ದೇವನಹಳ್ಳಿ: ಸಿಲಿಕಾನ್ ಸಿಟಿ ಸುತ್ತಮುತ್ತ ನಿಮ್ಮದು ಜಮೀನು ಇಲ್ಲವೇ ಸೈಟ್ ಇದೆಯಾ? ಅದು ನಿಮ್ಮ ಬಳಿಯೇ ಇದೆ ಅಂತ ನೀವು ನೆಮ್ಮದಿಯಾಗಿದ್ದೀರಾ? ಹಾಗಾದ್ರೆ ನಿಮ್ಮ ನೆಮ್ಮದಿಗೆ ದಿಢೀರ್ ಭಂಗ ಬಂದರೂ ಬರಬಹುದು. ಅದಕ್ಕೂ ಮುನ್ನ ನೀವು ಬೆಚ್ಚಿಬೀಳುವ ಸಂಗತಿಯೊಂದು ಇಲ್ಲಿದೆ ನೋಡಿ. ಬಸವರಾಜ್, ಪ್ರಸನ್ನಕುಮಾರ್ ಮತ್ತು ಉಮೇಶ್. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ತಾಲೂಕು ಕಛೇರಿಯಲ್ಲಿ ಕಂಪ್ಯೂಟರ್ ಆಪರೇಟರ್ಸ್. ಇವರು ಸುಲಭವಾಗಿ ಹಣ ಮಾಡಿ ಕೋಟಿ ಕೋಟಿ ಸಂಪಾದನೆ ಮಾಡೋದಕ್ಕೆ …
Read More »800ಗ್ರಾಂ ಚಿನ್ನ, ದಾಖಲೆ ಕಳವು ಮಾಡಿರುವ ಆರೋಪದ ಮೇಲೆ ಹಲಸೂರು ಗೇಟ್ ಪೊಲೀಸರು
ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು 800ಗ್ರಾಂ ಚಿನ್ನ, ದಾಖಲೆ ಕಳವು ಮಾಡಿರುವ ಆರೋಪದ ಮೇಲೆ ಹಲಸೂರು ಗೇಟ್ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಹಲಸೂರು ಗೇಟ್‌ನ ನಗರ್ತಪೇಟೆಯಲ್ಲಿ ನಡೆದಿದೆ. ಚಿನ್ನಭಾರಣ ಪಾಲಿಶ್ ಮಾಡುವ ಗೀತಾ ಜುವೆಲ್ಲರ್ಸ್ಗೆ ನುಗ್ಗಿದ ಆರು ಜನ ಪೊಲೀಸ ವೇಷಧರಿಸಿದ್ದ ಕಳ್ಳರು ದೀಪಾವಳಿ ಹಬ್ಬಕ್ಕೆ ನಕಲಿ ಚಿನ್ನ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿರುವುದರಿಂದ ನಿಮ್ಮ ಅಂಗಡಿಯನ್ನು ರೇಡ್ ಮಾಡುತ್ತಿದ್ದೇವೆ ಎಂದು ಹೇಳಿ ವಂಚನೆ ಮಾಡಿದ್ದಾರೆ. …
Read More »ನಾಳೆಯಿಂದ ಶಬರಿಮಲೆ ಅಯ್ಯಪ್ಪ ದೇವಾಲಯ ಓಪನ್; ಭಕ್ತರಿಗಾಗಿ ಇಲ್ಲಿದೆ ಮಾಹಿತಿ
ಕೋವಿಡ್ ನಿಯಮ ಪಾಲನೆ ಕಡ್ಡಾಯ : ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಬಾಗಿಲು ನಾಳೆಯಿಂದ ತೆರೆಯಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಕಟ್ಟುನಿಟ್ಟಿನ ತಪಾಸಣೆ ಮೂಲಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಮಂಡಲಂ ಮಕರವಿಲಕ್ಕು ಅವಧಿಕಾಗಿ ನಾಳೆಯಿಂದ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ತೆರೆಯಲಾಗುತ್ತಿದ್ದು, ಕೋವಿಡ್ ನೆಗೆಟಿವ್ ಬಂದವರನ್ನು ಮಾತ್ರ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಇದೇ ಮೊದಲ ಬಾರಿಗೆ ಯಾತ್ರಾಸ್ಥಳ ವರ್ಚುವಲ್ ಸರದಿ ವ್ಯವಸ್ಥೆಗೆ …
Read More »ಬಿಹಾರ ಎಫೆಕ್ಟ್ – ದೊಡ್ಡ ಪಕ್ಷಗಳ ಜೊತೆಗಿನ ಮೈತ್ರಿಗೆ ನೋ ಎಂದ ಅಖಿಲೇಶ್ ಯಾದವ್
