ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರದ ವೇಳೆ ವಸತಿ ಹಾಗೂ ವಕ್ಫ್ ಸಚಿವ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಭಾಷಣದ ಮಧ್ಯೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಹಲವೆಡೆಯಿಂದ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಸಮರ್ಥನೆ ನೀಡಿದ್ದಾರೆ. ಈ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿ “ಕುಮಾರಸ್ವಾಮಿಯವರನ್ನು ನಾನು ಪ್ರೀತಿಯಿಂದ ಕರಿಯಣ್ಣ ಅಂತಾನೇ ಕರೆಯೋದು. ಅವರು ನನ್ನನ್ನು ಕುಳ್ಳ ಅಂತಿದ್ರು” ಎಂದು ಜಮೀರ್ ಅಹ್ಮದ್ …
Read More »ಕಣ್ಣೀರು ಯಾರೂ ಹಾಕಬಹುದು.. ಬೆವರನ್ನಲ್ಲ:ಸಿ.ಪಿ.ಯೋಗೇಶ್ವರ್
ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ ಐದು ಬಾರಿ ಶಾಸಕನಾದರೂ ರಾಜಕೀಯವಾಗಿ ಸ್ಥಿರವಾಗಿ ನಿಲ್ಲಲು ಸಾಧ್ಯವಾಗಲಿಲ್ಲ. ಆದರೆ ಜನರ ಒಳಿತಿಗಾಗಿ ಈ ಸ್ಥಿತ್ಯಂತರ ಎಂಬ ಕಾರಣಕ್ಕೆ ನನಗೆ ಬೇಸರವಿಲ್ಲ. ಎರಡು ಬಾರಿಯ ಸೋಲಿಗೆ ಕಾರಣ ತಿಳಿಯದಿರುವುದು ಬೇಸರ ತರಿಸಿದೆ ಎಂದು ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹೇಳಿದರು. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕುಮಾರಸ್ವಾಮಿ ಚನ್ನಪಟ್ಟಣವನ್ನು ಸ್ಪಿನ್‌ಬೋರ್ಡ್ ಮಾಡಿಕೊಂಡರು. ಆದರೆ ಅಭಿವೃದ್ಧಿಯನ್ನೇ ಮಾಡಲಿಲ್ಲ. ರಾಮನಗರ ಜಿಲ್ಲೆ ನೀರಾವರಿಗೆ ಯಾಕೆ ನೀವು …
Read More »BJP;10 ನಾಯಕರಿಂದ ಪ್ರತ್ಯೇಕ ಸಂಘಟನೆ: ರಮೇಶ್ ಜಾರಕಿಹೊಳಿ
BJP;10 ನಾಯಕರಿಂದ ಪ್ರತ್ಯೇಕ ಸಂಘಟನೆ: ರಮೇಶ್ ಜಾರಕಿಹೊಳಿ ರಾಯಚೂರು: ವಿಜಯೇಂದ್ರ ನಾಯಕತ್ವವನ್ನು ಒಪ್ಪುವುದಿಲ್ಲ. ಬಿಜೆಪಿಯನ್ನು ಬಹುಮತದಿಂದ ಅಧಿಕಾರಕ್ಕೆ ತರಲು ಪ್ರತ್ಯೇಕವಾಗಿ ನಾವು 10 ನಾಯಕರು ಪಕ್ಷ ಸಂಘಟನೆಗೆ ಮುಂದಾಗಿದ್ದೇವೆ. ನಾನು 6 ಜಿಲ್ಲೆಗಳ ಉಸ್ತುವಾರಿ ತೆಗೆದುಕೊಂಡಿ ದ್ದೇನೆ. ಯತ್ನಾಳ್, ಪ್ರತಾಪ ಸಿಂಹ, ಅರವಿಂದ ಲಿಂಬಾವಳಿ ಸೇರಿ ಕೆಲವು ನಾಯಕರು ಉಳಿದ ಜಿಲ್ಲೆಗಳ ಹೊಣೆ ತೆಗೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪ ಬಗ್ಗೆ …
Read More »ಇ-ಖಾತಾ ಸಮಸ್ಯೆ: ಇಂದು ಸಚಿವರ ಸಭೆ
ಬೆಂಗಳೂರು: ಸಾರ್ವಜನಿಕರಿಗೆ ದಸ್ತಾವೇಜು ನೋಂದಣಿ ವಿಚಾರದಲ್ಲಿ ಸೃಷ್ಟಿಯಾಗಿ ರುವ ಇ-ಖಾತಾ ಸಮಸ್ಯೆ ಪರಿಹರಿ ಸುವುದಕ್ಕಾಗಿ ಬುಧವಾರ ಉನ್ನತ ಮಟ್ಟದ ಸಭೆ ಆಯೋಜಿಸಲಾಗಿದೆ. ಕಂದಾಯ ಸಚಿವ ಕೃಷ್ಣಬೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್ ಭಾಗವಹಿಸಲಿದ್ದಾರೆ. ಸ್ಥಿರಾಸ್ತಿ ದಸ್ತಾವೇಜು ನೋಂದಣಿಗೆ ಕಾವೇರಿ-2 ತಂತ್ರಾಂಶದೊಂದಿಗೆ ಇ-ಆಸ್ತಿ ಮತ್ತು ಇ-ಸ್ವತ್ತು ತಂತ್ರಾಂಶವನ್ನು 2014ರಲ್ಲೇ ಸಂಯೋಜನೆ ಗೊಳಿಸಲಾಗಿದೆ. ಹೀಗಾಗಿ ಈಗ ಇ-ಖಾತಾ ಕಡ್ಡಾಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ …
