Breaking News

ರಾಜ್ಯ

ಅಥಣಿ ತಾಲ್ಲೂಕಿನ ಸತ್ತಿ ಹೊರವಲಯದಲ್ಲಿ ಅಬಕಾರಿ ದಾಳಿ 1.31 ಕೆ ಜಿ ಗಾಂಜಾ ವಶ ಒಬ್ಬನ ಬಂಧನ

    ಅಥಣಿ ತಾಲೂಕಿನ ಸತ್ತಿ ಗ್ರಾಮದ ದೇವಪ್ಪ ಈರಪ್ಪ ರುದ್ರಗೌಡರ ಇವರ ಸ್ವಂತ   ಜಮೀನಿನಲ್ಲಿ ದಿನಾಂಕ : 17-10-2020 ರಂದು ಸ್ವಂತ ಲಾಭಕ್ಕಾಗಿ ಮಾರಾಟದ ಉದ್ದೇಶದಿಂದ ಅಕ್ರಮವಾಗಿ ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೆಳೆದ ಬಗ್ಗೆ ಬಂದ ಖಚಿತ ಮಾಹಿತಿ  ಮೇರೆಗೆ ಡಾ : ವೈ ಮಂಜುನಾಥ ಅಬಕಾರಿ ಜಂಟಿ ಆಯುಕ್ತರು , ಬೆಳಗಾವಿ ವಿಭಾಗ ರವರ ಮಾರ್ಗದರ್ಶನದಲ್ಲಿ ಕೆ ಅರುಣಕುಮಾರ ಅಬಕಾರಿ ಉಪ ಆಯುಕ್ತರು ಬೆಳಗಾವಿ ಉತ್ತರ ಜಿಲ್ಲೆ …

Read More »

ಮಹಾಯುದ್ಧದಲ್ಲಿ ಅದ್ಭುತ ಪ್ರದರ್ಶನ ನೀಡ್ತಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈ ಸಲ ಕಪ್ ಗೆಲ್ಲೋ ಭರವಸೆಯನ್ನ ಮೂಡಿಸಿದೆ.

ಮರಳುಗಾಡಿನ ಮಹಾಯುದ್ಧದಲ್ಲಿ ಅದ್ಭುತ ಪ್ರದರ್ಶನ ನೀಡ್ತಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈ ಸಲ ಕಪ್ ಗೆಲ್ಲೋ ಭರವಸೆಯನ್ನ ಮೂಡಿಸಿದೆ. ದುಬೈನಲ್ಲಿಂದು ರಾಜಸ್ಥಾನ ರಾಯಲ್ಸ್ ತಂಡವನ್ನ ಎದುರಿಸ್ತಿರೋ ಕೊಹ್ಲಿ ಪಡೆ, ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಈ ಸೀಸನ್​ನಲ್ಲಿ ಅಬುಧಾಬಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ನಡೆದ ಪಂದ್ಯದಲ್ಲಿ ಆರ್​ಸಿಬಿ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತ್ತು. ಈ ಗೆಲುವು ಇಂದಿನ ಪಂದ್ಯದಲ್ಲಿ ಮತ್ತೆ ರಾಯಲ್ಸ್ ಮಣಿಸೋಕೆ ಆರ್​ಸಿಬಿಗೆ ಆತ್ಮವಿಶ್ವಾಸವನ್ನ ಹೆಚ್ಚಿಸಿದೆ. ಈ ಸೀಸನ್​ನಲ್ಲಿ …

Read More »

ನೆರೆ ಪೀಡಿತ ಪ್ರದೇಶಗಳಿಗೆ ಹೋಗಿ ಅಂದ್ರೆ ಸಿಎಂ ಬಿ.ಎಸ್. ಯಡಿಯೂರಪ್ಪ ತವರಿಗೆ ಹೊರಟಿದ್ದಾರೆ.

