Breaking News

ರಾಜ್ಯ

ಹಿರಿಯ ಲೇಖಕರಾದ ಶ್ರೀ ಯುತ ಜಿಬಿ ಪಾಟೀಲ್ ಅವರ ಸಮಯೋಚಿತ ಲೇಖನವಿದು ವಿಜಾಪುರದ ‘ಸಂಜಿವಿನಿ’ಗೆ ಸಂಚಕಾರ:

ಇದು ಸರಕಾರವೋ ಅಥವಾ ಸಾರ್ವಜನಿಕ ಆಸ್ತಿಯ ದಲ್ಲಾಳಿಯೋ? “ಬಡವನ ಆಸ್ತಿ ನುಂಗುವವನೇ ನಾಯಕ, ನ್ಯಾಯ ಕೇಳುವವನೇ ದೇಶದ್ರೋಹಿ!” – ಇದೇನಾ ನವ ಭಾರತದ ಪರಿಕಲ್ಪನೆ? ವಿಜಾಪುರದ ಬಿಸಿಲ ನಾಡಿನಲ್ಲಿ ಬಡವರ ಪಾಲಿಗೆ ಆಸರೆಯಾಗಿದ್ದ ೧೫೦ ಎಕರೆ ವಿಸ್ತೀರ್ಣದ ಸರಕಾರಿ ಆಸ್ಪತ್ರೆಯ ಜಮೀನು ಇಂದು ರಾಜಕಾರಣಿಗಳ ಮತ್ತು ಭೂಮಾಫಿಯಾದ ಕೆಟ್ಟ ಕಣ್ಣಿಗೆ ಬಿದ್ದಿದೆ. ಬ್ರಿಟಿಷರ ಕಾಲದ ಮಹಾತ್ಮರು ಬಡವರಿಗಾಗಿ ದಾನ ನೀಡಿದ ಈ ‘ಬಂಗಾರದ ಭೂಮಿ’ಯನ್ನು ‘ಪಿಪಿಪಿ’ (PPP) ಎಂಬ ಮುಸುಕಿನಡಿ …

Read More »

ನೈಋತ್ಯ ರೈಲ್ವೆ ಸರಕು ಸಾಗಾಣೆಯಲ್ಲಿ ದಾಖಲೆ: ಡಿಸೆಂಬರ್​​ನಲ್ಲೇ 839.7 ಕೋಟಿ ರೂ. ಆದಾಯ ಗಳಿಕೆ

ಹುಬ್ಬಳ್ಳಿ: ನೈಋತ್ಯ ರೈಲ್ವೆ (SWR) ಡಿಸೆಂಬರ್ 2025ರಲ್ಲಿ ಸರಕು ಸಾಗಣೆ ಕಾರ್ಯಾಚರಣೆ ಹಾಗೂ ಆದಾಯದಲ್ಲಿಯೂ ಅತ್ಯುತ್ತಮ ಸಾಧನೆ ದಾಖಲಿಸಿದೆ‌. ಡಿಸೆಂಬರ್​ನಲ್ಲಿ ನೈಋತ್ಯ ರೈಲ್ವೆ ಒಟ್ಟು 5.07 ಮಿಲಿಯನ್ ಟನ್ (MT) ಮೂಲ ಸರಕುಗಳನ್ನು ಲೋಡ್ ಮಾಡಿದ್ದು, ಡಿಸೆಂಬರ್ 2024ರ 4.04 MTಗೆ ಹೋಲಿಸಿದರೆ 1.03 MT (25.4%) ಹೆಚ್ಚಳವಾಗಿದೆ. ಇದು ನೈಋತ್ಯ ರೈಲ್ವೆ ಇತಿಹಾಸದಲ್ಲಿಯೇ ಒಂದೇ ತಿಂಗಳಲ್ಲಿ ಸಾಧಿಸಿದ ಅತ್ಯಧಿಕ ಸರಕು ಸಾಗಣೆ ಆಗಿದ್ದು, ಮಾರ್ಚ್ 2024ರಲ್ಲಿ ದಾಖಲಾಗಿದ್ದ 5.04 MT …

Read More »

