Breaking News

ರಾಷ್ಟ್ರೀಯ

ಅಭಿವೃದ್ಧಿಯೇ ನಮ್ಮ ಗುರಿ: ರಮೇಶ ಜಾರಕಿಹೊಳಿ

ಗೋಕಾಕ: ‘ಜನರಿಗೆ ಮೂಲ ಸೌಕರ್ಯ ಒದಗಿಸಲು ಸಂಕಲ್ಪ ತೊಟ್ಟಿದ್ದೇವೆ. ಅಭಿವೃದ್ಧಿಯೊಂದೇ ನಮ್ಮ ಮುಂದಿರುವ ಗುರಿ’ ಎಂದು ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ದುರದುಂಡಿ ಗ್ರಾಮದಲ್ಲಿ ಆರ್‌ಡಿಪಿಆರ್‌, ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-3ರಡಿ ದುರದುಂಡಿ- ಬಡಿಗವಾಡ-ಮಲ್ಲಾಪೂರ ಪಿಜಿ ರಸ್ತೆ ಸುಧಾರಣೆ ಕಾಮಗಾರಿಗೆ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ಬಿಜೆಪಿಯು ಸಮಗ್ರ ಪ್ರಗತಿ ಬಯಸಿದ್ದು, ಇದರ …

Read More »

ಉದ್ಯಮ ಸ್ನೇಹಿ ರಾಜ್ಯಗಳಲ್ಲಿ ಆಂಧ್ರ ಮತ್ತೆ ನಂ.1: 17ನೇ ಸ್ಥಾನಕ್ಕೆ ಕರ್ನಾಟಕ ಕುಸಿತ!

ನವದೆಹಲಿ : ಉದ್ಯಮಸ್ನೇಹಿ ವಾತಾವರಣ ಹೊಂದಿರುವ ರಾಜ್ಯಗಳ ವಾರ್ಷಿಕ ರಾರ‍ಯಂಕಿಂಗ್‌ ಶನಿವಾರ ಪ್ರಕಟಗೊಂಡಿದ್ದು, ಆಂಧ್ರಪ್ರದೇಶ ಸತತ 3ನೇ ಬಾರಿಗೆ ಮೊದಲ ಸ್ಥಾನ ಗಳಿಸಿದೆ. ಆದರೆ ಕಳೆದ ಸಲ 8ನೇ ಸ್ಥಾನದಲ್ಲಿದ್ದ ಕರ್ನಾಟಕ ಈ ಸಲ 17ನೇ ಸ್ಥಾನಕ್ಕೆ ಇಳಿದಿದೆ. 2019ರ ಔದ್ಯಮಿಕ ಸುಧಾರಣೆ ಕ್ರಿಯಾಯೋಜನೆಗಳನ್ನು ರಾಜ್ಯಗಳು ಜಾರಿಗೊಳಿಸಿದ್ದನ್ನು ಆಧರಿಸಿ ಉದ್ದಿಮೆ ಹಾಗೂ ಆಂತರಿಕ ವ್ಯಾಪಾರ ಇಲಾಖೆ ಈ ಶ್ರೇಯಾಂಕ ಸಿದ್ಧಪಡಿಸಿದೆ. ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಿಸುವ ಉದ್ದೇಶದಿಂದ ಕಳೆದ 5 …

Read More »

ನಂದಿನಿ ಸಿಹಿ ಮಾರಾಟ : ಭಾರೀ ಬಂಪರ್

ಬೆಂಗಳೂರು  : ಗೌರಿ ಗಣೇಶ ಹಬ್ಬ ಮತ್ತು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ನಂದಿನಿ ಸಿಹಿ ಉತ್ಸವಕ್ಕೆ ರಾಜ್ಯಾದ್ಯಂತ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದು ತಿಂಗಳಲ್ಲಿ ನಂದಿನಿ ಸಿಹಿ ಉತ್ಪನ್ನಗಳ ಮಾರಾಟ ಶೇ.68ರಷ್ಟುಹೆಚ್ಚಳವಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಮಾಹಿತಿ ನೀಡಿದೆ. ಕೋವಿಡ್‌-19 ಹಿನ್ನೆಲೆಯಲ್ಲಿ ನಂದಿನಿ ಹಾಲು ಸೇರಿದಂತೆ ಚೀಸ್‌, ಪನ್ನೀರ್‌ ಮತ್ತು ಸಿಹಿ ಉತ್ಪನ್ನಗಳ ಮಾರಾಟದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿತ್ತು. ಆದರೆ, ಗೌರಿ ಗಣೇಶ ಮತ್ತು …