ಶಿವಮೊಗ್ಗ: ನೆರೆ ಪೀಡಿತ ಪ್ರದೇಶಗಳಿಗೆ ಹೋಗಿ ಅಂದ್ರೆ ಸಿಎಂ ಬಿ.ಎಸ್. ಯಡಿಯೂರಪ್ಪ ತವರಿಗೆ ಹೊರಟಿದ್ದಾರೆ. ನಾಳೆಯಿಂದ 3 ದಿನಗಳ ಕಾಲ ಸಿಎಂ ತವರು ಕ್ಷೇತ್ರ ಶಿಕಾರಿಪುರಕ್ಕೆ ಪ್ರವಾಸ ಬೆಳೆಸಲಿದ್ದಾರೆ. ನಾಳೆ ಮಧ್ಯಾಹ್ನ ಬೆಂಗಳೂರಿಂದ ಶಿಕಾರಿಪುರದತ್ತ ಪ್ರಯಾಣ ಬೆಳೆಸಲಿದ್ದು ಅಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಲಾಕ್‌ಡೌನ್‌ ನಂತರ ಇದೇ ಮೊದಲ ಬಾರಿಗೆ ಸಿಎಂ‌ ತವರು ಕ್ಷೇತ್ರಕ್ಕೆ ತೆರಳಿದ್ದಾರೆ. ಇನ್ನು ಸಿಎಂ ಪ್ರವಾಸ ಕೈಗೊಂಡಿರುವ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. …

Read More »

ಯಲ್ಲಮ್ಮನ ದರ್ಶನಕ್ಕೆ200 ರೂಪಾಯಿ ನೀಡಲು ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಳಗಾವಿ: ಜಿಲ್ಲೆಯ ಸುಪ್ರಸಿದ್ಧ ಸವದತ್ತಿ ರೇಣುಕಾ ಯಲ್ಲಮ್ಮನ ದರ್ಶನಕ್ಕೆ ಭಕ್ತರ ಬಳಿ ಮಧ್ಯವರ್ತಿಗಳು 200 ರೂಪಾಯಿ ನೀಡಲು ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಚ್ಚರಿಯ ಸಂಗತಿಯೆಂದರೆ ಇದೆಲ್ಲಾ ಲಂಚಾವತಾರಗಳು ಪೊಲೀಸರ ಎದರೇ ನಡೆಯುತ್ತಿದೆ. ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿರುವ ರೇಣುಕಾ ಯಲ್ಲಮ್ಮ ದೇವಸ್ಥಾನವನ್ನು ಕೊರೊನಾ ಹಿನ್ನೆಲೆಯಲ್ಲಿ ಅಕ್ಟೋಬರ್ 31ರವರೆಗೆ ಮುಚ್ಚಲಾಗಿದೆ. ಯಲ್ಲಮ್ಮನ ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉಗರಗೋಳ, ಸವದತ್ತಿ ಮತ್ತು ಜೋಗುಳಬಾವಿಯಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದ್ದು ಪೊಲೀಸರನ್ನು ಸಹ …

Read More »