ರಾಕ್ಷಸರು ಎಷ್ಟೇ ಅಟ್ಟಹಾಸ ಮೆರೆದರೂ ಬಳ್ಳಾರಿ ಶಾಂತಿಯುತವಾಗಿರುವಂತೆ ನೋಡಿಕೊಳ್ಳುತ್ತೇವೆ: ಶಾಸಕ ನಾರಾ ಭರತ್​ ರೆಡ್ಡಿ

ಬಳ್ಳಾರಿ: “ಯಾವ ರಾಕ್ಷಸರು ಎಷ್ಟೇ ಅಟ್ಟಹಾಸ ಮೆರೆದರೂ ಬಳ್ಳಾರಿ ಶಾಂತಿಯುತವಾಗಿದೆ, ಅದು ಹಾಗೆ ಇರುವಂತೆ ನಾವು ಯಾವತ್ತೂ ನೋಡಿಕೊಳ್ಳುತ್ತೇವೆ” ಎಂದು ಶಾಸಕ ನಾರಾ ಭರತ್​ ರೆಡ್ಡಿ ಹೇಳಿದ್ದಾರೆ. ಬಳ್ಳಾರಿ ಘರ್ಷಣೆಯ ಕುರಿತು ಬಳ್ಳಾರಿಯಲ್ಲಿಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, “FIR ದಾಖಲಾಗಿದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನಾನು ಜಾಸ್ತಿ ಮಾತನಾಡಿ ಪ್ರಕರಣವನ್ನು ಡೈವರ್ಟ್ ಮಾಡಲು ಹೋಗಲ್ಲ. ನಮ್ಮ ಹುಡುಗ ತೀರಿಕೊಂಡಿದ್ದು, ನಾವೆಲ್ಲ ದುಃಖದಲ್ಲಿದ್ದೇವೆ. ನಾನು ಯಾರ ಬಗ್ಗೆಯೂ ಏನೂ ಮಾತನಾಡಲು ಹೋಗುವುದಿಲ್ಲ. ಯಾಕೆಂದರೆ …

Read More »

ಬಳ್ಳಾರಿ ಘರ್ಷಣೆ: ಗುಂಡು ಹಾರಿಸಿದ್ದು ಯಾರು ಅನ್ನೋದು ತನಿಖೆಯಿಂದ ಗೊತ್ತಾಗಬೇಕು- ಪರಮೇಶ್ವರ್

ತುಮಕೂರು/ಬಳ್ಳಾರಿ: “ಬಳ್ಳಾರಿಯಲ್ಲಿ ಜನಾರ್ದನ್​ ರೆಡ್ಡಿ ಅವರ ಮನೆ ಮುಂಭಾಗ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಮಾಹಿತಿ ಇದೆ. ರಿವಾಲ್ವರ್​ನಿಂದ ಹಾರಿದ ಗುಂಡು ಆತನಿಗೆ ತಗುಲಿದೆ. ಆದರೆ, ಯಾರು ಗುಂಡು ಹಾರಿಸಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಬೇಕು” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ತುಮಕೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಾಲ್ಮೀಕಿ ಪುತ್ಥಳಿ ಅನಾವರಣ ಮಾಡಲೂ ಕೂಡ ಈ ರೀತಿ ಗೊಂದಲ ಮಾಡುತ್ತಾರೆಂದರೆ ಅದು ರಾಜಕೀಯ ದುರುದ್ದೇಶ. ಇದನ್ನು ನಾವು ಸಹಿಸುವುದಿಲ್ಲ.   ಆ …

Read More »

ಯಲ್ಲಮ್ಮನಗುಡ್ಡ ಜಾತ್ರೆಗಾಗಿ ವಿಶೇಷ ಬಸ್​​ ಸೌಲಭ್ಯ

ಹುಬ್ಬಳ್ಳಿ: ಬನದ ಹುಣ್ಣಿಮೆಯ ಪ್ರಯುಕ್ತ ಸವದತ್ತಿ ಯಲ್ಲಮ್ಮನಗುಡ್ಡದಲ್ಲಿ ನಡೆಯುವ ಪ್ರಸಿದ್ಧ ರೇಣುಕಾ ದೇವಿ ಜಾತ್ರೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಜಾತ್ರಾ ವಿಶೇಷ ಬಸ್​​ಗಳಿಗೆ ಇಂದು ಹೊಸೂರು ಬಸ್ ನಿಲ್ದಾಣದಲ್ಲಿ ಪೂಜೆ ಸಲ್ಲಿಸಿ, ಚಾಲನೆ ನೀಡಲಾಯಿತು. ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ್ ಅವರು ಮಾತನಾಡಿ, “ಬನದ ಹುಣ್ಣಿಮೆಯ ಪ್ರಯುಕ್ತ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಜರುಗುವ ರೇಣುಕಾ ದೇವಿ ಜಾತ್ರೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ನೇರ ಜಾತ್ರಾ ವಿಶೇಷ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. …

