ಹೈದರಾಬಾದ್: ಮೂವರು ಯುವಕರಿಗೆ ವಿಡಿಯೋ ಸಂದೇಶ ಕಳುಹಿಸಿ ಮಾತನಾಡುವಂತೆ ಕೇಳಿಕೊಂಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದ್ದಕ್ಕೆ ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರಿನ ಭಕ್ತವತ್ಸಲ ನಗರದಲ್ಲಿ ನಡೆದಿದೆ. ಸಾಯುವ ಮುನ್ನ ಸೆಲ್ಫಿ ವಿಡಿಯೋ ಮಾಡಿರುವ 21 ವರ್ಷದ ಯುವತಿ, ಈ ವಿಡಿಯೋದಲ್ಲಿ ಕುತ್ತಿಗೆಗೆ ದುಪ್ಪಟ್ಟವನ್ನು ಸುತ್ತಿಕೊಂಡು ‘ಶಿವ ನನ್ನ ಜೊತೆ ಮಾತನಾಡು’ ಎಂದು ಮನವಿ ಮಾಡಿಕೊಂಡಿದ್ದಾಳೆ. ನಂತರ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವತಿಯ ಮನವಿಯ ವಿಡಿಯೋ ಸಾಮಾಜಿಕ …
Read More »ಬಾಲಿವುಡ್ ಹಿರಿಯ ನಟಿ ರೇಖಾ ಅವರ ಸೆಕ್ಯುರಿಟಿ ಗಾರ್ಡ್ ಗೂ ಕೋವಿಡ್ ಸೋಂಕು
ಮುಂಬೈ, ಜುಲೈ.12- ಬಾಲಿವುಡ್ ಹಿರಿಯ ನಟಿ ರೇಖಾ ಅವರ ಸೆಕ್ಯುರಿಟಿ ಗಾರ್ಡ್ ಗೂ ಕೋವಿಡ್ ಸೋಂಕು ತಗುಲಿದೆ. ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ರೇಖಾ ನಿವಾಸದ ಹೊರಗೆ ಹಾಕಿರುವ ನೊಟೀಸ್ ಹಾಕಿ ಸ್ಥಳೀಯರ ಗಮನಕ್ಕೆ ತರಲಾಗಿದೆ. ರೇಖಾ ಅವರ ನಿವಾಸ ಸೇರಿದಂತೆ ಇಡೀ ಪ್ರದೇಶವನ್ನು ಸ್ಯಾನಿತೈಸ್ ಮಾಡಲಾಗಿದೆ. ಸೆಕ್ಯುರಿಟಿ ಗಾರ್ಡ್ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಮಾಹಿತಿ ಕಲೆ ಹಾಕಿ. ಅವರನ್ನು ಪರೀಕ್ಷೆ ಒಳಪಡಿಸಲು ಸೂಚಿಸಲಾಗಿದೆ ಎಂದು ಬಿಎಂಸಿ ತಿಳಿಸಿದೆ. ರೇಖಾ ಅವರ …
Read More »ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಆಸ್ಪತ್ರೆಯಿಂದ ಸ್ಮಶಾನಕ್ಕೆ ಆಟೋ ಮೂಲಕ ಕರೆದೊಯ್ಯಲಾಯಿತ್ತು
ತೆಲಂಗಾಣ: ಕಿಲ್ಲರ್ ಕೊರೊನಾ ವಿಶ್ವದೆಲ್ಲೆಡೆ ಹಬ್ಬಿ ಮರಣ ಮೃದಂಗ ಬಾರಿಸುತ್ತಿದೆ. ಇದರ ಜೊತೆಗೆ ನೆರೆ ರಾಜ್ಯ ಆಂಧ್ರ ಪ್ರದೇಶದಲ್ಲಿ ಮನಮಿಡಿಯುವ ದೃಶ್ಯ ಕಂಡು ಬಂದಿದೆ. ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತ ದೇಹವನ್ನು ನಿಜಾಮಾಬಾದ್ ಆಸ್ಪತ್ರೆಯಿಂದ ಸ್ಮಶಾನಕ್ಕೆ ಆಟೋ ಮೂಲಕ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಕರೆದೊಯ್ಯದ ಘಟನೆ ನಡೆದಿದೆ. ನಿಜಾಮಾಬಾದ್ ಆಸ್ಪತ್ರೆ ಕೊರೊನಾದಿಂದ ಬಲಿಯಾದ 50 ವರ್ಷದ ವ್ಯಕ್ತಿಯ ಶವವನ್ನು ಆತನ ಕುಟುಂಬಸ್ಥರಿಗೆ ಹಸ್ತಾಂತರಿಸಿತ್ತು. ಹಾಗೂ ಯಾವುದೇ ಆಂಬುಲೆನ್ಸ್ ವ್ಯವಸ್ಥೆಯಾಗಲಿ ಅಥವಾ …
Read More »ಬೆಳಗಾವಿ ಜಿಲ್ಲೆಯ ಕಡೆಯಿಂದಲೂ ಕಾಮಗಾರಿ ಆರಂಭಿಸಬೇಕು ಎಂದು ತಿಳಿಸಿದರು.
