Breaking News

ರಾಷ್ಟ್ರೀಯ

ಕಾಕತಿಯ ಸುಪ್ರಸಿದ್ಧ ಹೋಟಲ್ ಮೇರಿಯಟ್‍ನಲ್ಲಿ ನಡೆದ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರದ ಬಳೆಗಳ ಕಳ್ಳತನ : ಓರ್ವ ಮಹಿಳೆ ಅರೆಸ್ಟ್..!

ಕಾಕತಿಯ ಸುಪ್ರಸಿದ್ಧ ಹೋಟಲ್ ಮೇರಿಯಟ್‍ನಲ್ಲಿ ನಡೆದ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರದ ಬಳೆಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಕತಿಯ ಸುಪ್ರಸಿದ್ಧ ಹೋಟಲ್ ಮೇರಿಯಟ್‍ನಲ್ಲಿ ಹರಿಯಾಣಾ ರಾಜ್ಯದ ಗುಡಗಾಂವ್‍ನ ಶಿಪ್ರಾ ಬಿಜಾವತ್ ಎಂಬವರು ಹೊಟೆಲ್ ಮೆರಿಯಟ್‍ನಲ್ಲಿ ರೂಮ್ ಮಾಡಿಕೊಂಡಿದ್ದರು. ಬೆಳಗಾವಿ ಹತ್ತಿರದ ರಾಜಾಗೋಳಿ ಯಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ಎಚ್‍ಆರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.ಇವರು ವಜ್ರದ ಬಳೆಗಳನ್ನು ಬ್ಯಾಗ್‍ನಲ್ಲಿ ಹಾಕಿ ತೆಗೆದಿಟ್ಟಿದ್ದರು. ಬೆಳಿಗ್ಗೆ 10 ಗಂಟೆಗೆ …

Read More »

ಪುನೀತ್ ಗೆ ಮರಣೋತ್ತರ ‘ ಸಹಕಾರ ರತ್ನ’ ಪ್ರಶಸ್ತಿ

ಕರ್ನಾಟಕ ಸರಕಾರ ‘ಕರ್ನಾಟಕ ರತ್ನ’ ಪ್ರಶಸ್ತಿ ಕೊಟ್ಟ ಬೆನ್ನಲ್ಲೇ, ಸರಕಾರದ ಮತ್ತೊಂದು ಪ್ರಶಸ್ತಿ ಘೋಷಣೆಯಾಗಿದೆ. ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ‘ ಸಹಕಾರ ರತ್ನ’ ಪ್ರಶಸ್ತಿಯನ್ನು ಪುನೀತ್ ಅವರಿಗೆ ಘೋಷಿಸಲಾಗಿದ್ದು, ನಂದಿನಿ ಹಾಲು ಉತ್ಪನ್ನಗಳಿಗೆ ಉಚಿತವಾಗಿ ಜಾಹೀರಾತು ನೀಡಿರುವ ಸೇವೆಯನ್ನು ಪರಿಗಣಿಸಲಾಗಿದೆ. ಈ ಕುರಿತು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್, ‘ನಟ ಪುನೀತ್ ರಾಜ್ ಕುಮಾರ್ ಅವರು ನಂದಿನಿ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. …

Read More »

