ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್‌ಗೆ ಜಾಮೀನು ಕೋರಿ ಸಲ್ಲಿಸಿದ್ದ ಪಿಐಎಲ್ ತಿರಸ್ಕೃತ, ಅರ್ಜಿದಾರನಿಗೆ 75,000 ರೂ ದಂಡ! ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಯಿಂದ ಬಂಧಿತರಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನುನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ನ್ನು ದೆಹಲಿ ಹೈಕೋರ್ಟ್ ಸೋಮವಾರ ತಿರಸ್ಕರಿಸಿದ್ದು, ಅರ್ಜಿದಾರನಿಗೆ 75,000 ರೂಪಾಯಿ ದಂಡ ವಿಧಿಸಿದೆ. ದೆಹಲಿ ಸಿಎಂ ಅವರ ಅಧಿಕಾರಾವಧಿ ಮುಗಿಯುವವರೆಗೆ ಅಥವಾ …
Read More »ಲೈಂಗಿಕ ದೌರ್ಜನ್ಯಕ್ಕೊಳಗಾದ 14 ವರ್ಷದ ಬಾಲಕಿಗೆ ಗರ್ಭಪಾತ ಮಾಡಲು ಸುಪ್ರೀಂ ಕೋರ್ಟ್ ಅನುಮತಿ!
ನವದೆಹಲಿ: ತನ್ನ 14 ವರ್ಷದ ಮಗಳ 28 ವಾರಗಳ ಗರ್ಭಧಾರಣೆಯನ್ನು ಕೊನೆಗೊಳಿಸುವಂತೆ ಕೋರಿ ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್ ಸೋಮವಾರ ಅನುಮತಿ ನೀಡಿದೆ. ಗರ್ಭಪಾತದ ಮನವಿಯನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್ ಆದೇಶವು ಅಪ್ರಾಪ್ತೆಯ ಮೇಲೆ ಗರ್ಭಧಾರಣೆಯ ಪರಿಣಾಮವನ್ನು ಪರಿಗಣಿಸುವುದಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಮುಂದುವರಿದ ಹಂತದಲ್ಲಿ ಗರ್ಭಧಾರಣೆಯನ್ನು ಕೊನೆಗೊಳಿಸುವುದರಿಂದ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ಭ್ರೂಣದ ಜನನಕ್ಕೆ ಕಾರಣವಾಗುತ್ತದೆ ಎಂದು ಹೇಳಿ ಗರ್ಭಧಾರಣೆಯನ್ನು ಕೊನೆಗೊಳಿಸಬೇಕೆಂಬ …
Read More »ಐಎನ್‌ಡಿಐಎಯ ಅರ್ಧದಷ್ಟು ನಾಯಕರು ಜೈಲಿನಲ್ಲಿ: ನಡ್ಡಾ
ಹುಬ್ಬಳ್ಳಿ: ಭ್ರಷ್ಟಚಾರಿಗಳು ಹಾಗೂ ಪರಿವಾರವಾದಿಗಳ ಸಮ್ಮಿಲ ನವೇ ಐಎನ್‌ಡಿಐಎ ಮೈತ್ರಿಕೂಟ ವಾಗಿದೆ. ಭ್ರಷ್ಟಾಚಾರಿಗಳ ರಕ್ಷಣೆಯೇ ಮೈತ್ರಿಕೂಟದ ಮುಖ್ಯ ಅಜೆಂಡಾ ಆಗಿದೆ. ಮೈತ್ರಿಕೂಟದೊಂದಿಗೆ ಇರುವವರಲ್ಲಿ ಅರ್ಧ ಜನ ಜಾಮೀನಿನಲ್ಲಿದ್ದರೆ, ಇನ್ನರ್ಧಷ್ಟು ಜನ ಜೈಲಿನಲ್ಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವ್ಯಂಗ್ಯವಾಡಿದರು. ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ರವಿವಾರ ಸಂಜೆ ವಿವಿಧ ಸಮಾಜಗಳ ಪ್ರಮುಖರು, ಕೇಂದ್ರ ಸರಕಾರದ ಹಲವು ಯೋಜನೆಗಳ ಫಲಾನುಭವಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರ ಇದ್ದಾಗ ಹಗರಣಗಳನ್ನು ನಡೆಸಿ, ಭ್ರಷ್ಟಾಚಾರದಲ್ಲಿ …
Read More »ಸರಕಾರದಿಂದ ತುಘಲಕ್ ದರ್ಬಾರ್: ಬಿಎಸ್‌ವೈ
ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಕಾಂಗ್ರೆಸ್ ಸರಕಾರದಿಂದ ತುಘಲಕ್ ದರ್ಬಾರ್ ನಡೆಯುತ್ತಿದೆ ಎಂದು ಮಾಜಿಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿಸಿದ್ದಾರೆ. ಜನರು ಬದುಕಿನ ಬಗ್ಗೆ ಗ್ಯಾರಂಟಿ ಕಳೆದುಕೊಂಡಿದ್ದಾರೆ. ಈ ಸರಕಾರದಲ್ಲಿ ಶಾಂತಿ, ನೀರು, ಮಹಿಳೆಯರ ಮಾನಪ್ರಾಣ, ರೈತರ ಬದುಕು, ಭಾವನೆ ಯಾವುದಕ್ಕೂ ಗ್ಯಾರಂಟಿ ಇಲ್ಲದಂತಾಗಿದೆ. ಗಲಭೆಕೋರರು, ಭಯೋತ್ಪಾದಕರಿಗೆ ರಕ್ಷಣೆಯ ಗ್ಯಾರಂಟಿ ಸಿಗುತ್ತಿದೆ. ವಿದ್ಯುತ್ ದರ ಏರಿಕೆಯ ಗ್ಯಾರಂಟಿ, ವಿವಿಧ ತೆರಿಗೆ ಹೆಚ್ಚಳದ ಗ್ಯಾರಂಟಿ ನೀಡುತ್ತಿದೆ ಎಂದು ದೂರಿದರು. ರವಿವಾರ ರಾಜ್ಯ ಬಿಜೆಪಿ ಮಾಧ್ಯಮ …
Read More »ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು
ಬೆಂಗಳೂರು: ಸಿನೆಮಾ ಚಿತ್ರೀಕರಣದ ವೇಳೆ ನಟ ಶ್ರೀಮುರಳಿ ಕಾಲಿಗೆ ಪೆಟ್ಟಾ ಗಿದ್ದು, ಅವರನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುರಳಿ ನಾಯಕರಾಗಿರುವ “ಬಘೀರ’ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದ್ದು, ಸಾಹಸ ದೃಶ್ಯಗಳ ಚಿತ್ರೀಕರಣ ಸಂದರ್ಭ ಗಾಯವಾಗಿದೆ.
Read More »ಖಾಸಗೀಕರಣಕ್ಕೆ ಕೇಂದ್ರ ಹುನ್ನಾರ: ರಾಹುಲ್ ಗಾಂಧಿ ಆರೋಪ
ಹೊಸದಿಲ್ಲಿ: “ರೈಲ್ವೇ ಅಸಮರ್ಥ ಎಂದು ಬಿಂಬಿಸುವ ಮೂಲಕ ಖಾಸಗೀಕರಣ ಗೊಳಿಸಿ, ನಿರ್ವಹಣೆಯನ್ನು ತಮ್ಮ ಆಪ್ತರಿಗೆ ಮಾ ರಾಟ ಮಾಡುವ ಉದ್ದೇಶವನ್ನು ಮೋದಿ ಸರಕಾರ ಹೊಂದಿದೆ ಎಂದು ಕಾಂಗ್ರೆಸ್‌ನ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ರೈಲಲ್ಲಿ ಜನ ತುಂಬಿ ತುಳುಕುತ್ತಿರುವ ವೀಡಿಯೋ ಒಂದನ್ನು ರಾಹುಲ್ ಟ್ವೀಟ್ ಮಾಡಿದ್ದಾರೆ. “ಮೋದಿ ಆಡಳಿತದಲ್ಲಿ ರೈಲಿನಲ್ಲಿ ಓಡಾಡುವುದು ಜನರಿಗೆ ಶಿಕ್ಷೆಯಂತಾಗಿದೆ. ಐಷಾರಾಮಿ ರೈಲುಗಳ ಪ್ರಚಾರ ಮಾಡುತ್ತಾ, ಸಾಮಾನ್ಯ ಕೋಚ್‌ಗಳನ್ನು ಕೇಂದ್ರ ಕಬಳಿಸುತ್ತಿದೆ. ಇದನ್ನು ಉಳಿಸಬೇಕಾದರೆ ಮೋದಿ ಸರಕಾರವನ್ನು ಕೆಳಗಿಳಿಸಲೇ …
Read More »ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
ಕೋಲಾರ: ಪ್ರಧಾನಿ ಮೋದಿಯವರು ಶನಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿವಾದಿತ ಹೇಳಿಕೆ ನೀಡಿದ್ದಾರೆ. ಕೋಲಾರದಲ್ಲಿ ರವಿವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. “ಮೋದಿ ಸಾಹೇಬರೇ, ದೇವರ ಮೇಲೆ ನಂಬಿಕೆ ಇರಿಸಿಕೊಂಡು ಕಾಯುತ್ತಿದ್ದೇವೆ. ಜೂ. 4ರಂದು ದೇಶಕ್ಕೆ ಹಿಡಿದ ಶನಿ ಬಿಡುತ್ತದೆ. ನೀನು ದೇಶಕ್ಕೆ ಹಿಡಿದ ಶನಿ ಕಣಯ್ನಾ’ ಎಂದು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಾಯಕಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಡವರಿಗೆ, ಹೆಣ್ಣು …