Read More »

ರಾಜ್ಯದಲ್ಲಿ ಗರಿಷ್ಠ ಸೋಂಕಿತರು : ದಾಖಲೆ ಸಂಖ್ಯೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಶನಿವಾರ 9,746 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಎರಡನೇ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3.61 ಲಕ್ಷಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್‌ 2ರಂದು ದಾಖಲಾಗಿದ್ದ 9,860 ಪ್ರಕರಣದ ಬಳಿಕ ಶನಿವಾರ ಎರಡನೇ ಅತಿ ಹೆಚ್ಚು ಸೋಂಕು ವರದಿಯಾಗಿದೆ. ಅಲ್ಲದೆ, ದಾಖಲೆಯ 9,102 ಮಂದಿ ಗುಣಮುಖರಾಗಿದ್ದಾರೆ. ಇನ್ನು ಶನಿವಾರ 128 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 6,298ಕ್ಕೆ …

Read More »

ನಾಳೆಯಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ : ಇಲ್ಲಿದೆ ನೋಡಿ ಸಂಪೂರ್ಣ ವೇಳಾಪಟ್ಟಿ

ಬೆಂಗಳೂರು : ಪದವಿ ಪೂರ್ವಶಿಕ್ಷಣ ಇಲಾಖೆಯು 2019-20 ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು ಸೆ. 7 ರಿಂದ 19 ರವರೆಗೆ ನಡೆಯಲಿದೆ. ಪರೀಕ್ಷೆಗಳು ಬೆಳಗ್ಗೆ 10.15 ರಿಂದ 1.30 ಹಾಗೂ 2.15 ರಿಂದ 5.30 ರ ಅವಧಿಯಲ್ಲಿ ನಡೆಯಲಿವೆ. ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ವೇಳಾ ಪಟ್ಟಿ ಸಮಯ ಬೆಳಗ್ಗೆ 10.15 ರಿಂದ 1.30ರವರೆಗೆ, ಮಧ್ಯಾಹ್ನ 2.15 ರಿಂದ ಸಾಯಂಕಾಲ 5.30ರವರೆಗೆ ಸೆ.7ರ ಬೆಳಗ್ಗೆ ಉರ್ದು, ಸಂಸ್ಕೃತ, …

Read More »

ವಿವಿಧ ರಾಜ್ಯಗಳ 47 ಶಿಕ್ಷಕರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದರು.

ನವದೆಹಲಿ,ಸೆ.5- ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 47 ಶಿಕ್ಷಕರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದರು. ದೆಹಲಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ವಿಡಿಯೋ ಲಿಂಕ್ ಮೂಲಕ ಪ್ರಶಸ್ತಿಗಳನ್ನು ನೀಡಿ ಮಾತನಾಡಿದ ರಾಷ್ಟ್ರಪತಿಯವರು, ಉತ್ತಮ ಕಟ್ಟಡ, ದುಬಾರಿ ಸೌಲಭ್ಯಗಳು ಇರುವ ಶಿಕ್ಷಣ ಸಂಸ್ಥೆಗಳಿಂದ ಉತ್ತಮ ವಿದ್ಯಾರ್ಥಿಗಳು ಸೃಷ್ಟಿಯಾಗುವುದಿಲ್ಲ. ಬದಲಿಗೆ ಒಳ್ಳೆಯ ಶಿಕ್ಷಕರಿಂದ ಮಾತ್ರ ಉತ್ತಮ ವಿದ್ಯಾರ್ಥಿಗಳು ಸೃಷ್ಟಿಯಗುತ್ತಾರೆ. ಆ ಮೂಲಕ ಉತ್ತಮ …

Read More »

ಉಪ ಚುನಾವಣೆಗೆದಿನಾಂಕವನ್ನೇ ನಿಗದಿಪಡಿಸಿಲ್ಲ,ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಕೆಲಸ ಗಳನ್ನು ಆರಂಭಿಸಿವೆ,