ಪೊಲೀಸರ ಗಮನ ಬೇರೆಡೆ ಸೆಳೆದು ಚಾರಣಾಧೀನ ಖೈದಿ ಒಬ್ಬ ಕಾರಾಗೃಹದಿಂದಲೇ ಪರಾರಿ

ಗಲಾಟೆ, ಜಾತಿನಿಂದನೆ ಸೇರಿದಂತೆ ಒಟ್ಟು 6 ಪ್ರಕರಣದಲ್ಲಿ ಆತ ಭಾಗಿಯಾಗಿದ್ದ. ಇದೀಗ ಜೈಲು ಸೇರಿ 15 ದಿನಗಳಲ್ಲೇ ಆರೋಪಿ ಪರಾರಿ ಆಗಿದ್ದಾನೆ. ಪೊಲೀಸರ ಗಮನ ಬೇರೆಡೆ ಸೆಳೆದು ತಪ್ಪಿಸಿಕೊಂಡಿದ್ದಾನೆ.ಬೆಳಗಾವಿ: ವಿಚಾರಣಾಧೀನ ಖೈದಿ ಒಬ್ಬ ಕಾರಾಗೃಹದಿಂದಲೇ ಪರಾರಿ ಆದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕಾರಾಗೃಹದಲ್ಲಿ ನಡೆದಿದೆ. ಖೈದಿ ಖಾದಿರಸಾಬ್ ರಾಜೇಖಾನ್ (34) ಎಂಬಾತ ಜೈಲಿನಿಂದಲೇ ಪರಾರಿ ಆಗಿದ್ದಾನೆ. ಜೈಲು ಸಿಬ್ಬಂದಿ ಗಮನ ಬೇರೆಡೆ ಸೆಳೆದು ಸಬ್ ಜೈಲಿನ ಮುಖ್ಯ ದ್ವಾರದಿಂದಲೇ ಆರೋಪಿ …

Read More »

ನಾಳೆಯಿಂದ ಎರಡು ದಿನ ಜಮ್ಮು ಪ್ರವಾಸದಲ್ಲಿ ಅಮಿತ್ ಶಾ

ಶ್ರೀನಗರ(ಜಮ್ಮು): ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆಯಿಂದ ಎರಡು ದಿನಗಳ ಕಾಲ ಜಮ್ಮು ಪ್ರವಾಸ ಕೈಗೊಳ್ಳಲಿದ್ದು, ಭದ್ರತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಲೆಫ್ಟಿನೆಂಟ್​ ಗವರ್ನರ್​ ಮನೋಜ್ ಸಿನ್ಹಾ, ಕೇಂದ್ರ ಸಶಸ್ತ್ರ ಪಡೆ, ಕಾಶ್ಮೀರ ಪೊಲೀಸ್​, ಗುಪ್ತಚರ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಅಲ್ಲಿನ ಭದ್ರತಾ ಪರಿಸ್ಥಿತಿ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಲಿರುವ ಅಮಿತ್ ಶಾ, ಮಾರ್ಚ್​ 19ರಂದು ಜಮ್ಮುವಿನಲ್ಲಿ ಆಯೋಜನೆಗೊಂಡಿರುವ ಸಿಆರ್​ಪಿಎಫ್​​ನ ರೈಸಿಂಗ್ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ …

Read More »

ಗಂಡ ನೀಡುತ್ತಿದ್ದ ವರದಕ್ಷಿಣೆ ಕಿರುಕುಳವನ್ನು ತಾಳಲಾರದೆ ವೈದ್ಯೆಯಾಗಿರುವ ಹೆಂಡತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

  ಹೈದರಾಬಾದ್​(ತೆಲಂಗಾಣ): ಗಂಡನ ವರದಕ್ಷಿಣೆ ಕಿರುಕುಳ ತಾಳಲಾರದೆ ವೈದ್ಯೆಯಾಗಿದ್ದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೈದರಾಬಾದ್‌ನ ಮಲಕಪೇಟೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪತಿ-ಪತ್ನಿ ಇಬ್ಬರೂ ವೈದ್ಯಕೀಯ ವೃತ್ತಿಯಲ್ಲಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಆದರೆ, ಗಂಡ ವರದಕ್ಷಿಣೆಗಾಗಿ ವಿಪರೀತ ಕಿರುಕುಳ ನೀಡುತ್ತಿದ್ದನಂತೆ. ಹೀಗಾಗಿ ನೊಂದ ಪತ್ನಿ ಆತ್ಮಹತ್ಯೆಯ ಹಾದಿ ತುಳಿದಿದ್ದಾಳೆ ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪತಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ನೀಡಿರುವ …

Read More »

ಪೊಲೀಸ್​​ ಕಾನ್ಸ್​ಟೇಬಲ್​ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ಸಂಬಂಧ ಇಬ್ಬರು ಪತ್ರಕರ್ತರು, ಐವರು ಪೊಲೀಸರು ಸೇರಿದಂತೆ 9 ಜನರ ವಿರುದ್ಧ ಪ್ರಕರಣ​ ದಾಖಲಾಗಿದೆ.