Read More »ಕಿರಾಣಿ ಅಂಗಡಿಗಳಲ್ಲೂ ಭಾರತ್ ಬ್ರ್ಯಾಂಡ್ ಆಹಾರ ಧಾನ್ಯ: ಜೋಶಿ
ಹುಬ್ಬಳ್ಳಿ: ಕೇಂದ್ರ ಸರಕಾರ ರಿಯಾಯಿತಿ ದರದಲ್ಲಿ ನೀಡುತ್ತಿರುವ ಭಾರತ್ ಬ್ರ್ಯಾಂಡ್ ನ ಅಕ್ಕಿ, ಗೋಧಿ ಹಿಟ್ಟು, ಬೇಳೆ ಇನ್ನಿತರ ಆಹಾರ ಪದಾರ್ಥಗಳನ್ನು ದೇಶಾದ್ಯಂತ ಎಲ್ಲ ಸೂಪರ್ ಬಜಾರ್ ಹಾಗೂ ಸಾಮಾನ್ಯ ಕಿರಾಣಿ ಅಂಗಡಿಗಳಲ್ಲಿಯೂ ಮಾರಾಟಕ್ಕಿಡಲು ಯೋಚಿಸಲಾಗಿದೆ. ಅಂಗಡಿಯವ ರಿಗೆ ಕಮಿಷನ್ ನಿಗದಿ ಪಡಿಸಲಾಗುತ್ತಿದೆ. ಆನ್‌ಲೈನ್ ಮೂಲಕವೂ ಖರೀದಿ ಮಾಡಬಹುದಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕರ ಪೂರೈಕೆ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು. ಸೋಮವಾರ ಮೂರುಸಾವಿರ ಮಠ ಶಾಲೆ ಆವರಣದಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ …
Read More »ವಾಲ್ಮೀಕಿ ಹಗರಣ ಸಿಬಿಐಗೆ: ಇಂದು ಹೈಕೋರ್ಟ್ ತೀರ್ಪು
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿರುವ ಅರ್ಜಿಯ ಕುರಿತು ಹೈಕೋರ್ಟ್ ಮಂಗಳವಾರ ತನ್ನ ತೀರ್ಪು ಪ್ರಕಟಿಸಲಿದೆ. ಈ ವಿಚಾರವಾಗಿ ಬ್ಯಾಂಕ್ ಸಲ್ಲಿಸಿರುವ ಅರ್ಜಿಯ ಕುರಿತು ವಾದ- ಪ್ರತಿವಾದ ಆಲಿಸಿ ವಿಚಾರಣೆ ಯನ್ನು ಸೆ. 30ಕ್ಕೆ ಪೂರ್ಣಗೊಳಿಸಿದ್ದ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ತೀರ್ಪನ್ನು ಕಾಯ್ದಿರಿಸಿತ್ತು. ಈ ಪ್ರಕರಣವು ಕೇಂದ್ರ ಮತ್ತು ರಾಜ್ಯ ಸರಕಾರಗಳ …
Read More »ಹೊಟೇಲ್ ರೂಮನ್ನು ಮಹಿಳೆ, ಪುರುಷರಿಬ್ಬರೂ ಸೇರಿಯೇ ಕಾಯ್ದಿರಿಸಿದ ಬಗ್ಗೆ ದಾಖಲೆಗಳಿದ್ದರೂ, ಅದರರ್ಥ ಲೈಂಗಿಕ ಕ್ರಿಯೆ ಬಗ್ಗೆ ಮಹಿಳೆಯ ಸಮ್ಮತಿಯಿದೆ ಎಂದಲ್ಲ ನ್ಯಾಯಪೀಠ
ಮುಂಬಯಿ: ಮಹಿಳೆಯೊಬ್ಬಳು ಪುರುಷನೊಂದಿಗೆ ಹೊಟೇಲ್ ರೂಂ ಕಾಯ್ದಿರಿಸಿ, ಆತನೊಂದಿಗೆ ಹೋದರೆ ಅದು ಲೈಂಗಿಕ ಕ್ರಿಯೆಗೆ ಸಮ್ಮತಿ ಸೂಚಿಸಿದಂತೆ ಅರ್ಥವಲ್ಲ ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಹೇಳಿದೆ. ಹೊಟೇಲ್ ರೂಮನ್ನು ಮಹಿಳೆ, ಪುರುಷರಿಬ್ಬರೂ ಸೇರಿಯೇ ಕಾಯ್ದಿರಿಸಿದ ಬಗ್ಗೆ ದಾಖಲೆಗಳಿದ್ದರೂ, ಅದರರ್ಥ ಲೈಂಗಿಕ ಕ್ರಿಯೆ ಬಗ್ಗೆ ಮಹಿಳೆಯ ಸಮ್ಮತಿಯಿದೆ ಎಂದಲ್ಲ ಎಂದು ನ್ಯಾಯಪೀಠ ಹೇಳಿದೆ. 2021ರಲ್ಲಿ ಮಡ್ಗಾಂವ್‌ನ ಕೋರ್ಟ್ ಅತ್ಯಾಚಾರ ಆರೋಪಿ ಗುಲ್ಶರ್ ಅಹ್ಮದ್ ಎಂಬಾತನ ಬಿಡುಗಡೆಗೆ ಆದೇಶಿಸಿತ್ತು. ರೂಂ ಕಾಯ್ದಿರಿಸುವಾಗ ಮಹಿಳೆಯೂ …
Read More »ಮಹಿಳೆಯಾಗಿ ಬದಲಾದ ಟೀಂ ಇಂಡಿಯಾ ಮಾಜಿ ಕೋಚ್ ಪುತ್ರ!