ಬೆಳಗಾವಿ: ಕುಡಚಿ-ಬಾಗಲಕೋಟೆ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೈಲ್ವೆ ಇಲಾಖೆಗೆ ಜಮೀನು ಹಸ್ತಾಂತರಿಸಿದರೆ ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸುವುದು ರೈಲ್ವೆ ಇಲಾಖೆಯ ಪ್ರಥಮ ಆದ್ಯತೆಯಾಗಿದೆ ಎಂದು ಸಚಿವ ಸುರೇಶ್ ಅಂಗಡಿ ಹೇಳಿದರು. ಜಿಲ್ಲಾ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಬೆಳಗಾವಿ-ಬಾಗಲಕೋಟೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒಮ್ಮೆ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡರೆ ಡಿಪಿಆರ್ ಮತ್ತು …
Read More »ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಶನಿವಾರ ಚಾಲನೆ ನೀಡಿದರು.
ಬೆಳಗಾವಿ: ಪಾಚ್ಛಾಪೂರ ಜಿಲ್ಲಾ ಪಂಚಾಯತ ಹಾಗೂ ಹತ್ತರಗಿ ಠಾಣಾ ಜಿಲ್ಲಾ ಪಂಚಾಯತ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿನ ಕಾಮಗಾರಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಶನಿವಾರ ಚಾಲನೆ ನೀಡಿದರು. ಅರಳಿಕಟ್ಟಿ, ಹಳೆವಂಟಮೂರಿ, ಬಿರನಹೊಳಿ, ಕಾಟಾಬಳಿ, ಇಸ್ಲಾಂಪೂರ, ಚಿಕ್ಕಲದಿನ್ನಿ, ಶಹಾಬಂದರ, ಗೆಜಪತಿ, ಗುಟಗುದ್ದಿ, ರಾಜಕಟ್ಟಿ ಗ್ರಾಮಗಳಿಗೆ ಭೇಟಿ ನೀಡಿ, ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.
Read More »ಕೋವಿಡ್-19 ಸೋಂಕು ಆರ್ಭಟ ಮುಂದುವರಿದಿದ್ದು,
ರಾಯಚೂರು ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಆರ್ಭಟ ಮುಂದುವರಿದಿದ್ದು, ಶುಕ್ರವಾರ ಓರ್ವ ವೃದ್ಧ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಲಿಂಗಸಗೂರು ಮೂಲದ ವೃದ್ಧನಿಗೆ ಕೋವಿಡ್-19 ಸೋಂಕು ಪಾಸಿಟಿವ್ ಎಂದು ದೃಡಪಟ್ಟಿತ್ತು. ಗುರುವಾರ ಬೆಳಗ್ಗೆ ಓಪೆಕ್ ಆಸ್ಪತ್ರೆಯ ಐಸೊಲೇಶನ್ ವಾರ್ಡ್ ಗೆ ದಾಖಲಿಸಲಾಗಿತ್ತು. ಈತ ಹೈಪರ್ ಟೆನ್ಶನ್, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಇಂದು ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಕೋವಿಡ್-19 ನಿಯಮಾನುಸಾರ ಅಂತ್ಯಕ್ರಿಯೆ …
Read More »ಮಹಾರಾಷ್ಟ್ರದಿಂದ ಕೃಷ್ಣಾಗೆ ಬರುತ್ತಿರುವ ನೀರಿನ ಹರಿವಿನಲ್ಲಿ ಏರಿಕೆಯಾಗಿದ್ದು, ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕಿನ 7 ಬ್ರಿಡ್ಜ್ ಕಮ್ ಬ್ಯಾರೇಜ್‌ಗಳು ಈಗಲೂ ಜಲಾವೃತವಾಗಿವೆ.
ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ ಮಳೆಯ ರಭಸ ತಗ್ಗಿದ್ದು, ಬೆಳಗಾವಿ, ಖಾನಾಪುರದಲ್ಲಿ ಕೆಲಕಾಲ ತುಂತುರು ಮಳೆಯಾಗಿದೆ. ನೆರೆಯ ಮಹಾರಾಷ್ಟ್ರದಿಂದ ಕೃಷ್ಣಾಗೆ ಬರುತ್ತಿರುವ ನೀರಿನ ಹರಿವಿನಲ್ಲಿ ಏರಿಕೆಯಾಗಿದ್ದು, ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕಿನ 7 ಬ್ರಿಡ್ಜ್ ಕಮ್ ಬ್ಯಾರೇಜ್‌ಗಳು ಈಗಲೂ ಜಲಾವೃತವಾಗಿವೆ. ದೂಧ್ ಗಂಗಾ ನದಿಯಿಂದ 17,952 ಕ್ಯುಸೆಕ್ ಹಾಗೂ ರಾಜಾಪುರದಿಂದ 53,500 ಕ್ಯುಸೆಕ್ ನೀರು ಸೇರಿ ಒಟ್ಟು 71,452 ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸೇರುತ್ತಿದೆ. …
Read More »ಜೆಡಿಎಸ್ ನಾಯಕ ಎಚ್. ಡಿ. ದೇವೇಗೌಡರ ಶುಭಾಶಯ ಕನ್ನಡಿಗರ ಗಮನ ಸೆಳೆದಿದೆ.
ನವದೆಹಲಿ(ಜು.10): ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಇಂದು 69ನೇ ಹುಟ್ಟುಹಬ್ಬ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರ ಗಣ್ಯರು ರಾಜನಾಥ್ ಸಿಂಗ್‌ಗೆ ಶುಭ ಕೋರಿದ್ದಾರೆ. ಆದರೆ ಈ ಎಲ್ಲಾ ಶುಭಾಶಯಗಳ ನಡುವೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ನಾಯಕ ಎಚ್. ಡಿ. ದೇವೇಗೌಡರ ಶುಭಾಶಯ ಕನ್ನಡಿಗರ ಗಮನ ಸೆಳೆದಿದೆ. ಹೌದು ಮಾಜಿ ಪ್ರಧಾನಿ ದೇವೇಗೌಡರು ರಕ್ಷಣಾ ಸಚಿವರಿಗೆ ಕನ್ನಡದಲ್ಲೇ ಹುಟ್ಟುಹಬ್ಬದಶುಭಾಶಯ ಕೋರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ …
Read More »ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ ಹತ್ಯೆ ಪ್ರಕರಣ, ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಕೇಂದ್ರ
ಕೋಲಾರ: ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ ಹತ್ಯೆ ಪ್ರಕರಣ, ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿ, ಇಂತಹ ಪ್ರಕರಣ ನಾನು ನನ್ನ ಸರ್ವಿಸ್ ನಲ್ಲಿ ನೋಡಿಲ್ಲ, ಕೆಜಿಎಫ್ ಹಾಗೂ ಕೋಲಾರ ಎಸ್ಪಿ ಸೇರಿ ಚಾರ್ಚ್ ಶೀಟ್ ರೆಡಿ ಮಾಡಿದ್ದಾರೆ, ಇವತ್ತು ಅಲ್ಲಿ ನಡೆದ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದೇನೆ, ಜಿಲ್ಲಾಧಿಕಾರಿ ಹಾಗೂ ಸರ್ವೇ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ, ಘಟನೆ …
Read More »ಜಿಲ್ಲೆಯಲ್ಲಿ ಹೊಸದಾಗಿ 36 ಕೋವಿಡ್ ಪ್ರಕರಣಗಳು ದೃಡ ಪಟ್ಟಿದ್ದು, ಸೋಂಕಿತರ ಸಂಖ್ಯೆ 349 ಕ್ಕೆ ಏರಿಕೆಯಾಗಿದೆ.
ಬಾಗಲಕೋಟೆ: ಜಿಲ್ಲೆಯಲ್ಲಿ ಹೊಸದಾಗಿ 36 ಕೋವಿಡ್ ಪ್ರಕರಣಗಳು ದೃಡ ಪಟ್ಟಿದ್ದು, ಸೋಂಕಿತರ ಸಂಖ್ಯೆ 349 ಕ್ಕೆ ಏರಿಕೆಯಾಗಿದೆ. ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮಾದ್ಯಮಗಳ ಜೊತೆ ಮಾತನಾಡಿ, ಬಾಗಲಕೋಟೆಯಲ್ಲಿ 27, ಜಮಖಂಡಿ 2, ಮುಧೋಳ 5, ಬೇರೆ ಜಿಲ್ಲೆಯಾದ ಹುಬ್ಬಳ್ಳಿಯ 2 ಪ್ರಕರಣಗಳು ದೃಡಪಟ್ಟಿವೆ ಎಂದರು. ಬಳ್ಳಾರಿಯ ಪಿ-10769 ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಹುಬ್ಬಳ್ಳಿಯ 31 ವರ್ಷದ ಪುರುಷ ಪಿ-28945 (ಬಿಜಿಕೆ-314), 42 ವರ್ಷದ ಪುರುಷ ಪಿ-28946 …
Read More »
Laxmi News 24×7