Breaking News

ರಾಜ್ಯ

ಅಮಾನತುಗೊಂಡ ರಾಜ್ಯಸಭೆ ಸದಸ್ಯರೊಂದಿಗೆ ಉಪಸಭಾಧ್ಯಕ್ಷರ ಚಾಯ್ ಪೇ ಚರ್ಚಾ: ಮೋದಿಯಿಂದ ಮೆಚ್ಚುಗೆ

ನವದೆಹಲಿ: ರಾಜ್ಯಸಭೆಯಿಂದ ಅಮಾನತುಗೊಂಡು ಸಂಸತ್ ಆವರಣದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ ಸದಸ್ಯರಿಗೆ ಖುದ್ದು ರಾಜ್ಯಸಭೆಯ ಉಪಸಭಾಧ್ಯಕ್ಷ ಹರಿವಂಶ್ ಅವರು ಚಾಯ್ ನೀಡಿ ಮಾತನಾಡಿದ್ದರು. ಹರಿವಂಶ್ ಅವರ ಈ ನಡೆಯ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಹರಿವಂಶ್ ಅವರ ನಡೆ ಸ್ಪೂರ್ತಿದಾಯಕವಾದದ್ದು, ಮುತ್ಸದ್ದಿ ನಡೆ ಎಂದು ಬಣ್ಣಿಸಿ, ಪ್ರತಿಯೊಬ್ಬ ಪ್ರಜಾಪ್ರಭುತ್ವದ ಪ್ರೇಮಿಯೂ ಹೆಮ್ಮೆಪಡುವಂಥದ್ದಾಗಿದೆ ಎಂದು …

Read More »

ಒಂಟಿ ಮಹಿಳೆ ಕೊಲೆ ಮಾಡಿದ್ದ ಆರೋಪಿಗಳ ಮೇಲೆ ಪೊಲೀಸ್ ಫೈರಿಂಗ್..

ಆನೇಕಲ್: ಇಂದು ಬೆಳಗ್ಗೆ ಇಬ್ಬರು ಕೊಲೆ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಮುತ್ಯಾಲಮಡು ಬಳಿ ವೇಲು ಅಲಿಯಾಸ್ ಸೈಕೋ, ಬಾಲಕೃಷ್ಣ ಅಲಿಯಾಸ್ ಬಾಲ ಕಾಲಿಗೆ ಗುಂಡೇಟು ಹೊಡೆದಿದ್ದಾರೆ. ಕಳೆದ ಒಂದು ವಾರದ ಹಿಂದೆ ಆರೋಪಿಗಳು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕು ವ್ಯಾಪ್ತಿಯ ಸಿಂಗೇನ ಅಗ್ರಹಾರ ಬಳಿ ಒಂಟಿ ಮಹಿಳೆ ಕೊಲೆ ಮಾಡಿ ಮನೆಯಲ್ಲಿ ಕಳ್ಳತನ ಮಾಡಿದ್ದರು. ನಿನ್ನೆ ರಾತ್ರಿ ಆರೋಪಿಗಳ ಬಂಧನಕ್ಕೆ ಪೊಲೀಸರು ತೆರಳಿದ್ರು. ಈ ವೇಳೆ ಆರೋಪಿಗಳು …

Read More »

ಸ್ಯಾಂಡಲ್‌ವುಡ್‌ Drugs ಜಾಲ: ನಟ ಯೋಗಿ​, ಕ್ರಿಕೆಟಿಗ NC ಅಯ್ಯಪ್ಪ ವಿಚಾರಣೆ

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿದಂತೆ ನಟ ಲೂಸ್​ ಮಾದ ಯೋಗೀಶ್​ ಹಾಗೂ ಮಾಜಿ ಕ್ರಿಕೆಟಿಗ NC ಅಯ್ಯಪ್ಪರ ವಿಚಾರಣೆ ಸಹ ನಡೆಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಆಂತರಿಕ ಭದ್ರತಾ ವಿಭಾಗದ ಪೊಲೀಸರಿಂದ ವಿಚಾರಣೆ ನಡೆದಿದ್ದು ಡ್ರಗ್ ಪೆಡ್ಲರ್ ಒಬ್ಬನ ಹೇಳಿಕೆ ಆಧಾರದ ಮೇಲೆ ವಿಚಾರಣೆ ನಡೆಸಲಾಯಿತು ಎಂದು ಹೇಳಲಾಗಿದೆ. ಇಬ್ಬರನ್ನು ಶಾಂತಿನಗರದ ಕೇಂದ್ರ ಕಚೇರಿಯಲ್ಲಿ ವಿಚಾರಣೆ ಮಾಡಿದ್ದೇವೆ ಎಂದು ಆಂತರಿಕ ಭದ್ರತಾ ವಿಭಾಗದ ADGP ಭಾಸ್ಕರ್ …

Read More »

12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸರಣಿ ಬಾಂಬ್ ಸ್ಫೋಟ ಆರೋಪಿ CCB ಬಲೆಗೆ

