೆ ಸುಮಾರು 7.5ಕೋಟಿ ರೂಪಾಯಿಗಳಿಗೂ ಅಧಿಕ ಹಣ ತನ್ನ ವಿವಿಧ ಖಾತೆಗಳಿಗೆ …

Read More »

ಅಪಾಯಮಟ್ಟದಲ್ಲಿ ಹರಿಯುತ್ತಿರುವ ವಶಿಷ್ಟಿ ನದಿ: ಕೊಂಕಣ ರೈಲು ಸಂಚಾರ ವ್ಯತ್ಯಯ

: ಮಹಾರಾಷ್ಟ್ರದಲ್ಲಿ ಕೊಂಕಣ ರೈಲ್ವೆ ಮಾರ್ಗದ ಚಿಪ್ಳೂಣ್ ಹಾಗೂ ಕಮತೆ ನಿಲ್ದಾಣಗಳ ನಡುವೆ ರತ್ನಗಿರಿ ಪ್ರಾಂತ್ಯದಲ್ಲಿ ಹರಿ ಯುವ ವಶಿಷ್ಟಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಸೇತುವೆಯಲ್ಲಿ ಹಾದುಹೋಗುವ ರೈಲು ಹಳಿಗಳ ಮೇಲೂ ನೀರು ಹರಿಯುತ್ತಿರುವು ದರಿಂದ ರೈಲು ಸಂಚಾರವನ್ನು ಪ್ರಯಾಣಿಕರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ. ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳ ಮಾರ್ಗವನ್ನು ಬದಲಿಸಲಾಗಿದ್ದು, ಇನ್ನು ಕೆಲವು ರೈಲುಗಳನ್ನು ಕಮತೆ ನಿಲ್ದಾಣದಲ್ಲಿ …

Read More »

ಪ್ರತಿದಿನ 2GB ಡೇಟಾ, 28 ದಿನ ವ್ಯಾಲಿಡಿಟಿ: ನಂ. 1 ಸ್ಥಾನಕ್ಕೆ ಏರ್ಟೆಲ್-ಜಿಯೋ ನಡುವೆ ಗುದ್ದಾಟ

ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ (Jio) ಹಾಗೂ ಏರ್‌ಟೆಲ್​ಗಳ (Airtel) ನಡುವೆ ಸಮತ ಮುಂದುವರೆಯುತ್ತಲೇ ಇದೆ. ನಂಬರ್ ಒನ್ ಪಟ್ಟಕ್ಕೇರಲು ಏರ್ಟೆಲ್ ಹರಸಾಹಸ ಪಡುತ್ತಿದ್ದು, ಹೊಸ ಹೊಸ ಆಕರ್ಷಕ ಪ್ಲಾನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಜಿಯೋ ಕೂಡ ಎಂದಿನಂತೆ ಕಡಿಮೆ ಬೆಲೆಗೆ ಆಕರ್ಷಕ ಡೇಟಾ ಪ್ಲಾನ್​ಗಳನ್ನು ಪರಿಚಯಿಸುತ್ತಿದೆ. ಗ್ರಾಹಕರನ್ನು ತನ್ನತ್ತ ಸೆಳೆಯರಲು ಎರಡೂ ನೆಟ್​ವರ್ಕ್ ಪೈಪೋಟಿಗೆ ಬಿದ್ದಂತೆ ಕಾಣುತ್ತಿದೆ. ಇದರ ನಡುವೆ ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ (BSNL) ಮತ್ತು ವೊಡಾಫೋನ್ – ಐಡಿಯಾ …

Read More »

ಮಹಾರಾಷ್ಟ್ರ, ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆ – 8 ಸೇತುವೆಗಳು ಜಲಾವೃತ

ಚಿಕ್ಕೋಡಿ: ಮಹಾರಾಷ್ಟ್ರ ಹಾಗೂ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿರುವ ಹಿನ್ನೆಲೆ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡಿದೆ. ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಚಿಕ್ಕೋಡಿ ಉಪವಿಭಾಗದ ಎಂಟು ಸೇತುವೆಗಳು ಜಲಾವೃತವಾಗಿವೆ. ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ತಾಲೂಕುಗಳ ಎಂಟು ಸೇತುವೆಗಳು ಜಲಾವೃತಗೊಂಡಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಡೂರು-ಕಲ್ಲೋಳ ಸೇತುವೆ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳಿಗೆ …

Read More »

ಮಹಾರಾಷ್ಟ್ರ, ಬೆಳಗಾವಿ ಭಾಗದಲ್ಲಿ ಧಾರಾಕಾರ ಮಳೆ: ನಾರಾಯಣಪುರ ಜಲಾಶಯಕ್ಕೆ ಹೆಚ್ಚಿದ ಒಳಹರಿವು!

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*?? *ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿರಿ*: *8123967576* *Laxmi News*  

Read More »

ದಿಲ್ಲಿ ಮೇಲೆ ಎಲ್ಲರ ಭಾರ! ಬಿಎಸ್‌ವೈ ಮನೆಗೆ ಮುಂದುವರಿದ ಶ್ರೀಗಳ ಭೇಟಿ

ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆ ಸುದ್ದಿಗಳ ನಡುವೆಯೇ ಎಲ್ಲರ ದೃಷ್ಟಿ “ದಿಲ್ಲಿ ನಿರ್ಧಾರ’ ದತ್ತ ನೆಟ್ಟಿದೆ. ಈ ಮಧ್ಯೆ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಯಡಿಯೂರಪ್ಪ, ಯಾರೂ ತಮ್ಮ ಪರವಾಗಿ ಹೇಳಿಕೆ ನೀಡಬಾರದು, ಪ್ರತಿಭಟನೆ ನಡೆಸಬಾರದು ಎಂದಿದ್ದಾರೆ. ಬುಧವಾರವೂ ಅವರ ನಿವಾಸಕ್ಕೆ ಸಿದ್ಧಗಂಗಾ ಮಠದ ಶ್ರೀಗಳ ಸಹಿತ 30ಕ್ಕೂ ಹೆಚ್ಚು ಸ್ವಾಮೀಜಿಗಳು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. “ಯಾರೂ ತಮ್ಮ ಪರವಾಗಿ ಹೇಳಿಕೆ ಕೊಡುವುದಾಗಲಿ, ಪ್ರತಿಭಟನೆ ನಡೆಸುವುದಾಗಲಿ ಮಾಡಬಾರದು …

Read More »