Breaking News

ರಾಜ್ಯ

ಪುದುಚೇರಿಯಲ್ಲಿ ಕಾಂಗ್ರೆಸ್ ಪಾದಯಾತ್ರೆ: ಭ್ರಷ್ಟಾಚಾರದ ವಿರುದ್ಧ ಅಂಜಲಿ ನಿಂಬಾಳ್ಕರ್ ಗುಡುಗು; ಚುನಾವಣಾ ಸಿದ್ಧತಾ ಸಭೆಯಲ್ಲಿ ಭಾಗಿ!

ಪುದುಚೇರಿಯಲ್ಲಿ ಕಾಂಗ್ರೆಸ್ ಪಾದಯಾತ್ರೆ: ಭ್ರಷ್ಟಾಚಾರದ ವಿರುದ್ಧ ಅಂಜಲಿ ನಿಂಬಾಳ್ಕರ್ ಗುಡುಗು; ಚುನಾವಣಾ ಸಿದ್ಧತಾ ಸಭೆಯಲ್ಲಿ ಭಾಗಿ! ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಅವರು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿದ್ದು, ಭ್ರಷ್ಟಾಚಾರ ಮುಕ್ತ ಪುದುಚೇರಿಗಾಗಿ ನಡೆದ ಬೃಹತ್ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಮುಂಬರುವ ತಮಿಳುನಾಡು ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆದ ಮಹತ್ವದ ಸಿದ್ಧತಾ ಸಭೆಯಲ್ಲೂ ಅವರು ಭಾಗವಹಿಸಿ ಸಂಘಟನಾತ್ಮಕ ಸಲಹೆಗಳನ್ನು ನೀಡಿದ್ದಾರೆ. ಪುದುಚೇರಿಯನ್ನು …

Read More »

ವಡಗಾಂವನ ಶ್ರೀ ಮಲ್ಲಿಕಾರ್ಜುನ ಮಂದಿರದಲ್ಲಿ ಶಿವರಾತ್ರಿ ಸಂಭ್ರಮ: 20 ಸಾವಿರ ಭಕ್ತರಿಂದ ಮಹಾಪ್ರಸಾದ ಸ್ವೀಕಾರ

ವಡಗಾಂವನ ಶ್ರೀ ಮಲ್ಲಿಕಾರ್ಜುನನಿಗೆ ಶಿವರಾತ್ರಿಯ ಅದ್ಧೂರಿ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪಲ್ಲಕ್ಕಿ ಮೆರವಣಿಗೆ 20 ಸಾವಿರ ಭಕ್ತರಿಂದ ಮಹಾಪ್ರಸಾದ ಸ್ವೀಕಾರ ಪೂಜೆ ಮತ್ತು ಪ್ರವಚನಗಳಿಂದ ಧಾರ್ಮಿಕ ಸಂಭ್ರಮ ಬೆಳಗಾವಿಯ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾದ ಕಪಿಲೇಶ್ವರನಷ್ಟೇ ಜಾಗೃತವಾಗಿರುವ ವಡಗಾಂವನ ಶ್ರೀ ಮಲ್ಲಿಕಾರ್ಜುನ ಮಂದಿರದಲ್ಲಿ ಮಹಾಶಿವರಾತ್ರಿ ಉತ್ಸವವು ಅತ್ಯಂತ ವೈಭವದಿಂದ ಜರುಗಿತು. ಸತತ ಎಂಟು ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಂಗಳವಾರ ಬೃಹತ್ ಮಹಾಪ್ರಸಾದದೊಂದಿಗೆ ತೆರೆಕಂಡವು. ಬೆಳಗಾವಿ …

Read More »

ಭಾರತದಲ್ಲಿ ಬೆಳ್ಳಿ ದರ ಭರ್ಜರಿ ಕುಸಿತ! ಒಂದೇ ದಿನ 5000 ರೂ. ಇಳಿಕೆ

ಭಾರತದಲ್ಲಿ ಬೆಳ್ಳಿ ಬೆಲೆ ಇಂದು ಭರ್ಜರಿ ಕುಸಿತ ಕಂಡಿದೆ. 1 ಗ್ರಾಂ ಬೆಳ್ಳಿ ದರ ಇಂದು ₹255 ರೂ. ಆಗಿದ್ದು, ನಿನ್ನೆ ₹260 ರೂ. ಇತ್ತು. ನಿನ್ನೆಗಿಂತ ಇಂದು ಪ್ರತೀ ಗ್ರಾಂನಲ್ಲಿ ₹5 ರೂ. ಇಳಿಕೆಯಾಗಿದೆ. ಇನ್ನು 8 ಗ್ರಾಂ ಬೆಳ್ಳಿ ಬೆಲೆ ₹2,040 ರೂ. ಆಗಿದ್ದು, ನಿನ್ನೆ ₹2,080 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್‌ ₹40 ರೂ. ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ₹2,550 ರೂ. …

Read More »