Read More »

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಐಸಿಸಿ ಸಲಹಾ ಸಮಿತಿ ಸಭೆ

ಶಿವಮೊಗ್ಗ: ಭದ್ರಾ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಯ ರೈತರ ಬೇಸಿಗೆ ಬೆಳೆಗಾಗಿ ಜನವರಿ 3ರಿಂದ ಎಡದಂಡೆ ಕಾಲುವೆ ಹಾಗೂ ಜನವರಿ 8ರಿಂದ ಬಲದಂಡೆ ಕಾಲುವೆಯಿಂದ ಸತತ 120 ದಿನಗಳ ಕಾಲ ನೀರು ಹರಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದರು. ಶಿವಮೊಗ್ಗದ ಹೊರವಲಯ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲಿ ಇಂದು ನಡೆದ ಐಸಿಸಿ ಸಲಹಾ ಸಮಿತಿ ಸಭೆಯ ನಂತರ …

Read More »

ಬಳ್ಳಾರಿ ಗಲಭೆಯ ಬಗ್ಗೆ ತನಿಖೆಗೆ ಸೂಚನೆ ನೀಡಿದ್ದೇನೆ: ಸಿಎಂ

ಬೆಂಗಳೂರು: “ಬಳ್ಳಾರಿ ಗಲಭೆ ಪ್ರಕರಣವನ್ನು ತನಿಖೆ ಮಾಡುವುದಕ್ಕೆ ಹೇಳಿದ್ದೇನೆ. ಯಾರ ಗನ್​​ನಿಂದ ಬುಲೆಟ್ ಬಂದಿದೆ ಅನ್ನೋದು ಗೊತ್ತಾಗಬೇಕಲ್ವಾ?. ಬಿಜೆಪಿಯವರ ಗನ್​​ನಿಂದಲೋ ಅಥವಾ ಕಾಂಗ್ರೆಸ್‌ನವರ ಗನ್​​ನಿಂದ ಬಂದಿದ್ಯಾ ಎನ್ನುವುದು ಗೊತ್ತಾಗಬೇಕು. ಅದಕ್ಕೋಸ್ಕರ ತನಿಖೆ ಮಾಡಲು ಹೇಳಿದ್ದೇನೆ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಖಾಸಗಿ ಬುಲೆಟ್ ಎಂದು ಎಸ್​ಪಿ ಮಾಹಿತಿ ನೀಡಿರುವ ವಿಚಾರಕ್ಕೆ, “ಅವರ ಸೆಕ್ಯುರಿಟಿಗಾಗಿ ಗನ್ ಇಟ್ಟುಕೊಂಡಿದ್ದಾರೆ. ಏರ್​​ನಲ್ಲಿ ಗನ್ ಫೈರ್ ಮಾಡಿದ್ದಾರೆ. ಫೈರ್ ಮಾಡಿರೋದು …

Read More »

ವೀರೇಶ್ ಪಟ್ಟಣಶೆಟ್ಟಿ ಅವರಿಗೆ ಪಿತೃ ವಿಯೋಗ ನಾಗಪ್ಪ ಪಟ್ಟಣಶೆಟ್ಟಿ ನಿಧನ

ವೀರೇಶ್ ಪಟ್ಟಣಶೆಟ್ಟಿ ಅವರಿಗೆ ಪಿತೃ ವಿಯೋಗ ನಾಗಪ್ಪ ಪಟ್ಟಣಶೆಟ್ಟಿ ನಿಧನ ಬೆಳಗಾವಿ ನಾನಾವಾಡಿಯ ರಹಿವಾಸಿ ನಾಗಪ್ಪ ಪಟ್ಟಣಶೆಟ್ಟಿ (84) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರೂ ಸುಪುತ್ರರು, ಸೊಸೆಯಂದಿರು, ಸುಪುತ್ರಿ, ಅಳಿಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ನಾಳೆ ಬೆಳಗಾವಿಯ ಸದಾಶಿವನಗರದ ರುದ್ರಭೂಮಿಯಲ್ಲಿ ಬೆಳಿಗ್ಗೆ 10.30ಕ್ಕೆ ಮೃತರ ಅಂತ್ಯಕ್ರಿಯೆ ನೆರವೇರಲಿದೆ.