ಗೋಕಾಕ ಅಥಣಿ ಹೆದ್ದಾರಿಯ ಘಟನೆ ಸಂಗನಕೇರಿ ಗ್ರಾಮದಲ್ಲಿ ನಡೆದಿದೆ ಈ ದುರ್ಘಟನೆ

ಗೋಕಾಕ: ಕಬ್ಬು ತುಂಬಿದ ಟ್ರ್ಯಾಕ್ಟರ್, ಬೈಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿ 5 ತಿಂಗಳ ಮಗು ಸೇರಿ ಮೂವರು ಸಾವನ್ನಪ್ಪಿದ ಘಟನೆ ಗೋಕಾಕ ತಾಲೂಕಿನ ಜತ್ತ ಜಾಂಬೋಟಿ ರಾಜ್ಯಹೆದ್ದಾರಿ ಸಂಗನಕೇರಿ ಬಳಿ ನಡೆದಿದೆ. ಮೃತರು ಹಿಡಕಲ್ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದ್ದು, ಹೆಸರು ಇನ್ನು ಪತ್ತೆಯಾಗಿಲ್ಲ. ಪತಿ, ಪತ್ನಿ ಮಗುವಿನೊಂದಿಗೆ ಗೋಕಾಕಗೆ ಬೈಕ್ ಮೇಲೆ ತೆರಳುತ್ತಿರುವಾಗ ಸಂಗನಕೇರಿ ಬಳಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ಘಟಪ್ರಭಾ ಠಾಣೆ ಪೊಲೀಸರು ಭೇಟಿ …

Read More »

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸತೀಶ್ ಜಾರಕಿಹೊಳಿ ಚಾಲನೆ

ಬೆಳಗಾವಿ: ಯಮಕನಮರಡಿ ವಿಧಾನಸಭಾ ಕ್ಷೇತ್ರದ ಉಳಾಗಡ್ಡಿ, ಖಾನಾಪುರ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸತೀಶ್ ಜಾರಕಿಹೊಳಿ ಇಂದು ಚಾಲನೆ ನೀಡಿದರು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಉಳ್ಳಾಗಡ್ಡಿ, ಖಾನಾಪುರ ಗ್ರಾಮಗಳಲ್ಲಿ 573.73 ಲಕ್ಷ ರೂ ಅಂದಾಜು ಮೊತ್ತದ ವಿವಿಧ ಕಾಮಗಾರಿಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮಾಹಾಂತೇಶ ಮಗದುಮ್ಮ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಾರೀಶಗೌಡ …

Read More »

ಬೆಳಗಾವಿ ಮಹಾನಗರ ಪಾಲಿಕೆ  ಚುನಾವಣೆಕೋರ್ಟ್ ಆದೇಶ ಗಮನದಲ್ಲಿಟ್ಟುಕೊಂಡು ಶೀಘ್ರ ಚುನಾವಣೆ ನಡೆಸಲು  ಕ್ರಮ

ಬೆಳಗಾವಿ:  ದೂರು ದಾಖಲಿಸುವ ಅಭ್ಯರ್ಥಿಗಳ ಧ್ವನಿ ಅಡಗಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಬೆಳಗಾವಿಯಲ್ಲಿ  ತಿರುಗೇಟು ನೀಡಿದ್ದು, ಡಿಕೆಶಿಯವರು ಹತಾಶರಾಗಿದ್ದಾರೆ ಎಂದಿದ್ದಾರೆ. ನಗರದಲ್ಲಿ  ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಗೋಕಾಕ ಉಪ ಚುನಾವಣೆಯಲ್ಲಿ  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ದವೂ ದೂರು ದಾಖಲಾದ ಉದಾಹರಣೆಯಿದೆ.  ಸಣ್ಣ ವಿಷಯ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ, ಕಾನೂನು ಪ್ರಕಾರ ನಡೆಯತ್ತೆ …

Read More »

