Breaking News

ರಾಷ್ಟ್ರೀಯ

ಡಿಸಿಸಿ ಬ್ಯಾಂಕಿನಿಂದ ರೈತರ ಆರ್ಥಿಕಾಭಿವೃದ್ಧಿಗೆ ಹೊಸ ಯೋಜನೆಗಳು ಅನುಷ್ಠಾನಗೊಳ್ಳಲಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬಿಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ರಮೇಶ ಕತ್ತಿ ಅವರು ಬಾಲಚಂದ್ರ ಜಾರಕಿಹೊಳಿ ಅವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಕೆ

ಗೋಕಾಕ : ಶತಮಾನೋತ್ಸವದ ಹೊಸ್ತಿಲಿನಲ್ಲಿರುವ ಬಿಡಿಸಿಸಿ ಬ್ಯಾಂಕಿನಿಂದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬಿಡಿಸಿಸಿ ಬ್ಯಾಂಕಿನ ನೂತನ ಆಡಳಿತ ಮಂಡಳಿಗೆ ಸಲಹೆ ಮಾಡಿದರು. ಪ್ರತಿಷ್ಠಿತ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷರಾದ ಬಳಿಕ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಗೋಕಾಕ ನಿವಾಸಕ್ಕೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ, ಸತ್ಕಾರ ಮಾಡಿದ …

Read More »

ವೀರಶೈವ ಲಿಂಗಾಯತ ಪ್ರಾಧಿಕಾರ ರಚನೆಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯ

ತುಮಕೂರು: ವೀರಶೈವ ಲಿಂಗಾಯತ ಪ್ರಾಧಿಕಾರ ರಚನೆ ಮಾಡಿರುವುದು ನನಗೆ ಅಚ್ಚರಿ ತಂದಿದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಧಿಕಾರ ರಚನೆ ನನಗೆ ಆಶ್ಚರ್ಯ ಎನಿಸುತ್ತದೆ. ಜಾತಿಗೊಂದು ಪ್ರಾಧಿಕಾರ ರಚನೆ ಮಾಡುತ್ತಾ ಹೋದರೆ ಅದಕ್ಕೆ ಮಿತಿನೇ ಇರಲ್ಲ. ಇದರ ಬದಲು ಎಲ್ಲಾ ಸಮಾಜ ಜಾತಿಯಲ್ಲಿ ಇದ್ದಂತಹ ಹಿಂದುಳಿದವರು ಹಾಗೂ ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ. ಅಂಥವರಿಗೆ ಹೆಚ್ಚು ಒತ್ತುಕೊಡುವ ಕೆಲಸ ಸರ್ಕಾರ ಮಾಡಿದರೆ …

Read More »

ಉತ್ತರ ಪ್ರದೇಶದಲ್ಲಿ ಮುಂದುವರಿದ ಪೈಶಾಚಿಕ ಕೃತ್ಯ

ಫತೇಪುರ್: ಇಬ್ಬರು ಅಪ್ರಾಪ್ತ ಸಹೋದರಿಯರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಫತೇಪುರ್ ಜಿಲ್ಲೆಯ ಅಶೋಧರ ಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ. 12 ಹಾಗೂ 8 ವರ್ಷದ ಬಾಲಕಿಯರನ್ನು ಹತ್ಯೆ ಮಾಡಲಾಗಿದ್ದು, ಅವರ ದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿವೆ. ಗ್ರಾಮದ ಹೊರವಲಯದಲ್ಲಿರುವ ಕೊಳದಲ್ಲಿ ಬಾಲಕಿಯರ ಮೃತದೇಹಗಳು ಕಂಡುಬಂದಿವೆ ಎಂದು ಸಹಾಯಕ ಪೊಲೀಸ್ ಅಧೀಕ್ಷಕ ರಾಜೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಹತ್ಯೆ ಮಾಡಲಾಗಿದೆ ಎಂದು …

Read More »