ಗದಗ: ಕಿರುಕುಳಕ್ಕೆ ಬೇಸತ್ತು ಪೊಲೀಸ್​​ ಕಾನ್ಸ್​ಟೇಬಲ್​ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ಸಂಬಂಧ ಇಬ್ಬರು ಪತ್ರಕರ್ತರು, ಐವರು ಪೊಲೀಸರು ಸೇರಿದಂತೆ 9 ಜನರ ಮೇಲೆ ಎಫ್​ಐಆರ್​ ದಾಖಲಾಗಿದೆ.   ಗದಗ ನಗರದ ಬೆಟಗೇರಿ ಬಡಾವಣೆ ಪೊಲೀಸ್​​ ಠಾಣೆಯ ಕಾನ್ಸ್​ಟೇಬಲ್ ಆಗಿದ್ದ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಅರ್ಜುನ್ ಪಾಟೀಲ್ ಗುರುವಾರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಆರೇಳು ಪುಟಗಳ ಡೆತ್​​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ದುಷ್ಕರ್ಮಿಗಳ ಕಿರುಕುಳ ಹೆಚ್ಚಾಗಿದ್ದು, …

Read More »

ಹಿಜಬ್ ತೀರ್ಪು: ವಿಧಾನ ಪರಿಷತ್‍ನಲ್ಲಿ ಬಿಜೆಪಿ-ಕಾಂಗ್ರೆಸ್ ಜಟಾಪಟಿ

ಬೆಂಗಳೂರು: ಹಿಜಬ್ ವಿವಾದದ ಕುರಿತು ಹೈಕೋರ್ಟ್ ನೀಡಿದ ತೀರ್ಪಿನ ವಿಷಯ ವಿಧಾನ ಪರಿಷತ್‍ನಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಗದ್ದಲ ಗಲಾಟೆಗೆ ಕಾರಣವಾಯಿತು. ಬಜೆಟ್ ಚರ್ಚೆ ವೇಳೆ ಕಾಂಗ್ರೆಸ್‍ನ ಸದಸ್ಯ ಸಲೀಂ ಅಹಮದ್, ತೀರ್ಪು ಯಾಕೆ ಈ ರೀತಿ ಬಂದಿತು ಎನ್ನುವ ಕುರಿತು ಚರ್ಚೆ ನಡೆಯಬೇಕು ಎಂದರು. ಈ ವಿಚಾರಕ್ಕೆ ಸದನದಲ್ಲಿ ಗಲಾಟೆ ಪ್ರಾರಂಭ ಆಯಿತು. ಸಲೀಂ ಅಹಮದ್ ಮಾತನಾಡಿ, ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಏಕೆ ಬಂತು. ಹಿಜಬ್ ವಿಚಾರದಲ್ಲಿ ಕೋರ್ಟ್ …

Read More »

ಮುಸ್ಲಿಂ ಯುವತಿ, ಹಿಂದೂ ಯುವಕನ ಪ್ರೇಮ್ ಕಹಾನಿ; ತಂಗಿ ಗಂಡನ ಹತ್ಯೆಗೆ ಸುಪಾರಿ ಕೊಟ್ಟ ರೌಡಿಶೀಟರ್!