ಆಡಳಿತದ ಪಕ್ಷಕ್ಕೆ ಇಲ್ಲಿನ ನಾಯಕತ್ವದಲ್ಲಿ ವಿಶ್ವಾಸ ಇಲ್ಲ: ಸಿ.ಟಿ.ರವಿ

ಬೆಂಗಳೂರು: ಆಡಳಿತ ಪಕ್ಷದ ಶಾಸಕರಿಗೆ ಇಲ್ಲಿನ ನಾಯಕತ್ವದಲ್ಲಿ ವಿಶ್ವಾಸ ಇಲ್ಲ. ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಶಾಸಕರು ವಿದೇಶ ಪ್ರವಾಸಕ್ಕೆ ಹೋಗ್ತಾ ಇದ್ದಾರೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಕಾಂಗ್ರೆಸ್ ಶಾಸಕರ ಫಾರಿನ್ ಟ್ರಿಪ್‌ಗೆ ಲೇವಡಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಲ್ಲಿರೋ ರಾಜಕೀಯ ನೇತೃತ್ವ, ಇಲ್ಲಿನ ವ್ಯವಸ್ಥೆ ನ್ಯಾಯ ಕೊಡೋಕೆ ಸಾಧ್ಯವಿಲ್ಲ ಅಂತ ಆಡಳಿತ ಪಕ್ಷದ ಶಾಸಕರಿಗೆ ಅನ್ನಿಸಿದೆ. ಇದಕ್ಕೆ ವಿದೇಶದಲ್ಲಿ ಪರಿಹಾರ ಸಿಗಬಹುದು ಎಂಬ ಆಶಾ ಭಾವನೆಯಲ್ಲಿ ಹೋಗ್ತಾ ಇದ್ದಾರೆ. …

Read More »

ಹಂಪಿಯಲ್ಲಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ, ವಿದೇಶಿಗನ ಕೊಲೆ ಕೇಸ್: ಮೂವರಿಗೆ ಗಲ್ಲು ಶಿಕ್ಷೆ

ಕೊಪ್ಪಳ: ಹಂಪಿ  ಬಳಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ವಿದೇಶಿ ಪ್ರವಾಸಿಗನ ಕೊಲೆ ಪ್ರಕರಣದ ಅಪರಾಧಿಗಳಿಗೆ ಕೋರ್ಟ್ ಮರಣದಂಡನೆ ವಿಧಿಸಿದೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಇಸ್ರೇಲ್ ಮಹಿಳೆ ಮೇಲಿನ ಅತ್ಯಾಚಾರ ಮತ್ತು ಅಮೆರಿಕದ ಪ್ರವಾಸಿಗನ ಕೊಲೆ ಪ್ರಕರಣ ಸಂಬಂಧ ಗಂಗಾವತಿ ನ್ಯಾಯಾಲಯವು, ಇದೇ ಫೆಬ್ರವರಿ 6ರಂದು ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ಇಂದು (ಫೆಬ್ರವರಿ 16)ಗಂಗಾವತಿ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ನ್ಯಾಯಾಲಯದ ನ್ಯಾಯಾಧೀಶರಾದ …

Read More »

ಕಾರ್ಮೋಡ ಕವಿದಿತು, ಅಂತರಂಗದ ಪಕ್ಷಿ ಹಾರಿತು, ಕೆರೆ ಕಟ್ಟೆ ತುಂಬಿ ಹರಿದಾವು ಪರಾಕ್ – ಮುಳ್ಳುಗದ್ದುಗೆ ಮೇಲೆ ಕುಣಿದು ಕಾರ್ಣಿಕ!

ದಾವಣಗೆರೆ: ಶಿವರಾತ್ರಿ ಪ್ರಯುಕ್ತ ಚನ್ನಗಿರಿ  ತಾಲೂಕಿನ ಕೆಂಗಾಪುರ ಗ್ರಾಮದ ಉತ್ಸವದಲ್ಲಿ ರಾಮಲಿಂಗೇಶ್ವರ ಸ್ವಾಮೀಜಿ ಮುಳ್ಳುಗದ್ದುಗೆ  ಏರಿ ಕಾರ್ಣಿಕ ನುಡಿದಿದ್ದಾರೆ. ಮುಳ್ಳುಗದ್ದುಗೆ ಏರಿ ಕುಣಿದ ನಂತರ, ಕಾರ್ಮೋಡ ಕವಿದಿತು, ಅಂತರಂಗದ ಪಕ್ಷಿ ಹಾರಿತು, ಕೆರೆ ಕಟ್ಟೆಗಳು ತುಂಬಿ ಹರಿದಾವು ಪರಾಕ್ ಎಂದು ಸ್ವಾಮೀಜಿ ಕಾರ್ಣಿಕ ನುಡಿದಿದ್ದಾರೆ. ಈ ಬಾರಿ ಉತ್ತಮ ಮಳೆಯಾಗಿ ಕೆರೆ ತೊರೆಗಳು ತುಂಬಿ ತುಳಕಲಿವೆ. ಉತ್ತಮ ಬೆಳೆ ಬರಲಿದೆ. ಜನರಿಗೆ ಪ್ರಯಾಣದಲ್ಲಿ ಸಾಕಷ್ಟು ದುರಂತ ನಡೆದು, ಸಾವು ನೋವು …