ಲಕ್ನೋ: ರಾಷ್ಟ್ರೀಯ ಪಕ್ಷಗಳು ಸೇರಿದಂತೆ ದೊಡ್ಡವರ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ. ಪ್ರಾದೇಶಿಕ ಪಕ್ಷವಾಗಿರುವ ಬಿಎಸ್‍ಪಿ ಜೊತೆಗೂ ತಾವು ಹೋಗಲ್ಲ ಎಂಬುದನ್ನ ಅಖಿಲೇಶ್ ಯಾದವ್ ಸ್ಪಷ್ಟಪಡಿಸಿದ್ದಾರೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ನೇತೃತ್ವದ ಪ್ರಗತಿಶೀಲ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಉತ್ಸಾಹ ತೋರಿಸಿದ್ದಾರೆ. ಚುನಾವಣೆಯಲ್ಲಿ ಜಸ್ವಂತ್ ನಗರದ ವಿಧಾನಸಭಾ ಕ್ಷೇತ್ರಗಳನ್ನ ಬಿಟ್ಟುಕೊಡಲು …
Read More »ಹೆಚ್‍ಡಿಕೆ -C.M. ಭೇಟಿಯಾದ್ರೆ ಏನು ತಪ್ಪು?- ಮಾಧುಸ್ವಾಮಿ
ಹಾಸನ: ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿದರೆ ಏನು ತಪ್ಪು, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಇಬ್ಬರೂ ಲೀಡರ್ಸ್. ರಾಜ್ಯದ ಹಿತಾಸಕ್ತಿಗಾಗಿ ಭೇಟಿ ಮಾಡಿದರೆ ಬೇರೆ ತಿಳಿಯಬಾರದು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಹಾಸನ ಜಿಲ್ಲೆಯ ಹಳೇಬೀಡು ಕೆರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಸಿಎಂ ಮತ್ತು ಮಾಜಿ ಸಿಎಂ ಭೇಟಿ ವಿಷಯ ಕೇಳಿದ್ದಕ್ಕೆ ಕೈಮುಗಿದರು. ಬಳಿಕ ಮಾತನಾಡಿ ಶಿರಾ ಮತ್ತು ಆರ್.ಆರ್ ನಗರ ಉಪ …
Read More »ಕಡಲತೀರದುದ್ದಕ್ಕೂ ತಳಿರು ತುಂಬಿದ ಮಾವಿನ ತೋರಣ, ಗಒಟೆ, ಪಾಂಗ್ ಗಳ ಸದ್ದು,
ಕಾರವಾರ: ಕಡಲತೀರದುದ್ದಕ್ಕೂ ತಳಿರು ತುಂಬಿದ ಮಾವಿನ ತೋರಣ, ಗಒಟೆ, ಪಾಂಗ್ ಗಳ ಸದ್ದು, ಹಾಲಕ್ಕಿ ಜನಾಂಗದ ಜನಪದ ಹಾಡುಗಳ ನಡುವೆ ವೈದಿಕರ ಮಂತ್ರಘೋಷ. ಶೃಂಗಾರಗೊಂಡ ಗಂಗಾಮಾತೆ ಮೆರವಣಿಗೆಯಲ್ಲಿ ಸಾಗಿ ಶಿವನನ್ನು ವರಿಸಿದಳು. ಹೌದು. ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರನ ವಿವಾಹವು ಕೋವಿಡ್ ನಡುವೆಯೂ ವಿಜ್ರಂಭಣೆಯಿಂದ ನೆರವೇರಿತು. ಕೋವಿಡ್ -19 ಪರಿಣಾಮ ಅಂತ್ಯತ ಸರಳವಾಗಿದ್ದರೂ, ಸಾಂಪ್ರದಾಯಕತೆ ಸೊಗಡು ಜಾನಪದೀಯ ಮೆರಗಿನೊಂದಿಗೆ ನಡೆದಿದ್ದು, ವಿಶೇಷವಾಗಿತ್ತು. ಗಂಗಾಷ್ಟಮಿಯ ಮುಂಜಾವಿನಲ್ಲಿ ವಿವಾಹ ನಿಶ್ಚಯವಾದಂತೆ ಇಲ್ಲಿನ ಗೋಕರ್ಣ -ಗಂಗಾವಳಿ …
Read More »ಬೈಕ್ ಕಳವು ಮಾಡ್ತಿದ್ದಾತನ ಮರಕ್ಕೆ ಕಟ್ಟಿ ಥಳಿಸಿದ ಸಾರ್ವಜನಿಕರು!