ದೇಶ ಅಭಿವೃದ್ಧಿ ಪಥದತ್ತ ಸಾಗಿದೆ ಆದ್ರೆ ನಮ್ಮಲ್ಲಿ ಜಾತಿ (Caste), ಧರ್ಮದ (Religion)) ಪಿಡುಗು ಮಾತ್ರ ಕಡಿಮೆಯಾಗಿಲ್ಲ. ಹೌದು ಇಲ್ಲೊಬ್ಬ ಬೇರೆ ಧರ್ಮದ ಹುಡುಗನನ್ನು ಪ್ರೀತಿಸಿ ವಿವಾಹವಾಗಿದ್ದಕ್ಕೆ (Love Marriage) ತಂಗಿ ಗಂಡನ ಹತ್ಯೆಗೆ ಸುಪಾರಿ ಕೊಟ್ಟಿದ್ದಾನೆ. ಜಾತಿ, ಧರ್ಮದ ಪಿಡುಗು ಜನರನ್ನ ಎಷ್ಟರ ಮಟ್ಟಿಗೆ ಆವರಿಸಿದೆ ಅಂದ್ರೆ ಕರುಳ ಸಂಬಂಧ, ರಕ್ತ ಸಂಬಂಧಗಳಿಗೂ ಜನ ಬೆಲೆ ಕೊಡದೆ ಜಾತಿ, ಧರ್ಮ ಹಾಗೂ ಮಾನ-ಮಾರ್ಯಾದೆ ಅಂತ ಮಚ್ಚು-ಕೊಡಲಿ ಹಿಡಿದು ಕೊಲೆ …

Read More »

ಅಪ್ಪು ಸಮಾಧಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಡಾ.ಪುನೀತ್ ರಾಜ್‍ಕುಮಾರ್ ಸಮಾಧಿಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಭೇಟಿ ನೀಡಿ ದರ್ಶನ ಪಡೆದರು.ಇಂದು ಪುನೀತ್ ರಾಜ್‍ಕುಮಾರ್ 47ನೇ ಹುಟ್ಟುಹಬ್ಬದ ಹಿನ್ನೆಲೆ ನಗರದ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಭೇಟಿ ನೀಡಿ ಪ್ರದಕ್ಷಿಣೆ ಹಾಕಿ ನಮನ ಸಲ್ಲಿಸಿದರು. ಇದೇ ವೇಳೆ ವರನಟ ಡಾ. ರಾಜ್‍ಕುಮಾರ್ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಅವರ ಸಮಾಧಿಯ ದರ್ಶನವನ್ನು ಸಹ ಪಡೆದರು.  ಅಪ್ಪು ಜನುಮ ದಿನದ ಪ್ರಯುಕ್ತ ಇಂದು …

Read More »

ರಾಜ್ಯದ 400 ಥಿಯೇಟರ್‌ಗಳಲ್ಲಿ ಜೇಮ್ಸ್ ರಿಲೀಸ್

ಬೆಂಗಳೂರು: ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ 47ನೇ ಹುಟ್ಟುಹಬ್ಬವಾಗಿದ್ದು, ಇಂದೇ ಅಪ್ಪು ಅಭಿನಯದ ಕೊನೆ ಚಿತ್ರ ಜೇಮ್ಸ್ ರಾಜ್ಯದ 400 ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದೆ. ರಾಜ್ಯದಾದ್ಯಂತ ಅಪ್ಪು ಅಭಿಮಾನಿಗಳು ಥಿಯೇಟರಿಗೆ ಆಗಮಿಸಿ ಹಬ್ಬ ಮಾಡುತ್ತಿದ್ದಾರೆ. ಅಪ್ಪು ಇಲ್ಲದೇ ಮೊದಲ ಬಾರಿಗೆ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಅಪ್ಪು ಅಗಲಿದ ನೋವಿದ್ದರೂ, ಅವರ ಕೊನೆ ಸಿನಿಮಾ ಜೇಮ್ಸ್‍ನ್ನು ನೋಡುವ ಮೂಲಕ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇಂದು ಬೆಳಗ್ಗೆ 5 ಗಂಟೆಗೆ ಚಿತ್ರ …

Read More »