ಬೆಂಗಳೂರು: ಕಳೆದ 12 ವರ್ಷಗಳ ಹಿಂದೆ ಮಡಿವಾಳ ಸೇರಿದಂತೆ 9 ಕಡೆಗಳಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇಂದ್ರ ತನಿಖಾ ಸಂಸ್ಥೆಯ ನೆರವಿನೊಂದಿಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶೊಯೇಬ್ ಬಂಧಿತ ಆರೋಪಿ. ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ‌ ಸಿಸಿಬಿ ಪೊಲೀಸರು ಕೇರಳಕ್ಕೆ ಕರೆ ತರುತ್ತಿದ್ದಾರೆ. ಮಡಿವಾಳ ಸೇರಿದಂತೆ‌ 9 ಕಡೆಗಳಲ್ಲಿ ಬಾಂಬ್ ಸ್ಪೋಟದಲ್ಲಿ ಭಾಗಿಯಾಗಿದ್ದ.‌ ಕೃತ್ಯದಲ್ಲಿ‌ ಓರ್ವ ಬಲಿಯಾದರೆ 20 ಮಂದಿ ಗಾಯಗೊಂಡಿದ್ದರು. ಬಳಿಕ‌ ಅದೇ …

Read More »

ಆರ್‌ಸಿಯುಗೆ 126 ಎಕರೆ ಮಂಜೂರು.

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ 126 ಎಕರೆ 27 ಗುಂಟೆ ಜಮೀನನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ. ಇದರೊಂದಿಗೆ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಹಾಗೂ ವಿಸ್ತರಣೆಗೆ ಉಂಟಾಗಿದ್ದ ಜಾಗದ ಕೊರತೆ ನಿವಾರಣೆಯಾದಂತಾಗಿದೆ. ‘ತಾಲ್ಲೂಕಿನ ಬಾಗೇವಾಡಿ (ಸಂಕನಾಯ್ಕನಕೊಪ್ಪ) ಗ್ರಾಮದ ರಿ.ಸ.ನಂ. 421/2, 423, 426, 427, 429 ಮತ್ತು 431ರಲ್ಲಿ 87 ಎಕರೆ 39 ಗುಂಟೆ ಹಾಗೂ ಹಾಲಗಿಮರ್ಡಿ ಗ್ರಾಮದ ರಿ.ಸ.ನಂ. 48, 48 ಹಾಗೂ 49ರ …

Read More »

ಗುಡ್ ನ್ಯೂಸ್ : ರಾಜ್ಯದಲ್ಲಿ ಇಳಿಯುತ್ತಿದೆ ಕೊರೋನಾ

ಬೆಂಗಳೂರು  : ರಾಜ್ಯದಲ್ಲಿ ಸೋಮವಾರ 7,339 ಮಂದಿಗೆ ಸೋಂಕು ದೃಢಪಟ್ಟಿದ್ದು 122 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5.26 ಲಕ್ಷಕ್ಕೆ ಹಾಗೂ ಕೊರೋನಾ ಸಾವಿನ ಸಂಖ್ಯೆ 8,145ಕ್ಕೆ ಏರಿಕೆಯಾಗಿದೆ. ಆದರೆ ಸಕ್ರಿಯ ಸೋಂಕಿ​ತರ ಸಂಖ್ಯೆ 98 ಸಾವಿ​ರ​ದಿಂದ 95,335ಕ್ಕೆ ಇಳಿ​ದಿ​ದೆ. ಇದೇ ವೇಳೆ 9,925 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 4.23 ಲಕ್ಷಕ್ಕೆ ಏರಿಕೆಯಾಗಿದೆ. ಸೋಮವಾರ ಒಟ್ಟು 42,691 ಪರೀಕ್ಷೆ ನಡೆಸಿದ್ದು, …

Read More »

ಗುತ್ತಿಗೆ ಆಧಾರದ NHM ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ವಿಶೇಷ ಹೆಚ್ಚುವರಿ ಭತ್ಯೆ

ಬೆಂಗಳೂರು : ರಾಜ್ಯ ಸರ್ಕಾರವು ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ದಡಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 14,252 ವಿವಿಧ ಹುದ್ದೆಗಳಿಗೆ ವಿಶೇಷ ಹೆಚ್ಚುವರಿ ಭತ್ಯೆ ನೀಡಲು ಸರ್ಕಾರ ಆದೇಶಿಸಿದೆ. ಆಯುಷ್ ಮತ್ತು ಎಂಬಿಬಿಎಸ್ ವೈದ್ಯರು ಹಾಗೂ ತಜ್ಞರಿಗೆ 10 ಸಾವಿರ ರೂ. ಶುಶ್ರೂಷಕಿಯರಿಗೆ ಎ.ಎನ್. ಎಂ ಲ್ಯಾಬ್ ಟೆಕ್ನೀಷಿಯನ್ ಹಾಗೂ ಫಾರ್ಮಾಸಿಸ್ಟ್ ಗಳಿಗೆ ತಲಾ 5 ಸಾವಿರ ರೂ. ನಂತೆ ಮುಂದಿನ ಆರು ತಿಂಗಳ …

Read More »