ಆಟೋ ಮೇಲೆ ಪ್ರೆಸ್, ಶರ್ಟ್ ಮೇಲೆ ಕೆಎಸ್ಆರ್ ಟಿಸಿ ಲೋಗೋ! ವಿಜಯಪುರದಲ್ಲೊಬ್ಬ ‘ಬಹುಕಂಪನಿ ನೌಕರ’

ಆಟೋ ಮೇಲೆ ಪ್ರೆಸ್, ಶರ್ಟ್ ಮೇಲೆ ಕೆಎಸ್ಆರ್ ಟಿಸಿ ಲೋಗೋ! ವಿಜಯಪುರದಲ್ಲೊಬ್ಬ ‘ಬಹುಕಂಪನಿ ನೌಕರ’ ವಿಜಯಪುರ: ಮಾಧ್ಯಮ ಕ್ಷೇತ್ರದಲ್ಲಿ ದುಡಿಯುವ ಜನರು ತಮ್ಮ ಕಾರು, ಬೈಕ್ ಗಳ ಮೇಲೆ ಪ್ರೆಸ್ ಎಂದು‌ ಬರೆಸುವುದು ಸಾಮಾನ್ಯ. ಆದರೆ ವಿಜಯಪುರ ಜಿಲ್ಲೆಯಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಂಬಂಧ ಇಲ್ಲದವರೂ ಟಂಟಂ, ಆಟೋಗಳ ಮೇಲೂ ಪ್ರೆಸ್ ಸ್ಟಿಕ್ಕರ್ ಬಳಕೆ ಮಾಡುವುದು ಕಂಡುಬರುತ್ತಿದೆ‌. ವಿಜಯಪುರ ನಗರದಲ್ಲಿ ಆಟೋ ಮೇಲೆ ತ್ರಿಟಿವಿ ಬಂಜಾರಾ- ಪ್ರೆಸ್ (3 TV Banjara …

Read More »

66 ಮಂದಿಯನ್ನು ಬಂಧಿಸಿ, ₹ 1 ಲಕ್ಷಕ್ಕೂ ಅಧಿಕ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಕೂಡ್ಲಿಗಿ: ಎರಡು ಪ್ರತ್ಯೇಕ ಸ್ಥಳಗಳಲ್ಲಿ ದಾಳಿ ಕಾರ್ಯಾಚರಣೆ ನಡೆಸಿದ ಕೂಡ್ಲಿಗಿ ಪೊಲೀಸರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 66 ಮಂದಿಯನ್ನು ಬಂಧಿಸಿ, ₹ 1 ಲಕ್ಷಕ್ಕೂ ಅಧಿಕ ಹಣವನ್ನು ವಶಪಡಿಸಿಕೊಂಡಿದ್ದಾರೆ. ಸಂಡೂರು ತಾಲ್ಲೂಕಿನ ಬಂಡ್ರಿ ಗ್ರಾಮದ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿ ಜೂಜಾಟ ನಡೆದಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಬಳಿಕ ಕೂಡ್ಲಿಗಿ ಸಿಪಿಐ ಪಂಪನಗೌಡ ಹಾಗೂ ಪಿಎಸ್‍ಐ ತಿಮ್ಮಣ್ಣ ಎಸ್. ಚಮನೂರು ಸಿಬ್ಬಂದಿಯೊಂದಿಗೆ ದಾಳಿ ಕಾರ್ಯಾಚರಣೆ ನಡೆಸಿದರು. ಅಲ್ಲಿ 60 ಮಂದಿಯನ್ನು ಬಂಧಿಸಿ …

Read More »

ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಬಂಧಿಸಿದ್ದಾರೆ ಮತ್ತು ರಾಷ್ಟ್ರ ರಾಜಧಾನಿಯ ಮೇಲೆ ದೊಡ್ಡ ದಾಳಿಯನ್ನು ವಿಫಲಗೊಳಿಸಿದ್ದಾರೆ.