ಸಾಂಸ್ಕøತಿಕ ನಗರಿಯ ಪ್ರವಾಸಿ ತಾಣಗಳ ಮೇಲಿದ್ದ ನಿರ್ಬಂಧ ತೆರವು

ಬೆಂಗಳೂರು,ಅ.17-ಕೋವಿಡ್-19 ಹಿನ್ನೆಲೆ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಧಾರ್ಮಿಕ ಕೇಂದ್ರಗಳು, ಅಣೆಕಟ್ಟು, ಪಕ್ಷಿಧಾಮ ಸೇರಿದಂತೆ ಮತ್ತಿತರ ಕಡೆ ವಿಧಿಸಲಾಗಿದ್ದ ನಿರ್ಬಂಧವನ್ನು ಸರ್ಕಾರ ತೆರವುಗೊಳಿಸಿದೆ. ಮೈಸೂರಿನ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ನಂಜನಗೂಡಿನ ನಂಜುಂಡೇಶ್ವರ ದೇವಾಲಯ, ಕೆಆರ್‍ಎಸ್ ಅಣೆಕಟ್ಟು, ರಂಗನತಿಟ್ಟು ಪಕ್ಷಿಧಾಮ ಸೇರಿದಂತೆ ಮತ್ತಿತರ ಕಡೆ ಸಾರ್ವಜನಿಕರ ಪ್ರವೇಶಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸುವಂತೆ ಸಿಎಂ ಸೂಚಿಸಿದ್ದಾರೆ. ಮೈಸೂರು ದಸರಾ ಉದ್ಘಾಟನೆ ವೇಳೆ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಮುಖ್ಯಮಂತ್ರಿಗಳ ಸೂಚನೆಯನ್ನು ಸಭೆಯಲ್ಲೇ …

Read More »

‘ಚಿರು ನನ್ನ ಮಗುವಾಗಿ ಯಾವಾಗ ಬರಬೇಕು ಅಂತಾರೋ ಆವಾಗ ಬರಲಿ’

ಚಿರು ಸರ್ಜಾ ಇಲ್ಲದ ಮೊದಲ ಹುಟ್ಟುಹಬ್ಬಕ್ಕೆ ಇಡೀ ಅಭಿಮಾನಿ ಬಳಗ ಕೊರಗುತ್ತಿದೆ. ಆದರೂ ಎಲ್ಲೆಡೆ ಚಿರುಗಾಗಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಒಂದೆಡೆ ಚಿರು ಹುಟ್ಟುಹಬ್ಬವಾದ್ರೆ, ಇನ್ನೊಂದೆಡೆ ಇಂದು ಚಿರು ಮತ್ತೆ ಹುಟ್ಟಿ ಬರ್ತಾರೆ ಅನ್ನೋ ಖುಷಿ, ಸಂಭ್ರಮ. ಇದರ ಜೊತೆಗೆ ಚಿರು ‘ಶಿವಾರ್ಜುನ’ ಸಿನಿಮಾ ಮತ್ತೆ ತೆರೆ ಕಂಡಿರೋದು ಮತ್ತೊಂದು ಖುಷಿ. ಸದ್ಯ, ಪತಿಯನ್ನ ನೋಡಲು ಮೇಘನಾ ರಾಜ್​ ಸರ್ಜಾ ಚಿರು ಸಮಾಧಿ ಕಡೆ ಹೊರಟಿದ್ದಾರೆ. ಚಿರು ಸಮಾಧಿಗೆ ಪೂಜೆ ಸಲ್ಲಿಸೋದಾಗಿ …

Read More »

ನೂತನ ಪೆಟ್ರೋಲ್ ಬಂಕ್ ಗೆ ಚಾಲನೆ ನೀಡಿದ ರಾಹುಲ್ ಜಾರಕಿಹೊಳಿ

ಬೆಳಗಾವಿ: ತಾಲೂಕಿನ ಕಲಕಂಬಾದಲ್ಲಿ ನಿರ್ಮಿಸಲಾದ ನೂತನ ಜಗನ್ನಾಥ್ ಪೆಟ್ರೋಲ್ ಬಂಕ್ ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ ಅವರು ಶನಿವಾರ ಚಾಲನೆ ನೀಡಿದರು.     ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಂಜಯ ಪಾಟೀಲ್, ಜಿಪಂ ಸದಸ್ಯ ಯಲ್ಲಪ್ಪ ಬುಟರಿ, ಭಾರತ ಪೆಟ್ರೋಲಿಯಂ ಮ್ಯಾನೇಜರ್ ಕುಲದೀಪ ಗುಲಾಟಿ, ಸಂದೀಪ , ಶಾಸಕ ಸತೀಶ ಜಾರಕಿಹೊಳಿ ಆಪ್ತ ಸಹಾಯಕ …

Read More »