Read More »

ರಾಮತೀರ್ಥನಗರ ಉದ್ಯಾನಗಳ ಅಭಿವ್ರದ್ಧಿಗೆ ರಹವಾಸಿಗಳಿಂದ ಜಿಲ್ಲಾಧಿಕಾರಿಗೆ ಮನವಿ ಅರ್ಪಣೆ

ರಾಮತೀರ್ಥನಗರ ಉದ್ಯಾನಗಳ ಅಭಿವ್ರದ್ಧಿಗೆ ರಹವಾಸಿಗಳಿಂದ ಜಿಲ್ಲಾಧಿಕಾರಿಗೆ ಮನವಿ ಅರ್ಪಣೆ ಬೆಳಗಾವಿ. ೦೨- ಬಹುದಿನಗಳಿಂದ ರಾಮತೀರ್ಥನಗರದಲ್ಲಿಯ ಉದ್ಯಾನಗಳು ಅಭಿವ್ರದ್ಧಿಯಾಗದೇ ಇರುವದರಿಂದ ಹುಳ,ಹೂಪ್ಪಡಿಗಳು, ಹಾವು,ಚೇಳುಗಳು, ನಾಯಿ, ಹಂದಿಗಳ ತಾಣಗಳಾಗಿದ್ದು, ರಹವಾಸಿಗಳು ಭಯ ಭೀತರಾಗಿದ್ದು, ಬಡಾವಣೆಯಲ್ಲಿ ತಿರುಗಾಡದಂತಾಗಿದೆ. ಈ ಕುರಿತು ಅಭಿವ್ರದ್ಧಿಗೆ ತಕ್ಷಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಇಲ್ಲಿಯ ರಹವಾಸಿಗಳು ಬೆಳಗಾವಿ ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಈಗಾಗಲೇ ರಾಮತೀರ್ಥನಗರ ಬೂಡಾದಿಂದ ಮಹಾನಗರ ಪಾಲಿಕೆ ಗೆ …

Read More »

ಮದಭಾವಿಯಲ್ಲಿ ಬಾರ್ ನಿರ್ಮಾಣಕ್ಕೆ ಮಹಿಳೆಯರ ತೀವ್ರ ಆಕ್ರೋಶ ಬಾರ್ ಸ್ಥಳಾಂತರಿಸದಿದ್ರೇ ಹೋರಾಟದ ಎಚ್ಚರಿಕೆ…

ಮದಭಾವಿಯಲ್ಲಿ ಬಾರ್ ನಿರ್ಮಾಣಕ್ಕೆ ಮಹಿಳೆಯರ ತೀವ್ರ ಆಕ್ರೋಶ ಬಾರ್ ಸ್ಥಳಾಂತರಿಸದಿದ್ರೇ ಹೋರಾಟದ ಎಚ್ಚರಿಕೆ… ಮದಭಾವಿಯಲ್ಲಿ ಬಾರ್ ನಿರ್ಮಾಣಕ್ಕೆ ಮಹಿಳೆಯರ ತೀವ್ರ ಆಕ್ರೋಶ ಬಾರ್ ಸ್ಥಳಾಂತರಿಸದಿದ್ರೇ ಹೋರಾಟದ ಎಚ್ಚರಿಕೆ… ಮದ್ಯದ ಬಾಟಲ್ ಗಳಿಗೆ ಬೆಂಕಿ ಹಾಕಿ ಆಕ್ರೋಶ ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಮದಭಾವಿ ಗ್ರಾಮದಲ್ಲಿ ಬಾರ್ ನಿರ್ಮಾಣಕ್ಕೆ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ವಸತಿ ಪ್ರದೇಶದಲ್ಲಿ ಬಾರ್ ತಲೆಎತ್ತುತ್ತಿರುವುದನ್ನು ಖಂಡಿಸಿದ ನೂರಾರು ಮಹಿಳೆಯರು, ಮದ್ಯದ …

Read More »