ನವದೆಹಲಿ : ದೆಹಲಿ ಪೊಲೀಸರು ಇಬ್ಬರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಬಂಧಿಸಿದ್ದಾರೆ ಮತ್ತು ರಾಷ್ಟ್ರ ರಾಜಧಾನಿಯ ಮೇಲೆ ದೊಡ್ಡ ದಾಳಿಯನ್ನು ವಿಫಲಗೊಳಿಸಿದ್ದಾರೆ. ದೆಹಲಿಯಲ್ಲಿ ನಡೆಯಲಿದ್ದ ದೊಡ್ಡ ಭಯೋತ್ಪಾದಕ ದಾಳಿಯನ್ನು ತಡೆಗಟ್ಟಲು ದೆಹಲಿ ಪೊಲೀಸ್ ವಿಶೇಷ ಕೋಶ ಉಗ್ರರನ್ನು ಬಂಧಿಸಿದೆ. ದೆಹಲಿಯ ಸರಾಯ್ ಕೇಲ್ ಖಾನ್ ನಿಂದ ಬಂಧಿಸಲ್ಪಟ್ಟ ಇಬ್ಬರು ಭಯೋತ್ಪಾದಕರನ್ನು ಅಧಿಕಾರಿಗಳು ಈಗ ಪ್ರಶ್ನಿಸುತ್ತಿದ್ದಾರೆ. ದೆಹಲಿ ಪೊಲೀಸ್ ಅಧಿಕಾರಿಗಳ ಪ್ರಕಾರ, ಸೋಮವಾರ ರಾತ್ರಿ 10.15 ರ ಸುಮಾರಿಗೆ ಸರೈ ಕೇಲ್ ಖಾನ್‌ನ …

Read More »

ಏರಿಯಾದಲ್ಲಿ ಹವಾ ಮೇಂಟೇನ್​ ಮಾಡೋಕೆ ಹೋಗಿ ಯುವಕನೊಬ್ಬನನ್ನು ಆತನ ಗೆಳೆಯರೇ ಕೊಲೆಗೈದಿರುವ ಘಟನೆ

ಬೆಂಗಳೂರು: ಏರಿಯಾದಲ್ಲಿ ಹವಾ ಮೇಂಟೇನ್​ ಮಾಡೋಕೆ ಹೋಗಿ ಯುವಕನೊಬ್ಬನನ್ನು ಆತನ ಗೆಳೆಯರೇ ಕೊಲೆಗೈದಿರುವ ಘಟನೆ ನಿನ್ನೆ ಸಂಜೆ ಗಂಗಮ್ಮನಗುಡಿಯಲ್ಲಿ‌ ನಡೆದಿದೆ. ಕಾರ್ತಿಕ್(25) ಹತ್ಯೆಯಾದ ಯುವಕ. ಕಾರ್ತಿಕ್​ ಸ್ನೇಹಿತ ಅಶೋಕ್ ಹಾಗೂ ಆತನ ಸಹಚರರಿಂದ ಕೃತ್ಯ ಎಸಗಲಾಗಿದೆ ಎಂಬ ಮಾಹಿತಿ ದೊರೆತಿದೆ. ಅಂದ ಹಾಗೆ, ಹತ್ಯೆಯಾದ ಕಾರ್ತಿಕ್ ಮತ್ತು ಹಂತಕ ಅಶೋಕ್ ಒಂದೇ ಗ್ಯಾಂಗ್​ನ ಸದಸ್ಯರಂತೆ. ನಿನ್ನೆ ಮಧ್ಯಾಹ್ನ ಎಲ್ಲರೂ ಸೇರಿ ಎಣ್ಣೆ ಪಾರ್ಟಿ ಮಾಡಿದ ಬಳಿಕ ಅವರ ನಡುವೆಯೇ ಗಲಾಟೆ ಶುರುವಾಗಿದೆ. …

Read More »

ಗನ್​ನಿಂದ ಶೂಟ್ ಮಾಡಿ ಪತ್ನಿಯನ್ನು ಕೊಂದು ಪತಿರಾಯನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಸವೇಶ್ವರನಗರದಲ್ಲಿ ನಡೆದಿದೆ.