Read More »

ಗ್ರಾಪಂ ಅಭಿವೃದ್ಧಿಗೆ ಸದಸ್ಯರ ಸಹಕಾರ ಅತ್ಯಗತ್ಯ

ಆನೇಕಲ್​ : ಪಂಚಾಯಿತಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಎಲ್ಲರೂ ನೀಡಿದ ಸಹಕಾರ ಕಾರಣ ಎಂದು ಹೆನ್ನಾಗರ ಗ್ರಾಪಂ ಅಧ್ಯಕ್ಷ ಕೆ.ವಿನಯ್​ ಹೇಳಿದರು. ತಾಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ ಆವರಣದಲ್ಲಿ ಸದಸ್ಯರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಅಧಿಕಾರದ ಅವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಕಾವೇರಿ ಕುಡಿಯುವ ನೀರಿನ ಯೋಜನೆ ಮೂಲಕ ಪ್ರತಿ ಮನೆಗೂ ಕಾವೇರಿ ನೀರು ತಲುಪಿಸುವ ಮಹತ್ತರದ ಕಾಮಗಾರಿ ಮಾಡಿರುವುದು ಖುಷಿ ತಂದಿದೆ. ಇದರ ಜತೆಗೆ ಕೆರೆ ಅಭಿವೃದ್ಧಿ, …

Read More »

ಶಿವರಾತ್ರಿ ಹಬ್ಬದ ಬಳಿಕ ಬಜೆಟ್ ದಿನಾಂಕದ ಕುರಿತು ನಿರ್ಧಾರ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಹಾಶಿವರಾತ್ರಿ ಹಬ್ಬದ ಬಳಿಕ ರಾಜ್ಯ ಬಜೆಟ್ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದು ಬೆಳಗ್ಗೆ ನಗರದ ಶಕ್ತಿ ಭವನದಲ್ಲಿ ವಿವಿಧ ಇಲಾಖೆಗಳೊಂದಿಗೆ ಅವರು ಸಭೆ ನಡೆಸಿದರು. ಇದಕ್ಕೂ ಮುನ್ನ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ, ಹಬ್ಬದ ಬಳಿಕ ಬಜೆಟ್ ದಿನಾಂಕ ತಿಳಿಸಲಾಗುವುದು ಎಂದರು. ಕೆಲ ಶಾಸಕರು ವಿದೇಶ ಪ್ರವಾಸ ಕೈಗೊಂಡಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸ್ವಂತ ಖರ್ಚಿನಲ್ಲಿ ಶಾಸಕರು ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು …

Read More »

ಗದಗ-ಯಲವಿಗಿ ರೈಲ್ವೆ ಯೋಜನೆ ಶೀಘ್ರ ಆರಂಭಿಸಲು ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ಬಸವರಾಜ ಬೊಮ್ಮಾಯಿ ಮನವಿ

ನವದೆಹಲಿ: ಗದಗ ಯಲವಿಗಿ ರೈಲು ಯೋಜನೆ ಡಿಪಿಆರ್‌ಗೆ ಒಪ್ಪಿಗೆ ನೀಡಿ ತ್ವರಿತಗತಿಯಲ್ಲಿ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್  ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿರುವ ಅವರು, ಕೇಂದ್ರ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಿದ್ದು, ಡಿಪಿಆರ್‌ಗೆ ಅನುಮತಿ ನೀಡಿ ಯೋಜನೆ ಕಾರ್ಯಾರಂಭ ಮಾಡಬೇಕು. ನಾನು ರಾಜ್ಯ ಸರ್ಕಾರಕ್ಕೆ ಭೂಸ್ವಾಧೀನ ಕೈಗೊಳ್ಳಲು ಆಗ್ರಹಿಸಿದ್ದೇನೆ. ಡಿಪಿಆರ್‌ಗೆ ಒಪ್ಪಿಗೆ ನೀಡುವುದರಿಂದ …

Read More »

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

ಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು  ಇಂದು ಭಾರತ್ ಬಂದ್‌ಗೆ  ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಸಂಹಿತೆಗಳು ಮತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಬಂದ್ ನಡೆಯುತ್ತಿದ್ದು, ರಾಜ್ಯದಲ್ಲೂ ಪ್ರತಿಭಟನೆಗೆ ಕರೆ ನೀಡಲಾಗಿದೆ. ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್‌ಇಡಬ್ಲ್ಯೂಎ, ಎಐಸಿಸಿಟಿಯು, ಎಲ್‌ಪಿಎಫ್ ಮತ್ತು ಯುಟಿಯುಸಿ ಸೇರಿದಂತೆ 10 ಕೇಂದ್ರ ಕಾರ್ಮಿಕ ಸಂಘಗಳು ಪ್ರತಿಭಟನೆಯ ಕಹಳೆ ಮೊಳಗಿಸಲಿವೆ. ಈ ಕಾರ್ಮಿಕ ರೈತ ಸಂಘಟನೆಗಳಿಗೆ …

Read More »