Read More »ಇತಿಹಾಸ ಬರೆದ 17ರ ಹುಡುಗ;
ಟೊರೆಂಟೊ: ಹದಿಹರೆಯದ ಭಾರತದ ಗ್ರ್ಯಾನ್ ಮಾಸ್ಟರ್ ಡಿ ಗುಕೇಶ್ ಅವರು ಇತಿಹಾಸ ಬರೆದಿದ್ದಾರೆ. ಕ್ಯಾಂಡಿಡೇಟ್ಸ್ ಚೆಸ್ ಟೂರ್ನಮೆಂಟ್ ನಲ್ಲಿ ಚಾಂಪಿಯನ್ ಆಗಿ ಮೂಡಿಬಂದ 17 ವರ್ಷದ ಗುಕೇಶ್, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಕ್ಯಾಂಡಿಡೇಟ್ಸ್ ಕಪ್ ಗೆದ್ದ ಕೇವಲ ಎರಡನೇ ಭಾರತೀಯನಾಗಿ ಗುಕೇಶ್ ಮೂಡಿಬಂದಿದ್ದಾರೆ. ಈ ಹಿಂದೆ ವಿಶ್ವನಾಥನ್ ಆನಂದ್ ಅವರು ಈ ಸಾಧನೆ ಮಾಡಿದ್ದರು. ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ …
Read More »ಮತದಾನ ಬಹಿಷ್ಕಾರ ಫ್ಲೆಕ್ಸ್ ಅಳವಡಿಕೆ;ಎಚ್ಚರಿಕೆ
ಪುಂಜಾಲಕಟ್ಟೆ: ಚುನಾವಣೆಯ ಸಂದರ್ಭದಲ್ಲ ರೈತರು ತಮ್ಮ ಪರವಾನಗಿ ಹೊಂದಿದ ಕೋವಿಗಳನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ಇರಿಸಬೇಕೆಂಬ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದ ವಿರುದ್ಧ ಬಂಟ್ವಾಳ ತಾಲೂಕಿನ ರೈತರೋರ್ವರು ಚುನಾವಣಾ ಮತ ಬಹಿಷ್ಕಾರಕ್ಕೆ ಕರೆ ನೀಡಿ ಫ್ಲೆಕ್ಸ್ ಅಳವಡಿಸಿದ್ದಾರೆ. ಕೃಷಿಕರ ಕೋವಿಯನ್ನು ಪ್ರತಿ ಸಲ ಚುನಾವಣಾ ಸಮಯದಲ್ಲಿ ಪೊಲೀಸ್ ಠಾಣೆಯಲ್ಲಿಡುವುದರಿಂದ ಪ್ರಾಣಿಗಳ ಹಾವಳಿಗೆ ತುತ್ತಾಗಿ ಕೃಷಿ ನಷ್ಟಕ್ಕೆ ಒಳಗಾಗುತ್ತದೆ. ಬಂಟ್ವಾಳ ತಾಲೂಕಿನ ಬಡಗಕಜೆಕಾರು ಮತ್ತು ತೆಂಕಕಜೆಕಾರು ಗ್ರಾಮದ ಎಲ್ಲಾ ಅಪರಾಧ ಇಲ್ಲದ …
Read More »Raksha Ramaiah V/s Sudhakar: ಚಿಕ್ಕಬಳ್ಳಾಪುರದಲ್ಲಿ ರಕ್ಷಾ ರಾಮಯ್ಯ ಸಕತ್ ಫೈಟ್, ಕ್ಷೇತ್ರ ಉಳಿಸಿಕೊಳ್ಳಲು ಕೆ.ಸುಧಾಕರ್ ಪರದಾಟ.
ಚಿಕ್ಕಬಳ್ಳಾಪುರ, ಏಪ್ರಿಲ್. 22: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾರು ನಿರೀಕ್ಷಿಸದ ಫಲಿತಾಂಶ ನೀಡಿ ರಾಜ್ಯದ ಜನಕ್ಕೆ ಅಚ್ಚರಿ ನೀಡಿದ್ದ ಕ್ಷೇತ್ರ ಚಿಕ್ಕಬಳ್ಳಾಪುರ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಚಿಕ್ಕಬಳ್ಳಾಪುರವನ್ನು 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಮತ್ತು ಒಕ್ಕಲಿಗರ ಮತಗಳಿಂದ ಬಿಜೆಪಿ ಮೊದಲ ಬಾರಿಗೆ ಕಸಿದುಕೊಂಡಿತ್ತು. ಕಳೆದ ಬಾರಿಯ ವಿಧಾನಸಭಾ ಚುನಾವಣೆಲ್ಲಿ ಸೋಲು ಕಂಡ ಮಾಜಿ ಸಚಿವ ಡಾ.ಕೆ.ಸುಧಾಕರ್‌ಗೆ ಈ ಸಲಿ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಕಣಕ್ಕೆ ಇಳಿದಿದ್ದಾರೆ. ಅವರಿಗೆ …
Read More »
Laxmi News 24×7