ಬೆಂಗಳೂರು: ಗನ್​ನಿಂದ ಶೂಟ್ ಮಾಡಿ ಪತ್ನಿಯನ್ನು ಕೊಂದು ಪತಿರಾಯನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಸವೇಶ್ವರನಗರದಲ್ಲಿ ನಡೆದಿದೆ. ಸುಮಿತ್ರಾ ಕೊಲೆಯಾದ ದುರ್ದೈವಿ. ಕೊಲೆಗೆ ದಂಪತಿಯ ನಡುವಿನ ಕಲಹವೇ ಕಾರಣ ಎಂಬುದು ತಿಳಿದುಬಂದಿದೆ. ಪತ್ನಿ ಸುಮಿತ್ರಾಗೆ ಗುಂಡಿಕ್ಕಿ ಹತ್ಯೆಗೈದ ಪತಿ ಕಾಳಪ್ಪ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪತಿ ಕಾಳಪ್ಪ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬಸವೇಶ್ವರ ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನೆಡೆಸಿದ್ದಾರೆ.

Read More »

ಬೆಂಕಿ ಹಚ್ಚಿಸಿ ತಲೆಮರೆಸಿಕೊಂಡಿದ್ದ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಕೊನೆಗೂ ಅರೆಸ್ಟ್ ಆಗಿದ್ದಾರೆ.

ಬೆಂಗಳೂರು: ಬೆಂಕಿ ಹಚ್ಚಿಸಿ ತಲೆಮರೆಸಿಕೊಂಡಿದ್ದ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಕೊನೆಗೂ ಅರೆಸ್ಟ್ ಆಗಿದ್ದಾರೆ. ಈ ಸಂಬಂಧ ಮಾತನಾಡಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ತಪ್ಪಿತಸ್ಥರು ಯಾರೇ ಇದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ. ಮಾಧ್ಯಮಗಳು, ಪೊಲೀಸರು ನನಗೆ ನ್ಯಾಯ ಕೊಡಿಸಿದ್ದಾರೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ನನ್ನ ಬೆನ್ನಿಗೆ ನಿಂತಿದೆ. ನಮ್ಮ ಕೆಪಿಸಿಸಿ ಅಧ್ಯಕ್ಷರು ಈಗಲಾದ್ರೂ ನಮ್ಮ ಪರ ನಿಲ್ಲಲಿ. ನನ್ನ ಪರ ಯಾಕೆ ನಿಂತಿಲ್ಲವೆಂದು ಇಂದು ಡಿಕೆ ಶಿವಕುಮಾರ್​ …

Read More »

ಚಿತ್ರದುರ್ಗದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ ಬಯಲಯಸೀಮೆಯ ಏಕೈಕ ಪ್ರಾಣಿ ಸಂಗ್ರಹಾಲಯ.ಅಭಿವೃದ್ಧಿ

ಕೋಟೆನಾಡು ಚಿತ್ರದುರ್ಗದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ ಬಯಲಯಸೀಮೆಯ ಏಕೈಕ ಪ್ರಾಣಿ ಸಂಗ್ರಹಾಲಯ. ಆದ್ರೆ, ಸರ್ಕಾರದ ನಿರ್ಲಕ್ಷದಿಂದಾಗಿ ಪ್ರಾಣಿ ಸಂಗ್ರಹಾಲಯದ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ. ಹಾಗೇ ಪ್ರಾಣಿಗಳು ಸಹ ಸಂಕಟಕ್ಕೆ ಸಿಲುಕುವ ದುಸ್ಥಿತಿ ಎದುರಾಗಿದೆ. ಚಿತ್ರದುರ್ಗ ನಗರದ ಬಳಿಯ ಜೋಗಿಮಟ್ಟಿ ತಪ್ಪಲಲ್ಲಿರುವ ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯವು ಸಾಕಷ್ಟು ವರ್ಷಗಳ ಹಿಂದೆಯೇ ನಿರ್ಮಾಣ ಆಗಿದ್ದು, ಈ ಭಾಗದ ಜನರಿಗೆ ಕಾಡುಪ್ರಾಣಿಗಳನ್ನು ನೋಡುವ ಭಾಗ್ಯ ಕರುಣಿಸಿದೆ.   ಈ ಪ್ರಾಣಿ ಸಂಗ್ರಹಾಲಯ ವಿಸ್ತೀರ್ಣಗೊಳಿಸಿ …

Read More »