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ- ಜಾರ್ಜ್‍ಗೆ ಸಮನ್ಸ್ ಜಾರಿ

ಮಡಿಕೇರಿ: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಜೆ.ಜಾರ್ಜ್ ಗೆ ಸಿಬಿಐ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ. ಈ ವಿಚಾರ ಖುಷಿ ತಂದಿದೆ. ಮತ್ತೆ ನ್ಯಾಯ ಸಿಗುವ ನಂಬಿಕೆ ಇದೆ ಎಂದು ಡಿವೈಎಸ್‍ಪಿ ಗಣಪತಿ ತಂದೆ ಕುಶಾಲಪ್ಪ ಹಾಗೂ ಗಣಪತಿ ಸಹೋದರ ಮಚ್ಚಯ್ಯ ಸಂತಸ ವ್ಯಕ್ತಪಡಿಸಿದರು. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ರಂಗಸಮುದ್ರದಲ್ಲಿ ಮಾತಾನಾಡಿದ ಅವರು, ಗಣಪತಿ ಅವರು ಮರಣ ಹೊಂದಿದ ನಂತರ ನ್ಯಾಯಕ್ಕಾಗಿ ಗಣಪತಿ ಕುಟುಂಬಸ್ಥರು ಹೋರಾಟ …

Read More »

ಒಪ್ಪಿಗೆಯಿಲ್ಲದೆ ಫೋಟೋ ಬಳಕೆ- ಆ್ಯಪ್ ಕಂಪನಿ ವಿರುದ್ಧ ಸಂಸದೆ ದೂರು

ಕೋಲ್ಕತ್ತಾ: ವಿಡಿಯೋ ಚಾಟ್ ಆ್ಯಪ್ ‘ಫ್ಯಾನ್ಸಿಯೂ’ ಪ್ರಚಾರಕ್ಕಾಗಿ ಒಪ್ಪಿಗೆಯಿಲ್ಲದೆ ನನ್ನ ಫೋಟೋವನ್ನು ಬಳಸಿದೆ ಎಂದು ನಟಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಕೋಲ್ಕತ್ತಾ ಪೊಲೀಸರಿಗೆ ದೂರು ನೀಡಿದ್ದಾರೆ. ನಟಿ ನುಸ್ರತ್ ಜಹಾನ್ ಟ್ವೀಟ್ ಮಾಡುವ ಮೂಲಕ ತಮ್ಮ ಫೋಟೋವನ್ನು ಬಳಸಿರುವುದಾಗಿ ದೂರು ನೀಡಿದ್ದಾರೆ. ಅಲ್ಲದೇ ವಿಡಿಯೋ ಚಾಟ್ ಆ್ಯಪ್‍ಗಾಗಿ ಜಾಹೀರಾತಿ ನೀಡಿರುವ ಸ್ಕ್ರೀನ್‍ಶಾಟ್ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋವನ್ನು ಟ್ವಿಟ್ಟರಿನಲ್ಲಿ ಶೇರ್ ಮಾಡಿದ್ದಾರೆ. ನಂತರ ಈ ಟ್ವೀಟನ್ನು ಕೋಲ್ಕತಾ …

Read More »

ಪ್ರೀಮಿಯರ್ ಬಹುಮಹಡಿ ಕಟ್ಟಡದ ಹಿಂಭಾಗದಲ್ಲಿ ಮಳೆ ನೀರಿನ ರಭಸಕ್ಕೆ ಅಪಾಟ್ರ್ಮೆಂಟ್‍ನ ಹಿಂಭಾಗದ ತಡೆಗೋಡೆ ಕುಸಿದಿದೆ.

ಉಡುಪಿ: ಜಿಲ್ಲೆಯಲ್ಲಿ ಮಳೆಯ ಅವಾಂತರ ಮುಂದುವರೆದಿದ್ದು, ಮಣಿಪಾಲ ಸಿಂಡಿಕೇಟ್ ಸರ್ಕಲ್ ನಲ್ಲಿರುವ ಪ್ರೀಮಿಯರ್ ಬಹುಮಹಡಿ ಕಟ್ಟಡದ ಹಿಂಭಾಗದಲ್ಲಿ ಮಳೆ ನೀರಿನ ರಭಸಕ್ಕೆ ಅಪಾಟ್ರ್ಮೆಂಟ್‍ನ ಹಿಂಭಾಗದ ತಡೆಗೋಡೆ ಕುಸಿದಿದೆ. ಕಮರ್ಷಿಯಲ್ ಕಂಪ್ಲೆಕ್ಸ್ ಆಗಿರುವ ಪ್ರೀಮಿಯರ್ ಕಟ್ಟಡದ ಜೊತೆ ವಸತಿ ಸಮುಚ್ಛಯ ಸಹ ಇರುವುದರಿಂದ ಅಲ್ಲಿನ ಎಲ್ಲ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಮಣಿಪಾಲ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಇದೇ ಕಟ್ಟಡದಲ್ಲಿ ವಾಸವಿದ್ದು, ಸದ್ಯ ಕಾಲೇಜುಗಳು ತೆರೆಯದ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಮ್ಮಿ ಇದೆ. …

Read More »