ಗದಗ: ಬೈಕ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಘಟನೆ ಗದಗ ನಗರದ ಟ್ಯಾಗೋರ್ ರಸ್ತೆಯಲ್ಲಿ ನಡೆದಿದೆ. ಕಳ್ಳನನ್ನು ಕುಮಾರ ನರ್ತಿ ಎಂದು ಗುರುತಿಸಲಾಗಿದ್ದು, ಈತ ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ. ಇದೀಗ ಸ್ಥಳೀಯರು ಕಳ್ಳನ ಹಿಡಿದು ಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಶರಣು ಪಾಟೀಲ್ ಎಂಬವರ ಸ್ಕೂಟಿ ಕಳ್ಳತನ ಮಾಡಿಕೊಂಡು ಪರಾರಿಯಾಗುವ ವೇಳೆ ಕುಮಾರ ಸಿಕ್ಕಿ ಬಿದ್ದಿದ್ದಾನೆ. ಈತ ಮನೆ ಮುಂದೆ ನಿಲ್ಲಿಸಿದ್ದ …
Read More »ಕೆಎಎಸ್ ಅಧಿಕಾರಿ ಸುಧಾ ಅವರ ಮತ್ತಷ್ಟು ಅಕ್ರಮ ಆಸ್ತಿ ಪತ್ತೆ
ಬೆಂಗಳೂರು,ನ.14- ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಆಡಳಿತಾಧಿಕಾರಿ ಡಾ.ಜಿ.ಸುಧಾ ಅವರ ಅಕ್ರಮ ಆಸ್ತಿ ಮತ್ತಷ್ಟು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ದಾಳಿ ವೇಳೆ ದೊರೆತಿರುವ ಚಿನ್ನ, ಹಣ ಹಾಗೂ ಆಸ್ತಿ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ಪಟ್ಟಿ ಮಾಡಿ ಅವುಗಳನ್ನು ಪರಿಶೀಲಿಸುತ್ತಿದ್ದಾರೆ. ನ.7ರಂದು ಕೆಎಎಸ್ ಅಧಿಕಾರಿ ಸುಧಾ ಅವರ ಮನೆ ಹಾಗೂ ಪರಿಚಯಸ್ಥರ ಮನೆಗಳು ಸೇರಿದಂತೆ ಏಳು ಕಡೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದರು. ದಾಳಿ ಸಂದರ್ಭದಲ್ಲಿ ಆಸ್ತಿಗೆ ಸಂಬಂಧಪಟ್ಟ …
Read More »ಯತ್ನಾಳ್ ಮಾನಸಿಕ ಕಾಯಿಲೆಗೆ ಒಳಗಾಗಿದ್ದಾನೆ: ಆಯನೂರು ಮಂಜುನಾಥ್
ಶಿವಮೊಗ್ಗ: ಪಕ್ಷ ಹಾಗೂ ನಾಯಕತ್ವದ ವಿರುದ್ಧ ಹೇಳಿಕೆ ನೀಡುವ ಯತ್ನಾಳ್ ಮಾತನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಈಗಾಗಿಯೇ ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಳ್ಳುವುದು ದೊಡ್ಡ ವಿಷಯವಲ್ಲ ಎಂದು ಎಂಎಲ್‍ಸಿ ಆಯನೂರು ಮಂಜುನಾಥ್ ತಿಳಿಸಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಆಯನೂರು ಮಂಜುನಾಥ್ ಅವರು, ಸಾಮಾನ್ಯವಾಗಿ ಕಾಯಿಲೆ ಬಂದ ವ್ಯಕ್ತಿಗೆ ಆಪರೇಷನ್ ಮಾಡುವ ಮೊದಲು ಔಷಧಿ ಕೊಟ್ಟು ನೋಡುತ್ತಾರೆ. ಅದಕ್ಕೆ ರೋಗ ವಾಸಿಯಾಗಲಿಲ್ಲ ಅಂದರೆ ಆಪರೇಷನ್ ಮಾಡುವುದು ಅನಿವಾರ್ಯ ಆಗುತ್ತೆ. …
Read More »10 ವರ್ಷದ ಲವ್ ಫೇಲ್- ಭಗ್ನ ಪ್ರೇಮಿ ಆತ್ಮಹತ್ಯೆ
ಮೈಸೂರು: ತಂಗಿ ಮದುವೆ ರದ್ದು ಹಾಗೂ ಇತ್ತ ತನ್ನ ಲವ್ ಕೂಡ ಫೇಲ್ ಆಗಿರುವುದರಿಂದ ಮನನೊಂದು ಭಗ್ನ ಪ್ರೇಮಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ವಿಜಯಶ್ರೀಪುರದಲ್ಲಿ ಈ ಘಟನೆ ನಡೆದಿದ್ದು, ಮೃತನನ್ನು ಚೇತನ್ ಶರ್ಮ(29) ಎಂದು ಗುರುತಿಸಲಾಗಿದೆ. ಡಿಪ್ಲಮೋ ಇನ್ ಕಂಪ್ಯೂಟರ್ ಸೈನ್ಸ್ ಮಾಡಿದ್ದ ಚೇತನ್, ಮೂಲತಃ ಬೆಂಗಳೂರು ನಿವಾಸಿ. ಈತ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದನು. ಈತ 10 ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ …
Read More »
Laxmi News 24×7