ಬೆಂಗಳೂರು, ಸೆ.5- ಶಿರಾ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಚುನಾವಣಾ ಆಯೋಗ ಇನ್ನೂ ದಿನಾಂಕವನ್ನೇ ನಿಗದಿಪಡಿಸಿಲ್ಲ, ಆದರೂ ಕ್ಷೇತ್ರದಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಕೆಲಸ ಗಳನ್ನು ಆರಂಭಿಸಿವೆ, ಬಿಜೆಪಿಗೆ ಇಲ್ಲಿ ಯಾವುದೇ ನೆಲೆ ಇಲ್ಲ, ಆದರೆ ಶಿರಾ ಕ್ಷೇತ್ರ, ಬಿಜೆಪಿ ಸಂಸದ ಆನೇಕಲ್ ನಾರಾಯಣ ಸ್ವಾಮಿ ಪ್ರತಿನಿಧಿಸುವ ಚಿತ್ರದುರ್ಗ ಲೋಕಸಭಾ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಬಿ ಇದಕ್ಕೆ ಸಾಕ್ಷಿ ಎಂಬಂತೆ ಬಿಜೆಪಿ ಪ್ರಧಾನ …

Read More »

ಮೇಘನಾ ರಾಜ್ ಬಳಿ ಕ್ಷಮೆ ಕೋರಿದ ಇಂದ್ರಜಿತ್ ………..

ಬೆಂಗಳೂರು: ಪತಿ ಚಿರಂಜೀವಿ ಸರ್ಜಾ ಬಗ್ಗೆ ಹೇಳಿಕೆ ನೀಡಿರುವುದಕ್ಕೆ ನಟಿ ಮೇಘನಾ ರಾಜ್ ಅವರು ವಾಣಿಜ್ಯ ಮಂಡಳಿಗೆ ಬರೆದ ಪತ್ರದ ಬೆನ್ನಲ್ಲೇ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಕ್ಷಮೆ ಕೋರಿದ್ದಾರೆ.ಮಾತನಾಡಿದ ಇಂದ್ರಜಿತ್, ಚಿರು ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ತಿಳಿಸಿದರು. ಈಗಾಗಲೇ ನಾನು ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆದಿದ್ದೇನೆ. ಚಿರು ನನಗೆ ಆತ್ಮೀಯ ಸ್ನೇಹಿತ. ನನ್ನ ಹೇಳಿಕೆಯಿಂದ ಅವರ ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದರು. ಈ ಸಂಬಂಧ ನಾನು ಬಹಿರಂಗ …

Read More »

ಮಾಜಿ ಸಚಿವ, ದಿ.ಜೀವರಾಜ್‌ ಪುತ್ರ ಆದಿತ್ಯ ಆಳ್ವಾ ಸೇರಿದಂತೆ 12 ಮಂದಿ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ರಾಗಿಣಿ ಜೊತೆ ಮಾಜಿ ಸಚಿವ, ದಿ. ಜೀವರಾಜ್‌ ಪುತ್ರ ಆದಿತ್ಯ ಆಳ್ವಾ ಸೇರಿದಂತೆ 12 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಸಿಸಿಬಿಯ ನಾರ್ಕೊಟಿಕ್ಸ್ ಎಸಿಪಿ ಗೌತಮ್ ನೀಡಿದ ಸ್ವಯಂಪ್ರೇರಿತ ದೂರಿನ ಆಧಾರದ ಮೇಲೆ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್‌ ದಾಖಲಾಗಿತ್ತು. ಬಂಧಿತ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಸಾಕ್ಷಿ ಹಾಗೂ ಪುರಾವೆಗಳು ಸಿಕ್ಕಿರುವ ಹಿನ್ನೆಯಲ್ಲಿ ಗೌತಮ್‌ …

Read More »

ನಾಳೆ ಹಾವೇರಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಶಾಸಕ ಸತೀಶ ಜಾರಕಿಹೊಳಿ

ಹಾವೇರಿ:  ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ  ಅವರು ನಾಳೆ ಹಾವೇರಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.  ಹಾವೇರಿ ಜಿಲ್ಲೆಯ ಕಾಂಗ್ರೆಸ್  ಪಕ್ಷದ ಸಂಘಟನೆಯನ್ನು ಕುರಿತು ಪಾದಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಪಿ.ಬಿ. ರೋಡ್ ಕಾಂಗ್ರೆಸ್ ಕಚೇರಿ ಬಳಿ ಇರುವ ಸಜ್ಜನ ಫಂಕ್ಷನ್ ಹಾಲ್ ನಲ್ಲಿ  ಸಂಜೆ 4 ಗಂಟೆಗೆ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.  ಮಾಜಿ  ಸಚಿವರು, ಶಾಸಕರು ವಿಧಾನ ಪರಿಷತ್ ಸದಸ್ಯರು.ಜಿಲ್ಲೆಯ ಎಲ್ಲ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು,ಮಹಿಳಾ ಘಟಕದ ಅಧ್ಯಕ್ಷರು,ಯುವ ಕಾಂಗ್ರೇಸ್ …

Read More »