ಹೊಸದಿಲ್ಲಿ: ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್, ಮಾಜಿ ಕೋಚ್ ಸಂಜಯ್ ಬಂಗಾರ್ ಅವರ ಪುತ್ರ ಇದೀಗ ಹೆಣ್ಣಾಗಿ ಬದಲಾಗಿದ್ದಾರೆ. ಸಂಜಯ್ ಬಂಗಾರ್ (Sanjay Bangar) ಮಗ ಆರ್ಯನ್ ಈಗ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ ಮಾಡಿಸಿಕೊಂಡು ‘ಟ್ರಾನ್ಸ್ ವುಮನ್’ ಅಗಿದ್ದು, ಫೋಟೊಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆರ್ಯನ್ ಬಂಗಾರ್ ಇದೀಗ ಹೆಸರು ಕೂಡಾ ಬದಲಾಯಿಸಿಕೊಂಡಿದ್ದಾರೆ. ಆರ್ಯನ್ ಇದ್ದವರು ಇದೀಗ ಅನಾಯಾ ಆಗಿದ್ದಾರೆ. ಅವರು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ …
Read More »ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ
ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ-63ರ ಯಲ್ಲಾಪುರ ತಾಲೂಕಿನ ಇಡಗುಂದಿಯ ಬಳಿ ಸರಕು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿ ಬಿದ್ಧ ಘಟನೆ ಸೋಮವಾರ(ನ.11)ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಹೊರಟ್ಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಬಲಬದಿಗೆ ಹೋಗಿ ಸುರಕ್ಷತೆಗೆ ಅಳವಡಿಸಿದ ತಡೆಬೇಲಿ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಗದ್ದೆಗೆ ಉರುಳಿ ಬಿದ್ದಿದೆ. ಲಾರಿ ಸಂಪೂರ್ಣ ಜಖಂ ಆಗಿದ್ದು,ಚಾಲಕ ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read More »ಸೀಟಿಗಾಗಿ ರೈಲಿನಲ್ಲಿ ಹೊಡೆದಾಡಿಕೊಂಡ ಪ್ರಯಾಣಿಕರು
ಬೆಳಗಾವಿ: ರೈಲಿನಲ್ಲಿ ಪ್ರಯಾಣಿಕರು ಸೀಟಿಗಾಗಿ ಪರಸ್ಪರ ಹೊಡೆದಾಡಿಕೊಂಡ ಘಟನೆ ಬೆಳಗಾವಿ ರೈಲ್ವೆ ನಿಲ್ದಾಣದ ರೈಲಿನಲ್ಲಿ ನಡೆದಿದೆ. ಬೆಳಗಾವಿಯಿಂದ ಕೆಎಸ್‌ಆರ್ ಬೆಂಗಳೂರಿಗೆ ಹೊರಟಿದ್ದ ಸೂಪರ್ ಫಾಸ್ಟ್ ರೈಲಿನಲ್ಲಿ ಸೀಟಿಗಾಗಿ ಇಬ್ಬರು ಪ್ರಯಾಣಿಕರ ನಡುವೆ ವಾಗ್ವಾದ ನಡೆದು ನಂತರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಅವಾಚ್ಯ ಶಬ್ದಗಳಿಂದ ನಿಂದನೆ ಮೂಲಕ ಇಬ್ಬರೂ ಹೊಡೆದಾಡಿಕೊಂಡರು. ಪ್ರಯಾಣಿಕರು ಬಡಿದಾಡಿಕೊಳ್ಳುವ ಮತ್ತೊಬ್ಬ ಪ್ರಯಾಣಿಕ ಮೊಬೈಲ್ ನಲ್ಲಿ ಇದನ್ನು ಸೆರೆ ಹಿಡಿದಿದ್ದಾರೆ. ರೈಲ್ವೆ ಪೋಲಿಸರು ಬಂದು …
Read More »
Laxmi News 24×7